Friday, August 17, 2007

ಯಾಕೆ ತಿನ್ನಬಾರದು?

೧. ಆಲೂಗೆಡ್ಡೆ - ವಾಯು ಸರಿ. ಆದರೆ ಈರುಳ್ಳಿ, ಶುಂಠಿಯ ಜೊತೆ ಬೆರೆತರೆ ವಾಯುದೋಷ ಒಡೆಯುತ್ತೆ. ಶೇ. ೫೦ ವಿಟಮಿನ್ ಬಿ ೬ ಕೊಡುತ್ತೆ.


Solanum tuberosum

೨. ಈರುಳ್ಳಿ - ಕಣ್ಣಿಗೆ ಒಳ್ಳೇದು. ಲೈಂಗಿಕ ಶಕ್ತಿವರ್ಧಕ. ಕೊಬ್ಬು ಮತ್ತು ಕೊಲೆಸ್ಟ್ರಾಲ್ ದೂರ ಮಾಡುತ್ತೆ. ಅತಿ ಹೆಚ್ಚು ನಾರನ್ನು ಹೊಂದಿರುತ್ತೆ. ವಿಟಮಿನ್ ಸಿ ನೆಲ್ಲಿಕಾಯಿ, ಕಿತ್ತಲೆ ಮೂಸಂಬಿಗಳನ್ನು ಹೊರೆತು ಪಡಿಸಿದರೆ ಈರುಳ್ಳಿಯಲ್ಲಿಯೇ ಹೆಚ್ಚು ಸಿಗೋದು.

Allium cepa.


೩. ಬಟಾಣಿ - ಪ್ರೋಟೀನು ಸಂಪತ್ಭರಿತ.


Pisum sativum

೪. ಶುಂಠಿ - ವಾಯುನಿರೋಧಕ. ಸಾರಜನಕ (Nitrogen) ಸಿಗಬೇಕು ದೇಹಕ್ಕೆ ಅಂದರೆ ಶುಂಠಿಗಿಂತ ಒಳ್ಳೇ ರೈಜೋಮು ಸಿಗೋದಿಲ್ಲ.

Zingiber officinale Roscoe

೫. ಕೊತ್ತಂಬರಿ ಸೊಪ್ಪು - ನಾಟಿ ಪದ್ಧತಿಗಳಲ್ಲಿ, ಆಯುರ್ವೇದದಲ್ಲಿ ಮನಸಿನುದ್ವೇಗ, ಜಠರಾಗ್ನಿ (Acidity) ಹಾಗೂ ನಿದ್ರಾಹೀನತೆಯನ್ನು ತಡೆಗಟ್ಟಲು ಆಹಾರದಲ್ಲಿ ಕೊತ್ತಂಬರಿ ಸೊಪ್ಪು ಬಳಸಿ ಎಂದು ಹೇಳುತ್ತಾರೆ.

Coriandrum sativum


೬. ಹುಣಸೇ ಹಣ್ಣು - ಹಸಿವನ್ನು ಹೆಚ್ಚಿಸುತ್ತೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತೆ. ಹುಳಿ, ಸಿಹಿ ಎರಡನ್ನೂ ಸೇರಿಸಿದ ವಿಶೇಷ ರುಚಿಯನ್ನು ಕೊಡುತ್ತೆ.

Tamarindus indica೭. ಬೆಳ್ಳುಳ್ಳಿ - ಹೃದಯ ಕಲ್ಲಿನಂತೆ ಗಟ್ಟಿಯಾಗುತ್ತೆ. ಒಟ್ಟಿನಲ್ಲಿ ಗಟ್ಟಿಪಿಂಡ ಆಗುತ್ತೇವೆ ಬೆಳ್ಳುಳ್ಳಿ ತಿಂದರೆ.


Allium sativum

೮. ಕಪ್ಪುಪ್ಪು - ಬೆಳ್ಳುಳ್ಳಿಯ ಅತ್ಯಂತ ಸನಿಹ ಸ್ನೇಹಿತ. ಹೃದಯಕ್ಕೆ ಒಳಿತನ್ನು ಮಾಡುವ ಸಾಮಗ್ರಿ. ಜೊತೆಗೆ ಆಹಾರಕ್ಕೆ ರುಚಿಯನ್ನೂ ಕೊಡುತ್ತೆ.


