Wednesday, June 6, 2007

ಭಾಸಾ(ಷಾ)ಭಾಸ..

ಅತ್ತೆ ಹೇಳುತ್ತಿರುತ್ತಾರೆ, " ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದಿದ್ದು. ನಮಗೆಲ್ಲ ಎಂಥ ಒಳ್ಳೇ ಸಾಹಿತ್ಯ ಹೇಳಿಕೊಡುತ್ತಿದ್ದರು. ಈ ಇಂಗ್ಲೀಷ್ ಸ್ಕೂಲ್ ಮುಂಡೇವಕ್ಕೆ ಈ ಕಡೆ ಇಂಗ್ಲೀಷೂ ನೆಟ್ಟಗೆ ಬರಲ್ಲ, ಆ ಕಡೆ ಕನ್ನಡವೂ ಬರಲ್ಲ. ಎಡಬಿಡಂಗಿ ಮುಂಡೇವು!!" ಎಂದು. ಕೆಲವು ಉಪಾಧ್ಯಾರುಗಳೂ ಇದೇ ಕ್ಯಾಟೆಗರಿ ಎಂಬುದು ಶಾಲೆಯಲ್ಲಿನ ಎರಡನೇ ದಿನಕ್ಕೇ ಅರಿವಾಗಿ ಹೋಯಿತು..

ಮಜ ಕೇಳಿ..

ನಾನು ಕನ್ನಡ ಮೀಡಿಯಮ್ಮು.. ನಾನೇ ವಾಸಿಯೆಂದೆನಿಸಿತು..

ಒಬ್ಬ ಟೀಚರು, ಒಂದು ಹುಡುಗಿಯನ್ನು ನಿಲ್ಲಿಸಿ, "Where your uniform?" ಎಂದರು. ಆ ಹುಡುಗಿ ಪಾಪ, ಇವರ ಶಿಷ್ಯೆ, "no mam.." ಎಂದು ತೆಪ್ಪಗಾದಳು. ಆ ಟೀಚರು ಮಾತ್ರ ಸುಮ್ಮನಿರಲೊಲ್ಲರು. "your old uniform where?" ಎಂದರು. ಆ ಶಿಷ್ಯೆ ಪಾಪ, "yes mam" ಎಂದು ಆಚೆ ನಿಂತುಕೊಂಡು ಶಿಕ್ಷೆ ಅನುಭವಿಸಿತು.

ಇವತ್ತು ಇನ್ಯಾರೋ ಒಬ್ಬ ವಿದ್ಯಾರ್ಥಿ ಸಮವಸ್ತ್ರ ಧರಿಸಿರಲಿಲ್ಲ. ಆ ಹುಡುಗಿಯನ್ನು ನೋಡಿ ಅತಿ ಕೆಂಡಾಮಂಡಲ ಆದ ಅದೇ ಟೀಚರು, ಮುಖ ಕೆಂಪಗೆ ಮಾಡಿ, ಧ್ವನಿಯನ್ನು ಮುಗಿಲೆತ್ತರಕ್ಕೇರಿಸಿ, ಹಲ್ಲು ಕಡಿಯುತ್ತ, ಕ್ರೋಧಗೊಂಡು ಆ ಹುಡುಗಿಯನ್ನು ಕರೆದಿದ್ದು ಹೇಗೆ ಗೊತ್ತಾ? "My dear Aishwarya... come here.." ಎಂದು. ಧ್ವನಿಯಲ್ಲಿ ಕೋಪ ರಾರಾಜಿಸುತ್ತಿತ್ತು. ಆದರೆ ಪದಗಳ ಆಯ್ಕೆ ಮಾತ್ರ ಮೈ ಡಿಯರ್... ಅದ್ಯಾಕೆ ಹಾಗಿತ್ತೋ ಅವರೇ ಬಲ್ಲರು!

ಇನ್ನೊಂದು ಆಭಾಸ ಕೇಳಿ! ಇದು ವಯಸ್ಕರಿಗೆ ಮಾತ್ರ: ಹೊಸ ಸಮವಸ್ತ್ರ ಧರಿಸದ ವಿದ್ಯಾರ್ಥಿಯನ್ನು ಕರೆದು ಈಕೆ ಹೇಳಿದ್ದು ಏನು ಗೊತ್ತೇ? "ಟಿಲ್ ಯು ಗೆಟ್ ನ್ಯೂ ಯೂನಿಫಾರಂ, ವೇರ್ ಓಲ್ಡ್ ಯೂನಿಫಾರಂ ಟು ಕಂ!" ಎಂದುಬಿಟ್ಟರು. ಪಾಪ ಆ ಹುಡುಗ ಇನ್ನೂ ಚಿಕ್ಕವನು. ಇವರು "ಕಂ" ಎಂದಿದ್ದರ ಸ್ಪೆಲ್ಲಿಂಗ್ ಕೇಳಲು ಹೋಗಲಿಲ್ಲ.

