Friday, June 8, 2007

ಬಿ.ಎಸ್.ಎನ್.ಎಲ್‍ಗೊಂದು ಪತ್ರ...

ಗೆ,
ಕನ್ನಡ ಓದಲು ಬರುವ ಸಂಬಂಧ ಪಟ್ಟ ಅಧಿಕಾರಿಗಳು
ಬಿ.ಎಸ್.ಎನ್.ಎಲ್.

ಭಾರತದ ಅತಿದೊಡ್ಡ ನೆಟ್‍ವರ್ಕು ನಮ್ಮದು ಎಂದು ಜಾಹೀರಾತು ನೋಡಿದಾಗ ಬಹಳ ಸಂತಸ ಪಟ್ಟು ಆಶಾವಾದಿಗಳಾಗಿ ಬಿ.ಎಸ್.ಎನ್.ಎಲ್ ಬ್ರಾಡ್ ಬ್ಯಾಂಡ್ ಅಂತರ್ಜಾಲವನ್ನು ಬಳಸುತ್ತಿರುವ ನಮ್ಮಂಥವರ ಪಾಡು ಇಂದು ಏನಾಗಿದೆ?

ರಾತ್ರಿ ಹನ್ನೊಂದಾದರೆ ಸಾಕು, ಬರುತ್ತೆ ಏನೋ ರೋಗ. ನೆಟ್ ಕೆಲಸವೇ ಮಾಡಲೊಲ್ಲದು. ಸಂಪೂರ್ಣ ಡಿಸ್‍ಕನೆಕ್ಟ್! ಬೆಳಿಗ್ಗೆವರೆಗೂ.. ಮೂರು ದಿನದಿಂದ ಇದೇ ಪಾಡು ಆದ್ದರಿಂದ , ಅದ್ಯಾವುದೋ ಟೋಲ್ ಫ್ರೀ ನಂಬರ್ ಅಂತ ಕೊಟ್ಟಿದೀರಲ್ಲಾ, 1800 424 1600 ಅಂತ, ಇದಕ್ಕೆ ಕರೆ ಮಾಡಿದರೆ ಕರ್ಕಶದ ದನಿಯುಳ್ಳವಳು (ರೆಕಾರ್ಡೆಡ್) "ನಿಮ್ಮ ಕರೆಯು ನಮಗೆ ಅತ್ಯಮೂಲ್ಯ, ದಯವಿಟ್ಟು ನಿರೀಕ್ಷಿಸಿ.." ಎಂದು ಹತ್ತು ನಿಮಿಷಗಳ ಕಾಲ ಬಡಕೊಳ್ಳುತ್ತಾಳೆಯೇ ಹೊರೆತು ನಿರೀಕ್ಷಿಸಿ ನಿರೀಕ್ಷಿಸಿ ಬೇಸತ್ತು ಹೋಗುವುದಂತೂ ದಿಟ. ಇನ್ನೊಂದು ಸಂಖ್ಯೆಯಿದೆ, 25514444 ಅಂತ. ಇದಕ್ಕೆ ಕರೆ ಮಾಡಿದರೆ ಬ್ಯುಸಿ ರಾಗದ ಸಂಗೀತ ಬರುತ್ತಲೇ ಇರುತ್ತೆ. ಹಗಲಲ್ಲಿ ಈ ನಂಬರಿನ ಫೋನನ್ನು ಯಾರೋ ಸಿಟ್ಟಾಗಿಯೋ, ಬೇಸರದಿಂದಲೋ ಎತ್ತುತ್ತಾರೆ, ಇನ್ನೊಂದು ಸಂಖ್ಯೆ ಕೊಟ್ಟು ಅದಕ್ಕೆ ಕರೆ ಮಾಡಿ ಅಂತಾರೆ, ಆ ನಂಬರಿಗೆ ಕರೆ ಮಾಡಿದರೆ ಅವರು ಪುನಃ ಹಳೆಯ ಸಂಖ್ಯೆಯನ್ನೇ ಕೊಡುತ್ತಾರೆ.

