Friday, June 1, 2007

ಉದರ ನಿಮಿತ್ತಮ್..

ಜಟಿಲೋ ಮುಂಡೀ ಲುಂಚಿತ ಕೇಶಃ
ಕಾಷಾಯಾಂಬರ ಬಹುಕೃತ ವೇಷ:
ಪಶ್ಯನ್ನಪಿ ಚ ನ ಪಶ್ಯತಿ ಮೂಢೋ-
ಹ್ಯುದರ ನಿಮಿತ್ತಮ್ ಬಹುಕೃತ ವೇಷ:

ಈಗ ನನ್ನ ವೇಷ ಮೇಷ್ಟ್ರಾಗಿ! ಮೂಢನೋ ಅಲ್ಲವೋ ಗೊತ್ತಿಲ್ಲ..

ಬೆಂಗಳೂರಿನೊಂದು ಶಾಲೆಯಲ್ಲಿ ಪಾಠ ಹೇಳುವ ಮೇಷ್ಟ್ರಾಗಿ ಹುದ್ದೆಯನ್ನಾರಿಸಿಕೊಂಡಿದ್ದೇನೆ. ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸವನ್ನು ಇದೇ ಮೊದಲ ಸಲ ಮಾಡಹೊರಟಿರುವುದು. ಹಿಂದೆ ಹೈಸ್ಕೂಲು ಮಕ್ಕಳಿಗೆ ಮೂರು ವರ್ಷಗಳ ಕಾಲ ಪಾಠ ಮಾಡಿದ್ದೇನಾದರೂ ಅದು ಶಾಲೆಯಲ್ಲಲ್ಲ. ಇನ್ಸ್ಟಿಟ್ಯೂಟಿನಲ್ಲಿ. ಕಾಲೇಜು ಹುಡುಗರಿಗೆ ಪಾಠ ಮಾಡಿದ್ದೆ. ಒಂದು ವರ್ಷ. ಅದು ಬೇರೆಯದೇ ಅನುಭವ. ಅವರಿಗೆ ಪಾಠ ಮಾಡುವುದೇ ಬೇರೆ, ಮಕ್ಕಳಿಗೆ ಹೇಳಿಕೊಡುವುದೇ ಬೇರೆ. ಈಗ ಫುಲ್ ಟೈಮ್ ಟೀಚರ್! ಅದೂ ಸಿ.ಬಿ.ಎಸ್.ಈ. ಶಾಲೆಯಲ್ಲಿ. ಈ ವೇಷ ಕೇವಲ ಉದರನಿಮಿತ್ತವಲ್ಲವೆಂದು ನನ್ನ ನಿಲುವು.

RHM, ಮತ್ತು ಪತ್ರಿಕೋದ್ಯಮ ಎರಡರಿಂದಲೂ ನಾನು ಇನ್ನಷ್ಟು ಭವಿತವ್ಯವನ್ನು ಎದುರು ನೋಡುತ್ತಿದ್ದೇನೆ. ಇದಕ್ಕೆ ಈ ಹೊಸ ಸಾಹಸದ ವೃತ್ತಿ ಪೂರಕವಾಗಿರುತ್ತೆಂದು ನಂಬಿದ್ದೇನೆ..

- ಅ
01.06.2007
3.45AM

5 comments:

  1. congrats !!!! I wish u all te best :) thumba santosha aythu.. vidyaa dhaana mahadhana alve? teaching field nalli namma kalikegoo oppurtunities irutte alvaa.. anyways, good luck :)

    ReplyDelete
  2. ಹೊಟ್ಟೆಪಾಡ ನೆಪದಲ್ಲಿ ವಿದ್ಯೆ ದಾನ ಮಾಡುವಿ
    ಮೂಢನೆಂದು ಹೇಳಿಕೊಂಡು ಮೋಡವನ್ನು ಏರುವಿ

    ಮುಕ್ತ ಮನಸಿನಿಂದ ನಡೆಸು ಹೊಸ ಸಾಹಸ ವೃತ್ತಿಯ
    ನಾವೆಲ್ಲರು ಇರಲು ನೀನು ತ್ಯಜಿಸು ಎಲ್ಲ ಚಿಂತೆಯ

    ಕೆಲಸದಲ್ಲಿ ಸಿಗಲಿ ತೃಪ್ತಿ ಸಿಗಲಿ ಮನಕೆ ನೆಮ್ಮದಿ
    ನಿನಗೆ ಶುಭವು ಆಗಲೆಂದು ಎಂದೆಂದೂ ಹಾರೈಸುವೆ

    ನಮ್ಮಿಬ್ಬರ ಸ್ನೇಹ ದೋಣಿ ಚಿರಕಾಲ ಸಾಗಲಿ
    ಪ್ರಕೃತಿ ಪ್ರೇಮ ನಮ್ಮಲ್ಲಿ ಚಿರಕಾಲ ಉಳಿಯಲಿ

    ReplyDelete
  3. [ವಿನುತ] ಹೌದು.. ಪಾಠ ಮಾಡುವಾಗ ಕಲಿಯುವುದೇ ಹೆಚ್ಚು... ನಿನ್ನ ಹಾರೈಕೆಗೆ ನಾನು ಋಣಿ.. :-)

    [ಶ್ರೀಕಾಂತ್] ಅಬ್ಬಾಹ್.. ಕವಿತೆ ಸೂಪರ್... ಥ್ಯಾಂಕ್ಸ್ ಕಣೋ...

    ReplyDelete
  4. udara nimitta annodanna adara face value nalli, or, literally thogolodakintha... namagiro bekaadashtu thara hasive gaLannu theerisodu antha nanna anisike. Adakkoskara, ninna manassina hasivegosakara ee ninna hosa vesha ninage ...errr .. let this give you a lot of satisfaction :-)!!!

    ReplyDelete
  5. [ವಿಜಯಾ] ಚೆನ್ನಾಗಿದೆ ಮನಸ್ಸಿನ ಹಸಿವೆ.. :-)

    ReplyDelete