ಒಂದು ಹುಡುಗಿಯ ಕನ್ನಡ ನೋಟ್ ಪುಸ್ತಕದಲ್ಲಿ ತಾನು ಬರೆದಿದ್ದನ್ನು ಟೀಚರು "ಸರಿ" ಎಂದು ಗುರುತಿಸಿದ್ದರು. ಅದು ಹೀಗಿತ್ತು:
"ಅರ್ಥಗಳು:-
ಸಿಂಹಾಸನ = ರಾಜನು ಕೂರುವ ಸ್ತನ"

ಕರ್ಮಕಾಂಡ! ಕೂರೋದ್ ಏನು ಬಂತು!! ಅದಕ್ಕೆ "ಸಿಂಹ" ಅಂತ ಬೇರೆ ಕರೀಬೇಕೇ?

Sorry, vulgarity ಹೆಚ್ಚಾಯಿತೆನಿಸುತ್ತೆ. ಆದರೂ ಇವೆಲ್ಲಾ ಸತ್ಯವಾಗಿಯೂ ನಡೆದಿರುವುದಪ್ಪಾ!!

ಕಂಪ್ಯೂಟರ್ ಲ್ಯಾಬ್‍ಗೆ ನನ್ನ ಕರೆದೊಯ್ದ ಹಿರಿಯ ಅಧ್ಯಾಪಕಿಯೊಬ್ಬರು ಕಂಪ್ಯೂಟರುಗಳನ್ನು ನನಗೆ ತೋರಿಸಿ, ಒಡೆದ ಕಿಟಕಿಯನ್ನೂ ತೋರಿಸಿ, "We will cover this. Otherwise dust will come and spoil the computer" ಎಂದರು. ನಾನು ಅಹುದಹುದೆಂದೆ!

ನೆನ್ನೆ ಪರಿಸರದ ದಿನದಂದು ಭಾಷಣಗೈದ ಮೈ ಡಿಯರ್ ಖ್ಯಾತಿಯ ಟೀಚರು, "Children, who knows what is an envirointment?" ಎಂದು ಆರಂಭಿಸಿದರು. Environmentನ ಆಯಿಂಟ್ಮೆಂಟ್ ಅಂತಲೂ ಅನ್ನುತ್ತಾರೆ ಎಂದು ಆಗಲೇ ಅರ್ಥ ಆಗಿದ್ದು ನಂಗೆ!

ಪಿ.ಟಿ. ಮೇಷ್ಟ್ರು ಪಾಪ, ಹಳ್ಳಿ ಶಾಲೆಯಿಂದ ಬಂದವರು, ಇಂಗ್ಲೀಷಿಗೆ ಕಷ್ಟ ಪಡುತ್ತಾರೆ. ಆದರೆ ಆಭಾಸಗಳಿಗೇನೂ ಮೋಸ ಮಾಡೋದಿಲ್ಲ. "Dont keep your concentrate outside, keep your concentrate in the field" ಎಂದು mass PT-ಯಲ್ಲಿ ಹೇಳಿದಾಗ ನನಗೆ ನಗಬೇಕೋ ಓಡಿಹೋಗಬೇಕೋ ಗೊತ್ತಾಗಲಿಲ್ಲ.

ಇಂಥವರ ನಡುವೆ ಅನೇಕ ಪಂಡಿತರುಗಳು ನನ್ನ ಸಹೋದ್ಯೋಗಿಗಳಾಗಿದ್ದಾರೆ. ಅವರುಗಳ ಜೊತೆ ಮಾತನಾಡುತ್ತಿದ್ದರೆ ನನ್ನ ಮೇಷ್ಟ್ರುಗಳ ಜೊತೆಗೇ ಮಾತನಾಡುತ್ತಿದ್ದೇನೇನೋ ಎಂಬ ಅನಿಸಿಕೆಯಾಗುತ್ತೆ. ಇವರ ಇಂಗ್ಲೀಷು ಬ್ಯಾರಿಸ್ಟರಿನಂಥದ್ದು! ಇವರ ಕನ್ನಡ ಕುವೆಂಪು ಬೇಂದ್ರೆಯಂಥದ್ದು! ಅಂಥವರಿಂದ ಮಕ್ಕಳು "ಎಡಬಿಡಂಗಿ" ಸ್ಥಾನ (ಕಾಗುಣಿತ ಸರಿಯಾಗಿದೆ ಎಂದುಕೊಳ್ಳುತ್ತೇನೆ)ದಿಂದ ಮೇಲಕ್ಕೇರಬಲ್ಲರು.

