Tuesday, August 14, 2007

ಅರ್ಥವೈರುಧ್ಯ!

ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಗಾಂಧೀಜಿಗೆ ಸಂಬಂಧಿಸಿರುವುದು ಪ್ರತಿಮೆಯೊಂದಲ್ಲದೇ ಬೇರೇನಾದರೂ ಇದೆಯಾ?

’ಶಿವಾಜಿ’ನಗರದಲ್ಲಿ ಹಿಂದುಗಳನ್ನು ಸರ್ಚ್ ಲೈಟ್ ಹಾಕೊಂಡ್ ಹುಡುಕಬೇಕು.

’ಹೊಸಕೋಟೆ’ಯೆಂಬ ಊರು ವಿಪರೀತ ಹಳೆಯದೆಂದು ಯಾವಾಗಲೋ ಗೊತ್ತಾಗಿತ್ತು.

ಬೆಂಗಳೂರು ಜನಕ ಕೆಂಪೇಗೌಡ ಕಪ್ಪಗಿದ್ದವನು.

ದೇವೇಗೌಡರು ಪ್ರತಿಯೊಂದು ಕೋನದಿಂದಲೂ ಭೀಕರವಾಗಿ ಕಾಣುತ್ತಾರಲ್ಲಾ? ದೇವರ ಹಾಗೆ ಕಾಣೋದೇ ಇಲ್ಲವಲ್ಲಾ?

ಚಾಮರಾಜಪೇಟೆಯಲ್ಲಿ ಪೋಲಿಸ್ ಇಲಾಖೆಯವರ ಒಂದು ಕಚೇರಿಯಿದೆ. ಅದರ ಹೆಸರು, "Central Crime Branch" ಅಂತ. ಪೋಲಿಸ್‍ನವರೇ ಕ್ರೈಮ್ ಮಾಡ್ತಾರೇನೂ?

ಬಿಳಿಗಿರಿರಂಗನ ಬೆಟ್ಟದ ಹತ್ತಿರ ಚಾರಣ ಮಾಡುತ್ತಿದ್ದಾಗ ಒಂದು ಸೂಚನಾ ಫಲಕ ಈ ರೀತಿಯಿತ್ತು, " ಇದು ವೀರಪ್ಪನ್ ಕಾರ್ಯಾಚರಣೆಯಿರುವ ಪ್ರದೇಶ, ಸಾರ್ವಜನಿಕರ ಪ್ರವೇಶ ನಿಷೇಧಿಸಿದೆ" ಅಂತ. ಈ ಫಲಕವನ್ನು ಹಾಕಿದ್ದು ವೀರಪ್ಪನ್ ಅಲ್ಲ, ಕರ್ನಾಟಕ ಅರಣ್ಯ ಇಲಾಖೆ.

ನಾನು ಕಾಲೇಜಿನಲ್ಲಿದ್ದಾಗ ಒಬ್ಬಳು ಹುಡುಗಿ ಇದ್ದಳು, ಆಕೆಯ ಹೆಸರು ಹಂಸ. ಆದರೆ ಅವಳು ಕಾಡೆಮ್ಮೆಗೆ ಪ್ರತಿಸ್ಪರ್ಧಿಯಾಗಿದ್ದರೂ ಹೆಸರು ಬದಲಿಸಿಕೊಂಡಿರಲಿಲ್ಲ.

ನನ್ನ ವಿದ್ಯಾರ್ಥಿಯೊಬ್ಬ ಇದ್ದಾನೆ, ಆತನ ಹೆಸರು ವಿವೇಕಾನಂದ ಅಂತ. ಕಳೆದ ಎರಡು ಪರೀಕ್ಷೆಗಳಲ್ಲಿ ಆತನ ಅಂಕ ಸರಾಸರಿ ಶೇ. ಇಪ್ಪತ್ತು.

ಕೃಷ್ಣ ರಾವ್ ಅಂತ ಒಬ್ಬರು ಬ್ರಹ್ಮಚಾರಿ ನನಗೆ ಮೊನ್ನೆ ಮೊನ್ನೆ ತಾನೇ ಪರಿಚಿತರಾದರು.

