Monday, September 3, 2007

ಪಂಚಸಂತಸಸೂತ್ರ..

--> ಮಕ್ಕಳೆಲ್ಲರು ತಮ್ಮ ಕಕ್ಷೆಗೆ ಕರೆದು ಸಿಹಿಯನ್ನು ಹಂಚಿ ಶುಭಾಶಯವನ್ನು ಹೇಳುವಾಗ ಮನದಲ್ಲಿ ಆಗುವ ಸಂತಸವನ್ನು ಒಬ್ಬ ಶಿಕ್ಷಕನಷ್ಟೇ ಅನುಭವಿಸಲು ಸಾಧ್ಯ! ನಾನೊಬ್ಬ ಶಿಕ್ಷಕ..

--> ಅಮ್ಮನ ವೀಣಾವಾದನವನ್ನು ಪಕ್ಕವಾದ್ಯಗಳೊಂದಿಗೆ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿ ಅದನ್ನು ಸಿಡಿಯಲ್ಲಿ ಹಾಕಿಕೊಂಡು ಕೇಳುವಾಗ ಆಗುವ ಮುದವನ್ನು ಸಂಗೀತ ರಸಿಕನಷ್ಟೇ ಅನುಭವಿಸಲಾಗುವುದಿಲ್ಲ, ಮಗನೂ ಆಗಿರಬೇಕು. ನಾನು ಮಗನೂ ಸಂಗೀತ ರಸಿಕನೂ..

--> ಜೂನ್‍ನಲ್ಲೇ ಮುಗಿಸಬೇಕಿದ್ದ ಶ್ರೀನಿಧಿಯ, ಶ್ರೀನಿವಾಸನ, ಸುಶ್ರುತನ, ಅನ್ನಪೂರ್ಣರ, ನನ್ನ ಪುಸ್ತಕದ ಪ್ರಾಜೆಕ್ಟು ಕೊನೆಗೂ ಮೊದಲ ಹೆಜ್ಜೆಯನ್ನು ಇಟ್ಟಿದೆ. ಎಲ್ಲಾ ಅಂಕಣಗಳೂ ಮುಗಿದವು. ಮುಂದಿನ ಸಲದಿಂದ ಇಷ್ಟು ತಡವಾಗಬಾರದೆಂದು ಶಪಥಗೈದೆ. ಈ ಸಂತಸವನ್ನು ಅನುಭವಿಸಲು ಕೆಲಸವೇ ಮುಂದುವರೆಯದ ನನ್ನಂಥವನಂತೆ ಸೋಲನ್ನು ಅನುಭವಿಸಿರಬೇಕು. ಈಗ ನಾನು ವಿಜಯೀ..

--> ಸ್ಕಂದಗಿರಿಯಲ್ಲಿ ಕೊಳಕೇ ಹೆಚ್ಚಿದ್ದರೂ ಮಳೆಯಲ್ಲಿ ನೆನೆಯುವಾಗ, ಬಂಡೆಯ ಮೇಲೆ ನಿಂತ ನೀರನ್ನು ಬಗ್ಗಿ ಪ್ರಾಣಿಗಳಂತೆ ಕುಡಿಯುವಾಗ, ಒದ್ದೆಯಾದ ಬಂಡೆಯನ್ನಿಳಿಯುವಾಗ ಜಾರಿ ಬಿದ್ದರೂ ಮತ್ತೆ ಮತ್ತೆ ಅದೇ ಬಂಡೆಯತ್ತಾ ಹೋಗುವಾಗ ಆಗುವ ಸಂತೋಷವನ್ನು ಅನುಭವಿಸಲು ಚಾರಣದ ಮೇಲೆ ಅಪಾರ ಪ್ರೀತಿಯಿರಲೇ ಬೇಕು. ಅಂಥವರಿಗೆ ಮಾತ್ರ ಆ ಸಂತಸದ ಅರಿವಾಗುತ್ತೆ. ನಾನು ಚಾರಣಪ್ರೇಮಿ..