ಮಕ್ಕಳೊಡನೆಯ ಒಡನಾಟ ಬಹಳ ಸೊಗಸಾಗಿದೆ. ಬದುಕು ಸೊಗಸಾಗಿದೆ.

- ಅ
06.06.2007
11.13PM

9 comments:

 1. anna!! sooperru nange beLge beLge nakku saakaitu! appa heengiddu sumar incidents heLtirtaare, nanoo bareeteeni yaavaagalaadru...

  ReplyDelete
 2. ನಂಗೂ ನಕ್ಕು ನಕ್ಕು ಸಾಕಾಯ್ತು!

  ನಂಗೆ ಒಂದು ಮಾತು ನಿನ್ನ ಸಹೋದ್ಯೋಗಿ ಟೀಚರುಗಳನ್ನು ಕೇಳಬೇಕೆನ್ನಿಸುತ್ತೆ - ಹೆಂಗಸರನ್ನು "maam..." ಅಂತ ಯಾರನ್ನು, "madam" ಅಂತ ಯಾರನ್ನು ಕರೀಬೇಕು ಅಂತ ಕೇಳ್ಬೇಕು! maam ಅಂತ ದಿನವಿಡೀ ಕರ್ಸ್ಕೋತಾರಲ್ಲ... ಈ ಪ್ರಶ್ನೆಗೆ ಉತ್ತರ ಹೇಳ್ತಾರಾ ನೋಡು.

  ReplyDelete
 3. appa .... hotte hunnaytu ... :-)
  Aruna ... ninge baro english , kannada mareebedappa ... hushaaru!!

  ReplyDelete
 4. satyavaada maatugaLu.

  namma 'aadhunika' nagaravaada behgLoorinallantoo ee shoki english maataaDuva, Kannadadalli maatan-aaDuvudannu tamma ghanatege kundu baruva vishayavendu tiLiyuvara sankhye jaasti. HaaLaaddu, English aadroo sariyaag maaTaaDattva, adoo illa. neevu heLida haage, ee paristhithi annu noDi nagabeko, aLabeko gottaaagalla.

  ReplyDelete
 5. [ಶ್ರೀನಿಧಿ] ಬರಿ ಬರಿ... ಆಗ ನಾನು ನಗ್ತೀನಿ.. :-)

  [ಶ್ರೀಕಾಂತ್] ಮೇಡಂ ಅಂತ ಯಾರನ್ನೂ ಸಂಬೋಧಿಸುವುದಿಲ್ಲ ಕಣಪ್ಪಾ.. "ಮ್ಯಾಮ್" ಅನ್ನೋದೇ ಈಗಿನ ಶೈಲಿ..

  [ವಿಜಯಾ] ಆ ಸಾಧ್ಯತೆಯೂ ಇದ್ದರೂ ಇರಬಹುದು..

  [ಹರೀಶ್] ಕನ್ನಡದಲ್ಲಿ ಮಾತನಾಡಿದರೆ ಘನತೆಗೆ ಕುಂದು ಬರುವುದೆಂದು ನಂಬಿರುವವರೆಡೆಗೆ ಧಿಕ್ಕಾರದ ತಿರಸ್ಕಾರ ಇರಲಿ ನಮ್ಮಲ್ಲಿ. ಹಾಗೆ ನೋಡಿದರೆ ಭಾಷೆಗೆ ಮರ್ಯಾದೆ ನೀಡದವರು ಇಂಥಾ ಎಡಬಿಡಂಗಿ ಕ್ಯಾಟಗರಿಯವರೇ..

  ReplyDelete
 6. wow.. super !!!!! swalpa jasthi aythu,irli, nanoo ondu joke keliddene... ee sandharbhadalli adanna thilsoke ishta padtini.. kannada-english mix madi mathadidre yav meaning kodutte antha ee joku.. lady obru function hall na door nalli ninthidru, costly necklace kooda hakidru. idannu gamanisida obbaru, yaakri heege ninthiddira antha kelidre, avara answer heegittu: " function ge bandavarella nan neck nodkondu hogli antha ninthidini kanri " !!!!!

