Friday, June 22, 2007

ಪ್ರೆಶ್ನಾತೀತ..

ಕಂಪ್ಯೂಟರು ಎಲ್ಲೆಲ್ಲೂ ರಾರಾಜಿಸುತ್ತಿರುವ ಈ ಕಾಲದಲ್ಲೂ ಅದರ ಬಗ್ಗೆ ಏನೇನೂ ತಿಳಿಯದವರೂ ಇದ್ದಾರೆಂಬುದು ಸತ್ಯ. ಆದರೆ ಅವರನ್ನು ನಾನು ದಡ್ಡರೆನ್ನುತ್ತಿಲ್ಲ. ಅವರುಗಳು ಅದನ್ನು ತಿಳಿದುಕೊಳ್ಳಲೇ ಬೇಕು ಎಂದೂ ಹೇಳುತ್ತಿಲ್ಲ. ಆದರೆ, ಇಂಥವರ ನಡುವೆ "ಹಾರ್ಡ್‍ವೇರ್ ಇಂಜಿನಿಯರುಗಳ" ಪಾಡು ಏನು ಎಂಬುದನ್ನು ಹಾ.ಇಂ.ಗಳೇ ಬಲ್ಲರು. ಯಾಕೆಂದರೆ ಇಂಥವರಿಗೆ ಕಂಪ್ಯೂಟರಿನ ಗಂಧವಿರುವುದಿಲ್ಲವಾದರೂ, ತಮ್ಮ ಮಕ್ಕಳಿಗೆಂದೋ, ತಮ್ಮ ಕಚೇರಿಯ ಕೆಲಸಕ್ಕೆಂದೋ ಕಂಪ್ಯೂಟರನ್ನು ಖರೀದಿಸುವ, ತಮ್ಮ ಮನೆಗಳಲ್ಲಿ (ಕಚೇರಿಗಳಲ್ಲಿ) ಪ್ರತಿಷ್ಠಾಪಿಸುವ ನೆಪದಲ್ಲಿ ಹಾ.ಇಂ. ಗಳ ಮೆದುಳನ್ನು ತಮ್ಮ ಮಧ್ಯಾಹ್ನದ ಊಟಕ್ಕೆ ನೆಂಚಿಕೊಂಡು ತಿಂದುಬಿಡುತ್ತಾರೆ.

ಮೊನ್ನೆ ಶ್ರೀ ಹೇಳಿದಳು, "ನೀನು ಯಾಕೆ ಈ ಕೆಲಸ ಮಾಡೋಕೆ ಬೇಜಾರು ಅಂತೀಯ ಅಂತ ನಂಗೆ ಈಗ ಅರ್ಥ ಆಗ್ತಾ ಇದೆ" ಎಂದು. "ಯಾಕೆ ಏನಾಯ್ತು?" ಎಂದೆ. Actually, ಅವಳ ತಂದೆಯ ಗೆಳೆಯರೊಬ್ಬರ ಮನೆಗೆ ಆಗಮಿಸಿದ ಹೊಸ ಕಂಪ್ಯೂಟರಿಗೆ Windowsನ ಪ್ರತಿಷ್ಠಾಪಿಸಲು ನಾನು ಹೋಗಬೇಕಿತ್ತು. ಆ ಜವಾಬ್ದಾರಿಯನ್ನು ಶ್ರೀ ಹೆಗಲ ಮೇಲೆ ಹಾಕಿ ನಾನು ಪಾರಾದೆ!

"ಯಾಕೆ ಏನಾಯ್ತು?" ನಾನು ಪುನಃ ಕೇಳಿದೆ.

"ವಿಂಡೋಸ್ ಎಲ್ಲಾ install ಆಯ್ತು. ಅವರ ಪ್ರೆಶ್ನೆಗೆ ನನ್ನ ಹತ್ತಿರ ಉತ್ತರವೇ ಇಲ್ಲ"

"ಅದೆಂಥಾ ಪ್ರೆಶ್ನೆ?"

"Software ಎಲ್ಲಾ install ಮಾಡಿದ್ ಆಯ್ತು, hardwareನ ಎಲ್ಲಿ install ಮಾಡೋದು? ಅಂದ್‍ಬಿಟ್ರು!"

.....................................................................................