ನನ್ನ ಹೈಸ್ಕೂಲ್ ಸಹಪಾಠಿ ಜಯೇಶ್ ಎಂಬುವನು ಎಸ್.ಎಸ್.ಎಲ್.ಸಿ ಯಲ್ಲಿ ಮೂರು ಸಲ ಡುಮ್ಕಿ, ಪಿಯುಸಿಯಲ್ಲಿ ಎರಡು ಸಲ.

ನಾವು ಎಷ್ಟು ಜನರನ್ನು ನೋಡಿಲ್ಲ, ಶ್ವೇತ ಅಂತ ಹೆಸರಿಟ್ಟುಕೊಂಡು ದ್ರೌಪದಿ ಥರ ಇರೋರನ್ನು, ಸೌಮ್ಯ ಅಂತ ಹೆಸರಿಟ್ಟುಕೊಂಡ ಜಗಳಗಂಟಿಯರನ್ನು, ಆನಂದ್ ಅಂತ ಹೆಸರಿಟ್ಟುಕೊಂಡ ದೇವದಾಸ್‍ಗಳನ್ನು, ರಾಮ್ ಅಂತ ಹೆಸರಿಟ್ಟುಕೊಂಡ ಪರಮ flirt ಗಳನ್ನು, ಕಾಮೇಶ್ ಅಂತ ಹೆಸರಿಟ್ಟುಕೊಂಡಿರುವ ಬ್ರಹ್ಮಚಾರಿಗಳನ್ನು, ತೇಜಸ್ವಿಯೆಂದು ಹೆಸರಿಟ್ಟುಕೊಂಡಿರುವ ಮಂಕುದಿಣ್ಣೆಯರನ್ನು, ಸ್ಮಿತಾ ಅಂತ ಹೆಸರಿಟ್ಟುಕೊಂಡಿರುವ ಅಳುಮುಂಜಿಯರನ್ನು, ಲಕ್ಷ್ಮಿ ಅಂತ ಹೆಸರಿಟ್ಟುಕೊಂಡ ಗುಡಿಸಲುವಾಸಿಯರನ್ನು, ಹರಿಶ್ಚಂದ್ರ ಎಂದು ಹೆಸರಿಟ್ಟುಕೊಂಡ ಪರಮ ವಂಚಕರನ್ನು, ಗಾಂಧಿಯೆಂದು ಹೆಸರಿಗೆ ಸೇರಿಸಿಕೊಂಡ ಅಧಿಕಾರವ್ಯಾಮೋಹಿಗಳನ್ನು!

ಭಾರತಕ್ಕೆ ಸ್ವಾತಂತ್ರ್ಯ ಬಂದಿದೆಯೆಂದು ಹೇಳಿಕೊಳ್ಳುತ್ತೇವೆ, ಆದರೆ ಸ್ವಾವಲಂಬನೆ ಭಾರತೀಯರಿಗೆ ಬಂದಿದೆಯಾ? Freedom ಬಂದಿದೆಯೇ ಹೊರೆತು Independence ಪಡೆದುಕೊಂಡಿದ್ದೇವಾ?

ವಿಶ್ವಮಾನವ ಸಂದೇಶ ಸಾರುವ ಈ ಹಾಡನ್ನು ಅರವತ್ತನೇ ಸ್ವಾತಂತ್ರ್ಯೋತ್ಸವದಲ್ಲಿ ನೆನೆಸಿಕೊಳ್ಳುವ ಮನಸ್ಸಾಗುತ್ತಿದೆ.
- ಅ
14.08.2007
11.15PM

10 comments:

 1. Freedom ಬಂದಿದೆಯೇ ಹೊರೆತು Independence ಪಡೆದುಕೊಂಡಿದ್ದೇವಾ?
  chintana yogya preshne..... saar

  ReplyDelete
 2. Bharathakeno swathaMtrya doraki 60 varsha aaithu adu bitre namma deshada kelavu bagagalallina janarige innu freedomu sikilla innu swathryada sikkiruva prashne elli banthu?

  deshakke mathu deshada adhikara vyamohigaligaste iveradu padagalu sikkirodu"FREEDOM&INDEPENDENCE"
  nanna anisike .

  mathe nimage vruthpoorvakavAda danyavAda vishwa sandesha saaruva arthapoornavAda hadannu nenpisidakke(adu M.S.S avara dhani yalli).
  :):)

  ReplyDelete
 3. Chintanaarha prashne.