೯. ಮಸಾಲೆ ಪುಡಿ - ಮೆಣಸು, ಲವಂಗ, ಚಕ್ಕೆ, ದಾಲ್ಚಿನ್ನಿ, ಅರಿಶಿನ ಮುಂತಾದ ಶಕ್ತಿದಾಯಕಗಳಿಂದ ಮಾಡಲ್ಪಟ್ಟಿರುವುದು. ದೇಹವನ್ನು ಗಟ್ಟಿಯಾಗಿಸಲು ಈ spices ಬೇಕೇ ಬೇಕು!


೧೦. ಎಣ್ಣೆಯಲ್ಲಿ ಕರೆದ ಪೂರಿ - ಒಳ್ಳೆ ಎಣ್ಣೆಯಲ್ಲಿ ಕರೆದ ಪೂರಿಯಲ್ಲಿ ತಕ್ಕ ಮಟ್ಟಿಗೆ ಕೊಲೆಸ್ಟಿರಾಲ್ ಇರುತ್ತೆ. ಆದರೆ ಮೇಲಿರುವ ಸಕಲ ಸಾಮಗ್ರಿಗಳೂ ಆ ಕೊಲೆಸ್ಟಿರಾಲ್‍ನ್ನು ಶಮನಗೊಳಿಸುವ ಸಾಮರ್ಥ್ಯವುಳ್ಳದ್ದು. ಮತ್ತು ದೇಹಕ್ಕೆ ತಕ್ಕಮಟ್ಟಗಿನ ಕೊಲೆಸ್ಟ್ರಾಲ್‍ನ ಅವಶ್ಯಕತೆಯೂ ಸಹ ಇದೆ ಎಂಬುದು ಅನೇಕರಿಗೆ ಗೊತ್ತೇ ಇಲ್ಲ.


ಎಣ್ಣೆಯಲ್ಲಿ ಕರೆದ ಪೂರಿಗೆ ಮೇಲಿನ ಸಾಮಗ್ರಿಗಳನ್ನು ಬೆರೆಸಿದಾಗ (ನೇರವಾಗಿ ಅಲ್ಲ, ಕೆಲವನ್ನು ಬೇಯಿಸಿ, ಕೆಲವನ್ನು ಹಸಿಯಾಗಿ, ಮತ್ತೆ ಕೆಲವನ್ನು ಅರೆ ಬೇಯಿಸಿ) ಪಾನಿ ಪೂರಿ ಎಂಬ 'ಚಾಟ್' ನಮ್ಮೆದುರು ಇರುತ್ತೆ. ಎಲ್ಲಾ ಸಾಮಗ್ರಿಗಳೂ ಆರೋಗ್ಯಕ್ಕೆ ಒಳಿತನ್ನು ಮಾಡುವಾಗ, ಅದು ಪಾನಿಪೂರಿ ಆದಾಗ ಮಾತ್ರ ಆಹಾರತಜ್ಞರಿಂದ "ಜಂಕ್ ಫುಡ್" ಎಂಬ ಅಪಖ್ಯಾತಿಗೆ ಗುರಿಯಾಗಿರುವುದು ಯಾವ ನ್ಯಾಯ?
- ಅ

17.08.2007

4.30AM

13 comments:

 1. Oho! panipuri tinbeku anta aase.. he he he..

  tinnokke manassadre tindbidu, doctor-na yaak keLtiya. avrna keLi avru beda andmele adakke aase pattu heegella bareyodu... uhoon... sari kaaNtilla :P

  ha ha ha

  ReplyDelete
 2. 'Enidu, tarakaari parichaya?' anta ankonDe modalu. aamele vishya gottaaytu.