ಒಬ್ಬರಿಗೆ ಉಚ್ಚಾರಣೆಯ ಸಮಸ್ಯೆ. ಒಂದು ಥರದ ಮಾಲಪ್ರೋಪಿಸಂ. ಅವರು ಕೇಳುವ ಪ್ರೆಶ್ನೆ ಬಹಳ ಆಭಾಸಕಾರಿಯಾಗಿರುತ್ತಿತ್ತು. ಸಧ್ಯ, ಅವರ ಕಾಂಟ್ರಾಕ್ಟ್ ಕಾಟ ಮುಗೀತು. "Arun, I have more data. i have to increase my hard diks" (hard disk) ಎಂದಿದ್ದರು ಒಮ್ಮೆ. ನಗಲೋ ಅಳಲೋ!

.....................................................................................

ಸಂಕೇತಿ ಸಂಘದ ಕಾರ್ಯದರ್ಶಿಗಳು ಆಗ ತಾನೆ ಅರ್ಧ ಗಂಟೆಯ ಮುನ್ನ Windows 2000 ಹಾಕಿಕೊಟ್ಟು ಬಂದಿದ್ದ ನನಗೆ tension ಮಾಡಿಕೊಂಡು ಕರೆ ಮಾಡಿದರು. "ಅರುಣ್, system-ಉ hang ಆಗಿದೆ." ನನಗೆ ಆಶ್ಚರ್ಯ ಆಯಿತು. ಇದೇನಪ್ಪಾ, ಈಗ ತಾನೆ ಹಾಕಿಬಂದಿದೀನಿ, ಇಷ್ಟ್ ಬೇಗ hang-ಆ? Microsoft-ಉ ಅಷ್ಟೊಂದು ಹೋಪ್‍ಲೆಸ್ ಅಲ್ವಲ್ಲಾ, ಎಂದುಕೊಂಡು, "ಯಾವ ಹಂತದಲ್ಲಿ hang ಆಗಿದೆ ಸರ್?" ಎಂದೆ.

"getting started ಅಂತ hang ಆಗಿದೆ".

ಯಾವುದಪ್ಪಾ ಇದು ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು. Windows install ಮಾಡಿದ ಮೇಲೆ, ಸಹಾಯಕ್ಕೆಂದು ಬರುವ ವಿಂಡೋ-ನ ಇವರು hang ಅಂತಾ ಇದ್ದಾರೆ ಎಂದು. ಸಹಾಯ ಮಾಡುವವರನ್ನು ಬೈತಾರೆ ಜನ!

ನಾನು ಹೇಳಿದೆ, "ಅದನ್ನ ಕ್ಲೋಸ್ ಮಾಡ್ಬಿಡಿ" ಅಂತ.

ಅವರು ತಮ್ಮ ಆಫೀಸಿನಲ್ಲಿ ಲೆಕ್ಕಪರಿಶೋಧನಾ ಕೆಲಸವನ್ನು ಮಾಡುವುದರಿಂದ ಅವರಿಗೆ ಕಡೇಪಕ್ಷ ತೆರೆದ ವಿಂಡೋ ಕ್ಲೋಸ್ ಮಾಡೋಕೆ ಬರುತ್ತೆ ಎಂದು ನಂಬಿದ್ದೆ. ನನ್ನ ನಂಬಿಕೆ ಸುಳ್ಳು ಮಾಡಲು ಅವರು ಕಾಯುತ್ತಲಿದ್ದರು. "ಹೇಗೆ ಕ್ಲೋಸ್ ಮಾಡೋದು?"

"(ನಿಟ್ಟುಸಿರು ಬಿಟ್ಟು) ಅಲ್ಲಿ, ಕ್ಲೋಸ್ ಬಟನ್ ಇಲ್ವಾ?"

"ಎಕ್ಸ್ (X) ಒತ್ತಬೇಕಾ?"

"ಒತ್ತಿ"

ಅದು ಯಾವುದೋ ಕಾರಣಕ್ಕೆ ಕ್ಲೋಸ್ ಆಗಲಿಲ್ಲ. "ಆಗ್ತಾನೇ ಇಲ್ಲ?"

