Sunday, July 22, 2007

ಟಾಪ್ 5 ನಿಷ್ಪ್ರಯೋಜಕ ಸ್ಥಳಗಳು - ಬೆಂಗಳೂರಿನಲ್ಲಿ..

ಹೋಗಲು ಅಯೋಗ್ಯಕರ ಸ್ಥಳಗಳು ಬೆಂಗಳೂರಿನಲ್ಲಿ ಅನೇಕವಿದೆ. ಅದರಲ್ಲಿ ಟಾಪ್ 5 ನ್ನು ಬರೆದಿಟ್ಟುಕೊಂಡಿರುವುದು ನನ್ನ ಹಿತದೃಷ್ಟಿಯಿಂದ. ಈ ಜಾಗಗಳಿಗೇ ಹೋಗದೇ ಇರೋರು ಪುಣ್ಯವಂತರು.

ಟಾಪ್ 5 - ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಲ್ಲಿ ನೂರಾರು ಪ್ರಾಣಿಗಳಿವೆ - ಬಂಧನದಲ್ಲಿ. ಮರದಿಂದ ಮರಕ್ಕೆ ಜಿಗಿದು ಕಾಡೆಲ್ಲ ಅಲೆವ ಚಿರತೆಗಳು 100 X 100 ಸೈಟಿನೊಳಗೆ ಪಂಜರದಲ್ಲಿ, ಸಾವಿರಾರು ಮೈಲಿಗಳು ನಡೆದು ಸಾಗುತ್ತಾ ಕಾಡಿನ ಸೊಬಗನ್ನು ಬೆಳಗಿಸುವ ಆನೆಗಳು ಮರವೊಂದಕ್ಕೆ ಕಟ್ಟಿದ ಸರಪಳಿಯ ಸೆರೆಯಲ್ಲಿ, ಆಗಸವನ್ನು ರಂಗಾಗಿಸುವ ಬಣ್ಣ ಬಣ್ಣದ ಹಕ್ಕಿಗಳು ರೆಕ್ಕೆ ಬಡಿದರೆ ಇನ್ನೊಂದು ಹಕ್ಕಿಗೆ ತಾಕುವಂತಿರುವ ಸಣ್ಣ ಪಂಜರದಲ್ಲಿ ಬದುಕುತ್ತಾ ಸಾಯುತ್ತಿವೆ. ಬಿಲವನ್ನು ತೋಡುವ ನರಿಗಳನ್ನು ಕಾನ್‍ಕ್ರೀಟು ನೆಲದ ಪಂಜರದೊಳಗೆ ಹಾಕಿದ್ದಾರೆ. ಆಗುಂಬೆಯ ಕಾಡಿನಲ್ಲಿ ರಾಜನಂತೆ ಹೆಡೆಯೆತ್ತಿ ಬದುಕಬೇಕಾಗಿರುವ ಕಾಳಿಂಗನು ಕೆಳಗೆ, ಮೇಲೆ, ಎಡಕ್ಕೆ ಬಲಕ್ಕೆ ಎಲ್ಲಾ ಕಡೆಯೂ ಆವೃತಗೊಂಡ ಬೋನಿನಲ್ಲಿದ್ದಾನೆ.ಸಫಾರಿಯಲ್ಲಿ ಕಾಣಿಸುವ ಸಿಂಹ ಹುಲಿಗಳೋ, ವಾಹನಗಳಿಗೆ ಎಳ್ಳಷ್ಟೂ care ಮಾಡುವುದಿಲ್ಲ. ನವಿಲುಗಳು ಜನಸಮೂಹದಲ್ಲೇ ಗರಿಕೆದರುತ್ತವೆ. ಹಿಮಾಲಯದ ಕರಡಿಗಳೂ ಬೆಂಗಳೂರಿನ ಪಂಜರದೊಳಗೆ ಯಾಕೆ ಬಂತು ಎಂದು ಯಾರೂ ಪ್ರೆಶ್ನಿಸುವಂತಿಲ್ಲ. ಹುಲ್ಲು ತಿನ್ನುವ ಜಿಂಕೆಗಳು ತಿಳಿಗೇಡಿಗಳು ಕೊಡುವ ಪಾಪ್ ಕಾರ್ನ್ ಗೆ ಹಪಹಪಿಸುತ್ತವೆ. ಇಪ್ಪತ್ತೈದು ಮಕರಿಗಳು ಸಂಪಿನಂಥ ಒಂದು ಕೊಳಕು ಕೊಳದಲ್ಲಿ ಎಂದೋ ಬಿದ್ದ ಮೀನನ್ನು ತಿನ್ನುತ್ತಾ ಬಿದ್ದಿರುತ್ತವೆ.

