Tuesday, September 18, 2007

ಇಂದಿನ ಬುಲೆಟೆಡ್ ಲಿಸ್ಟು..

ನಮಸ್ಕಾರ.. ಮೊದಲಿಗೆ ಕೆಟ್ಟ ಸುದ್ದಿಗಳು..

--> ಇವತ್ತು ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಮಳೆ ವಾತಾವರಣದಲ್ಲಿ ಸಿಗರೇಟು ಸೇದುತ್ತಾ, ಹೊಗೆಯನ್ನು ನನ್ನ ಮೂಗಿಗೇ ಬಿಡುತ್ತಿದ್ದ. ಅವನ ನಾಲಿಗೆಗೆ ಲಕ್ವಾ ಹೊಡೆಯಲಿ. ಪಬ್ಲಿಕ್ ಸ್ಥಳಗಳಲ್ಲಿ ಸಿಗರೇಟು ಸೇದುವವರಿಗೆಲ್ಲರ ನಾಲಿಗೆಗೂ ಲಕ್ವಾ ಹೊಡೆಯಲಿ.

--> ಮೆಜೆಸ್ಟಿಕ್‍ನಲ್ಲಿ ಬಸ್ ಇಳಿದ ತಕ್ಷಣ ಪ್ರಯಾಣಿಕನೊಬ್ಬ ಟ್ರಿಮ್ಮಾಗಿ ದಿರಿಸನ್ನು ಹಾಕಿಕೊಂಡು ಬಾಯಿಂದ ಮುಷ್ಟಿಗಾತ್ರ ಕಫವನ್ನು ಪ್ಲಾಟ್‍ಫಾರಂ‍ ಅಲ್ಲೇ ಉಗುಳಿದ. ಪುಣ್ಯಕ್ಕೆ ನನ್ನ ಕಾಲಿಗೆ ಹಾರಲಿಲ್ಲ. ಅವನ ಬಾಯಿಗೆ ಲಕ್ವಾ ಹೊಡೆಯಲಿ.

--> ಸಂಜೆ ಹನುಮಂತನಗರದಿಂದ ಶ್ರೀನಿವಾಸನಗರಕ್ಕೆ ಹೋಗುವ ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ಪೋಸ್ಟ್ ಆಫೀಸ್ ಮುಂದೆ ಒಂದು ಖಾಲಿ ನಿವೇಷನವಿದೆ. ಎತ್ತರದ ಕಾಂಪೌಂಡು ಕಟ್ಟಿದ್ದಾರೆ. ಆ ಕಾಂಪೌಂಡಿಗೆ ಹತ್ತು ಆದಿ ಮುಂಚೆಯೇ ಮೂತ್ರದ ಕಂಪು ಹರಿದು ಬರುವುದು. ಜನರೆಲ್ಲರೂ ಓಡಾಡುತ್ತಿರುವ ಮುಖ್ಯರಸ್ತೆ ಅದು, ಅಲ್ಲೇ ನಿಂತು ಒಬ್ಬ ಮೂತ್ರವಿಸರ್ಜನೆ ಮಾಡುತ್ತಿದ್ದ. ಅವನ, -- ಬೇಡ ಬಿಡಿ.

ಈಗ ಒಳ್ಳೇ ವಿಷಯಗಳಿಗೆ ಬರೋಣ. ಒಳ್ಳೆಯ ವಿಷಯ ಎಂದು ನಾನು ಪ್ರಾಮಿಸ್ ಮಾಡೋದಿಲ್ಲ. ಯಾರಿಗೋ ಒಳ್ಳೇದಾದರೆ ಇನ್ಯಾರಿಗೋ ಕೆಟ್ಟದ್ದಾಗಿರಬಹುದು.