ಸರ್ವರ್ ಡೌನ್:

ಗ್ರಾಹಕ ಸೇವೆಗೆಂದು ಕುಳಿತಿರುವ ಅಧಿಕಾರಿಗೆ ಟ್ರೈನಿಂಗ್ ಕೊಟ್ಟಿರುವುದು ಬಹುಶಃ ಇದೊಂದೇ ಪದ ಅನ್ನಿಸುತ್ತೆ. ಯಾವಾಗ ಕೇಳಿದರೂ "ಸರ್ವರ್ ಡೌನ್ ಇದೆ ಸರ್" ಎಂದು ಹಾಡಿದ್ದೇ ಹಾಡುವ ದಾಸರಂತೆ ಒದರುತ್ತಿರುತ್ತಾರೆ. ಒಂದು ಸರ್ವರ್ ಅಪ್ ಆಗೋಕೆ ಒಂದು ವಾರ ಬೇಕಾಗುತ್ತಾ? ವಾಸ್ತವವಾಗಿ ಕನೆಕ್ಷನ್ ಎಂಬ ಕನೆಕ್ಷನ್ನು ತಿಂಗಳಾನುಗಟ್ಟಲೆಯಿಂದ ತೊಂದರೆ ಕೊಡುತ್ತಲೇ ಇದೆ. ನಾವು ತೊಂದರೆ ಕೊಟ್ಟಾಗಲೆಲ್ಲಾ ಕಂಪ್ಲೆಂಟು ಕೊಡಲು ಪ್ರಯತ್ನಿಸುತ್ತಲೇ ಇದ್ದೇವೆ. ಸರ್ವರ್ ಡೌನ್ ಎಂಬ ಹಾಕಿದ್ದೇ ಸಿ.ಡಿ.ಯನ್ನು ಅವರು ಹಾಕುತ್ತಲೇ ಇದ್ದಾರೆ. ನಾವು ಅದೇ ಹಾಡನ್ನು ಕೇಳುತ್ತಲೇ ಇದ್ದೇವೆ. ಬೇರೆ ಏನಾದರೂ ಕಾರಣ ಕಂಡುಕೊಳ್ಳೋಕೆ ನಿಮ್ಮ ಗ್ರಾಹಕ ಸೇವೆಯ ಮಂಡಳಿಗೆ ಟ್ರೈನಿಂಗ್ ಕೊಡುವುದೊಳಿತು.

ಒಂಭೈನೂರು ರೂಪಾಯಿಗೆ ಅನಿರ್ದಿಷ್ಟಿತ ಡೌನ್‍ಲೋಡಿಂಗ್ ಸೌಲಭ್ಯ ಒದಗಿಸುತ್ತೇವೆಂದು ಜಾಹೀರಾತು ನೀಡಿದಾಕ್ಷಣವೇ ಅದರ ಮೊರೆ ಹೋದ ನಾವು ಮೂರ್ಖರಾದೆವು ಎಂದು ಈಗ ಅನ್ನಿಸುತ್ತಿದೆ. "ಏರ್ಟೆಲ್ ನನಗೆ ಇದುವರೆಗೂ ಒಂದು ಸಲವೂ ತೊಂದರೆ ಕೊಟ್ಟಿಲ್ಲ" ಎಂದು ಶ್ರೀಕಾಂತ್ ಹೇಳಿದ್ದನ್ನೂ ಕೇಳಿಸಿಕೊಳ್ಳದಾದೆನೇ ಎಂದೆನಿಸುತ್ತಿದೆ. "ಸುಮ್ಮನೆ ಒಂಭೈನೂರು ರುಪಾಯಿ ಯಾಕೆ ಕೊಡ್ತೀಯ? ಕಡಿಮೆ ಸ್ಪೀಡ್ ಆದರೂ ಗ್ಯಾರೆಂಟಿ ಕನೆಕ್ಷನ್ ಕೊಡ್ತಾ ಇದೆ ನಮ್ಮ ಮನೆಯಲ್ಲಿ ಸಿಫಿ ನೆಟ್‍ವರ್ಕು. ಅದನ್ನೇ ತೊಗೊ. ಎಂದು ಬಾಲಾಜಿ ಇನ್ನಿಲ್ಲದಾಗಿ ಹೇಳಿದರೂ ಬಿ.ಎಸ್.ಎನ್.ಎಲ್ ಕಡೆ ಹೋಗಿದ್ದು ಯಾಕೆ ಎಂದು ಈಗ ಪಶ್ಚಾತ್ತಾಪವಾಗುತ್ತಿದೆ. ಇಲ್ಲಿ ಸರ್ವರ್ ಡೌನ್ ಆದರೆ ಅದನ್ನು ಸರಿಪಡಿಸಲು ಒಂದು ತಿಂಗಳೇ ಬೇಕಾದೀತು ಎಂದು ಯಾರಿಗೆ ತಾನೇ ಕನಸು ಬಿದ್ದೀತು!