  Aadare heege prashnisutta, namma desha ee aravatuu varshagaLalli saadhisiruva pragatiyannu mareyuttivi. Idarinda we become less confident. KaLedu hoda varshagaLalli enannu sadhisalilla annuvudaru kuritu samaya kaLeyakkinta, namma saadhanegaLu koDuva nambikeyinda munde saagabeku. This is my humble opinion.

  ReplyDelete
 4. [ಶ್ರೀಧರ] ಪ್ರೆಶ್ನೆ ಮಾಡುತ್ತಲೇ ಅರವತ್ತು ವರ್ಷ ಕಳೆದಾಯ್ತು!!

  [ಸಮನ್ವಯನ] ವಿಶ್ವಮಾನವ ಸಂದೇಶವನ್ನು ಸಾರಲು ನಾನು ಸದಾ ಸಿದ್ಧ. ಎಂ. ಎಸ್. ಅಂದರೆ ನನಗೂ ತುಂಬಾ ಇಷ್ಟ ಕಣ್ರೀ..

  [ಹರೀಶ್] ತಾವು ಹೇಳಿದ್ದು ನಾನು ಆಮೂಲಾಗ್ರವಾಗಿ ಒಪ್ಪಿಕೊಳ್ಳುತ್ತೇನೆ. ಆದರೆ ನಾನು ಎಲ್ಲೂ ಸಾಧನೆಯ ಬಗ್ಗೆ ಬರೆಯಲೆತ್ನಿಸಿಲ್ಲ. ಅರ್ಥವೈರುಧ್ಯದಕ್ಕೆ ಮೊದಲ ಆದರ್ಶ ಉದಾಹರಣೆ ನಮ್ಮ ದೇಶದ "ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ"ಯ ನಡುವಣ ಗೊಂದಲವೆಂದೆನಿಸಿತು. ಅದನ್ನು ಬರೆಯಲೆತ್ನಿಸಿದೆ ಅಷ್ಟೆ. ಭಾರತ ನಿಜಕ್ಕೂ ಅಪ್ರತಿಮ ಸಾಧನೆಗಳನ್ನು ಮಾಡಿದೆ. ಪ್ರಪಂಚದ ಯಾವುದೇ ದೇಶಕ್ಕೇನೂ ಕಡಿಮೆಯಿಲ್ಲ. ಆದರೆ, ಭಾರತೀಯರಿಗೆ ಸ್ವತಂತ್ರವೊಂದೇ ದೊರಕಿದೆಯೋ ಅಥವಾ ಸ್ವಾವಲಂಬನೆಯೂ ದೊರಕಿದೆಯೋ ಎಂಬುದಷ್ಟೇ ಚಿಂತನೆ.

  ReplyDelete
 5. "srikanth" anno hesrige enu barililvalla sadhya! aamele devre gati

  ReplyDelete
 6. ಹೆ ಹೆ ಹ್ಹೆ... ನೀನೇ ಬರೆದುಬಿಡು, ಶ್ರೀಕಾಂತ್ ಅಂತ ಹೆಸರಿಟ್ಟುಕೊಂಡು ಹೇಗೆ ಅದರ ವಿರುದ್ಧವಾಗಿ ಬದುಕೋದು ಅಂತ!!!

  ReplyDelete
 7. "Chicken" ಅಂತ ಹೇಳ್ಕೊಂಡು ದೊಡ್ಡ ಕೋಳಿ ಕಡಿದು ತಿಂತಾರಲ್ಲ... ಹಾಗಾಯ್ತು ನೋಡು... ;)
  (ಅಲ್ಲ, ಸುಮ್ನೆ ಮಾತಿಗೆ ಹೇಳ್ದೆ... ಇರಲಿ)

  ಸ್ವಾತಂತ್ರ್ಯ ಬಂದಿದೆ. ಸ್ವಾವಲಂಬನೆ ಬಂದಿಲ್ಲ. ಇದು ವಿಷಯ.... hmmmm...

