Thursday, October 4, 2007

ಚತುರ್ಮುಖ..

ಇಬ್ಬರೊಡಗೂಡಿಸಿದರೆ.....

ನಾನು - ಶ್ರೀಧರ

ಪ್ರಯಾಣ ಬಹು ಮುಖ್ಯವಾದ ಹವ್ಯಾಸ, ಕಾಫಿ ಎಂದರೆ ಮೈಯೆಲ್ಲಾ ಬಾಯಿ, ಪುಸ್ತಕ ಓದೋದು ಬದುಕಿನ ಬಹು ದೊಡ್ಡ ಆದ್ಯತೆಗಳಲ್ಲೊಂದು, ಶ್ರೀಧರನ ನ್ಯಾಷನಲ್ ಕಾಲೇಜಿನ ಭಾಷೆಗೂ ನನ್ನ ಆಚಾರ್ಯ ಪಾಠಶಾಲೆ ಭಾಷೆಗೂ ಅಷ್ಟೇನೂ ವ್ಯತ್ಯಾಸ ಇಲ್ಲ.

ಶ್ರೀಧರ - ಶ್ರೀಕಾಂತ

ಸ್ವಚ್ಛ ಕನ್ನಡ ಬರಹಗಾರರು, ಮೌನ ಸಮಯದಲ್ಲಿ ಬಲುಮೌನಿಗಳು, ಚಾರಣಾಸಕ್ತರು, ತಮ್ಮ ಲೋಕದಲ್ಲಿ ತಾವು ಲೀನವಾಗುವ ಸಾಮರ್ಥ್ಯವುಳ್ಳವರು.

ಶ್ರೀಕಾಂತ - ಶ್ರೀನಿವಾಸ

ಸಕ್ಕದಪ್ರಿಯರು, ತತ್ವಶಾಸ್ತ್ರಾಭಿಮಾನಿಗಳು, ಚಾರಣಾಸಕ್ತರು, ಅಪ್ರತಿಮ ಲೇಖಕರು, ತರ್ಕಸ್ವಭಾವದವರು, ಮೇಲ್ಪೇಳ್ದಂತೆ ತಮ್ಮ ಲೋಕದಲ್ಲಿ ತಾವು ಲೀನವಾಗುವ ಸಾಮರ್ಥ್ಯವುಳ್ಳವರು.

ಶ್ರೀನಿವಾಸ - ಶ್ರೀಧರ

ಒಟ್ಟಿಗೇ ವ್ಯಾಸಂಗ ಮಾಡಿದವರು, ಉತ್ತಮ ಬರಹಗಾರರು, ಕನ್ನಡಾಭಿಮಾನಿಗಳು, ಪ್ರೇಮಚಿತ್ತರು, ಚಾರಣಾಸಕ್ತರು, ಒಬ್ಬ ಕಾಫಿ ಇನ್ನೊಬ್ಬ ಟೀ - ಒಟ್ಟಿನಲ್ಲಿ ಉತ್ತೇಜನಾರ್ಥಿಗಳು.

ಶ್ರೀಕಾಂತ - ನಾನು

ಒಟ್ಟಿಗೇ ಪಾಠ ಕಲಿತವರು, ಒಟ್ಟಿಗೇ ಪಾಠ ಹೇಳಿಕೊಟ್ಟವರು, ಒಟ್ಟಿಗೇ ಚಾರಣ ಮಾಡುವವರು, ಬರೆಯುವ, ಓದುವ ಹಂಬಲವನ್ನು ಹೊತ್ತವರು.

ಶ್ರೀನಿವಾಸ - ನಾನು

ಕಾವ್ಯಪ್ರೇಮಿಗಳು, ಚಾರಣ ಪ್ರೇಮಿಗಳು, ಸಂಗೀತಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು.

ಇಬ್ಬಿಬ್ಬರನೊಡಗೂಡಿಸಿದರೆ...

ಶ್ರೀಕಾಂತ, ಶ್ರೀಧರ - ಶ್ರೀನಿವಾಸ, ನಾನು

ಇವರು ರಾತ್ರಿ ಎಷ್ಟು ಹೊತ್ತು ಬೇಕಾದರೂ ಎದ್ದಿರುತ್ತಾರೆ, ನಾವು ಹಾಗಲ್ಲ ನಮಗೆ ಅಷ್ಟೊಂದು ತಾಕತ್ ಇಲ್ಲ ಬಿಡಿ. ಇವರಿಬ್ಬರಿಗೂ ವೃತ್ತಿಯಿಂದ ರಾತ್ರಿ ಕೆಲಸ ಮಾಡಿ ಅನುಭವವಿದೆ. ಅವರು ಗದ್ಯದಲ್ಲಿ ಹೆಚ್ಚು comfortable ಆಗಿದ್ದರೆ ನಾವು ಗದ್ಯಕ್ಕಿಂತ ಪದ್ಯದಲ್ಲಿ ಹೆಚ್ಚು ಆನಂದ ಪಡುವುದು ಅಭ್ಯಾಸ.

