Thursday, July 19, 2007

ಅಪನಂಬಿಕೆಯ ಪರಮಾವಧಿ

Spam Mailಗಳ ಬಗ್ಗೆ ಅಂತರ್ಜಾಲವನ್ನು ಬಳಸುವವರಿಗೆಲ್ಲಾ ಗೊತ್ತೇ ಇರುತ್ತೆ. ಯಾವುದೋ ಕಂಪ್ಯೂಟರು ಈ ರೀತಿಯ ಅಂಚೆಗಳನ್ನು ಕಳಿಸುವಂತೆ ಮಾಡುವ ದುಷ್ಕೃತ್ಯವೆಸಗುವವರಿಗೊಂದು ಧಿಕ್ಕಾರ ಹೇಳುತ್ತಾ ಆರಂಭಿಸುತ್ತೇನೆ.

ಕೆಲವು spamಗಳು ಯಾವುದೇ ನೇರ ಉದ್ದೇಶವಿಲ್ಲದೆ ಸಂಪೂರ್ಣ ಆತ್ಮಾಪನಂಬಿಕೆಯಿಂದ ಬಂದಿರುತ್ತವೆ.

MOTHER IS GOD" send this to 20 people(+me)with in 2 days u will get good news from ur mother 100% true. if u neglect ur life will not success

ಹೀಗೊಂದು ಈ ಮೈಲ್ ಬಂತು ನೆನ್ನೆ. ಸಿಟ್ಟಾಗದೇ ಇರಲು ಸಾಧ್ಯವೇ? ಸಿಟ್ಟಾದರೇನಂತೆ, ಭಗವಂತ ಒಂದಷ್ಟು ತಾಳ್ಮೆ ಕೊಟ್ಟಿದ್ದಾನೆ. ಯಾರು ಕಳಿಸಿದರೋ ಅವರ ಎಲ್ಲಾ ID-ಗಳಿಗೂ ಇಪ್ಪತ್ತು ಇಪ್ಪತ್ತು ಸಲ ಕಳಿಸಿದೆ. "send ಒತ್ತೋದು, back ಒತ್ತೋದು.."

Mother is God ಅನ್ನೋದು ಗೊತ್ತಿರೋ ವಿಷಯವೇ. ಅದನ್ನೇನು ಈ ಮೈಲ್ ಮುಖಾಂತರ ಹೇಳೋದು. ಅದನ್ನು ಇಪ್ಪತ್ತು ಜನಕ್ಕೆ ಕಳಿಸಿದರೇನೇನಾ ಒಳ್ಳೇ ಸುದ್ದಿ ಬರೋದು. ನಾನ್‍ಸೆನ್ಸ್! ಇಲ್ಲ ಅಂದ್ರೆ ಸಕ್ಸೆಸ್ ಇರಲ್ವಂತೆ!!

ತಿರುಪತಿ ವೆಂಕಟರಮಣನ ಚಿತ್ರವಂತೂ ನನ್ನ inboxಗೆ ಅದೆಷ್ಟು ಸಲ ಬಂದಿದೆಯೋ ನೆನಪೇ ಇಲ್ಲ. ನಿರ್ದಾಕ್ಷಿಣ್ಯವಾಗಿ ಅದನ್ನು delete ಮಾಡಿದ್ದೇನೆ. ಅದನ್ನು delete ಮಾಡಿದರೆ ಏನೂ ಕೆಟ್ಟದ್ದು ಆಗೋದಿಲ್ಲ, inbox ಅಲ್ಲಿ 1MB ಜಾಗ ಖಾಲಿ ಆಗುತ್ತೆ, ಇನ್ನೂ ಒಳ್ಳೇದೇ.

ಎಸ್ಸೆಮ್ಮೆಸ್ ಅಲ್ಲಿ ಕೂಡ ಈ ಪೀಡೆ ವಕ್ಕರಿಸುತ್ತೆ!

