Friday, June 1, 2007

ಸಾಹಿತಿಗಳ ನಡುವೆ ಹ್ಯಾರಿ ಪಾಟರ್..




"ಭೈರಪ್ಪ ಕಾದಂಬರಿಕಾರರೇ ಅಲ್ಲ, ಚರ್ಚಾಪಟು" - ಯು.ಆರ್. ಅನಂತಮೂರ್ತಿ.

ಭೈರಪ್ಪನವರು ಮಾತ್ರ ಮಾತೇ ಆಡಿಲ್ಲ ಇನ್ನೂ.

ಭೈರಪ್ಪನವರ ಮೇಲೆ ಸ್ಪರ್ಧೆ ಇರುವ ಸಾಹಿತಿಗಳಾದರೆ, ಅದನ್ನು ತಮ್ಮ ಕೃತಿಗಳಲ್ಲಿ ತೋರಿಸುವರೇ ಹೊರೆತು ಹೇಳಿಕೆಗಳ "ಕೃತ್ಯ"ಗಳಲ್ಲಲ್ಲ ಎಂದು ಭೈರಪ್ಪನವರ ಅಭಿಮಾನಿಗಳೆಲ್ಲಾ ಮಾತನಾಡಿಕೊಳ್ಳುತ್ತಿದ್ದಾರೆ।



ಅಂಕಿತದಲ್ಲಿ 'ಆವರಣ'ದ ಪುಸ್ತಕದ ರಾಶಿಯ ಪಕ್ಕದಲ್ಲೇ, 'ಆವರಣ-ಅನಾವರಣ'ದ ರಾಶಿಯನ್ನೂ ಇಟ್ಟಿದ್ದನ್ನು ನೋಡಿ ನಗು ಬಂತು. ಪುಸ್ತಕದ ಅಂಗಡಿಗಳಿಗೆ ಪುಸ್ತಕ ಮಾರಾಟ ಆದರೆ ಸಾಕು. ಒಂದು ಸಣ್ಣ ಹಸ್ತಪ್ರತಿಯಂತಿರುವ ಈ ಪುಸ್ತಕವನ್ನು ಬರೆಯುವ ಅಗತ್ಯವೂ ಇರಲಿಲ್ಲವೆನಿಸುತ್ತೆ. ಬಹುಶ: ಬೇರೆ ಸಬ್ಜೆಕ್ಟು ಸಿಗಲಿಲ್ಲವೇನೋ ಶಂಕರ್ ಅವರಿಗೆ.

ಆವರಣದಂಥಹ ಕಾದಂಬರಿಗಳ ಬಗ್ಗೆ ಹೀಗೆ ಸಾಹಿತಿಗಳ ಮಟ್ಟದಲ್ಲಿ ವಾದ ವಿವಾದಗಳು ನಡೆಯುತ್ತಿದ್ದರೆ, ಇದರ ಅರಿವೇ ಇಲ್ಲವೆಂಬಂತೆ ನಮ್ಮ ಯುವ 'ಮಿತ್ರ'ರು ಸಾವಿರಾರು ರೂಪಾಯಿ ಖರ್ಚು ಮಾಡಿ (ನನಗೆ ಅದರ ಬೆಲೆ ಗೊತ್ತಿಲ್ಲ, ಆದ್ರೆ ವಿಪರೀತ ಜಾಸ್ತಿ ಅಂತ ಮಾತ್ರ ಗೊತ್ತು) ಹ್ಯಾರಿ ಪಾಟರ್-ನತ್ತ ಕಣ್ಣು ಹಾಯಿಸುತ್ತ ಕುಳಿತಿದ್ದಾರೆ। ಅದೂ ಅಲ್ಲದೇ, ಆ ಪುಸ್ತಕ ಇನ್ನೂ ಬಿಡುಗಡೆ ಸಹ ಆಗಿಲ್ಲವಂತೆ. ಬುಕ್‍ನ ಬುಕ್ ಮಾಡಬೇಕಂತೆ. ಇದು ಬೆಂಗಳೂರಿನ ಬಹುಪಾಲು ಯುವಕರ ಸ್ಥಿತಿ. ಅವರುಗಳಿಗೆ 'ಆವರಣ'ದ ಬೆಲೆ ಗತ್ತಿಲ್ಲ ಬಿಡಿ.


- ಅ

01.06.2007

5.30AM

4 comments:

  1. ನನಗೆ ಆವರಣ ಮತ್ತು ಹ್ಯಾರಿ ಪಾಟರ್ - ಎರಡರ ಬೆಲೆಯೂ ಗೊತ್ತ್ತಿಲ್ಲ :-(

    ನಾನು ಯಾವ ಕೆಲಸಕ್ಕೆ ಬಾರದವನು ಅಲ್ವಾ? ತಿಳ್ಕೊಳೋದು ಸಮುದ್ರದಷ್ಟು ಇದೆ!

    ReplyDelete
  2. ನೀನೇ ಹೇಳುತ್ತಿದ್ದೀಯಲ್ಲಾ, ತಿಳಿದುಕೊಳ್ಳುವುದು ಸಾಕಷ್ಟಿದೆ ಎಂದು, ಕೆಲಸಕ್ಕೆ ಬಾರದವನು ಹೇಗಾಗಲು ಸಾಧ್ಯ? ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಸಮಯ ಬರಬೇಕಷ್ಟೆ. ಬೇರೇನೇನೋ ತಿಳಿದಿರುವೆಯಲ್ಲಾ..... :-)

    ReplyDelete
  3. well ... "tastes differ" ... Rashmi nange baytaale... Jane austen book odu antha, they are classics ... try maaDe ... nange khandita 2 page ginta jaasti odokke aaglilla ... i dont think i can get myself to read classics ... im happy with Harry Potter!!! Waiting anxiously for July 21st to get my copy of Deathly hallows.

    ReplyDelete
  4. ಹೌದು, ಟೇಸ್ಟುಗಳು ಭಿನ್ನ! ಆದರೆ ಕನ್ನಡ ಮಾತೆಯ 'ಪುಣ್ಯ' - ಕರ್ನಾಟಕದ, ಅದರಲ್ಲೂ ಕ್ಯಾಪಿಟಲ್ ಸಿಟಿಯ ಯುವಕ ಯುವತಿಯರು ಬಹುಪಾಲು ಮಂದಿಗೆ ಕನ್ನಡ ಪುಸ್ತಕಗಳ, ಕನ್ನಡ ನಾಟಕಗಳ, ಕನ್ನಡ ಕಾವ್ಯಗಳ, ರುಚಿಯನ್ನು ನೋಡಲೂ ಸಜ ಪುರುಸೊತ್ ಇರೋದಿಲ್ಲ. ಪಾಪ, ತುಂಬಾ ಬ್ಯುಸಿ ಶೆಡ್ಯೂಲ್‍ಗಳು!

    ReplyDelete