ಶ್ರೀಧರ, ಶ್ರೀನಿವಾಸ - ನಾನು, ಶ್ರೀಕಾಂತ

ಒಟ್ಟಿಗೇ ಓದಿದವರು ಇವರು, ಒಟ್ಟಿಗೇ ಒಂದು ವರ್ಷ ಐ ಐ ಎಚ್ ಟಿ ಅಲ್ಲಿದ್ದೂ ನಂತರ ಇನ್ಸ್ಟಿಟ್ಯೂಟ್ ನಡೆಸಿದವರು ನಾವು. ನಾವು ಇವರಿಬ್ಬರಿಗೆ ಹೋಲಿಸಿದರೆ ಅನೇಕ ಚಾರಣಗಳನ್ನು ಮಾಡಿದ್ದೇವೆ, ಕಾಲು ಹೊರಗೆ ಚಾಚಲು ಸದಾ ಸಿದ್ಧ!

ಶ್ರೀನಿವಾಸ, ಶ್ರೀಕಾಂತ - ಶ್ರೀಧರ, ನಾನು

ಎರಡು ಗುಂಪೂ ಸಂಸ್ಕೃತಪ್ರಿಯರು - ಆದರೆ ಅವರ ಸಂಸ್ಕೃತವೇ ಬೇರೆ, ನಮ್ಮ ಸಂಸ್ಕೃತವೇ ಬೇರೆ!!


-ಅ
04.10.2007
1.40AM

8 comments:

 1. ನನ್ನ ಬಗ್ಗೆ ಬರೆದಿರುವಾಗ ನಾನೇ ಏನು ಕಾಮೆಂಟ್ ಹಾಕಬಹುದೋ ಗೊತ್ತಿಲ್ಲ... ಆದರೂ ಒಂದಷ್ಟು ಹೇಳ್ತೀನಿ...

  ಕಾಫಿ ಎಂದರೆ ಮೈಯೆಲ್ಲಾ ಬಾಯಿ - ಸಿಕ್ಕಾಪಟ್ಟೆ ನಗು ಬಂತು... ಯಪ್ಪಾ, ಏನು ಕಾಫಿ ಹುಚ್ಚರೂ!

  ಶ್ರೀಕಾಂತ - ಶ್ರೀನಿವಾಸ - ಅಪ್ರತಿಮ ಲೇಖಕರು - ಶ್ರೀನಿವಾಸ ಇರಬಹುದು... ಆದರೆ ನಾನು ಅಪ್ರತಿಮ ಲೇಖಕನಾ? ಜೋಕ್ ಮಾಡ್ತಿದೀಯಾ?

  ಶ್ರೀಕಾಂತ, ಶ್ರೀಧರ - ಶ್ರೀನಿವಾಸ, ನಾನು - ಇವರು ರಾತ್ರಿ ಎಷ್ಟು ಹೊತ್ತು ಬೇಕಾದರೂ ಎದ್ದಿರುತ್ತಾರೆ, ನಾವು ಹಾಗಲ್ಲ ನಮಗೆ ಅಷ್ಟೊಂದು ತಾಕತ್ ಇಲ್ಲ ಬಿಡಿ. - ತಾಕತ್ ನಮಗೂ ಇಲ್ಲ. ನೈಟ್ ಶಿಫ್ಟ್ ಗೆ ಹಾಕಿದ್ರೆ ತಾಕತ್ ಇಲ್ದಿದ್ರೂ ಎದ್ದಿರ್ಬೇಕು... ಅಲ್ವಾ ಶ್ರೀಧರ?

  ನಾನು, ಶ್ರೀಕಾಂತ - ಕಾಲು ಹೊರಗೆ ಚಾಚಲು ಸದಾ ಸಿದ್ಧ - ಅಮೇದಿಕಲ್, ಎತ್ತಿನಭುಜಕ್ಕೆ ಯಾವಾಗ ಹೋಗೋಣ?

  ಶ್ರೀನಿವಾಸ, ಶ್ರೀಕಾಂತ - ಶ್ರೀಧರ, ನಾನು - ಎರಡು ಗುಂಪೂ ಸಂಸ್ಕೃತಪ್ರಿಯರು - ಆದರೆ ಅವರ ಸಂಸ್ಕೃತವೇ ಬೇರೆ, ನಮ್ಮ ಸಂಸ್ಕೃತವೇ ಬೇರೆ!! - ಶ್ರೀಧರ ಹೇಳೋ ಹಾಗೇ "ಅವರವರ ಭಾವಕ್ಕೆ..."