"Om venkateshaaya namah - send this to 15 people to hear good news"

ನನಗೆ ನಿನ್ನ ಗುಡ್ ನ್ಯೂಸೂ ಬೇಡ, ನಿನ್ನ ವೆಂಕಿಯೂ ಬೇಡ ಎಂದು ರಿಪ್ಲೈ ಮಾಡಿದ್ದೀನಿ. ವೆಂಕಟೇಶ ಒಳ್ಳೇದು ಮಾಡೋ ಹಾಗಿದ್ರೆ, ಎಸ್ಸೆಮ್ಮೆಸ್ ಕಳಿಸು ಅಂತ ಹೇಳುತ್ತಾನೆಯೇ? ಒಳ್ಳೇಯ ಕೆಲಸ ಮಾಡಿದರೆ, ಇನ್ನೊಬ್ಬರಿಗೆ ಒಳಿತನ್ನು ಮಾಡಿದರೆ, ನಮಗೆ ಒಳ್ಳೇದು ಆಗೇ ಆಗುತ್ತೆ ಅನ್ನೋ ನಂಬಿಕೆ ನಮ್ಮಲ್ಲಿದ್ದರೆ ಸಾಕು. ಅದು ಬಿಟ್ಟು, ಮಾಡೋ ಕೆಟ್ಟ ಕೆಲಸ ಎಲ್ಲಾ ಮಾಡಿಬಿಟ್ಟು, ಹೆದರಿಕೆಯಿಂದ ಈ ರೀತಿ ಸಂದೇಶಗಳನ್ನು ಕಳಿಸಿದರೆ ಅದು ಇನ್ನೊಬ್ಬರಿಗೆ ತೊಂದರೆ ಮಾಡಿದ ಪಾಪ ಕೃತ್ಯವಲ್ಲದೆ ಬೇರೇನೂ ಅಲ್ಲ.

"........................ ಹುಡುಗಿಗೆ A+ ರಕ್ತ ಬೇಕು, ಈ ................... ಸಂಖ್ಯೆಗೆ ಕರೆ ಮಾಡಿ..."

ಅನೇಕ ಸಲ ಇಂಥಾ ಸಂದೇಶ ಕಳಿಸುವವರಿಗೆ ಆ ಹುಡುಗಿಯ ಪರಿಚಯವೂ ಇರೋದಿಲ್ಲ, ಆ ಸಂಖ್ಯೆಯು ಚಾಲನೆಯಲ್ಲಿದೆಯೋ ಇಲ್ಲವೋ ಎಂಬುದೂ ತಿಳಿದಿರೋದಿಲ್ಲ. ಸುಮ್ಮನೆ ತಾವೇನೋ ಉಪಕಾರ ಮಾಡುತ್ತಿದ್ದೇವೆ ಎಂಬ ಭಾವನೆಯಿಂದ ಕಳಿಸುತ್ತಾರೆ. ಆ ಸಂಖ್ಯೆಗಳಿಗೆ ಕರೆ ಮಾಡಿ ನೋಡಿದರೆ, ಆ ಸಂಖ್ಯೆ ಸತ್ಯವಾದದ್ದೇ ಆದರೆ, "ರಕ್ತವೂ ಬೇಡ ಮಾಂಸವೂ ಬೇಡ" ಎಂಬ ಉತ್ತರ ಬಂದೀತು. ಅಥವಾ, "ಅದು ಮೂರು ವರ್ಷಗಳ ಹಿಂದೆ ಬೇಕಿತ್ತು ಸರ್, ಈಗಲ್ಲ" ಎಂದು ಹೇಳಿದರೂ ಅಚ್ಚರಿಯಿಲ್ಲ. ಆ ರೀತಿಯ ಸಂದೇಶಗಳು service providerಗಳ ಹುನ್ನರವಾದರೂ ಆಗಿರಬಹುದೆಂಬ ಅರಿವೂ ಇರೋದಿಲ್ಲ ಕೆಲವು ಜನಕ್ಕೆ.