ಲೋಡ್ ಶೆಡ್ಡಿಂಗ್:

ನಮ್ಮ ಕೆ.ಪಿ.ಟಿ.ಸಿ.ಎಲ್‍ರವರು ಆಗಾಗ್ಗೆ ಲೋಡ್ ಶೆಡ್ಡಿಂಗ್ ಅಂತ ಹೇಳಿ ಕರೆಂಟು ತೆಗೆಯೋದಿಲ್ವೇ, ಹಾಗೆ ಅಂತರ್ಜಾಲವು ತನಗೆ ಬೇಕಾದಾಗ ಶೆಡ್ ಆಗುತ್ತಿರುತ್ತಲ್ಲಾ. ಇದಕ್ಕೆ ಕಾರಣವೇನು? ಹೆಚ್ಚು ಕಡಿಮೆ ಒಂದು ವರ್ಷದಿಂದ ಬಳಸುತ್ತಿದ್ದೇನೆ, ಪ್ರತಿದಿನವೂ ಈ ಗೋಳನ್ನು ಅನುಭವಿಸುತ್ತಲೇ ಇದ್ದೇನೆ. ಡಿಸ್‍ಕನೆಕ್ಟ್ ಆಗೋದು ಅಭ್ಯಾಸವಾಗಿ ಹೋಗಿದೆ. "ಯಾವುದೇ ಫೈಲ್‍ಗಳನ್ನು ಚಾಟಿಂಗ್ ಅಲ್ಲಿ ಕಳಿಸಬೇಡ, ಯಾವಾಗ ಡಿಸ್‍ಕನೆಕ್ಟ್ ಆಗುತ್ತೋ ಈ ಬೋಳಿಮಗಂದು ನೆಟ್" ಅಂತ ಗೆಳೆಯರೂ ಸಹ ಅಭ್ಯಾಸ ಹೊಂದಿದವರಾಗಿ ಹೇಳುವುದು ಸಾಮಾನ್ಯ ಸಂಭಾಷಣೆಯಾಗಿದೆ. ಆದರೆ ಕಳೆದ ಒಂದು ವಾರದಿಂದಂತೂ ಈ ಲೋಡ್ ಶೆಡ್ಡಿಂಗು ಗಂಟೆಗಟ್ಟಲೆಗೆ ವಿಸ್ತಾರವಾಗಿ ಹೋಗಿದೆ. ಮೊದಲಾದರೆ ಕೆಲವು ನಿಮಿಷಗಳ ಕಾಲ ಕಟ್ ಆಗಿ, ಮತ್ತೆ ಕನೆಕ್ಟ್ ಆಗುತ್ತಿತ್ತು. ಮತ್ತೆ ಹತ್ತು ನಿಮಿಷಗಳ ಕಾಲವಾದ ಮೇಲೆ ಕಟ್! ಹೀಗೇ ಆಟ!! ಇದು ತಿಂಗಳಾನುಗಟ್ಟಲೆಯಿಂದ ನಮ್ಮೊಡನೆ ಆಟ ಆಡುತ್ತಿರುವುದು ಬಿ.ಎಸ್.ಎನ್.ಎಲ್. ಅಂತರ್ಜಾಲ. ಈ ಪತ್ರ ಬರೆಯುತ್ತಿರುವಾಗಲೇ ಏನಲ್ಲಾ ಅಂದರೂ ಸುಮಾರು ಐದು ಸಲ ಕನೆಕ್ಟ್ - ಡಿಸ್‍ಕನೆಕ್ಟ್ ಆಗಿದೆ. ಹೀಗೇ ಇನ್ನೂ ಎಷ್ಟು ದಿನ ಆಗುತ್ತೆ ಎಂದು ಕೃಪೆ ತೋರಿ ಉತ್ತರಿಸಿದರೆ, ಅಷ್ಟು ದಿನದವರೆಗೂ ಅಂತರ್ಜಾಲವನ್ನು ಹೇಗೆ ಬಳಸುವುದು ಎಂದು ಯೋಜನೆ ಹಾಕಿಕೊಳ್ಳಬಹುದು.