"ಸರಿ, ಅಲ್ಲಿ exit ಅಂತ ಇದೆ ನೋಡಿ ಅದನ್ನು ಒತ್ತಿ"

"exit ಅಂತ ಇಲ್ವೇ ಇಲ್ಲ ಇಲ್ಲಿ. close ಅಂತ ಇದೆ"

"ಅದನ್ನೇ ಒತ್ತಿ"

"ಹಾಂ ಈಗ ಆಯ್ತು ನೋಡಿ. ನೀವು ಇದನ್ನೆಲ್ಲಾ ಸರೀಗೆ ಮಾಡಿಕೊಡ್ಬೇಕು ನೋಡಿ. ನಿಮ್ಗೆ ದುಡ್ಡು ಕೊಡ್ತೀವಲ್ಲಾ ನಾವು!"
.....................................................................................

ನಮ್ಮ ಶಾಲೆಯಲ್ಲಿ ಹೊಸ ಕಂಪ್ಯೂಟರುಗಳನ್ನು ತರಿಸಿದ್ದಾರೆ. ಹಳೆಯ ಕಂಪ್ಯೂಟರುಗಳಿಂದ data ಎಲ್ಲಾ ಪುನರ್ಬಳಕೆಗೆ ತೆಗೆದುಕೊಳ್ಳಬೇಕೆಂದು ಹಳೆಯ ಹಾ.ಇಂ.ನ ಕರೆಸಿದ್ದರು. ನಾನು ಲ್ಯಾಬಿನಲ್ಲಿ ಏನೋ ಒಂದಷ್ಟು ಮೌಲ್ಯಮಾಪನ ಮಾಡುತ್ತಿದ್ದೆ.

ಹಾ.ಇಂ. ಕೇಳಿದರು, "ಯಾವ systemನಲ್ಲಿದೆ data?"

ಲ್ಯಾಬಿನಲ್ಲಿ ಹತ್ತು ಕಂಪ್ಯೂಟರುಗಳಿವೆ. ಹಳೆಯ ಐದು ಕಂಪ್ಯೂಟರುಗಳು ಕನೆಕ್ಷನ್ ಇಲ್ಲದೆ ಅನಾಥವಾಗಿ ಪೆಟ್ಟಿಗೆ ಸೇರಿವೆ. ಆದರೆ ಹಳೆಯ ಮಾನೀಟರುಗಳು ಮಾತ್ರ ಮೇಜಿನ ಮೇಲೆ ಹೀರೋಗಳಂತೆ ಮೆರೆಯುತ್ತಿವೆ. ಕಛೇರಿಯವರು "ಈ ಎರಡು system ಗಳಲ್ಲೇ ಇವೆ" ಎಂದು ಆ ಮಾನೀಟರುಗಳನ್ನು ತೋರಿಸಿದರು.

"ಅಲ್ಲಲ್ಲಾ.. ಯಾವ ಕಂಪ್ಯೂಟರಿನಲ್ಲಿವೆ ಎಂದು ಕೇಳಿದ್ದು ನಾವು!"

"ಇದೇ ಸರ್.. ಇಲ್ಲೇ ಇವೆ" ಎಂದು ಆ ಮಾನೀಟರಿನ ಹತ್ತಿರ ಹೋಗಿ, ಅದರ ತಲೆಯ ಮೇಲೆ ನಾಯಿಯನ್ನು ಸವರಿದಂತೆ ಸವರಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

"ಅಯ್ಯೋ, ಇವರಿಗೆ ಹೇಗೆ ತಿಳ್ಸೋದು" ಎಂದು ಜೋರಾಗಿಯೇ ಗೊಣಗಿದ ಹಾ.ಇಂ. "ಅಲ್ಲಾ, ಮೇಡಂ. ಅದು ಬರೀ ಮಾನೀಟರು, ಯಾವ ಕಂಪ್ಯೂಟರಿನಲ್ಲಿದೆ ಅಂತ ಕೇಳ್ತಾ ಇರೋದು!!!" ಎಂದು ಧ್ವನಿಯನ್ನು ಇಡೀ ಶಾಲೆಗೇ ಕೇಳಿಸುವಂತೆ ಏರಿಸಿ ಕೇಳಿದ.

