Monday, September 10, 2007

ಆದರ್ಶ ಮಹಿಳೆಯರು..

ಶಾಲೆಯಲ್ಲಿ ಮಕ್ಕಳಿಗೆ ಭಾರತದ ಆದರ್ಶ ಮಹಿಳೆಯರ ಬಗ್ಗೆ ಚಾರ್ಟ್ ಮಾಡೋಕೆ ಕೊಟ್ಟಿದ್ದೆ, ಸಾಮಾನ್ಯ ಶಿಕ್ಷಣ ತರಗತಿಯಲ್ಲಿ. ಮಕ್ಕಳು ತಂದ ಚಿತ್ರಗಳನ್ನು ನೋಡಿ ನನಗೂ ಒಂದು ಚಾರ್ಟ್ ಮಾಡಬೇಕೆಂದೆನಿಸಿತು. ನಾನೂ ಒಂದಷ್ಟು ಅತ್ಯುತ್ತಮ, ಅತ್ಯುನ್ನತ, ಅದ್ಭುತ ಸಾಧನೆಗೈದ, ಸ್ವಾವಲಂಬಿ, ಧೈರ್ಯವಂತ, ಪುಣ್ಯವಂತ ಮಹಿಳೆಯರ ಚಿತ್ರಗಳನ್ನು ಸಂಗ್ರಹಿಸಿಕೊಂಡೆ.
ನಾನು ಇವರ ಆದರ್ಶಗಳನ್ನು ಅನೇಕ ರೀತಿಯಲ್ಲಿ ಪರಿಪಾಲಿಸಲೆತ್ನಿಸುತ್ತಿದ್ದೇನೆ. ಗ್ರೇಟ್ ವಿಮೆನ್ ಇವರುಗಳು.

ಈ ಮಹಿಳೆಯರೆಲ್ಲರಿಗೂ ನನ್ನ ಪ್ರಣಾಮಗಳು. ಇವರಂತೆ ಎಲ್ಲಾ ಮಹಿಳೆಯರೂ ಸಾಧಿಸಲಿ. "ನೀವ್ ಬಿಡಿಪ್ಪಾ ಗಂಡಸರು ಏನ್ ಬೇಕಾದ್ರೂ ಮಾಡ್ತೀರ.. ನಾವು ಹೆಂಗಸರು, ನಮಗೆ ಅವಕಾಶ ಕೊಡಲ್ಲ" ಅನ್ನೋ ಹೆಣ್ಣು ಮಕ್ಕಳು ಇವರುಗಳನ್ನು ಆದರ್ಶವಾಗಿಟ್ಟುಕೊಳ್ಳಬಹುದು.


ಇವರೆಲ್ಲರಿಗಿಂತಲೂ ನನ್ನ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿರುವ ಮಹಿಳೆಯೆಂದರೆ ನನ್ನನ್ನು ಬೆಳೆಸಿದ ನನ್ನ ಅತ್ತೆ, ನನಗೆ ಬದುಕಿನ ಪಾಠ ಹೇಳಿಕೊಟ್ಟ ನನ್ನ ಪ್ರೈಮರಿ ಶಾಲೆಯ ಶ್ಯಾಮಲಾ ಮಿಸ್ಸು. ಕಾರಣಾಂತರದಿಂದ ಅವರ ಫೋಟೋಗಳನ್ನು ಪ್ರಕಟಿಸುತ್ತಿಲ್ಲ.

ನನ್ನ ನಮನಗಳು..

-ಅ
10.09.2007
10.15PM

2 comments:

  1. ಅದ್ಯಾಕೋ ನಂಗೆ Mother Teresa ಫೋಟೋ ಆದರ್ಶಕ್ಕೆ ತುಂಬ ಸೂಕ್ತ ಅನ್ನಿಸುತ್ತಿದೆ. ಉಳಿದವರಿಗಿಂತ ಸೂಕ್ತ ಅಷ್ಟೇ ಉಳಿದವರ ಫೋಟೋ ಸೂಕ್ತವಲ್ಲ ಅಂತಲ್ಲ...

    ReplyDelete
  2. Good one!! and thats another thing that I share with you ... atte mathe shyamala miss nanna vyaktitvada meloo apara prabhava beeriruva mahiLeyaru.

    ReplyDelete