--> ಸತ್ಯಪ್ರಕಾಶರ ಮನೆಗೆ ಗೂಬೆ ಬಂದುಬಿಟ್ಟಿದೆ ಎಂದು ಬೆಳಿಗ್ಗೆ ಫೋನಿನಲ್ಲಿ ಹೇಳಿದರು. ಪಾಪ, ಗೂಬೆಯ ಗ್ರಹಚಾರ ಚೆನ್ನಾಗಿಲ್ಲ, ತನ್ನ ಮನೆಯನ್ನು ಮನುಷ್ಯ ಸರ್ವನಾಶ ಮಾಡಿದ್ದಾನೆ, ಈಗ ಮನುಷ್ಯರ ಜಾಗಗಳಿಗೇ ಬರಬೇಕಾಗಿದೆ, ಅಲ್ಲದೆ, ಮನುಷ್ಯರಿಂದ "ಅಪಶಕುನ" ಎಂದು ಬೈಸಿಕೊಳ್ಳಬೇಕಾಗಿ ಬೇರೆ! ಮನುಷ್ಯನು ಪ್ರಕೃತಿಯ ಬಹಳ ದೊಡ್ಡ ಅಪಶಕುನ, ಆದರೆ ಅನ್ನುವುದು ಮಾತ್ರ ಎಲ್ಲಾ ಪ್ರಾಣಿಗಳಿಗೆ! ಜೈ ಗೂಬೆ!

--> ಸಾಹಸ ಸಿಂಹನ ಹುಟ್ಟುಹಬ್ಬ. ಸಿಂಹ ನಾಯಕನಾಗಿ ಸುಸ್ತು ಹೊಡೆಯುತ್ತಿರುವುದರಿಂದ ಪೋಷಕ ನಟನ ಕಾರ್ಯ ವಹಿಸಿದರೆ ತನಗಿರುವ ಅತ್ಯದ್ಭುತ ಕಲೆಯನ್ನು ಜಗತ್ತಿನೊಂದಿಗೆ ಹಂಚಿಕೊಂಡು ಇನ್ನಷ್ಟು ಹುಟ್ಟುಹಬ್ಬಗಳನ್ನು ಹೆಮ್ಮೆಯಿಂದ ಆಚರಿಸಿಕೊಳ್ಳಬಹುದು. ಆಲ್ ದಿ ಬೆಸ್ಟ್, ಸಿಂಹ!

--> ಉಪ್ಪಿಯ ಹುಟ್ಟುಹಬ್ಬ. ತೋಪೆದ್ದು ಸುಣ್ಣವಾಗಿರುವ ಉಪೇಂದ್ರ ಹುಟ್ಟುಹಬ್ಬದೊಂದಿಗೆ ತಾಳ್ಮೆಯಿಂದ ಒಳ್ಳೆಯ ಚಿತ್ರದ ಬಗ್ಗೆ ಯೋಚಿಸಿ ನಿರ್ದೇಶಿಸಿ, ಮರೆತೇ ಹೋಗಿರುವ ಯಶಸ್ಸಿನ ರುಚಿಯನ್ನು ಮತ್ತೆ ಕಂಡರೆ ಕನ್ನಡ ಚಿತ್ರರಂಗಕ್ಕೆ ಒಳಿತು. ಆಲ್ ದಿ ಬೆಸ್ಟ್, ಉಪ್ಪಿ.

--> ನಟಿ ಶೃತಿಯ ಹುಟ್ಟುಹಬ್ಬ. ಅಳಿಸಿ, ನಗಿಸಿ ಸಾಕಾಗಿ ರಿಟೈರ್ ಆಗಿದ್ದಾರೆ. ಎಲ್ಲರಿಗೂ ಒಳ್ಳೇದಾಗಲಿ ಎಂಬ ಇವರ ಮನೋಭಾವನೆ ಮೆಚ್ಚಬೇಕಾದ್ದು. ಆಲ್ ದಿ ಬೆಸ್ಟ್, ಕನ್ನಡಿಗರೇ, ಮತ್ತೆ ಬಂದಾರು ಇವರು!

-ಅ
18.09.2007
11PM

7 comments:

 1. modala mooru "lakwa" case-gaLu tamaasheyaagive.. yavdadru doDDa krutigaLna bareyo munche kavigaLu aa devrige, ee devrige, rushigaLige ella namaskara maado thara ;-)

  ಮನುಷ್ಯನು ಪ್ರಕೃತಿಯ ಬಹಳ ದೊಡ್ಡ ಅಪಶಕುನ..
  illa.. naanoppalla idanna.. :)

  next mooru "all the best" wishes-ge no comments...