ನನ್ನಂತೆ ಬಿ.ಎಸ್.ಎನ್.ಎಲ್ ಬೇಜವಾಬ್ದಾರಿ ತನಕ್ಕೆ ತುತ್ತಾಗಿರುವವರು ಇಲ್ಲಿ ಕಮೆಂಟಿಸಬೇಕೆಂದು ಕೇಳಿಕೊಳ್ಳುತ್ತೇನೆ. ಈ ಪತ್ರದ ಪ್ರತಿಯನ್ನು ಬಿ.ಎಸ್.ಎನ್.ಎಲ್ ಹಾಗೂ ಕನ್ನಡ ಪತ್ರಿಕಾ ಕಛೇರಿಗಳಿಗೆ ಕಳಿಸುವ ಉದ್ದೇಶ.

15 comments:

 1. howdhu....nammanelu heege...raatre 11 aadare saaku disconnect aagutte..
  sambhandha patta adhikaarikaari vargadavaru aadastu bega server na "up" maadabekaagi vinanthi..... :-)

  ReplyDelete
 2. ಈ ದರಿದ್ರ ಬಿ.ಎಸ್.ಎನ್.ಎಲ್. ಬ್ರಾಡ್ ಬಾಂಡ್ ಹಾಕಿಕೊಂಡು ಬಹಳವೇ ತಪ್ಪು ಮಾಡಿದೆವು. ನಾನು ಹೋದ ವರ್ಷ ಸೆಪ್ಟೆಂಬರ್ ನಲ್ಲಿ ರೂ.೯೦೦/- ರ ಪ್ಲಾನ್ ಹಾಕಿಸಿಕೊಂಡೆ. ನನಗೆ ಈ ಇಂಟನೆಟ್ ಅನ್ನೋದೇ ಹೊಸದು. ಇದನ್ನು ಹಾಕಿಸಿಕೊಂಡರೆ ಏನೆಲ್ಲಾ ಮಾಡಬಹುದು ಎಂದುಕೊಂಡು ಹಾಕಿಸಿಕೊಂಡದ್ದಾಯಿತು. ಆದರೆ ಒಂದು ದಿನಕ್ಕೂ ಈ ಸುಖವನ್ನು ಸರಿಯಾಗಿ ಅನುಭವಿಸಿಲ್ಲ. ಯಾವಾಗ ನೋಡಿದರೂ ಸರ್ವರ್ ಡೌನ್ ಅಂತಿರ್ತಾರೆ. ಅಪ್ ಗ್ರೇಡ್ ಅಂತಿರ್ತಾರೆ. ಮೈಲ್ಸ್ ಕಳಿಸೋವಾಗಲೇ ನೆಟ್ ಡೆಡ್. ಅದರಲ್ಲೂ ಮೊನ್ನೆ ೫ನೇ ತಾರೀಕಿನಿಂದ ನೆಟ್ ಬರ್ತಾನೇ ಇಲ್ಲ. ದಿನಗಟ್ಟಲೆ ನೆಟ್ ಇಲ್ಲವೇ ಇಲ್ಲ. ಏನಾಗಿದೆ ಈ ಬ್ರಾಡ್ ಬಾಂಡ್ ನವರಿಗೆ? ಸುಮ್ಮನೆ ಕೊಚ್ಚಿಕೊಳ್ತಾರೆ ನಮ್ಮದೇ ಶ್ರೇಷ್ಟ ಅಂತ. ಇದರಂಥ ದರಿದ್ರ ನೆಟ್ ವರ್ಕ್ ಇಲ್ಲವೇ ಇಲ್ಲ ಅಂತ ಅನ್ನಸ್ತಿದೆ. ಏರ್ ಟೆಲ್ ಹಾಕಸ್ಕೋಳಿ ಅಂತ ಲ್ಲರೂ ಹೇಳಿದರು. ಆದರೆ ನಮ್ಮ ಹಿಂದೂ ದೇಶದ್ದು ಬಿ.ಎಸ್.ಎನ್.ಎಲ್. ಖ್ಯಾತಿ ಇರುವಂಥಾದ್ದು ಅಂತ ಇದರ ಹಿಂದೆ ಬಿದ್ದೆವು. ಇತ್ತೀಚೆಗಂತೂ ತುಂಬಾನೇ ಬೇಸರ ಬಂದಿದೆ ಈ ನೆಟ್ ವರ್ಕ್ ಬಗ್ಗೆ. ರಾತ್ರಿ ೧೧-೦೦ ಗಂಟೆ ಆದರೆ ಸಾಕು ನೆಟ್ ವರ್ಕ್ ಸತ್ತುಹೋಗುತ್ತೆ.

