Thursday, September 27, 2007

ನಮಸ್ಕಾರ.. ವಾರ್ತಾ ವಿವರ..

ಇದು ವಾರ್ತೆಯ ವಿವರ..

CHENNAI, September 26: Irked by the step-motherly treatment meted out to the Indian hockey players by the central and four state governments, when compared to the sops given to cricketers after their win in the Twenty20 World Cup, the team members have decided to go on a 'hunger strike'.

Speaking to reporters, National Chief Coach, Joaquim Carvalho strongly objected to the announcement of cash awards by the Civil Aviation Minister Praful Patel and the state governments of Maharashtra, Haryana, Jharkhand and Karnataka to the cricketers while ignoring the victory of his wards in the Asian Continental Championship early this month.

"Why our hockey players are orphaned and why our politicians are biased towards Hockey, the national game?", Carvalho asked.

However, "we are grateful ever to the President of India for her sending individual letters congratulating the hockey players for their Asia cup win, without losing a match".

He declared that one coach and four players have planned to go on hunger strike before the Karnataka Chief Minister's house for his announcing Rs five lakh each to the members of the cricket team, while "treating the state hockey players like dust".

Carvalho said "Karnataka CM has not till date congratulated his state hockey players for the Asia Cup win".

"Coach, Ramesh Parameswaran, manager R K Shetty and four players (Vikram Kanth, V R Rahunath, S V Sunil and Ignace Tirkey, who was recently adjudged for the Ekalaywa Award by the Karnataka Government) are to go on hunger strike before the Karnataka Chief Minister's house', he said.


ಇವರಿಗೆ ನಮ್ಮ "ವಾರ್ತಾ" ತಂಡದವರಿಂದ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದೇವೆ. ಮುಖ್ಯಮಂತ್ರಿ ಎಂಬ ಖುರ್ಚಿಬಾಕನಿಗೆ ಬಹುಶಃ ಹಾಕಿ ಆಟದಲ್ಲಿ ನಮ್ಮ ದೇಶದವರು ಗೆದ್ದರು ಎಂಬ ಪರಿವೇ ಇಲ್ಲ ಅನ್ನಿಸುತ್ತೆ, ಅಥವಾ ಹಾಕಿ ಅಂತ ಒಂದು ಆಟ ಇದೆ ಅನ್ನೋದೂ ಗೊತ್ತಿಲ್ಲ ಅನ್ನಿಸುತ್ತೆ.

ಕ್ರಿಕೆಟ್ಟನ್ನು ಅಟ್ಟದ ಮೇಲೆ ಕೂರಿಸೋ ಅವಶ್ಯಕತೆ ಇಲ್ಲ. ಅವರು ಚೆನ್ನಾಗಿ ಆಡಿದರು, ಅದಕ್ಕೆ ಗುಡ್. ಚಪ್ಪಾಳೆ. ಅವರಿಗೆ ಏನು, ಹೇಗೆ ಪಾಲನೆ ಪೋಷಣೆ ಮಾಡುತ್ತಿದೆಯೋ ಸರ್ಕಾರ, ಅದೇ ಪಾಲನೆ ಪೋಷಣೆಯನ್ನು ಎಲ್ಲಾ ಆಟಗಳಿಗೂ ಮಾಡಲಿ.

ಹಾಕಿ ಒಂದೇ ಅಲ್ಲ, ಅಥ್ಲೆಟಿಕ್ಸು, ಈಜುಗಾರಿಕೆ, ಟೆನ್ನಿಸ್ಸು, ಫುಟ್‍ಬಾಲ್ - ಎಲ್ಲಕ್ಕೂ ಸಮವಾದ ಪ್ರೋತ್ಸಾಹ ನೀಡಲಿ. ಚದುರಂಗದಲ್ಲಿ ಎಷ್ಟೋ ವರ್ಷದಿಂದ ನಮ್ಮ ದೇಶದ ವಿಶ್ವನಾಥನ್ ಆನಂದ್ ಅಗ್ರಸ್ಥಾನದಲ್ಲಿದ್ದಾರೆ. ಅವರ ಬಗ್ಗೆ ಒಮ್ಮೆಯೂ ದೇಶದ ನಾಯಕರೆನಿಸಿಕೊಂಡ ಗೋಮುಖ ವ್ಯಾಘ್ರರು ಮಾತನಾಡಿಲ್ಲ. ಬಾಯ್ತೆರೆಯಲು ಆ ಆಟದ ಬಗ್ಗೆ ಗೊತ್ತಿದ್ದರಲ್ಲವೇ. ಕ್ರಿಕೆಟ್ಟು ಮನರಂಜನೆ ನೀಡುತ್ತೆ, ಅದಕ್ಕೆ ಬಾಯ್ ಬಾಯಿ ಬಿಟ್ಕೊಂಡು ನೋಡಿರ್ತಾರೆ, ಹಣ ಇವರ ತಾತನ ಮನೇದು ಅನ್ನೋ ಥರ ಸ್ಯಾಂಕ್ಷನ್ ಮಾಡ್ಬಿಡ್ತಾರೆ - ಅದೂ ಕೋಟಿ ಲೆಕ್ಕದಲ್ಲಿ!!