  ReplyDelete
 2. ಅವನ, -- ಬೇಡ ಬಿಡಿ.
  ha ha ha ....vishya gottaythu :-)

  ಉಪೇಂದ್ರ ಹುಟ್ಟುಹಬ್ಬದೊಂದಿಗೆ ತಾಳ್ಮೆಯಿಂದ ಒಳ್ಳೆಯ ಚಿತ್ರದ ಬಗ್ಗೆ ಯೋಚಿಸಿ ನಿರ್ದೇಶಿಸಿ...
  avnu devraaNegu direct maadthaane...allina varegina thaaLme ninnadaagi...Uppi gintha ruchi bere illa .. :-) Please wait maadi..........

  ReplyDelete
 3. This comment has been removed by the author.

  ReplyDelete
 4. Meshtre... Mast article!
  MaLeli cigar sEdhOr naalige maatra alla, Ky ge kooda lakhva hoDili!! Innond sali cigar na bari angDiyal nOdOk matraa aagbEku!!
  Kafa ugYorge...hmmm...ugyO pipes bandh aagli!! UguLu vapas hoTTege hOgbeku!!!
  3rd case.... BEDA BIDI...

  Amele nimma "JAI GUBE"!!!! ULTIMATE!!!!! Nandondhu JAI!! Paaapa adhu daari tappi hoKKirbEku.. Munche ne gothidre mansha vaasisuva jaaga antha ondh ili koTTidru hOgtirlilla!!

  ReplyDelete
 5. [ಗಂಡಭೇರುಂಡ]
  ೧. ಎಲ್ಲರ ಆಶೀರ್ವಾದ ತೊಗೊಂಡು ಬರೀತೀವಲ್ಲಾ ಹಾಗೇ. ವಂದನಾರ್ಪಣೆ ಥರ!! ಹ ಹ್ಹ ಹ್ಹಾ...

  ೨. ಒಪ್ಪಬೇಡ.

  ೩. ನಿನ್ನ "ನೋ ಕಮೆಂಟ್ಸು" ಕಮೆಂಟ್ಸ್ ಕಾಲಂ ಅಲ್ಲಿ ಬಂದಿರೋದು ಅಚ್ಚರಿಯ ಸಂಗತಿ... :-)

  [ಶ್ರೀಧರ]
  ೧. "ಆ" ವಿಷಯ ಎಲ್ಲಾ ಬೇಗ ಗೊತ್ತಾಗುತ್ತೆ ಅಲ್ವಾ?

  ೨. "ಉಪ್ಪು" ಜಾಸ್ತಿ ಆಗೋಗಿದೆ. ಅದಕ್ಕೆ ನೀರು ಕುಡೀತಾ ಇರೋದು..

  [ಡೈನಮಿಕ್ ದಿವ್ಯಾ]
  ೧. ಶಾಂತಿ ಶಾಂತಿ.. ಅಷ್ಟೊಂದು ಶಾಪ ಹಾಕ್ಬಾರ್ದು.. ನನ್ನ ನೋಡಿ ಕಲಿ, ಶಾಪ ಹಾಕೋಕೆ ಬರಲ್ಲ ನೋಡು ನಂಗೆ.. ;-)

  ೨. ಅದು ದಾರಿ "ತಪ್ಪಿ" ಹೊಕ್ಕಿಲ್ಲ. ದಾರಿ ಇಲ್ಲದೇ ಹೊಕ್ಕಿದೆ..

  ReplyDelete
 6. Shanthi..Shanthi.....? Shaanthi inda sahisiii sahisiii GubegaLu daari ildhe mane hoKKOhaag agtirOdhu....
  Sridhar avr Bhrahma nan yedhru prathyaksha aadre first eee shaanthi na kithkond hOgappaaaa anthini!!!!!! Kelsa maadbekaagirOrella shaaanti japa maadkond kootidaare!!

  ReplyDelete
 7. ಇರಿ, ಶ್ರೀಧರಂಗೆ ಹೇಳ್ತೀನಿ...

  ReplyDelete