ಆಕೆ ತುಂಬಾ ನಿರಾಶರಾಗಿಬಿಟ್ಟರು. "ಹೌದಾ, ಅದು ಬರೀ ಮಾನೀಟರಾ? ಕಂಪ್ಯೂಟರ್ ಅಲ್ವಾ? ಇರಿ, ಹತ್ತು ನಿಮಿಷ ಆಫೀಸಿನಲ್ಲಿ ಕೇಳ್ಕೊಂಡ್ ಬರ್ತೀನಿ.." ಎಂದು ಹೇಳಿ ಹೊರಟು ಹೋದರು. ಆಮೇಲೆ, ಇವರುಗಳೂ ಲ್ಯಾಬಿನಿಂದ ಹೊರಗೆ ಹೋಗಿಬಿಟ್ಟರು.

.....................................................................................

"ಅರುಣ್, ನನ್ನ ಈ ಮೈಲ್ ಅಲ್ಲಿ ಬರುವ attachmentಗಳನ್ನು ನಾನು open ಮಾಡೋಕೆ ಆಗ್ತಾ ಇಲ್ಲ. ಅರ್ಜೆಂಟಾಗಿ ಮನೆಗೆ ಬನ್ನಿ." ಮೇಡಮ್ ಒಬ್ಬರು ಕರೆ ಮಾಡಿ ಗಾಬರಿಪಡಿಸಿದರು. ನಾನು ಏನೋ ವೈರಸ್ ಇರಬಹುದೆಂದುಕೊಂಡೆ. ಅವರ ಮನೆಗೆ ಹೋಗುವ ಪುರುಸೊತ್ತು ಇರಲಿಲ್ಲ.

"ನಿಮ್ಮ ಈ ಮೈಲ್ ಅನ್ನು ನನಗೆ forward ಮಾಡಿ, ನಾನು ನೋಡ್ತೀನಿ"

ಮೈಲ್ forward ಮಾಡಿದರು. ನಾನು ನೋಡಿದರೆ, ನನ್ನ ಕಂಪ್ಯೂಟರಿನಲ್ಲಿ open ಆಗ್ತಾ ಇದೆ. ಆಮೇಲೆ ತಿಳಿಯಿತು, ಅವರ ಈ ಮೈಲ್ service providerಉ, attachment ಅಲ್ಲಿ text, documents ಎಲ್ಲಾ ಬಿಡೊಲ್ಲ ಅಂತ. ನಾನು ಹೇಳಿದೆ, "msn ಬೇಡ, ಯಾಹೂ ಗೆ ಕಳಿಸಿಕೊಳ್ಳಿ ಸರಿ ಹೋಗುತ್ತೆ"

"ಆದರೆ ನಾನು ಅದರ password ಮರೆತು ಹೋಗಿದ್ದೀನಿ"

"ಹೊಸ account ಮಾಡಿಕೊಳ್ಳಿ"

"ಏನೋಪ್ಪಾ, ಇಪ್ಪತ್ತು ಸಾವಿರ ರೂಪಾಯಿ ಕೊಟ್ಟು ಹೊಸ ಕಂಪ್ಯೂಟರ್ ಖರೀದಿಸಿದರೂ ನನ್ನ ಕಂಪ್ಯೂಟರಿನಲ್ಲಿ ಎಷ್ಟೊಂದು ಸಮಸ್ಯೆ! ನೀವುಗಳೆಲ್ಲಾ ಹೀಗೇನೇ!!"

.....................................................................................

"ನಮ್ಮ ಮನೇಲಿ ಒಂದು ಹಳೆಯ ಕಂಪ್ಯೂಟರ್ ಇದೆ, ಅದನ್ನು ಮಾರಬೇಕು, ಯಾರಾದ್ರೂ ಕೊಂಡುಕೊಳ್ಳೋರು ಇದ್ರೆ ಹೇಳ್ತೀರಾ?" ಇದು ಹಾ.ಇಂ.ಗಳಿಗೆ ಬರುವ ಸಾಮಾನ್ಯ ಕರೆಗಳಲ್ಲೊಂದು. ಆಮೇಲೆ ಅಲ್ಲಿಗೆ ಹೋಗಿ ನೋಡಿದರೆ, ಅದು pIIನೋ, pIನ್ನೋ ಆಗಿರುತ್ತೆ. ಅದನ್ನು ಮಾರಿಸುವ ಬಗೆಯಾದರೂ ಹೇಗೆಂದು ಹಾ.ಇಂ.ಗೆ ಸಮಸ್ಯೆಯಾಗುತ್ತೆ. ಹೀಗೊಮ್ಮೆ ನನಗೊಂದು ಕರೆ ಬಂದಿತ್ತು. ಅಲ್ಲಿಗೆ ಹೋಗಿ ನೋಡಿದರೆ ಅದು ಹರಪ್ಪಾ ಮೊಹೆಂಜೊದಾರೋ ಕಾಲದ ಕಂಪ್ಯೂಟರಿನಂತೆ ಕಂಡಿತು. ಅದು 486 ಕಂಪ್ಯೂಟರು!