  ReplyDelete
 3. [ಗಂಡಭೇರುಂಡ] ಡಾಕ್ಟರ್‍ನ ಕೇಳಲೇ ಇಲ್ಲ. ಆ ದುರಭ್ಯಾಸ ಇಲ್ಲವೇ ಇಲ್ಲ ನಂಗೆ. ಆದರೂ ಈ ಡೈಯಟೀಷಿಯನ್ನರು, ಆರೋಗ್ಯತಜ್ಞರು ಹೇಳುತ್ತಲೇ ಇರುತ್ತಾರಲ್ಲಾ, ಜಂಕ್ ಫುಡ್ ಜಂಕ್ ಫುಡ್ ಅಂತ ಅದನ್ನು ತರ್ಕ ಮಾಡಬೇಕೆಂದೆನಿಸಿತು. ಜೊತೆಗೆ ಮೂರು ದಿನದಿಂದ ಹುಷಾರ್ ಇಲ್ಲ, ನಾಲಗೆ ಕೆಟ್ ಕೆರ ಆಗಿದೆ. ಅದಕ್ಕೆ ಇದನ್ನು ನೆನೆಸಿಕೊಂಡೆ!

  [ಹರೀಶ್] ಹೆ ಹ್ಹೆ ಹ್ಹೆ.. ತರಕಾರಿ ಪರಿಚಯ ಕೊಟ್ಟ ಹಾಗೂ ಆಗುತ್ತೆ ಪಾನಿಪೂರಿ ಜೊತೆಗೆ ಅನ್ನೋದೇ ನನ್ನ ಉದ್ದಿಶ್ಯ!

  ReplyDelete
 4. ella ok maaraaya.. aa kardid poorile problem irodu.. adralli cholestrol irutte, nija.. cholestrol namge beku annodoo nija.. aadre namage bekaada cholestrol-e adralli bekaada pramaaNadalle idya? annode prashne :)

  doctor-na keLodu/consult maaDOdu durabhyaasa alla.. ella doctors-oo heLodu rogigaLa oLLeyadakke taane..
  vaidyO nArAyaNO hariH... :)

  ReplyDelete
 5. ನೋಟ್ ದಿಸ್ ಪಾಯಿಂಟ್. ಡಾಕ್ಟರುಗಳು ಹೇಳೋದು 'ರೋಗಿಗಳ' ಒಳ್ಳೇದಕ್ಕಾಗಿ. ಸೋ, ನಮಗೂ ಅವರಿಗೂ ದೂರ.

  ಕೊಲೆಸ್ಟ್ರಾಲ್ ಹೆಚ್ಚಾಗಿ ಬರಲು ಸಾಧ್ಯವೇ ಇಲ್ಲ. ಯಾಕೆಂದರೆ, ಕೊತ್ತಂಬರಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಇವೆಲ್ಲಾ ಸಕಲ ಕೊಲೆಸ್ಟ್ರಾಲ್ ಹಾಗೂ ಕೊಬ್ಬನ್ನು ಶಮನಗೊಳಿಸಿ ನಶಿಸಿಬಿಡುತ್ತವೆ. Spices ಉಪ್ಯೋಗ್ಸೋದೇ ಅದಕ್ಕೆ ಅಲ್ಲವೇ?

  ReplyDelete
 6. ವೈದ್ಯರು 'ರೋಗಿಗಳ' ದೇಹಾವಸ್ಥೆ ಸುಧಾರಿಸಲಿ ಅಂತ ಇದನ್ನ ಹೇಳೋದು, ನಿಜ. ಅದರೊಟ್ಟಿಗೆ ಆರೋಗ್ಯದಿಂದ ಇರೋರು ರೋಗಕ್ಕೆ ತುತ್ತಾಗದಿರಲಿ ಅಂತ ಕೊಡೋ ಎಚ್ಚರಿಕೆ ಕೂಡ ಆಗುತ್ತೆ. ಪ್ಲೀಸ್ ನೋಟ್ ದಿಸ್ ಪಾಯಿಂಟ್ ಆಸ್ ವೆಲ್..