  ReplyDelete
 7. ಆಹಾ, ಈ ಕನ್ನಡ ಮಾತಾಡೋರನ್ನು ನೋಡಿ ನಗಬೇಕೋ, ಅಳಬೇಕೋ ಗೊತ್ತಾಗ್ತಾ ಇಲ್ಲ. ಇನ್ನು ಅವರ ಇಂಗ್ಲೀಷೋ ದೇವರಿಗೇ ಪ್ರೀತಿ. ಈಗಿನ ಮಕ್ಕಳು ಅದೇನೂ ಕಲೀತಾರೋ ದೇವರೇ ಬಲ್ಲ. ನಾನು ಓದಿದ ಕಾಲದಲ್ಲಿ ನಮಗೆ ಸ್ಪೆಲಿಂಗ್ ಗಳನ್ನು ನಮ್ಮ ಬಾಯಿಗೆ ಬರೋವರೆಗೂ ಬಿಡುತ್ತಿರಲಿಲ್ಲ. ಕನ್ನಡ ಕಾಗುಣಿತ ನೂ ಹಾಗೇನೇ. ಈಗಿನ ವಿದ್ಯಾಭ್ಯಾಸ ನೋಡಿದರೇ ಭಯ ಆಗುತ್ತೆ. ಇವರಿಂದ ಈ ದೇಶವನ್ನು ಸುಭದ್ರವಾಗಿ ಕಟ್ಟಲು ಆಗುತ್ತದೆಯೇ??????????? ಇನ್ನೂ ಎಷ್ಟು ದಿನ ಸಹಿಸಬೇಕು ಈ ಅನ್ಯಾಯವನ್ನು ಎಂಬುದು ಗೊತ್ತಾಗುತ್ತಿಲ್ಲ. ಇಂಥವರ ನಡುವೆ ನಾವುಗಳು ಬಾಳಬೇಕಾಗಿದೆ.
  ಅವರು ಹೇಳಿದ್ದೇ ಸರಿ. ನಾವೇನಾದರೂ ತಿದ್ದೋಕೆ ಹೋದರೆ ಅಷ್ಟೆ ನಮ್ಮ ಗತಿ.

  ReplyDelete
 8. ನಮ್ಮೂರಿನ ಇಂಜಿನಿಯರಿಂಗ್ ಕಾಲೇಜಿನ ಪ್ರಧ್ಯಾಪಕರು practical ವೇಳೆಯಲ್ಲಿ ಹೇಳಿದ್ದೆಂದು ನನ್ನ ಇಂಜಿನಿಯರಿಂಗ್ ಗೆಳೆಯ ಹೇಳಿದ್ದು:

  ಹುಡುಗ ಕಟ್ಟಿಗೆ ತುಂಡನ್ನು file ಮಾಡುತ್ತಿದ್ದ, ಈ ಗುರುಗಳು ಬಂದು ಹೇಳಿದರು, 'Don't file, file, file. F...i..l..e.., f...i...l...e..., f...i...l...e...!'

  - ಕೇಶವ (www.kannada-nudi.blogspot.com)

  ಹುಡುಗ ಸುಸ್ತು!

  ReplyDelete
 9. [ವಿನುತ] ಜಾಸ್ತಿ ಆದರೂ ಅದ್ಭುತ ಹಾಸ್ಯ!

  [ಗುಡ್ ಸೋಲ್] ನಿಮ್ಮ ಕಾಲದ ವಿದ್ಯಾಭ್ಯಾಸ ಬಿಡಿ. ಆಗ ಮೇಷ್ಟ್ರುಗಳೂ ಕೂಡ dedicated ಆಗಿರೋರು.

  [ಕೇಶವ್] ಹ ಹ್ಹ ಹ್ಹಾ.. ಇದೇ ರೀತಿ ನಮ್ಮ ಸ್ನೇಹಿತರೂ ಹೇಳಿದ್ದರು. ಅವರಿಗೆ ಕೆಮಿಸ್ಟ್ರಿ ಮೇಷ್ಟ್ರು ಲ್ಯಾಬಿನಲ್ಲಿ ಹೇಳಿದ್ದರಂತೆ, "Dont pour, pour pour.... you should p....o..u...r..., p..o...u..r " ಅಂತ!

  ReplyDelete