Tuesday, July 24, 2007

Belated Birthday Wishes..


ದಿಲ್ ಕೋ ತೇರಿ ಹೀ ತಮನ್ನಾ
ದಿಲ್ ಕೋ ಹೈ ತುಝ್‍ಸೇ ಹೀ ಪ್ಯಾರ್..
ಚಾಹೆ ತು ಆಏ ನ ಆಏ
ಹಮ್ ಕರೇಂಗೇ ಇಂತ್‍ಜ಼ಾರ್...

ಇಂಥಾ ಸಾಹಿತ್ಯ ಇರೋ ಹಾಡು ಇನ್ಯಾರು ತಾನೇ ಹಾಡಲು ಸಾಧ್ಯ? ಮುಖೇಶ್ ಅಲ್ಲದೆ ಬೇರಾವ ಹಾಡುಗಾರನಿಗೆ ತಾನೇ ಒಪ್ಪುತ್ತೆ?

ಮೊನ್ನೆ ಜುಲೈ ಇಪ್ಪತ್ತೆರಡಕ್ಕೆ ಮುಖೇಶ್ ಬದುಕಿದ್ದಿದ್ದರೆ ಎಂಭತ್ನಾಲ್ಕು ವರ್ಷ ವಯಸ್ಸಾಗುತ್ತಿತ್ತು. ಮೊನ್ನೆಯೇ ವಿಷ್ ಮಾಡಬೇಕಿತ್ತು. ಅದೇನೋ ಅದ್‍ಹೇಗೋ ಮರೆತು ಹೋಯಿತು.

ಬಾಲಿವುಡ್‍ನ ಮೊದಲ ದೊರೆ ಕೆ.ಎಲ್. ಸೈಗಲ್‍ನ ಅನುಸರಿಸಲು ಯತ್ನಿಸದವರು ಆ ಕಾಲದಲ್ಲಿ ಯಾರೂ ಇರಲಿಲ್ಲ. ಕಿಶೋರ್, ರಫಿ, ಲತಾ, ಶಂಶದ್ ಬೇಗಮ್, ನೂರ್ ಜಹಾನ್, ಗೀತಾ ದತ್, ಮಹೇಂದ್ರ ಕಪೂರ್, ಮನ್ನಾ ಡೇ, ಎಲ್ಲರೂ ಸೈಗಲ್‍ನಂತೆಯೇ ಹಾಡಬೇಕು ಎಂದುಕೊಳ್ಳುತ್ತಿದ್ದರು. ಮುಖೇಶ್ ಕೂಡ ಇದರಿಂದ ಹೊರೆತುಪಡಿಸಿಲ್ಲ. ಮುಖೇಶರ ಮೊಟ್ಟಮೊದಲ ಹಾಡು,

ದಿಲ್ ಜಲ್ತಾ ಹೈ ತೋ ಜಲ್‍ನೇ ದೇ..

ಕೇಳದಿರುವರು ಯಾರು? ಖುದ್ದು ಸೈಗಲ್‍ ಈ ಹಾಡನ್ನು ಕೇಳಿ, ತನ್ನ ದನಿಯಂತೆಯೇ ಇದೆಯಲ್ಲಾ ಎಂದು ಅಚ್ಚರಿಗೊಂಡಿದ್ದರು. ಆಗ ಸೈಗಲ್ ಸೂಪರ್ ಸ್ಟಾರ್. ಸೈಗಲ್‍ ಇಂದ ಈ ಕಾಂಪ್ಲಿಮೆಂಟು ಸಿಕ್ಕ ಮೇಲೆ ಮುಖೇಶ್ ದರ್ದ್ ಭರೇ ಗೀತ್‍ಗಳ ಅರಸರಾಗಿಬಿಟ್ಟರು. ಮುಖೇಶರ ದನಿಯಲ್ಲಿಯೇ ಒಂದು ನೋವಿತ್ತು ಎಂದು ಸಂಗೀತ ರಸಿಕರು ಹೇಳುತ್ತಾರೆ. ಮುಖೇಶ್ ಹಾಡುಗಳನ್ನು ಕೇಳುತ್ತಿದ್ದರೆ ಈ ಜಗತ್ತಿನಿಂದ ಬೇರೆ ಜಗತ್ತಿಗೆ ಪಯಣ ಮಾಡಿರುವಂತಾಗುತ್ತೆ. ಕಣ್ಣಲ್ಲಿ ನೀರು ತುಂಬಿ ಬರುತ್ತೆ.

