Monday, October 8, 2007

ಹುಟ್ಟಿದವರೆಲ್ಲ ಸಾಯದೇ ನಿಲ್ಲೆ..

ಶೃಂಗೇರಿಯಿಂದ ಬರುವಾಗ ಐ-ಪಾಡ್ ಅಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿಯವರ "ನಿನ್ನುವಿನಾ ನಾಮದೆಂದು..." ಕೇಳುತ್ತಾ ಇದ್ದಾಗ ಯಾವುದೋ ಲೋಕದೊಳಗೆ ಕಳೆದು ಹೋಗಿದ್ದಾಗ ಕೆಲವು ಆಲೋಚನೆಗಳು ಬಂದವು.

ಈ ವಿಶ್ವವು ಯಾರ ಹುಟ್ಟನ್ನೂ, ಯಾರ ಸಾವನ್ನೂ ಲೆಕ್ಕವಿಟ್ಟಿಲ್ಲ. No one is indespensible in this universe. ಬದಿಗಿಡೋಣ ಈ ವಿಷಯವನ್ನು.

ಈ ಕೆಲವರಿಗೆ ಸಾವು ಯಾಕೆ ಬರುತ್ತೋ ಅಂತ ಅನ್ನಿಸುತ್ತೆ. ದೇಶಕ್ಕಾಗಿ ನಿಜವಾಗಿಯೂ ದುಡಿದ ಮೇಜರ್ ಸಾವಿನ ವಿಷಯವನ್ನು ಪತ್ರಿಕೆಯಲ್ಲಿ ಮೊನ್ನೆ ಓದಿದಾಗ, ಈ ಹಾಳಾದ್ದು ಸಾವು ಅಧಿಕಾರ ಕೊಡಿ ಅಧಿಕಾರ ಕೊಡಿ ಅಂತ ಅರಚಾಡುತ್ತಿರುವವನನ್ನು, ಅಧಿಕಾರ ಕೊಡಲ್ಲ ಅಧಿಕಾರ ಕೊಡಲ್ಲ ಅಂತ ತನ್ನ ತಾತನ ಮನೆಯ ಆಸ್ತಿಯಂತೆ ವರ್ತಿಸುತ್ತಿರುವವನನ್ನು, ನಿದ್ದೆ-ಮುದ್ದೆಗಳೇ ಸಾಧನೆಯೆಂದು ಇಷ್ಟ ಬಂದ ಹಾಗೆ ನಿರ್ಣಯಗಳನ್ನು ತೆಗೆದುಕೊಳ್ಳುತಿರುವ ದಡ್ಡಶಿರೋಮಣಿಯನ್ನು ಏಕೆ ಕೊಂಡೊಯ್ಯುತಿಲ್ಲ? ಪಾಪಿ ಚಿರಾಯು!! ಆದರೆ ಯಾವಾಗ್ಲಾದ್ರೂ ಬಂದೇ ಬರುತ್ತೆ ಸಾವು. ನನ್ನ ಪ್ರಶ್ನೆಯೆಂದರೆ, ಈ ಅಕಾಲ ಮೃತ್ಯು ಇವರುಗಳಿಗೆ ಬರೋದೇ ಇಲ್ಲ. ಕಡೇ ಪಕ್ಷ ಒಂದು ಸಣ್ಣ ಹೃದಯ ಬೇನೆ? ಛೆ!! ಆದಷ್ಟು ಬೇಗ ಬರಲಿ.

ಈ ಸಾವು ಕೆಲವು ವ್ಯಕ್ತಿಗಳಿಗೆ ಯಾಕಾದರೂ ಬಂದಿತೋ ಏನೋ! ಎಂ.ಎಸ್. ಸುಬ್ಬುಲಕ್ಷ್ಮಿ, ಮಹಾತ್ಮಾ ಗಾಂಧಿ, ಆಲ್ಬರ್ಟ್ ಐಸ್ಟೈನ್, ಕುವೆಂಪು, ರಾಜ್‍ಕುಮಾರ್, ಇವರೆಲ್ಲಾ ಯಾಕೆ ಸತ್ತರು? ಛೆ, ಸಾವು ಬರಲೇ ಬಾರದಿತ್ತು ಇವರುಗಳಿಗೆಲ್ಲಾ ಅಂತ ಆಗಾಗ್ಗೆ ಅನ್ನಿಸುತ್ತಿರುತ್ತೆ. ಆದರೆ ಸೃಷ್ಟಿನಿಯಮ!!

ನೀವೂ ಸಾಯಬೇಕು, ನಾನೂ ಸಾಯಬೇಕು..

ಹುಟ್ಟಿದವರೆಲ್ಲ ಸಾಯದೇ ನಿಲ್ಲೆ, ಹೊಸತಾಗಿ ಹುಟ್ಟುವರ್ಗೆಡೆಯೆಲ್ಲಿ - ಮಂಕುತಿಮ್ಮ!

-ಅ
08.10.2007
6.50AM

17 comments:

 1. ee kittuhogiro raajakaaraNigaLigu last alli heLiro antha mahaan vyaktigaLigu "ettaNindettaNa hOlike ayya?"!!!

  ಕಡೇ ಪಕ್ಷ ಒಂದು ಸಣ್ಣ ಹೃದಯ ಬೇನೆ? ಛೆ!! ಆದಷ್ಟು ಬೇಗ ಬರಲಿ.
  naanu kooda poorNa manassinda idanne bayastini.. ee shaapa khanDita tagulali avrige..

  aa last line-kagga full Odakke superaagide.. full kagga haako... sakkat punch koDutte, article-ge...