ಇನ್ನೂ ವಿಚಿತ್ರ ಸಂದೇಶ ಎಂದರೆ ಯಾರಿಗೋ ಏನೋ ಕೆಟ್ಟ ಕುಲಗೆಟ್ಟ ದೊಡ್ಡ ರೋಗವಂತೆ, ಆ ಸಂದೇಶವನ್ನು forward ಮಾಡಿದರೆ ಹತ್ತು ಪೈಸೆಯನ್ನು ಹಚ್ (ಅಥವಾ ಯಾವುದೋ ಒಂದು ಮಣ್ಣಂಗಟ್ಟಿ service provider) ಕೊಡುತ್ತಂತೆ ಅವರಿಗೆ. ಇದು ಸಾಧ್ಯವೇ? ಸಿಂಪಲ್ ಕಾಮನ್ ಸೆನ್ಸ್ ಉಪಯೋಗಿಸಿದರೂ ಸಾಕು. ಇಂಥಾ ಸಂದೇಶಗಳನ್ನು ಕಳಿಸುವವರಿಗೆ ಅಷ್ಟೊಂದು ತಾಳ್ಮೆ ಇರೋದಿಲ್ಲ. ಆದರೆ, ನನ್ನಂಥೋರಿಗೆ ಅದೇ ಸಂದೇಶವನ್ನು ಅವರಿಗೇನೇ ಇಪ್ಪತ್ತು ಸಲ forward ಮಾಡುವ ತಾಳ್ಮೆ ಹಾಗೂ ಸಾಮರ್ಥ್ಯವಿದೆ. ಯಾಕೆಂದರೆ ಎಸ್ಸೆಮ್ಮೆಸ್ಸು ಫ್ರೀ!!

ಮುಂಚೆ, ನಾನೇ ನೋಡಿದ್ದೇನೆ, ಅಂಚೆಯಲ್ಲಿ - i mean, post ಅಲ್ಲಿ ಬರುತ್ತಿತ್ತು ಈ ಥರದ ಸಂದೇಶಗಳು. ಏನೇನೋ ಬಡಬಡಿಕೆಯನ್ನು ಬರೆದು, ಅದೆಲ್ಲೋ ಪ್ಲೇಗ್ ಬಂದಿತ್ತು, ಅದ್ಯಾವನೋ ತಲೆಮಾಸಿದ ಬಾಬನದೋ ಸ್ವಾಮಿಯದೋ ಕೃಪೆಯಿಂದ ಎಲ್ಲಾ ನೀಗಿತು, ಇದನ್ನು ಓದಿದವರು ಕನಿಷ್ಟ ನೂರು ಪ್ರತಿ ಅಚ್ಚು ಮಾಡಿಸಿ post ಮಾಡಬೇಕು ಅಂತ. ಮಾಡದೇ ಇದ್ದರೆ ನಮಗೂ ಪ್ಲೇಗ್ ಬರುತ್ತಂತೆ. ನರಳಿ ವಿಲ ವಿಲ ಒದ್ದಾಡಿ ರಕ್ತ ಕಾರಿ ಸಾಯುತ್ತೇವಂತೆ! ಅವನ ಪಿಂಡ!!

ಮನುಷ್ಯ ಎಷ್ಟು insecure ಅಲ್ಲವೇ?

ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ!!

ಎಂದು ನಮ್ಮನ್ನು ಭೂಮಿಗೆ ತಂದ, ನಮಗೆ ಇಲ್ಲಿರಲು ಅವಕಾಶ ಮಾಡಿಕೊಟ್ಟ, ಬುದ್ಧಿ ಕೊಟ್ಟ, ಯೋಚನಾ ಶಕ್ತಿ ಕೊಟ್ಟ ಬದುಕು ಕೊಟ್ಟ, ಜೀವ ಕೊಟ್ಟ ವಿಶೇಷ ಶಕ್ತಿಯೆಂಬ ದೇವರಿಗೆ ನಮಸ್ಕರಿಸಬೇಕೇ ವಿನಾ, ಕೊಟ್ಟ ಬುದ್ಧಿಯನ್ನು ಕೆಟ್ಟದಾಗಿ ಬಳಸಿಕೊಂಡು, ನಂತರ ತಮ್ಮ ಮೇಲೆ ತಾವೇ ನಂಬಿಕೆ ಕಳೆದುಕೊಂಡು, ಅದನ್ನು ತಿದ್ದಲು ಹೋಗಿ, ಒಳ್ಳೇದಾಗುತ್ತೆ ಎಂಬ ಭ್ರಮೆಯಿಂದ ಅನವಶ್ಯಕ ಪತ್ರಗಳನ್ನು, ಸಂದೇಶಗಳನ್ನು ಇನ್ನ್ನೊಬ್ಬರಿಗೆ ಕಳಿಸಿ ತೊಂದರೆ ಮಾಡುವುದರಿಂದ ಯಾರಿಗೂ ಏನೂ ಪ್ರಯೋಜನವಿಲ್ಲ. ತಂತ್ರಜ್ಞಾನವಿರುವುದು ಇಂಥಾ ಕೆಲಸಗಳಿಗಲ್ಲ. ನಮ್ಮ ಮೇಲೆ ನಮಗೆ ನಂಬಿಕೆಯಿರಲಿ. ಗುಡ್ ನ್ಯೂಸ್ ತಾನಾಗಿ ತಾನೇ ಬರುತ್ತೆ.

