Sunday, September 23, 2007

ಮಿಲನ

ಚಿತ್ರ ಚೆನ್ನಾಗಿದೆ. ಇಪ್ಪತ್ತೈದು ವರ್ಷಗಳ ಮುಂಚಿತವಾಗಿ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

ಪುನೀತ್ ರಾಜ್‍ಕುಮಾರ್ ಚಿತ್ರ ಅಂದ ಮೇಲೆ, ಲೈವ್ಲಿ ಡಯಲಾಗ್‍ಗಳು, ಪವರ್ ಫೈಟಿಂಗುಗಳು ಇರಲೇ ಬೇಕೆಂಬ ಸಂಪ್ರದಾಯವು ಮುಂದುವರೆದಿದೆ. ಜೊತೆಗೆ ಹಳೆಯ ಕಥೆಯಾದರೂ ಉತ್ತಮ ಕಥೆಯಿರಬೇಕೆಂಬುದು ರಾಜ್‍ಕುಮಾರ್ ಹಿಸ್ಟರಿಯು ರಿಪೀಟ್ ಆಗಿದೆ.

ಮನೋಮೂರ್ತಿಯವರು ಮುಂಗಾರು ಮಳೆಯ ಸಂಗೀತವನ್ನು ಮುಂದುವರೆಸಿದ್ದಾರೆ. ಕನ್ನಡದ ಹಾಡುಗಾರರು ಅವರಿಗೆ ಸಿಕ್ಕೇ ಇಲ್ಲ. ಸೋನು ನಿಗಮ್ "ನಿಂತಲ್ಲೇ ಹಾಳಾದೆ ನಾ" ಎಂದರೇನೇ ಅವರಿಗೆ ಸಂತೋಷ ಅನ್ನಿಸುತ್ತೆ.

ರಂಗಾಯಣ ರಘು ಭಿಕ್ಷುಕನ ಪಾತ್ರವನ್ನು ಭಿಕ್ಷುಕನಂತೆ ಚೆನ್ನಾಗಿ ಮಾಡಿದ್ದಾರೆ. ಮುಖ್ಯಮಂತ್ರಿ ಚಂದ್ರು ಕ್ಲಾಸ್ ನಟನೆಂಬುದು ಗೊತ್ತಿರುವ ಸಂಗತಿಯೇ ಎಂಬುದನ್ನು ನಿರೂಪಿಸಲು ಅವರಿಗೆ ಅಷ್ಟೊಂದು ಅವಕಾಶವಿಲ್ಲ. ಗಾಂಧಿಗೆ ಎರಡೇ ಡಯಲಾಗ್ ಪಾಪ. ಹೊಸ ನಾಯಕಿ (ಹೆಸರು ಗೊತ್ತಿಲ್ಲ) ಉತ್ತಮವಾದ ಪ್ರಯತ್ನ ಮಾಡಿದ್ದಾರೆ.

ಮ್ಯಾಗಿ ಇಂದ ಹಿಡಿದು ರೇಡಿಯೋ ಮಿರ್ಚಿ ವರೆಗೆ ಸಾಕಷ್ಟು ಜಾಹೀರಾತುಗಳಿಗೆ ಪ್ಲಾಟ್‍ಫಾರಂ ಆಗಿದೆ ಮಿಲನ. ಒಳ್ಳೇದು. ಜಾಹೀರಾತುಗಳಿಂದ ಚಿತ್ರಕ್ಕೆ ಹಣ ಸಿಗುತ್ತೆ, ಹಣದಿಂದ ಒಳ್ಳೇ ಚಿತ್ರಗಳನ್ನು ತೆಗೆಯಬಹುದು. ಆಲ್ ದಿ ಬೆಸ್ಟ್, ಕನ್ನಡ ಚಿತ್ರರಂಗ.