"ಇದನ್ನು ಮಾರಿಸಿಕೊಡಬೇಕಾ?" ಎಂದೆ.

"ಎಷ್ಟು ಬರಬಹುದು?" ಅವರು ಕೇಳಿದರು.

"ನೀವು ಎಷ್ಟು ನಿರೀಕ್ಷೆ ಮಾಡುತ್ತಿದ್ದೀರ?"

"ಇದನ್ನು ತೊಗೊಂಡಾಗ ತುಂಬಾ ಖರ್ಚು ಮಾಡಿದ್ದೆ. ಎಲ್ಲಾ ಸೇರಿ ಒಟ್ಟು ಒಂದು ಲಕ್ಷದ ಹತ್ತಿರ!"

ನಾನು ತಲೆ ಸುತ್ತಿ ಬೀಳಲು ಇನ್ನು ಕೆಲವೇ ಕ್ಷಣಗಳಿದ್ದವು. ಅವರು ಮುಂದುವರೆಸಿದರು. "ಈಗ at least ಒಂದು ಇಪ್ಪತ್ತು ಸಾವಿರ ಬರುತ್ತಾ?"

ಆಶಾವಾದಿಗಳು. ಆದರೆ ಅವರಿಗೆ ನಿರಾಶೆಗೊಳಿಸುವುದಾದರೂ ಹೇಗೆ? ಪಾಪ,ಲಕ್ಷ ಖರ್ಚು ಮಾಡಿದ್ದಾರೆ. ನಾನು, "ಅಷ್ಟೊಂದು ಬರೋದು ಡೌಟು ಸರ್, ಇನ್ನೊಂದ್ ಸ್ವಲ್ಪ ಕಡಿಮೆ ಆಗುತ್ತೆ"

"ಕಡಿಮೆ ಅಂದ್ರೆ? ಹತ್ತು ಸಾವಿರ?"

"ನಂಗೇನೋ ಡೌಟು!"

"ಹೋಗಲಿ ಐದು ಸಾವಿರ?"

"ಹುಡುಕ ಬೇಕು ಸರ್.."

"ಹೌದಾ? ಎರಡು ಸಾವಿರ?"

"ವಿಚಾರಿಸುತ್ತೀನಿ, ಸಿಕ್ಕರೆ ಹೇಳ್ತೀನಿ, ಒಂದು ತಿಂಗಳಾಗಬಹುದು, ಅಥವಾ ಎರಡು ತಿಂಗಳಾಗ ಬಹುದು ಅಥವಾ ಆರು ತಿಂಗಳೂ ಆಗಬಹುದು, ಗಿರಾಕಿ ಸಿಗೋಕೆ!

"ಹೌದಾ? ಒಂದು ಸಾವಿರಕ್ಕಾದರೂ ಹೋಗುತ್ತ?"

"Actually, ಈ ಕಂಪ್ಯೂಟರು free ಆಗಿ ಕೊಟ್ಟರೂ ಹೋಗಲ್ಲ ಸರ್.. ಕ್ಷಮಿಸಿ.."

"ಬೇಡಾ ರೀ, ನಾನು ಮಾರೋದೇ ಇಲ್ಲ. ಇನ್ನು ಹತ್ತು ಲಕ್ಷ ಆದರೂ ಸರಿ, ನಾನು ಹೊಸ ಕಂಪ್ಯೂಟರನ್ನು ತರ್ತೀನಿ, ಲೇಟೆಸ್ಟು. ನಿಮ್ ಹತ್ರ ಅಂತೂ ತೊಗೋಳಲ್ಲ.." ಎಂದು ಸಿಟ್ಟು ಮಾಡಿಕೊಂಡರು. ನಾನು, "ತೊಗೊಳಿ ಸರ್. ಹದಿನೈದು ಸಾವಿರ ಖರ್ಚಿ ಮಾಡಿ ಸಾಕು ಹತ್ತು ಲಕ್ಷ ಬೇಡ." ಎಂದು ಹೇಳಿ ಈ ಹಾ.ಇಂ. ಕೆಲಸದ ಸಹವಾಸವೇ ಸಾಕೆಂದು ಅವರ ಮನೆಯಿಂದ ಹೊರಟುಬಂದೆ.