  ReplyDelete
 3. ನಾನು ಬಿ.ಎಸ್.ಎನ್.ಎಲ್ ಗ್ರಾಹಕನಲ್ಲ. ಆದರೂ ಕಮೆಂಟು ಹಾಕಬೇಕು ಎಂದೆನ್ನಿಸಿತು.

  ಈಗಲೂ ಹೇಳ್ತೀನಿ ಕೇಳು... ಏರ್ಟೆಲ್ ಸಾವಿರಪಾಲು ವಾಸಿ. ಅದೂ ಮೊನ್ನೆ ಒಂದು ಸರ್ತಿ ಮಳೆ ಜೋರಾಗಿ ಹುಯ್ಯುತಿರುವಾಗ ಡಿಸ್ಕನೆಕ್ಟ್ ಆಯ್ತು. ಕಸ್ಟಮರ್ ಕೇರ್ ಗೆ ಫೋನ್ ಮಾಡ್ದೆ. "One of our servers have crashed due to rain sir" ಅಂದ್ರು. "When will it be up?" ಅಂತ ಕೇಳ್ದೆ. "45 minutes sir" ಅಂದ್ರು. ನಲ್ವತ್ತೈದು ನಿಮಿಷ ಎಣಿಸಿ ನಂತರ ನೋಡಿದೆ. ಏನೂ ಆಗಲೇಇಲ್ಲ ಎಂಬಂತೆ ನೆಟ್ ಸೊಗಸಾಗಿ ಕೆಲಸ ಮಾಡುತ್ತಿತ್ತು.

  ಸರ್ವರ್ ಗಳು ಅಪರೂಪಕ್ಕೊಮ್ಮೆ "ಡೌನ್" ಆಗುವುದು ಸಾಮಾನ್ಯ. ಒಟ್ಟಾರೆ ಏರ್ಟೆಲ್ ನವರ ಸರ್ವೀಸ್ ನನಗೆ ತೃಪ್ತಿ ಕೊಟ್ಟಿದೆ. ಈ ರೀತಿ ಪತ್ರ ಬರೀತಾ ಕೂರೋದ್ ಬಿಟ್ಟು ಏರ್ಟೆಲ್ ಕನೆಕ್ಷನ್ ತೊಗೊ. ಸ್ಪೀಡ್ ಸ್ವಲ್ಪ ಕಡಿಮೇನೇ ಅದ್ರೂ ಚೆನ್ನಾಗಿದೆ. ನೆಟ್ ಕೆಲಸ ಮಾಡ್ದಿದ್ರೆ 2 mbps ಅಲ್ಲ 2 gbps ಇದ್ರೂ ದಂಡ!

  ReplyDelete
 4. horrible service by BSNL broadband, they dont' provide us the service what they claim to provide in their ad's , if u try calling d customer care they take hours to receive d call and most of the customer care ppl are technically incompetant to handle the queries.

  the servers are almost dead during the weekends, they dont' provide u with download speeds they advertise, every now and then d connection goes down..BSNL is a typical govt org, hardly worries abt its services and customers....still they have to feel d heat of competition in this sector to give us a good service.