- ಅ
19.07.2007
5.30AM

6 comments:

 1. houdhu..ee nadve eethara spam sandeshagaLu hecchagive... aareetiya msg gaLu bandre mundakke fwd maadodh bittu allige nilsbidbeku...jangaLu haage maadodhe illa...SMS free thaane...pukkatte yaagi oLLedaagatte annohaagidre aagbidli antha kaLsbidthaare.....

  ReplyDelete
 2. antha email/SMS vaapas avrige kaLsbeda... aa thara kaLsidre avaru adanna "protsaaha" anta tiLidukonDaaru!

  naanantu inthaddannella yaargu forward maaDalla, vaapas kuda kaLsalla. taLmeya gaDi daaTi kopa nettigeridre vaapas baidoo ideeni!

  ReplyDelete
 3. ತಾಳ್ಮೆ.. ತಾಳ್ಮೆ.. ;)
  ಇಂತೆಷ್ಟು ಕೋಟಿ ಸಂದೇಶಗಳೊದಗಿದೊಡಂ ಅವೆಲ್ಲಮಂ ತಾಳ್ಮೆಯಿಂ ಸ್ವೀಕರಿಪುದು ಮಾನುಷಂ... ಸಹನೆಯಿರಲಿ ಮನುಜ... ;)

  ReplyDelete
 4. [ಶ್ರೀಧರ] ಒಳ್ಳೇದ್ ಎಲ್ ಆಗುತ್ತೆ, ಅವರ ಪಿಂಡ!

  [ಶ್ರೀಕಾಂತ್] ಬೈಯ್ಯೋದು ನನ್ನ ಜಾಯಮಾನವಲ್ಲ. ನನ್ನ ಪ್ರತಿಭಟನಾ ಕ್ರಮ ಹಾಗೇನೇ. ಇಪ್ಪತ್ತು ಸಲ ಅದೇ ಮೈಲ್ ಕಳಿಸಿದರೆ ಅದು ಪ್ರೋತ್ಸಾಹ ಆಗಲ್ಲ, ಖಂಡನೆ ಆಗುತ್ತೆ..

  [ಗಂಡಭೇರುಂಡ] ತಾಳ್ಮೆಯಿಂ ಸ್ವೀಕರಿಸಿ ಸಾಧಿಸುವುದೇಂ? ತಾಳ್ಮೆಯೊಂದಿರಲ್ ಎಲ್ಲವಮವರಿಗೇ ಕಳುಹಿಪುದು!

  ReplyDelete
 5. namskara guru aruananna ninage heltha irodu swami. neenu nijavagalu pralayanthaka, natabayankara. nanna jeevanadalle ibbarranu oppikondirodu ravi belegere, and neenu. nijavagalu ninna writing superb.ene aagali swamy enu baritirari halleyadu untu. ege barairi nimage devaru olleyadu madali.
  nale siguthini.
  nvkeshava@gmail.com.
  manasadare contact madi

  ReplyDelete
 6. ಮೊದಮೊದಲು ನನಗೂ ಇಂಥಹ ಮಿಂಚೋಲೆಗಳನ್ನು ನೋಡಿದಾಗ ಮನಸ್ಸಿಗೆ ಒಂದು ರೀತಿಯ ಕಸಿವಿಸಿಯಾಗುತ್ತಿತ್ತು. ನಿಮ್ಮ ಈ ಕ್ಷಿತಿಜಾನಿಸಿಕೆಯನ್ನು ಓದಿದ ಮೇಲೆ ಮನದಲ್ಲಿದ್ದ ದುಗುಡ ಮಾಯವಾಯಿತು, ನಿಮ್ಮ ಲೇಖನಕ್ಕೆ ಧನ್ಯವಾದಗಳು.

  ReplyDelete