  ಹೌದು. ನಾವು "ಸ್ವತಂತ್ರ"ರು. ಆದರೆ ನೈತಿಕವಾಗಿಯೂ, ಆರ್ಥಿಕವಾಗಿಯೂ ಇನ್ನೊಬ್ಬರನ್ನು ಅವಲಂಬಿಸದೆ ನಮ್ಮ ಕಾಲ ಮೇಲೆ ನಿಲ್ಲುವಂತೆ ನಮಗೆ ನಾವೇ ತಂತ್ರಗಳನ್ನು ರೂಪಿಸಿಕೊಳ್ಳೋಕ್ಕೆ ಮೊದಲಾಗಿ ನಮ್ಮ ನಾಯಕರಿಗೆ ಮುತ್ಸದ್ದಿತನ ಅವಶ್ಯ. ಜ್ಞಾನ ಅವಶ್ಯ. ಇಂದು ಬಹಳ ಕಡಿಮೆ ಜನರಿಗೆ ಈ ಗುಣಗಳು ಇರೋದರಿಂದ, ಅಲ್ಲದೆ ಮುತ್ಸದ್ದಿಗಳಿಗೂ-ಜ್ಞಾನಿಗಳಿಗೂ ಮನ್ನಣೆ ದೊರಕದೆ ಇರೋದರಿಂದ ಪರಾವಲಂಬನೆ ಅನಿವಾರ್ಯ.

  ಆದರೆ ಆ ಪರಾವಲಂಬನೆಯನ್ನ ಹೋಗಿಸೋಕೆ ಹಿರಿಯರು-ಜ್ಞಾನಿಗಳು ಸತತವಾಗಿ ಶ್ರಮಿಸುತ್ತಾ ಇದ್ದರು/ಇದ್ದಾರೆ/ಇರ್ತಾರೆ. ಆದ್ದರಿಂದ ನಮ್ಮ ದೇಶ ಮುಂದೊಂದು ದಿನ ಖಂಡಿತವಾಗಿಯು ಸ್ವಾವಲಂಬಿಯಾಗಿ ನಿಲ್ಲುತ್ತ್ತೆ. ಇದು ಶತಸಿದ್ಧ. :)

  ReplyDelete
 8. ಹ್ಞಾಂ... ಹೇಳೋದು ಮರೆತೆ.... ವಿಶ್ವಮಾನವ ಸಂದೇಶವನ್ನ ಹೊಗಳೋಕ್ಕೆ ಈ ಜನ್ಮ - ಪದಪುಂಜ - ಎರಡೂ ಸಾಲಲ್ಲ :) ಅತ್ಯದ್ಭುತವಾದ ಸಂದೇಶ.

  ReplyDelete
 9. Office nalli blog odhtideeni ... so, haadu is blocked! MSS anta comment irodrinda Maitrem Bhajata antha andkoteeni. Adralli ..."Spardham tyajata" na yaako manassu poorti oppolla. Spardhe ildidre munde barodu saadhyailla. Competition the main reason to grow. Adu, prakriti niyama. But yes ... competition should be healthy. I think we need to start talking about "Interdependence" and "Co-existing". "Maitrem Bhajata" :-)

  ReplyDelete
 10. ನಿಜ. ಸ್ಪರ್ಧೆ ಇರದೆ ಯಾರೂ ಬಾಳಲು ಸಾಧ್ಯವಿಲ್ಲ. ಆದರೆ ಇಲ್ಲಿ ಹೇಳಿರುವ ಅರ್ಥ ಸ್ವಲ್ಪ ಭಿನ್ನ. ಇಲ್ಲಿ "ಮೊದಲಿಗೆ ಯುದ್ಧ ತ್ಯಜಿಸಬೇಕು; ನಂತರ ಯುದ್ಧಕ್ಕಾದ ಸ್ಪರ್ಧೆಯನ್ನೂ ತ್ಯಜಿಸಬೇಕು" ಅನ್ನೋದು ಅರ್ಥ. ಯುದ್ಧ ಮಾಡೋ ಮನೋಭಾವನೆ ಇದ್ದರೆ ಮಾತ್ರ ಅದಕ್ಕಾದ ಸ್ಪರ್ಧೆ ಏರ್ಪಡೋದು. ಅದು ಬೇಡ ಅಂತ ಬುದ್ಧಿವಾದ ಹೇಳಿದ್ದಾರೆ ಅಷ್ಟೆ :-) ಆದ್ದರಿಂದ ಈ ಮಾತನ್ನ ಸಂಪೂರ್ಣವಾಗಿ ಒಪ್ಪಬಹುದು. ಏನಂತೀರಿ?

  ReplyDelete