--> 'ಸಹಾರ' ಪತ್ರಿಕೆಯ ಸರ್ಕ್ಯುಲೇಷನ್ನು ಮೂರುಸಾವಿರದತ್ತ ಹೋಗುತ್ತಿದೆ ಎಂದು ಕೇಳುವಾಗ ಆಗುವ ಆನಂದ ಅರ್ಥವಾಗಬೇಕಾದರೆ ಯಾವ 'ದೊಡ್ಡ' ಹೆಸರಿನ, ಹಣದ ಸಪೋರ್ಟ್ ಇಲ್ಲದೇ ಪತ್ರಿಕೋದ್ಯಮದಲ್ಲಿರಬೇಕು. ನಾನೊಬ್ಬ ಪತ್ರಕರ್ತನಲ್ಲದ ಪತ್ರಕರ್ತ..

ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು..

- ಅ
03.09.2007
3PM

4 comments:

  1. ಇದೆಲ್ಲವನ್ನೂ ಓದುವುದರಲ್ಲಿಯೇ ಏನೋ ಒಂದು ರೀತಿಯ ಸಂತಸ ಕಾಣಲು ರಸಿಕತೆಯಿರಬೇಕು, ಓದುವ ಹವ್ಯಾಸವಿರಬೇಕು, ಮುಖ್ಯವಾಗಿ ಪರಸ್ಪರ ಸಖ್ಯವಿರಬೇಕು.
    ನಾನು ಲೇಖನಗಳಲ್ಲಿರುವ ರಸವನ್ನನುಭವಿಸುವ ರಸಿಕ, ಮಿಗಿಲಾಗಿ ನಿನ್ನ ಸಖ...
    ;-) ಹಿ ಹಿ ಹಿ

    ReplyDelete
  2. lekhana chikkadaadaru chennaagide... ninage shikshakara dinacharaneya shubhashayagalu!

    ReplyDelete
  3. 'ಸಹಾರ' ಪತ್ರಿಕೆಯ ಸರ್ಕ್ಯುಲೇಷನ್ನು ಮೂರುಸಾವಿರದತ್ತ ಹೋಗುತ್ತಿದೆ ಎಂದು ಕೇಳುವಾಗ ಆಗುವ ಆನಂದ ಅರ್ಥವಾಗಬೇಕಾದರೆ ಯಾವ 'ದೊಡ್ಡ' ಹೆಸರಿನ, ಹಣದ ಸಪೋರ್ಟ್ ಇಲ್ಲದೇ ಪತ್ರಿಕೋದ್ಯಮದಲ್ಲಿರಬೇಕು. ನಾನೊಬ್ಬ ಪತ್ರಕರ್ತನಲ್ಲದ ಪತ್ರಕರ್ತ..

    idannu oodhi nanagu bahaLa santhoshavaayitu.... next sala dashasantasa sootra nimage odhagi barali.... :-)

    ReplyDelete
  4. [ಶ್ರೀಧರ] ದಶಸಂತಸ ಸೂತ್ರ ಬರೆಯಬೇಕು ಅಂದರೆ ಇವತ್ತಿಂದಲೇ ಬುಲೆಟೆಡ್ ಲಿಸ್ಟ್ ಮಾಡ್ಕೊಂಡ್ ಕೂತಿದ್ದೂ ಇನ್ನು ಹತ್ತು ತಿಂಗಳ ನಂತರ ಪಬ್ಲಿಷ್ ಮಾಡ್ಬೇಕು ನೋಡು..

    [ಶ್ರೀಕಾಂತ್] "ಲೇಖನ ಚಿಕ್ಕದಾದರೂ ಚೆನ್ನಾಗಿದೆ..." ಅಂತ ಹೇಳಿದೀರ, ಅಂದರೆ ನಾವು ಬಹಳ ಕಚ್ಚುತ್ತಿದ್ದೆವು ಇಷ್ಟು ದಿನ ಎಂದಾಯ್ತು.. ಇನ್ನು ಮುಂದೆ ಬರೀ ಚಿಕ್ಕ ಚಿಕ್ಕ ಲೇಖನಗಳೇ ಇರುತ್ತವೆ ಬಿಡಿ.. ;-)

    [ಗಂಡಭೇರುಂಡ] ಕನ್ನಡ ಮಾತಾಡಯ್ಯ!!

    ReplyDelete