"ಟಾಯ್ಲೆಟ್ ಎಲ್ಲಿದೆ?" ಎಂದು ಯಾರಾದರೂ ಕೇಳಿದರೆ, "ಇದೇ ವಾಸನೆಯ ಜಾಡು ಹಿಡಿದು ನಡೆದು ಸಾಗಿ. ವಾಸನೆ ಹೆಚ್ಚಾಗುತ್ತಾ ಆಗುತ್ತಾ ಟಾಯ್ಲೆಟ್ಟು ನಿಮ್ಮ ಮುಂದೆ ಪ್ರತ್ಯಕ್ಷ ಆಗುತ್ತೆ. ಒಳಗೆ ಹೋಗಿ ಹೊರ ಬಂದ ಮೇಲೆ ನೀವು ಮೂರ್ಛೆ ಹೋಗಿರದಿದ್ದರೆ ಮನೆಗೆ ಹೋಗಿ ಸ್ನಾನ ಮಾಡಿ" ಎಂದಷ್ಟೂ ಹೇಳಬೇಕಾಗುತ್ತೆ. ಸಿಗುವ ಆಹಾರಗಳೋ ಆಹಾ, ಭಗವಂತನಿಗೇ ಪ್ರೀತಿ. ಪ್ರಾಣಿಗಳ ಪಾಯಿಖಾನೆಯನ್ನೆಲ್ಲಾ ಬೆರೆಸಿ ಚಿತ್ರಾನ್ನ ಮೊಸರನ್ನಗಳನ್ನು ಮಾರುವ ಹಾಗಿರುತ್ತೆ. ಮಿಕ್ಕಿದ್ದೆಲ್ಲಾ ಪ್ಲಾಸ್ಟಿಕ್ ಮಯ. ಎಂಟ್ರೆನ್ಸಿನಲ್ಲಿ ಪ್ಲಾಸ್ಟಿಕ್‍ ಚೀಲಗಳಲ್ಲಿ ತಂದ ಆಹಾರಗಲನ್ನೆಲ್ಲಾ ಕಾಗದದ ಪೊಟ್ಟಣಕ್ಕೆ ಹಾಕಿಕೊಡುವ ಒಂದು ಒಳ್ಳೇ ಕೆಲಸ ಮಾಡುತ್ತಾರೆ, ಆದರೆ, ಒಳಗೇ ಇರುವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರುಗಳ ಜಾತ್ರೆಯನ್ನು ಮಾತ್ರ ನಿಲ್ಲಿಸಿಲ್ಲ.

ಈ ಜಾಗಕ್ಕೆ ಹೋಗಿ ಪ್ರಯೋಜನವಿಲ್ಲ. ಪ್ರಾಣಿಗಳು ನಿಮ್ಮನ್ನು ಶಪಿಸುತ್ತವೆ ಅಷ್ಟೆ.