  ReplyDelete
 2. ಶ್ರೀನಿವಾಸ, ಶ್ರೀಕಾಂತ - ಶ್ರೀಧರ, ನಾನು

  ಎರಡು ಗುಂಪೂ ಸಂಸ್ಕೃತಪ್ರಿಯರು - ಆದರೆ ಅವರ ಸಂಸ್ಕೃತವೇ ಬೇರೆ, ನಮ್ಮ ಸಂಸ್ಕೃತವೇ ಬೇರೆ!!

  idanna nodi sikkapatte santhosha aaythu...ha ha ha....nam samskruthaane bere.... adara baLake ivrugaLa mundhe maadidre kaNNalli raktha kaarkondbidthaare ;-)


  @srikanth : yes..taakath ildidru edd koothirbeku gooebgaLa thara.... nan prakaara nange night shift poorvajanmada paapashesha...uLkondbittide...shaanthi maadisteeni... aadast bega...  Konedaagi ee haad haadbeku ansthaa idhe..."Naavellaru onde jaathi..onde matha onde kula...naavu manujaru!! naavu manujaru!!!!...naavu manujaru!!!! "

  ReplyDelete
 3. ah! super permutations maaraaya... ella tumba ishTa aitu.. tumba vibhinnavaagide.. chennagide lekhana...
  nanderaDu points-u:
  1) @Srikanth (& arun): "ಅಪ್ರತಿಮ ಲೇಖಕರು - ಶ್ರೀನಿವಾಸ ಇರಬಹುದು... ಆದರೆ ನಾನು ಅಪ್ರತಿಮ ಲೇಖಕನಾ? ಜೋಕ್ ಮಾಡ್ತಿದೀಯಾ?" ayyaa.. swami.. naanu yaava angle alli "apratima"naagi kaaNtini? he he he ;)) nange nagu bantu idanna nodi.. and neevu yavdralli kammi? neevu chennagi bariyalla anta heLdorna nange torsi.. mundakke naanu nodkotini ;)

  2) aruna... nanna "yoga" aasakti illi ellu kaaNtilla :(

  kaDeyalliro aa photo superaagide.. :)

  ReplyDelete
 4. @ಶ್ರೀಧರ - ನೀವಿಬ್ರೂ ಯಾವುದನ್ನು ಸಂಸ್ಕೃತ ಅಂತ ಅಂದುಕೊಂಡಿದ್ದೀರೋ ಗೊತ್ತಿಲ್ಲ. ಈ ಪ್ರಪಂಚದಲ್ಲಿ ಇರೋದು ಒಂದೇ ಸಂಸ್ಕೃತ. ಅದು ಪ್ರಾಚೀನ ಕಾಲದಿಂದ ಬಂದಿದ್ದು. ನಾನು, ಶ್ರೀನಿವಾಸ ಅದನ್ನೇ ಸಂಸ್ಕೃತ ಅಂತ ಕರಿಯೋದು. ನಾನೇನೋ ಇಷ್ಟೇಲ್ಲಾ ಕಥೆ ಬರಿಯೋದು ಬೇಡ ಅಂತ "ಅವರವರ ಭಾವಕ್ಕೆ..." ಅಂತ ಬರ್ದ್ರೆ ಅದನ್ನ ನೋಡಿ ಸಂತೋಷ ಆಗತ್ತಾ? ಇಂಥ ದುರವಸ್ಥೆ ಏಕೆ ನಿನಗೆ?

  "ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣಭಾರತೀ"

  ReplyDelete
 5. @sridhara: "nam samskruthaane bere.... adara baLake ivrugaLa mundhe maadidre kaNNalli raktha kaarkondbidthaare"

  aaahahahaha.... thu ninna.. naachke aagalva haage heLakke? ;)
  adu "samskruta" avlo.. adu "asamskruta"... so, ee vishayadalli namma eradu gumpugaLige iro common factor tegedare adanna "samskruta (a+1)" anta maaDbodu nodu :D

  ReplyDelete
 6. [ಶ್ರೀಧರ] ನಾವು ಮನುಜರೂ... ನಾವು ಮನುಜರೂ...

  [ಗಂಡಭೇರುಂಡ] ಯೋಗ ಮಾಡೋ ಯೋಗ ಇರೋದು ನಿನಗೊಬ್ಬನಿಗೇ ನೋಡು. ಅದಕ್ಕೇ ಅದನ್ನ ಬರ್ದಿಲ್ಲ.

  [ಶ್ರೀಕಾಂತ] ನಮ್ಮದೊಂಥರಾ ಸಂಸ್ಕೃತ.

  [ಗಂಡಭೇರುಂಡ ಮತ್ತೊಮ್ಮೆ] a + 1 ಅಂತೆ, ಕರ್ಮ! ಜಗತ್ತಿನ ಅತಿ ದೊಡ್ಡ ಪಿ.ಜೆ.!!!

  ಫೋಟೋ ಸಕ್ಕತ್ತಾಗಿದೆ ಅಲ್ವಾ?

  ReplyDelete
 7. @Srinivasa : dabba fellow a+1 anthe...PJ master ..UHONA!!!... UHONA!!!!

  ReplyDelete