ಇಲ್ಲಿಗೆ ವಾರ್ತಾ ಪ್ರಸಾರ ಸಧ್ಯಕ್ಕೆ ಮುಕ್ತಾಯವಾಯಿತು, ಮುಂದೆ ಈ 'ನಾಯಕರ' ಸರ್ವನಾಶ ಆದಷ್ಟು ಬೇಗ ಆಗಲಿ ಎಂದು ಆಶಿಸುತ್ತಾ ಮತ್ತೆ ಭೇಟಿ ಆಗೋಣ, ಮುಂದಿನ ವಾರ್ತಾ ಪ್ರಸಾರದಲ್ಲಿ. ಅಲ್ಲಿಯ ವರೆಗೂ ಹ್ಯಾವ್ ಎ ನೈಸ್ ಟೈಮ್.. (ಬೆಳಗೆರೆ ಧ್ವನಿಯಲ್ಲಿ ಓದ್‍ಬೇಡಿಪ್ಪಾ...)

-ಅ
27.09.2007
12.45AM

6 comments:

 1. ಮುಂದೆ ಈ 'ನಾಯಕರ' ಸರ್ವನಾಶ ಆದಷ್ಟು ಬೇಗ ಆಗಲಿ ಎಂದು ಆಶಿಸುತ್ತಾ ಮತ್ತೆ ಭೇಟಿ ಆಗೋಣ.....

  yes aa nayakara shokacharaNeyalli hemmeyinda paalgoLLoNa..... barthya allva??

  ReplyDelete
 2. nimma vaarta vishleshane bahaLa chennaagide. :)

  ReplyDelete
 3. I totally agree ... Chak de movie nodilva !!!!
  aadroo ... kade sentence na belegere voice nalli odade irodu kashta :-)

  ReplyDelete
 4. ನಾಯಕರ ತಪ್ಪಿದೆ ನಿಜ ಆದರೆ ನಾಯಕರು ಮಾತ್ರ ತಪ್ಪು ಮಾಡಿಲ್ಲ. ಕ್ರಿಕೆಟ್ ಪಟುಗಳನ್ನು ತಲೆಯಮೇಲೆ ಕೂರಿಸಿಕೊಂಡಿರುವರು, ಬೇರೆ ಆಟ ಆಡುವವರನ್ನು ಕಡೆಗಣಿಸಿರುವವರು ಮುಖ್ಯವಾಗಿ ಮಾಧ್ಯಮದವರು - ಮೀಡಿಯಾ. ಸ್ವಲ್ಪ ಪಾಲು ಜನರದ್ದೂ ಇದೆ. T20 ಕಪ್ ಗೆದ್ದಾಗ ಅರ್ಧ ವಾರ್ತಾ ಪತ್ರಿಕೆ ಕ್ರಿಕೆಟ್ ವಿಷಯವೇ, ಅದರಲ್ಲಿ ನೂರಕ್ಕೆ ತೊಂಭತ್ತು ಭಾಗ ಭಾರತದ ವಿಷಯ. ಹಾಕಿ ಕಪ್ ಗೆದ್ದಾಗ ಎಷ್ಟು ಪುಟ ಬರೆದಿದ್ದರು ಅದರ ಬಗ್ಗೆ? ದೂರದರ್ಶನ ವಾಹಿನಿಗಳು ಎಷ್ಟು ಘಂಟೆ ಅದರ ವಿಷಯ ಪ್ರಸಾರ ಮಾಡಿದವು?

  ಹಳ್ಳಿ-ಹಳ್ಳಿಗಳಲ್ಲೂ ಕಪಿಲ್ ದೇವ್, ಗವಾಸ್ಕರ್, ತೆಂಡೂಲ್ಕರ್, ಗಂಗೂಲಿ, ದ್ರಾವಿಡ್, ಧೋನಿ... ಧನರಾಜ್ ಪಿಳ್ಳೈ ಹೆಸರು ಎಷ್ಟು ಜನಕ್ಕೆ ಗೊತ್ತು?

  ReplyDelete
 5. ಹೌದು.. ಒಪ್ಪಿದೆ.. ನನ್ನ ಬೆಂಬಲವೂ ಇದೆ ಆ ಹಾಕಿ ಪಟುಗಳಿಗೆ.. ಅಷ್ಟು ಕಡೆಗಣಿಸಬಾರದಿತ್ತು ಯಾರನ್ನೂ..

  ReplyDelete
 6. [ಶ್ರೀಧರ] ಹ್ಞೂಂ ಕಣಪ್ಪಾ.. ಮೊದಲು ನಾನೇ ಬರೋದು. ಆ ಖುಷಿಯಲ್ಲಿ ಒಳ್ಳೇ ಕಾಪಿ ಹೊಡೆಯೋಣ..

  [ಹರೀಶ್] ಧನ್ಯವಾದಗಳು ಸರ್..

  [ವಿಜಯಾ] ಬೆಳಗೆರೆ ಆಗಾಗ್ಗೆ ನೆನಪಾಗ್ತಾ ಇರ್ತಾರೆ..

  [ಶ್ರೀಕಾಂತ್] ಧನರಾಜ್ ಪಿಳ್ಳೈಯನ್ನೂ ಗೊತ್ತಾಗಿಸುವ ಕೆಲಸವು ಇನ್ನು ಮುಂದೆ ಮಾಧ್ಯಮದವರು ಮಾಡಲಿ.

  [ಗಂಡಭೇರುಂಡ] ಬೆಂಬಲಕ್ಕೆ ಧನ್ಯರು ಉಳಿದ ಆಟಗಾರರು...

  ReplyDelete