ಟಾಪ್ 4 - ಉಪಗ್ರಹ ನಿಲ್ದಾಣ

ಮೈಸೂರು ರಸ್ತೆಯಲ್ಲಿ ಉಪಗ್ರಹ ನಿಲ್ದಾಣವೆಂದು ಒಂದು ಬೃಹತ್ ನಿಲ್ದಾಣವಿದೆಯೆಂದು ದಕ್ಷಿಣ ಬೆಂಗಳೂರಿಗರಿಗಲ್ಲದೆ ಬೇರಾರಿಗೂ ಗೊತ್ತಿಲ್ಲ ಬಿಡಿ. ಬೆಂಗಳೂರು ವಿಮಾನ ನಿಲ್ದಾಣಕ್ಕಿಂತ ಥಳುಕಿನಿಂದಿರುವ ಈ ಬಸ್ ನಿಲ್ದಾಣವನ್ನು ನಿರ್ಮಿಸಿ ಎರಡು ವರ್ಷಕ್ಕೂ ಹೆಚ್ಚಾಯಿತೆನಿಸುತ್ತೆ. ಮೈಸೂರು ಕಡೆಗೆ ಹೋಗುವ ಬಸ್ಸೆಲ್ಲಾ ಇಲ್ಲಿಂದಲೇ ಹೊರಡುತ್ತಂತೆ. So what? ಮುಖ್ಯ ನಿಲ್ದಾಣದಿಂದಲೂ ಹೊರಡುತ್ತೆ! ಇಲ್ಲಿಗೆ ಬರುವ ಅವಷ್ಯವಾದರೂ ಏನಿದೆ? ಇದನ್ನು ಕಟ್ಟಿದ್ದು ಟ್ರಾಫಿಕ್ ಜ್ಯಾಮ್‍ನ ತಡೆಗಟ್ಟುವ ಉಪಾಯದಿಂದಂತೆ! ಆದರೆ ಇದು ಬಿಗ್ ಬಜಾರ್‍ಗೆ ನೆಲೆಯಾಗಲೇ ಕಟ್ಟಿರೋದು ಎಂದು ಎಲ್ಲರಿಗೂ ಗೊತ್ತಿರೋ ವಿಷಯವೇ! ಚೆಲುವಾದ ಕಕ್ಕಸು ಮನೆಯೊಂದನ್ನು ಹೊರೆತುಪಡಿಸಿ ಇಲ್ಲಿ ಇನ್ನೇನೂ ವ್ಯವಸ್ಥೆಯಿಲ್ಲ. "ವಿಚಾರಣೆ" ಕೌಂಟರಿನಲ್ಲೂ ಯಾರೂ ಹೇಳೋರಾಗಲೀ ಕೇಳೋರಾಗಲೀ ಇರೋದಿಲ್ಲ.ಇಲ್ಲಿಗೆ ಹೋಗೋದರಿಂದ ಏನೂ ಲಾಭವಿಲ್ಲ.

ಟಾಪ್ 3 - ಗರುಡ ಮಾಲ್

ಅವಘಡಗಳು, ಪ್ರಾಣ ಹಾನಿ ಎಂಬುದು ಈ ಸ್ಥಳ ಮಹಾತ್ಮೆ! ಪತ್ರಿಕೆಗಳಲ್ಲಿ ಮುಖ್ಯಾಂಶಗಳಲ್ಲಿ ಇದರದೇ ಸುದ್ದಿ. ಹುಡುಗ ಮೇಲಿಂದ ಬಿದ್ದು ಸತ್ತಿದ್ದು, ಲಿಫ್ಟು ಕೆಟ್ಟು ಕೆಳಗುರುಳಿದ್ದು ಹೀಗೇ. ವಾಸ್ತು ಹೋಮ ಬೇರೆ ಮಾಡಿಸಿದರಂತೆ. ಮೆಟ್ಟಿಲುಗಳನ್ನು ಹತ್ತಿಳಿಯಲು ಬೆಂಗಳೂರಿಗರು ಸೋಮಾರಿಗಳೆಂದೇ ಲಿಫ್ಟುಗಳು, ಎಸ್ಕಲೇಟರುಗಳು ನಿರ್ಮಿಸುತ್ತಾರೆ. ಆ ಸೋಮಾರಿ ತನದ ಪ್ರೋತ್ಸಾಹವನ್ನಾದರೂ ಸರಿಯಾಗಿ ಮಾಡುತ್ತಾರೆಯೇ? ಇಲ್ಲ. ಬಿದ್ದು ಸಾಯುವಂಥ ಲಿಫ್ಟುಗಳು, ಗೋಡೆಗಳು. ಹಣವೊಂದೇ ಮಾಲೀಕರ ಆದ್ಯತೆಯಿರುವಾಗ ಪ್ರಾಣಕ್ಕೆಲ್ಲಿ ಬೆಲೆ? ಈ ಗರುಡ ಮಾಲ್‍ನ ಗ್ರಹಚಾರ ಸರಿಯಿಲ್ಲ.