ಜಾನೇ ಕಹಾಂ ಗಏ ಒ ದಿನ್...ರಾಜ್‍ಕಪೂರ್ ಹಾಗೂ ಮುಖೇಶ್‍ಗೆ ಇದ್ದ ನಂಟು ಎಲ್ಲರಿಗೂ ಗೊತ್ತಿರೋದೇ. ಕನ್ನಡದಲ್ಲಿ ರಾಜ್‍ಕುಮಾರ್‍ಗೆ ಪಿ.ಬಿ.ಶ್ರೀನಿವಾಸ್ ಹೇಗೆ ಹೇಳುಮಾಡಿಸಿದ ಹಾಡುಗಾರರಾಗಿದ್ದರೋ ಹಾಗೆಯೇ ರಾಜ್ ಕಪೂರ್ ಚಿತ್ರ ಎಂದರೆ ಮುಖೇಶ್ ಹಾಡುಗಳು ಇರಲೇ ಬೇಕು. ಮುಖೇಶರ ಸಾವು ಅಮೆರಿಕೆಯಲ್ಲಿ ಬರೆದಿತ್ತು. ಸಂಗೀತ ಕಾರ್ಯಕ್ರಮಕ್ಕೆಂದು ಅಲ್ಲಿಗೆ ಹೋಗಿದ್ದ ಅವರು ಅಲ್ಲಿ ಕೊನೆಯುಸಿರೆಳೆದರು. ಕೊನೆಯುಸಿರೆಳೆದಿದ್ದು ಅವರ ದೇಹ ಮಾತ್ರ. ಅವರ ಹಾಡುಗಳು ಆಚಂದ್ರಾರ್ಕ! ಅವರ ಸಾವನ್ನು ಕೇಳಿದ ರಾಜ್ ಕಪೂರ್ ಹೇಳಿದ್ದು, "ನಾನು ನನ್ನ ಧ್ವನಿಯನ್ನು ಕಳೆದುಕೊಂಡುಬಿಟ್ಟೆ!" ಎಂದು.

ಕಹೀಂ ದೂರ್ ಜಬ್ ದಿನ್ ಢಲ್ ಜಾಏ...

ನೋವಿನ ಸವಿಯನ್ನು ಅನುಭವಿಸಲು ಈ ವಿಡಿಯೋಗಳು..

ಈ ಹಾಡುಗಳನ್ನು ಇಲ್ಲಿ ಪೋಸ್ಟ್ ಮಾಡುವ ಮುನ್ನ ನೋಡಿದಾಗ ಸಣ್ಣಗೆ ಕಣ್ಣು ತುಂಬಿ ಬಂತು..

- ಅ
24.07.2007
7.30PM

5 comments:

 1. belated birthday wishes mukhesh avrige... :-)

  ReplyDelete
 2. This comment has been removed by the author.

  ReplyDelete
 3. This comment has been removed by a blog administrator.

  ReplyDelete
 4. nandoo wishes!!
  dard bhare dhvani iddoo, dard bhare haadugaLige prasiddharagidroo, huttu habbakke nenyuvaaga kisiki muskurahatonpe ho nisaar, ek din bik jaayaga haadugaLu manassige barta ive ... i think mukhesh's voice gives any song a different kind of depth.

  ReplyDelete
 5. ಯಾಕೋ ಏನೋ ಗೊತ್ತಿಲ್ವೋ... ಮುಕೇಶ್ ಹುಟ್ಟುಹಬ್ಬ ತಿಳ್ಕೊಳೋ ಆಸಕ್ತಿನೇ ತೋರಿರಲಿಲ್ಲ ನಾನು. ನಿನ್ನ ಬ್ಲಾಗ್ ನೋಡಿದಮೇಲೆ ನನ್ನ ಮೇಲೆ ನನಗೇ ಬೇಜಾರಾಯ್ತು. ಆ ಬೇಜಾರಿನಿಂದ ಬಂದ ಒಂದು ಹುಮ್ಮಸ್ಸಿನಿಂದ ಸೋಲುತ್ತಿದ್ದ ಕಣ್ಣುಗಳು ಅಗಲವಾಗಿ ಕೈಗಳು ಚುರುಕಾದವು. ಹಾಗೇ ನನ್ನ ಬ್ಲಾಗ್ನಲ್ಲಿ ಕೂಡ ಮುಕೇಶನ ಬಗ್ಗೆ ಬರೆದುಬಿಟ್ಟೆ.

  ನೀನು ಬರೆದಿರುವುದು ತುಂಬಾ ಚೆನ್ನಾಗಿದೆ. ನನ್ನ ಬ್ಲಾಗನ್ನೂ ಓದು.

  ಮುಕೇಶನಿಗೆ ನನ್ನ ತಡವಾದ ಶುಭಾಶಯಗಳು. ಹುಟ್ಟುಹಬ್ಬಕ್ಕಲ್ಲ - ನೆನಪಿನ ಹಬ್ಬಕ್ಕೆ.

  ReplyDelete