  ReplyDelete
 5. ನಾನು ಅಂತರ್ಜಾಲವನ್ನು ಹೆಚ್ಚಾಗಿಯೇ ಬಳಸುವವನು. ಆದರೆ ಕಛೇರಿಯಲ್ಲಿ ಅಂತರ್ಜಾಲವಿರುವುದರಿಂದ ನನ್ನ ಮನೆಯಲ್ಲಿ ಅಂತರ್ಜಾಲ ಬಳಕೆ ಕಡಿಮೆಯೆನ್ನಬಹುದು. ಅದಕ್ಕೆ ಸುಮ್ಮನೆ 900 ರೂ. ಗಳ ಸೌಲಭ್ಯದ ಅಗತ್ಯ ಇಲ್ಲ ಅನ್ನಿಸಿದ್ರಿಂದ ಅದಕ್ಕೆ ಮಾರುಹೋಗದೆ ಸಾಮಾನ್ಯ ಸೌಲಭ್ಯ ಮುಂದುವ್ರೆಸಿಕೊಂಡು ಹೋಗ್ತಾ ಇದ್ದೇನೆ. ಹೀಗಾಗಿ ನನಗಿರುವ ಅಂತರ್ಜಾಲ ಸಾಮರ್ಥ್ಯ ಕೇವಲ 1 ಜಿಬಿ ಮಾತ್ರ. ಅದು ನನಗೆ ಕೇವಲ ಎರಡು ದಿನಕ್ಕೆ ಸಾಲದು. ದಿನಕ್ಕೆ ಕೇವಲ ಎರಡು ಮೂರು ಗಂಟೆ ಕುಳಿತರೆ ಸಾಕು ಎರಡು ದಿನಕ್ಕೆ 1 ಜಿಬಿ ದಾಟಿರುತ್ತೆ. ಹಾಗಾಗಿ ನಾನು ಸಾಮಾನ್ಯವಾಗಿ ತಿಂಗಳ ಕೊನೆಯ ವಾರದ ಯಾವುದಾದರೂ ಎರಡು ದಿನ ಮಾತ್ರ ಅಂತರ್ಜಾಲ ಬಳಸೋದು ವಾಡಿಕೆ. ಆದರೆ ಈ ಬಿ.ಎಸ್.ಎನ್.ಎಲ್ ಅಂತರ್ಜಾಲ ಅಷ್ಟು ಕಡಿಮೆ ಸಮಯದಲ್ಲೇ ಬಹಳಷ್ಟು ತೊಂದರೆ ಕೊಟ್ಟಿದೆ. ಆದ್ದರಿಂದ ನೀವುಗಳು ಹೇಳಿದ್ದು ಕಡಿಮೆ ಅನಿಸುತ್ತೆ. ಆದರೆ ಏರ್ ಟೆಲ್ ತುಂಬಾ ನಿಧಾನ ಯಾಕೆಂದರೆ ನನ್ನ ಕಛೇರಿಯಲ್ಲಿ ಬಳಸೋದು ಏರ್ ಟೆಲ್ ಸಂಪರ್ಕವನ್ನೇ ಅದು ತುಂಬಾ ನಿಧಾನ

  ReplyDelete
 6. neevu heLiddu nija. yaavaaga bsnl sariyaagi kelasa maaDuvudO a devare (BSNLle) heeLbeku

  ReplyDelete
 7. Howdu namma net nallu...... gotillade B.S.N.L aakisidini same problem..... one week nalli 3, 4 saari net disconect agute office ge phone madidre sariyagi phone receive madolla......
  sambhandha patta adhikaarikaari vargadavaru aadastu bega server na "up" maadabekaagi vinanthi..... :-)

  ReplyDelete
 8. [ಶ್ರೀಧರ] ಡಿಸ್‍ಕನೆಕ್ಟ್ ಆಗೋಕೆ ಟೈಮ್ ಎಲ್ಲಾ ಇಲ್ಲಿ!

  [ಗುಡ್-ಸೋಲ್] ಆದಷ್ಟು ಬೇಗ ನಾವುಗಳೂ ಈ ಮೋಸದಿಂದ ಮುಕ್ತರಾಗಲು ಬೇರೆ ಕನೆಕ್ಷನ್‍ಗೆ ಮೊರೆ ಹೋಗುವುದೊಳಿತು.

  [ಶ್ರೀಕಾಂತ್] ನೀವು ಪುಣ್ಯವಂತರು!

  [ಕಾರ್ತಿಕ್] ನಿಮ್ಮ ಮಾತು ಸತ್ಯ. ಫೋನಲ್ಲ, ಅವರ ಎದುರು ಹೋಗಿ ಕಿರುಚಾಡಿದರೂ ಅವರು ಯಾವ ಕೆಲಸವನ್ನೂ ಮಾಡೋದಿಲ್ಲ.

