Thursday, September 27, 2007

ಪಯಣದ ಹಾದಿಯಲ್ಲಿ..

ಪಯಣ ಮಾಡಲು ಆರಂಭಿಸಿ ಏಳು ವರ್ಷಗಳಾಗುತ್ತಾ ಬಂತು. ಎಷ್ಟೆಷ್ಟು, ಏನೇನು ಜಾಗಗಳಿಗೆ ಪಯಣ ಮಾಡಿದ್ದೇನೆ ಅಂತ ಒಂದು ಪಟ್ಟಿ ಮಾಡಿಲ್ಲ. ಮಾಡ್ಬೇಕು. ಬಹುಶಃ ಇನ್ನೊಂದು ನಲವತ್ತು ವರ್ಷದಲ್ಲಿ ಮಾಡಿ ಮುಗಿಸ್ಬಿಡ್ತೀನಿ ಆ ಲಿಸ್ಟ್ ಅನ್ನು.

ಪಯಣದ ಹಾದಿಯಲ್ಲಿ ಪ್ರಕೃತಿಯ ಸೊಬಗನ್ನು ಸವಿದಿದ್ದೇನೆ, ಬೆಟ್ಟ-ಗುಡ್ಡ-ಗಿಡ-ಮರ-ಹಕ್ಕಿ-ಪ್ರಾಣಿ-ಹುಳು-ಜಿಗಣೆ-ಜಲಧಾರೆ-ನದಿ-ಕಡಲು-ಹಿಮ-ಮಂಜು-ಹೂವು-ಮುಗ್ಧ ಜನ- ಎಲ್ಲದರ ವಿಸ್ಮಯವನ್ನು ಮನಗಂಡಿದ್ದೇನೆ, ಮನುಷ್ಯನ ಕಲೆಯ ವೈಭವವನ್ನು ಕಂಡು ಬೆರಗಾಗಿದ್ದೇನೆ, ಪ್ರಾಣಾಪಾಯದಿಂದ ಪಾರಾಗಿದ್ದೇನೆ, ಸಾಹಸ ಮಾಡಿದ್ದೇನೆ - ಮಾಡಿಸಿದ್ದೇನೆ - ಇನ್ನು ಮುಂದೆಯೂ ಇವೆಲ್ಲವೂ ಸಾಗುತ್ತಿರುತ್ತೆ. ಉಸಿರಿರುವ ವರೆಗೂ.. ಜಗತ್ತಿನ ವಿಸ್ಮಯವನ್ನು ಬಾಳಿನುದ್ದಕ್ಕೂ ಬದುಕಿನುದ್ದಕ್ಕೂ ನನ್ನ ಸಹಪಯಣಿಗನನ್ನಾಗಿಸಿಕೊಂಡಿರುತ್ತೇನೆ. ಪಯಣದ ಹಾದಿ ಸಾಹಸಮಯವಾದಷ್ಟೂ ಆಕರ್ಷಣೆ ಹೆಚ್ಚುತ್ತೆ. ಸಾಹಸಮಯ ಪಯಣವು ನನ್ನೊಡಲಲ್ಲಿ ಲೀನವಾಗಿ ಹೋಗಲಿ!

ಇಂದು ವಿಶ್ವ ಪ್ರವಾಸೋದ್ಯಮ ದಿನ!

ಪ್ರವಾಸೋದ್ಯಮವು ನನಗೆ ಅನ್ನ ಕೊಟ್ಟಿದೆ, ಮನಸ್ಸಿಗೆ ಮುದವನ್ನು ಕೊಟ್ಟಿದೆ, ಜನ್ಮಬಂಧುಗಳನ್ನು ಕೊಟ್ಟಿದೆ - ಇದಕ್ಕೆ ನಾನು ಈ ಉದ್ಯಮಕ್ಕೆ ಚಿರಋಣಿ.

ಇಡೀ ವಿಶ್ವವೇ ನಮ್ಮ ಪಯಣದ ಪರಿಧಿಯಾಗಿರಲಿ.. ನಾವು ಪಯಣಿಗರೂ ಇಡೀ ವಿಶ್ವಕ್ಕೆ ಸೇರಿದವರು, ಜಗತ್ತು ಎಲ್ಲರನ್ನೂ ಹರಸಲಿ!!

-ಅ
27.09.2007
10.20PM

8 comments:

  1. Happy Pravaasodyama day :-) 40varshagaLalli alla... innu 4 varshagaLallli ellelli tirgaadidya antha list maadu...next generation ge help aagutte.... Nijvaaglu...encylopedia maadbodhu...enanthya??

    ReplyDelete
  2. ನಿನ್ ಸೈಕಲ್ ಹಿಡ್ಕೋಬೇಕಾ?

    ReplyDelete
  3. Nan Cycle maarbitte..ellinda hidkotya???

    ReplyDelete
  4. ಬರೀರಿ... ನಮಗೂ ಹೆಲ್ಪ್ ಆಗುತ್ತೆ :)

    ReplyDelete
  5. [ಶ್ರೀಧರ] ಡಬಲ್ ಮೀನಿಂಗ್ ಎಲ್ಲಾ ಇಲ್ಲಿ ನಿಷಿದ್ಧ

    [ಎಂ.ಜಿ. ಹರೀಶ್] ನಿಮ್ಮ ಪ್ರೋತ್ಸಾಹ ಇದ್ರೆ ಖಂಡಿತ ಬರೀತಾನೆ ಶ್ರೀಧರ.

    ReplyDelete
  6. ಎಲ್ಲರಿಗೂ ಪ್ರವಾಸೋದ್ಯಮ ದಿನದ ತಡವಾದ ಶುಭಾಶಯಗಳು... :) ತಡವಾಗಿ wish ಮಾಡಿದ್ದಕ್ಕೆ ಕ್ಷಮೆ ಇರಲಿ.. ನನಗೂ ಪ್ರವಾಸಗಳು ಬಹಳ ಮುದ-ಮದ ಎಲ್ಲ ನೀಡಿವೆ.. ಇನ್ನೂ ಬಹಳ ಇದೆ-ತಿರುಗಾಡೋಕ್ಕೆ... ನಿನ್ನ list ತಯ್ಯಾರು ಮಾಡಪ್ಪ ಅರುಣ.. ನನಗಂತೂ ಬಹಳ ಉಪಯೋಗವಾಗುತ್ತೆ ಅದು... :)

    ReplyDelete
  7. [Parisarapremi]: Doubki double meaning nishidda illa antha naan bhaavistheeni.... ;-)

    ReplyDelete
  8. belated wishes!!!
    yello nin kaalalli chakra ide ... antha baiskonde beLididdalva ... eega aa chakrakke avaagavaaga break haakoru jaasti ... aadroo... chakra tirugabekalla ... jothege nanoo nu :-) ... baduku nillada payana.

    ReplyDelete