  ಎರಡನೆಯದಾಗಿ, ಆ ಪೂರಿಗಳನ್ನ ಮಾಡುವಾಗ ಪ್ರತಿ ಸಲ ಹೊಸದಾಗಿ ಎಣ್ಣೆ ಉಪಯೋಗಿಸಲ್ಲ. ಮೊದಲು ಕಾಯಿಸಿ ಆರಿರೋ ಎಣ್ಣೆಯನ್ನೇ ಮತ್ತೆ ಮತ್ತೆ ಕಾಯಿಸುತ್ತಾರೆ. ಅದರಿಂದ ಕೊಲೆಸ್ಟ್ರಾಲ್ ಪ್ರಾಬ್ಲಮ್ ಅಲ್ಲ, fatty acids ಪ್ರಾಬ್ಲಮ್ ಬರುತ್ತೆ. ಅದು ದೇಹಕ್ಕೆ ಹಾನಿಕರ. ಅಷ್ಟೇ ಅಲ್ಲ, ಅವರು ಉಪಯೋಗಿಸೋ ನೀರು ಕೂಡ ಪರಿಶುದ್ಧವಾದುದಲ್ಲ. ಅದರಿಂದ ಕೊಲೆಸ್ಟ್ರಾಲ್ ದೇಹಕ್ಕೆ ಸಿಗದೇ ಹೋದ್ರೂ ರೋಗಾಣುಗಳು ಮಾತ್ರ ಯಥೇಚ್ಛವಾಗಿ ದೊರಕುತ್ತೆ. ಇವೆಲ್ಲ ನೋಡಿದ್ರೆ ಆ "ಜಂಕ್ ಫುಡ್" ತಿನ್ನದೇ ಇರೋದೆ ಮೇಲು... :)

  ReplyDelete
 7. he he he...paani puri thidaaythu..inyaak thale kedskotya??? junk food aadru tinni endaadru tinni..ella limit nalli idre..cholesterol ella control maadbodhu...yaake sumne thale kedskotheera..simply majjjjja maadi :-) adh tinbaardu idh tinnnabaardhu anno restrictions yaake?? ella dehada resistivity mele hogatte..idhu nanna nicchaLavaadha abhipraaya.. :-)

  ReplyDelete
 8. [ಶ್ರೀಧರ] ಅಭಿಪ್ರಾಯಗಳಿಗೆ ವೈಜ್ಞಾನಿಕ ತಳಹದಿಯಿದ್ದಿರಬೇಕು ಕಣಪ್ಪಾ..

  [ಗಂಡಭೇರುಂಡ] ಎಣ್ಣೆಯ ವಿಷಯ ಸಂಪೂರ್ಣ ಶ್ಲಾಘನೀಯ! ವೈದ್ಯರು ರೋಗಿಗಳ ದೃಷ್ಟಿಯಲ್ಲಿ ನೋಡೋದು ಬಹಳ ಕಡಿಮೆ ಬಿಡಿ. ನಿಮಗೆ ಅಂಥಾ ವೈದ್ಯ ಸಿಕ್ಕಿದ್ದರೆ ಆತ ಧನ್ವಂತರಿಯೇ ಸರಿ.

  ಅಂದ ಹಾಗೆ Ashe ಅಂದ್ರೆ ಏನು??

  ReplyDelete
 9. "ashTe" anta bareyakke hogi "Ashe" anta barde :D

  ReplyDelete
 10. :-) innondsala paani puri tinnona baa andaaga adanna tinbaardu, idanna tinbaardu antha annu maadteeni ninge!!!

  ReplyDelete
 11. neeenu 20 roopayi jebnalli itkoLalla annakke vyaignaanika thaLahadhi idhya?? ;-)

  ReplyDelete
 12. Ri roga-virodhi.... Yakappa tale kedskotira yaaru panipuri na 'haani'puri anthare antha... nivu ishta pura aago vargu thinni..
  Junk bodies will call it Junk food.. salpa arogyavanthru nimthara 'y call it junk' anthare... nimdu nu Junk body adhmele neeve mathe barithira "ee panipuri ondhthara haanipuri antha heLdhe irokke agalla" antha...
  allivargu chennagi thinnbidi.... thinnade irorge 'y do u call it junk' antha keLi vodhe thinbedi...

  ReplyDelete