  [ಅರವಿಂದ] ನಿಧಾನವಾದರೂ ಕನೆಕ್ಷನ್ ಇದ್ದೇ ಇರುತ್ತೆ ಅನ್ನೋ ನಂಬಿಕೆಯಿರುತ್ತಲ್ಲಾ ಏರ್‍ಟೆಲ್‍ನಲ್ಲಿ?

  [ಶ್ರೀವಳ್ಳಿ] ಅದಕ್ಕೇ ಆ ದೇವರಿಗೆ ಈ ಪತ್ರ ಕಳಿಸಿ ಕೇಳೋಣ ಅಂತ.

  [ಸಹನಾ] ಸಹನೆ ಮೀರುವ ವರ್ತನೆ ಇವರದು!

  ReplyDelete
 9. nanu kooda BSNL broadband customer. illiyoo saha adhe problemmu, yavaga nodidroo disconnect agtirutte, important results nodovagloo ondu sala disconnect agittu, aaga navu bsnl na thumba bykondvi. ee letter na odhiyadroo avru server na up madtaro ilvo annodna nodbeku

  ReplyDelete
 10. abba naanthu a thondre anubhavisiddu ondu thingalu mathra but iga no prob from 5yrs bcz i am using AIRTEL

  yappa BSNL worst kanappa speed jasthi kodthivi antha helthre aste speed kuda irolla madye madye dissconnect adre anthu kenadamadalavada kopa baruthe nanganthu namma conversationsgella thondare. nanu onde month use madiddu BSNl na amele airtel thagonde its long back i am using from 5 yrs now ondu dina kuda disconnect agilla

  adekke nanna salahe nimagella take AIRTEL unlimited package.

  ReplyDelete
 11. asTe allaDe custumer serivce is the best kanri ARTEl du i dabba BSNL baddi makkalu phone madre baibandage eneno karana kodthre hang aaithu hing aaithu sarihoguthe inu 3hrs nalli anthella
  avrge phone maadi namma energy,timeu ella wate aguthe varthu avr mathra barOdilla sari madoke...........

  adekke AIRTEL best. ondu dina kuda disconnect agilla nandu nd iam hatsoff to AIRTEL.

  ReplyDelete
 12. What we need is "Realibility", not just decent speed if and when the net connection is working.

  Weekends and evening after 10:30 pm is really bad sometimes with the DNS server generally down at this time; most probably due to overload.

  It would all work fine the next day morning, so cant even lodge a complaint.

  ReplyDelete
 13. exactly!..thingalige kanishta androo 5 dina saree irolla. Namdoo 900 planu. Andre 150 rupayee heege khalas. Maththe disconnect agodakke lekkane illa. Corectagi barodandre bsnl na bill matra.

  ReplyDelete
 14. exactly!..thingalige kanishta androo 5 dina saree irolla. Namdoo 900 planu. Andre 150 rupayee heege khalas. Maththe disconnect agodakke lekkane illa. Corectagi barodandre bsnl na bill matra.

  ReplyDelete
 15. ಸರಿಯಾಗೆ ಹೇಳಿದಿರಿ. ನಾವು ಉಡುಪಿಯಲ್ಲಿ ಇರೊರಿಗೆ ಪವರ್ ಬೇರೆ ಕಣ್ಣಾಮುಚ್ಚಾಲೆ ಆಡುತ್ತಿರುತ್ತೆ. ಹುಹ್.. ದೊಡ್ಡ file ಕೆಲವು KB download ಬಾಕಿ ಇರುವಾಗ disconnect ಆಗಿ ಮತ್ತೆ ಮುದದಿಂದ download ಆಗ್ಲಿಕ್ಕೆ ತಯಾರಿನಡೆಸುವಾಗ ಯಾರ ತಲೆ ಕೆರೆದುಕೊಳ್ಳೋದು? ಹುಹ್.. 250rs ಲಿಮಿಟೆಡ್ planನವರಿಗೆ ಸ್ಪೀಡ್ ಕೂಡ ಜಾಸ್ತಿ ಅಂತೆ, ನಮ್ಮ 900rs ಗೆ ಬೆಲೇನೆ ಇಲ್ವಾ?

  ReplyDelete