Thursday, July 26, 2007

ಕತ್ತು ನೋವು.. :-(

ಶಾಪ

ಇದು ಬರಿಯೆ ನೋವಲ್ಲ
ಶಾಪವಿದು ಘೋರ ಶಾಪವಿದು
ದೇಹದ ನೇಹದ ಕ್ರೂರ ಕೋಪವಿದು
ಜವಸಂಕಟದ ನಂಜಿನ ಕೂಪವಿದು
ನೋವಲ್ಲವೆನ್ನ ಪಾಪವಿದು

ಕಸಕೆ ತಳ್ಳಿದ ಸಮಯದಲಿ ಸಿಡುಕಾಗಿ
ಅನ್ನ ಪರಬೊಮ್ಮನ ಶಾಪವಿದು
ಸೋತು ತಲೆತಗ್ಗಿಸದೆ ವಿದ್ಯೆಗೆಡುಕಾಗಿ
ಸರಸತಿಯ ಸಾಕ್ಷಾತ್ ಶಾಪವಿದು
ಬರಿಯೆ ನೋವಲ್ಲವೆನ್ನ ಪಾಪವಿದು

ಜಗವ ಪ್ರೀತಿಸಿದ ಜನರ ಪ್ರೀತಿಸಿದ
ಜಲವ ಪ್ರೀತಿಸಿದ ಜಂತುವ ಪ್ರೀತಿಸಿದ
ಜತೆಗಾರರ ಪ್ರೀತಿಸಿದ ಎನ್ನ ಪ್ರೀತಿಯ ಶಾಪವಿದು
ಕರುಳ ನೋಯಿಸುತ ಕೊರಳ ಬಾಧಿಸುತ
ಮರಳುಗಾಡಿನಿರುಳ ಶಾಪವಿದು

ಶಾಪವೇನು ಕೋಪವೇನು
ಏನಿಹುದು ಪಾಪಪುಣ್ಯದಲಿ
ಬಂದವರ ಬಾರೆಂದು ಸೇರಿಸದಂತೆ
ಕಾಲು ಕೊರಳ ನೋವಿನ ಭೂಪವೇನು
ಸುಸ್ವಾಗತವೆನ್ನ ದೇಹದಾರಣ್ಯದಲಿ

- ಅ
23.11.2004
12AM

11 comments:

  1. "inRaalum enakku kuRai onRum illai" (iddaroo enage ondu korateyU illa) anno manobhaava chennagide.. :) tumba oLLeya padya..

    ReplyDelete
  2. ಏನ್ ಜಗತ್ತೋ ಏನೋ.. ನೋವಿಂದ ನರಳ್ತಾ ಇದ್ರೆ ಚೆನ್ನಾಗಿದೆ ಪದ್ಯ ಅನ್ನುತ್ತೆ.. ನೀನು ಅನ್ನೋ ಹಾಗೆ ನಂಗೆ ಇನ್ನೂ ಕುರು ಬಂದಿಲ್ಲಪ್ಪಾ, ಬದುಕ್ಕೋತು ಬಡಜೀವ...

    ReplyDelete
  3. "ಕಾಲು ಕೊರಳ ನೋವಿನ ಭೂಪವೇನು
    ಸುಸ್ವಾಗತವೆನ್ನ ದೇಹದಾರಣ್ಯದಲಿ"

    ಇದರೊಳಿಹ ಅಗ್ಗಳದ ಭಾವವಂ ಆನು ತೋರಿತೆಗೆದೆನಾದೊಡಂ ನೀನದನು ಮನ್ನಿಸದೆ ಜರಿವೆಯಾ? ಅಕಟಕಟಾ!!! ಎನ್ನಿಂ ನೀಂ ಶಾಪಗ್ರಸ್ತನಾಗದಿರು ಮಾನವ... X-(

    ReplyDelete
  4. ಎಲ್ಲಾ ವಿಧಿಲೀಲೆ ಕಣ್ಣಪ್ಪೋ...

    ReplyDelete
  5. ಆದರೂ ನಿನ್ನ ಕತ್ತು ನೋವಿಗೆ ನನ್ನಲ್ಲಿ ಕನಿಕರವುಂಟು. ಆದಷ್ಟು ಬೇಗ ಮಾಸಿ ವಾಸಿಯಾಗಲಿ ಆ ನೋವು.. :-)

    ReplyDelete
  6. ನಿನ್ನಾಶಯಕ್ಕೆ ನಾ ಋಣಿ... ಆದರೂ ಇದೊಂದು ಥರ ಮಧುರ ಯಾತನೆ ಕಣಾ...

    ReplyDelete
  7. ninna kattina novannu..padya moolaka hora hommisidya...aa creativity ge sharaNu :-)....novin mele concentrate maadbeda....avaga novaadru ninge adhu aagthide antha gottagolla..idara bagge hecchina maahitigaagi yogapraveeNaraada srinivas ravarannu keLi... :-)
    nijavaaglu...

    ReplyDelete
  8. ವಿಳಾಸ ಕೊಡಪ್ಪಾ ಆ ಯೋಗ ....... ಅವರದು!!

    ReplyDelete
  9. nam thaayaNe ... kannadadalli maathaDde idre enoo artha aagalla :-)

    ReplyDelete
  10. ಹರುಷವೊಂದೆ ಯಾರಿಗುಂಟು ಹೇಳು ಜಗದಲಿ?
    ಹೂವು ಮುಳ್ಳು ಎರಡೂ ಉಂಟು ಬಾಳ ಲತೆಯಲಿ.

    ReplyDelete
  11. [ವಿಜಯಾ] ಕರ್ಣಾಟ ಭಾಷೆಯೋಳ್ ಇಹುದಲ್ತೆ ಪರಭಾಷೆಯಲ್ಲಿರ್ಪುದೇಂ?

    [ಶ್ರೀಕಾಂತ್] ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು..

    ReplyDelete