ಶನಿವಾರ ಭಾನುವಾರ ಬಂತೆಂದರೆ ಮುಗಿಯಿತು. ಅರ್ಧ ಬೆಂಗಳೂರು (ಇದರಲ್ಲಿ ಶೇ. ೯೦ ಶುದ್ಧ ಬೆಂಗಳೂರಿಗರಾಗಿರೋದಿಲ್ಲ) ಯಾವುದೋ ಒಂದು ಶಾಪಿಂಗ್ ಮಾಲ್‍ನಲ್ಲಿ ಇರುತ್ತೆ. ಹೋಟೆಲುಗಳಲ್ಲಿ ಕಾಯಲೂ ಸಹ ಜಾಗ ಇರೋದಿಲ್ಲ. ಸಿನಿಮಾಗಳು ಎಷ್ಟೇ ಕೆಟ್ಟದಾಗಿದ್ದರೂ ಹೌಸ್ ಫುಲ್! ಬಟ್ಟೆ ಅಂಗಡಿಗಳು ಶನಿವಾರಸಂತೆಯನ್ನು ಮೀರಿಸಿರುತ್ತವೆ. ಜನಮರುಳೋ ಜಾತ್ರೆ ಮರುಳೋ! ಕಲಿಕೆ ಮಾತ್ರ ಸೊನ್ನೆ. ಜನಜಂಗುಳಿಗಳಲ್ಲಿ ಸಿಕ್ಕು ಒದ್ದಾಡುವುದು ಆರೋಗ್ಯಕ್ಕೆ ಒಳ್ಳೇದಲ್ಲ ನೋಡಿ.

ಟಾಪ್ 2 - ಫನ್ ವರ್ಲ್ಡ್

ಅರಮನೆ ಆವರಣದಲ್ಲಿ ಇಂಥದ್ದೊಂದು ವರ್ಲ್ಡ್ ಇದೆ. ಇಲ್ಲಿನ fun ಮಾಯ ಆಗೋದು ಟಿಕೀಟು ಕೌಂಟರಿನಲ್ಲೇ. ಆ ಪಾಟಿ ಹಣ ಕೀಳುತ್ತಾರೆ. ಒಳಗೆ ಹೊಕ್ಕರೆ ಇರೋದು ಮೂರು ಮತ್ತೊಂದು ಮಕ್ಕಳಾಟಿಕೆ. ಕಪ್ಪೆಯಾಕಾರದ ರೈಲು, ಆಮೆಗಿಂತ ನಿಧಾನಕ್ಕೆ ಚಲಿಸುವ ಜಯಂಟ್ ವೀಲು, ಎರಡೇ ಎರಡು ಸುತ್ತು ಸುತ್ತುವ ರೋಲರ್ ಕೋಸ್ಟರು, ಕೊಳಕು ತುಂಬಿದ ನೀರಿನ ಉದ್ಯಾನ! ಇಷ್ಟು ಬಿಟ್ಟರೆ ಇಲ್ಲಿ ಇನ್ನೇನೂ ಇಲ್ಲ. ಹಣ ಹೆಚ್ಚಾಗಿರೋರು ಇಲ್ಲಿಗೆ ಹೋಗಬಹುದು. ಹಣ ಹೆಚ್ಚಾದರೂ ಮಜ ಬೇಕು ಎನ್ನುವವರು ವಂಡರ್ ಲಾ ಗೆ ಹೋಗಬಹುದು.