(chitraloka.com ಇಂದ ಈ ಚಿತ್ರವನ್ನು ತೆಗೆದುಕೊಂಡಿದ್ದೇನೆ. ಆ ತಂಡಕ್ಕೆ ಥ್ಯಾಂಕ್ಸ್.)

-ಅ
23.09.2007
11PM

10 comments:

  1. "Ninnindale ninnidale kanasondhu shuruvaagide.... ninnindale ninnidale kanasondhu shuruvaagidhe...."......

    ReplyDelete
  2. ಆ ಹಾಡಲ್ಲೇ ಸೋನು ಮಹಾಶಯ ಹೇಳೋದು, ನಿಂತಲ್ಲೇ ಹಾಳಾದೆ ನಾ.... ಅಂತ..

    ReplyDelete
  3. Adralli avnu..ondsala "ninthalle haaLaade anthaane" innondsala "ninthalle aaLaadhe anthaane"... double game -u.... meticulous listening required...next time keLu gottagutte... :-)

    ReplyDelete
  4. ಹ ಹ್ಹ ಹ್ಹಾ.. ಡಬಲ್ ಗೇಮ್.. ಅಲ್ಲ...

    ಆಳಾಗಿ ಹಾಳಾದೆ ನಾನು ಅಂತ!!

    ReplyDelete
  5. eno ondhu....final gist enu andre.."votnalli aa hudga aaykonda" antha ashte... aaLaagaballavanu arasaagaballa annodanna "aaLaagaballavanu haaLaagaballa" antha heLbodhu :-) he he he

    ReplyDelete
  6. iyyo adene aagli i filmdu ondu haadu keli keli nange monne devara mundhe ganesha dandane hakovaga kuda vidya ganapathi annobadlu ninindale anno haage aaithu
    a Sonu nigam hAAladhe pada na sarige uccharisdno ilvo nanganthu ommege thabibbu agiddu nija
    devra mundhe ninthu aa haade nenapige bandhu nange gothillade bayanalli bandiddu.

    ನಿನ್ ಯಿಂದಲೇ ನಿನ್ ಯಿಂದಲೇ ಕನಸೊಂದು ಶುರುವಾಗಿದೆ
    ನಿನ್ ಯಿಂದಲೇ ನಿನ್ ಯಿಂದಲೇ ಮನಸಿಂದು ಕುಣಿದಾಡಿದೆ
    ಎದೆಯಲ್ಲಿ ಸಿಹಿಯಾದ ಕೋಲಾಹಲ ನನ್ನೆದುರಲ್ಲಿ ನೀ ಹೀಗ ಬಂದಾಗಲೇ........ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಯಿಂದಲೇ........
    thank u so much for this article

    ReplyDelete
  7. ಯಪ್ಪಾ, ದೇವರ ಮನೆಯಲ್ಲೂ ತಪ್ಪುಚ್ಚಾರಣೆಯೇ? ;-)

    ನಿಂತಲ್ಲೇ ಹಾಳಾಗೋ ಹಾಡು ಅಷ್ಟೊಂದು ತಬ್ಬಿಬ್ಬು ಪಡಿಸುತ್ತಾ ಪುಷ್ಪಲತಾ?

    ReplyDelete
  8. mano murthy sangeethada bagge nanagoo ade complaint. avaru Kannada haaDugaararige avakaasha koDuttilla. Idu Mano Murhty avarige maatra seemita aagade idu sarve saamanya aaguvttide

    ReplyDelete
  9. [ಶ್ರೀಕಾಂತ್] ನೋಡದಿದ್ದರೂ ಏನೂ ಲಾಸ್ ಇಲ್ಲ..

    [ಹರೀಶ್] ಹೌದು, ಈಗಿನ ಬಹುಪಾಲು ಸಂಗೀತ ನಿರ್ದೇಶಕರು ಹಾಗೇ ಮಾಡುತ್ತಾ ಇದ್ದಾರೆ.. ವಿಪರ್ಯಾಸ...

    ReplyDelete