.....................................................................................

- ಅ
15.07.2007
2AM

6 comments:

 1. ha ha ha..kone part intel 486 chennagidhe..funny... hard diks kooda ;-) nodi tantragnaana munduvaridantella... electronic vastugaLa bele aggavaagthide.... haLe system gaLu market nalli bikariyaaguvudhu dussadya..onthara bisithuppa adna sumne ittirakku aagalla ,maarakku baralla, idakke haa.vemgaLaadha neeve ondu parihaara soochisabeku.... :-)..

  ReplyDelete
 2. ಆದರೆ ನಾನು ಹಾ.ಇಂ ಪಾತ್ರಧಾರಿಯಾಗಿದ್ದಾಗ ನಾನೂ ಇದನ್ನೆಲ್ಲಾ ಅನುಭವಿಸಿದೀನಿ. ನೀನು ಬರ್ದಿರೋದನ್ನ ನೋಡಿ ನಗಬೇಕು ಅನ್ಸತ್ತೆ. ಆದ್ರೆ ನೀನು ಹೇಳಿರುವ ಪರಿಸ್ಥಿತಿಯಲ್ಲಿರುವ ಕಷ್ಟ ಏನು ಅಂತ ಗೊತ್ತಿರೋದ್ರಿಂದ ಸುಲಭವಾಗಿ ನಗಕ್ಕಾಗಲ್ಲ.

  ReplyDelete
 3. ಯಂತ್ರಾಂಶ ಅಭಿಯಂತರು(ಹಾ.ಇಂ)ಗಳ ಬವಣೆಯನ್ನು ನೋಡಿದರೆ ಕನಿಕರಿಸುವಂತಾಗುತ್ತದೆ. ಏಕೆಂದರೆ ನಾನೇ ಅಂಥ ಒಬ್ಬ "ಯಂ.ಅ."ರಿಗೆ ಒಂದಾನೊಂದು ಕಾಲದಲ್ಲಿ ಹೀಗೆಯೇ ಅಲೆದಾಡಿಸಿದ್ದೇನೆ :D ಎಷ್ಟಾದರೂ ತಂತ್ರಾಂಶ ಅಭಿಯಂತ ನೋಡಿ, ಯಂತ್ರಾಂಶದ ಜ್ಞಾನವಿರಲಿಲ್ಲ!!! ಹಿ ಹಿ ಹಿ ಹಿ....

  ಪಾಪ....

  ReplyDelete
 4. [ಶ್ರೀಧರ] ಮಕ್ಕಳಿಗೆ ಆಟದ ಸಾಮಾನುಗಳಿಗೆ ಬರ ಇದೆ ಈ ಕಾಲದಲ್ಲಿ. ಅವುಗಳನ್ನು ಕೊಡಬಹುದಲ್ಲವೇ?

  [ಶ್ರೀಕಾಂತ್] ಕಷ್ಟ ಪಟ್ಟಾದರೂ ನಕ್ಕುಬಿಡು!

  [ಗಂಡಭೇರುಂಡ] ಯಂತ್ರಾಂಶಾಭಿಯಂತರು - ಎಲ್ಲಿಂದ ತೆಗೆದೆಯೋ ಈ ಪದವನ್ನು?? ಯಪ್ಪಾ.... ಶಬ್ದಮಣಿದರ್ಪಣವೇ ತಲೆಯಲ್ಲಿದೆಯಾ??

  ReplyDelete
 5. he ha he ha he ha :))
  computer = hardware (ಯಂತ್ರಾಂಶ) + software (ತಂತ್ರಾಂಶ) + middleware (ಮಧ್ಯಾಂಶ)

  ಇದು "ತಂತ್ರಾಂಶ" ಪದದ ಆಧಾರದ ಮೇಲೆ ನಾನೇ ಹುಟ್ಟುಹಾಕಿದ ಪದಗಳು!!! :D ಹೇಗೆ? ;)
  he ha he ha he ha he ha he ha....

  ReplyDelete
 6. ಚೆನ್ನಾಗಿದೆ derivation technique-ಉ.

  ReplyDelete