ಟಾಪ್ 1 - ನಿರ್ಮಲ


ಸುಮ್ಮನೆ ಒಂದು ರೂಪಾಯಿ ದಂಡ - ಬಾಗಿಲು ತೆಗೆದಿದ್ದರೆ. ಇದಕ್ಕೆ ಕೆಲಸದ ಸಮಯ ಬೇರೆ ಇರುತ್ತೆ. ಆ ಸಮಯ ಮೀರಿದ ನಂತರ ಏನಾದರೂ ಅರ್ಜೆಂಟಾದರೆ ದೇವರೇ ಗತಿ. ಒಂದು ರೂಪಾಯಿ ಕೊಡೋದಲ್ಲದೆ ಶೌಚಾಲಯದ ಅಶೌಚಗಳನ್ನು ಬೇರೆ ಸಹಿಸಿಕೊಂಡಿರಬೇಕು. ಅರ್ಜೆಂಟಾದರೆ ಮನೆಗೆ ಬೇಗ ಧಾವಿಸಿ, ಇಲ್ಲವೇ ಪೊದೆಗಳನ್ನು ಹುಡುಕಿ. ನಿರ್ಮಲ ಕೇವಲ ನಿಷ್ಪ್ರಯೋಜಕ.

- ಅ
22.07.2007
11.45PM

8 comments:

 1. ನೀನು ಹೇಳಿದ್ದೆಲ್ಲಾ ಸರಿ, ಆದ್ರೆ ನಿರ್ಮಲ ಒಂದೆರಡು ಬಾರಿ ನನಗೆ ಪ್ರಯೋಜನಕ್ಕೆ ಬಂದಿದೆ - ವಿಪರೀತ ಅರ್ಜೆಂಟಾದಾಗ ಅದೇನಾದ್ರೂ ತೆಗದಿದ್ರೆ ಆಗ!

  ReplyDelete
 2. hmmmm.. ಬನ್ನೇರುಘಟ್ಟವನ್ನು ಒಮ್ಮೆ ನೋಡಿದ್ದೇನೆ. ಪಾಪ, ಪ್ರಾಣಿಗಳು! ಆ ಹುಲಿ-ಸಿಂಹಗಳೂ ಸಹ ತಮ್ಮ ಬೇಟೆಯಾಡುವ ಪ್ರವೃತ್ತಿಯನ್ನು ಬಿಟ್ಟು "ಉದ್ಯಾನ"ಪಾಲಕರು ನೀಡುವ ಸ್ವಲ್ಪ ಊಟಕ್ಕಾಗಿ ಕಾಯುತ್ತವೆ! ಅದನ್ನು "ರಾಷ್ಟ್ರೀಯ" ಉದ್ಯಾನ ಎನ್ನುವ ಬದಲು "ರಾಷ್ಟ್ರಕರ" ಉದ್ಯಾನ ಎಂದರೂ ತಪ್ಪಾಗದು.

  ಇನ್ನು ಬಸ್ ಸ್ಟಾಂಡ್ - ಕಮೆಂಟಾತೀತ!!!

  ಗರುಡ ಮಾಲ್-ಫನ್ ವರ್ಲ್ಡ್-ಗಳನ್ನು ನಾನು ಕಂಡಿಲ್ಲ.

  ನಿರ್ಮಲ ಶೌಚಾಲಯಗಳು ನನಗೆ ಆಗೊಮ್ಮೆ-ಈಗೊಮ್ಮೆ ಉಪಯುಕ್ತವಾಗಿ ಕಂಡಿವೆಯಾದ್ದರಿಂದ ಅದರ ಬಗೆಗೆ ಹೇಳಲು ನನ್ನಿಂದಾಗದು.

  ReplyDelete
 3. Bannerghatta paristhiti nijakkoo shochaneeya.

  Aa bus stand-u, namma bengaLoorinalliro aneka flyovergaLa haage.KaTTuva munna yochisalla. kaTTidamele keTTru anno haag aagutte.

  ReplyDelete
 4. bannerghatta na nodi bahaLa varshagaLaagive.. matte fun world kade nu thale haakilla..aadre nirmala kade hogiddini.. :-) bit helpful, satelite bus terminal ondh dodd waste....flyover thara...
  innu garuda mall.. ondhu shuddda porki area..porkakke hogbodhu..aste ;-), jebu sorihogoastu sampaadne maadoru alli kharchu maadbodhu...ashte..

  ReplyDelete
 5. preetiya gelaya,

  neenu illi bengaloorina gunagaana maadiruvudannu kandu idu naa kanda bengaloora anteniside..!! :(

  janaralli bekillada jnaana hecchagi tamma parisarada mele preeti kaledu kondiddare..!!

  "Bangalore the Green city" anta annodu puraanada maatago kaala thumba doora illa..!!

  namma bangalurina janetege endu idara bagge gnanodayavaaguttado gotilla..!!

  kaala mincuva munna manadattadare tamma makkalu, marimakkalinda prashamsege yogyaraaguttare..!

  illavaadare "avaravara anebarahakke avara aluku uluke kaarana"

  vandanegalu..!! :(
  -yuvapremi

  ReplyDelete
 6. [ಶ್ರೀಕಾಂತ್] ಅನೇಕ ಕಡೆ ಬರೀ ಕಟ್ಟಡ ಮಾತ್ರ ಇರುತ್ತೆ. ಬೀಗ ಹಾಕ್ಕೊಂಡ್ ಹೊರ್ಟ್ ಹೋಗಿರ್ತಾರೆ. ಅರ್ಜೆಂಟಾದರೆ ಅಧೋ ಗತಿ!!

  [ಗಂಡಭೇರುಂಡ] "ರಾಷ್ಟ್ರಕರ" ಏನು, "ರಾಷ್ಟ್ರಹರ" ಎಂದರೂ ತಪ್ಪಿಲ್ಲ..

  [ಹರೀಶ್] ಅವರೇನೂ ಕೆಟ್ಟಿಲ್ಲ ಸರ್.. ಪ್ರಜೆಗಳು ಕೆಟ್ಟರು ಅಷ್ಟೇ. ಅವರಿಗೆ ಗೊತ್ತಿದ್ದ ವಿಷಯವೇ ಅದು..

  [ಶ್ರೀಧರ] ತಮ್ಮ ಪ್ರಕಾರ ಫ್ಲೈ ಓವರ್‍ಗಳೂ ವೇಸ್ಟಾ?

  [ಯುವಪ್ರೇಮಿ] ಇದು ಗಾರ್ಡನ್ ಸಿಟಿ ಅನ್ನೋ ಕಾಲ ಹೋಯ್ತು ಕಣಪ್ಪಾ... ಗಾರ್ಬೇಜ್ ಸಿಟಿ ಎನ್ನುವುದೊಳಿತು ನೋಡು..

  ReplyDelete
 7. ಅರುಣಾ, ಸೂಪರ್ರು! ಅದ್ರೂ ಇನ್ನೂ ಕೆಲವು ಜಾಗಗಳನ್ನ ಸೇರಿಸಿ ಟಾಪ್ ೧೦ ಮಾಡಬಹುದಿತ್ತೇನೋ:)

  ನ್ಯಾಷನಲ್ ಕಾಲೇಜು ಫ್ಲೈ ಓವರ್ರು,ಮಾರ್ಕೇಟು,ಗೋರಿಪಾಳ್ಯ.. ಹೀಗೇ...

  ReplyDelete
 8. ಇಡೀ ಬೆಂಗಳೂರೆ ಒಂದು "ಮೊಹೆಂಜೊ ದಾಡೊ" (ಸತ್ತವರ ಗುಡ್ಡ) ತರಹಾ ಇದೆ. ಇಲ್ಲಿ ನೋಡಬೇಕಾದ್ದೆಂದರೆ ಚಿತ್ರಕಲಾ ಗ್ಯಾಲರಿಗಳು ಹಾಗು ವಿಶ್ವೇಶ್ವರಯ್ಯ ಮ್ಯೂಜಿಯಮ್ ಮಾತ್ರ.

  ReplyDelete