  ReplyDelete
 2. ಎಂ.ಎಸ್. ಸುಬ್ಬುಲಕ್ಷ್ಮಿ, ಮಹಾತ್ಮಾ ಗಾಂಧಿ, ಆಲ್ಬರ್ಟ್ ಐಸ್ಟೈನ್, ಕುವೆಂಪು, ರಾಜ್‍ಕುಮಾರ್ - ಎಲ್ಲರಿಗೂ ಒಂದು ಸ್ಮರಣ ನಮನ.

  ನೀನು ಹೇಳಿದ ಎಲ್ಲಾ ವಿಚಾರಗಳನ್ನು ಒಪ್ಪಿದೆ; ಒಂದನ್ನು ಬಿಟ್ಟು.

  ನನ್ನ ಪ್ರಶ್ನೆಯೆಂದರೆ, ಈ ಅಕಾಲ ಮೃತ್ಯು ಇವರುಗಳಿಗೆ ಬರೋದೇ ಇಲ್ಲ. ಕಡೇ ಪಕ್ಷ ಒಂದು ಸಣ್ಣ ಹೃದಯ ಬೇನೆ? ಛೆ!! ಆದಷ್ಟು ಬೇಗ ಬರಲಿ.

  ಇದನ್ನು ಬರೆಯುವ, ಹೇಳುವ ಹಕ್ಕು ನಿನಗಿಲ್ಲ. ಹೃದಯ ಬೇನೆ ಕೊಡುವವನೂ ನೀನಲ್ಲ, ಅನುಭವಿಸುವವನೂ ನೀನಲ್ಲ. ಬೇಕಾದರೆ ನಿನ್ನ ಪ್ರತಿನಿಧಿಯಾಗಿ ನಿನಗೆ ದ್ರೋಹ ಎಸಗುತ್ತಿರುವ ರಾಜಕಾರಣಿಗಳು ಅಧಿಕಾರ ಕಳೆದುಕೊಳ್ಳಲಿ ಎನ್ನಬಹುದಷ್ಟೇ. ಅವರು ಬದುಕುವುದು, ಸಾಯುವುದು, ಖಾಯಿಲೆ ಬೀಳುವುದು - ಇದೆಲ್ಲಾ ಪರಮಾತ್ಮಗೆ ಬಿಟ್ಟಿದ್ದು; ಒಂದು ಹಂತದಲ್ಲಿ ಅವನ/ಅವಳ/ಅದರ/? ಪ್ರತಿನಿಧಿಗಳಾಗಿರಬೇಕಾದ ವೈದ್ಯರಿಗೆ ಬಿಟ್ಟಿದ್ದು. ಆಶ್ಚರ್ಯವೆಂದರೆ ಶ್ರೀನಿವಾಸ್ ಕೂಡ ನೀನು ಹೇಳಿದ್ದನ್ನೇ ಹೇಳಿದ್ದು.

  ReplyDelete
 3. ishte aagoythu..koothkond shaapa haakodhu...hograyya...eddd hogi mutt nodkoLo haage baarsi..politicians na...... illandre avranna pinish maadbidi...
  dishum...dishum...damaaaaaaar...
  no use with shaapas.... :-)

  ReplyDelete
 4. [ಗಂಡಭೇರುಂಡ] ಹೋಲಿಕೆ ಮಾಡೋಕೆ ಆಗಲ್ಲ ಬಿಡು. ಇವರೆಲ್ಲಿ, ಆ ಮೂದೇವಿಗಳೆಲ್ಲಿ!! ಮತ್ತೆ, ಕಗ್ಗವನ್ನು ನೀನೇ ಬರೀಬಾರ್ದಿತ್ತೇನು??

  [ಶ್ರೀಕಾಂತ] ಪರಮಾತ್ಮನಿಗೆ ಬಿಟ್ಟಿದ್ದು ಗೊತ್ತು. ಅದಕ್ಕೇ ನಾನು (ನನ್ನ ಹಾಗೆ ಹಲವರು) ಶಾಪ ಹಾಕ್ತಾ ಇರೋದು. Actually, you see, ಶಾಪ ಹಾಕೋ ಅಧಿಕಾರ ಎಲ್ಲರಿಗೂ ಇದೆ. ಯಾರಿಗೆ ಬೇಕಾದರೂ ಇದೆ.

  [ಶ್ರೀಧರ] ಶಾಪ ಹಾಕಿರೋದೇ ತಪ್ಪು ಅಂತ ಮೇಲ್ಪೇಳಿದರೆ ನೋಡಿ. ಇನ್ನು ಢಮಾರ್ ಅನ್ಸ್ಬಿಟ್ರೆ ಅಷ್ಟೇ.. ಶ್ರೀಕಾಂತ್ ಅವರು ಹಾಸ್ಯವನ್ನು ಬಹಳ ಗಂಭೀರವಾಗಿ ಪರಿಗಣಿಸುವುದು ಅದೇಕೆಂದು ಅರ್ಥವಾಗಿಲ್ಲವಲ್ಲ!

  Actually ಶ್ರೀಧರ, ಅವರಿಗೆ ಶಾಪ ಹಾಕೋದು ತಪ್ಪು. ಅವರ ಬಗ್ಗೆ ಮಾತನಾಡೋದೇ ತಪ್ಪು. ಏಕೆಂದರೆ ಹೊಲಸು ಚೇತನದವರು ಅವರುಗಳು. ಅವರನ್ನು ಶಪಿಸಿದರೆ ಅವರ ಪಾಪಗಳು ನಮ್ಮ ನಾಲಿಗೆ ಮೇಲೆ ನರ್ತನವಾಡುತ್ತೆ. ಅದಕ್ಕೆ ಸುಮ್ಮನಿರಬೇಕು. ಆದರೂ ಅವರುಗಳೆಲ್ಲರೂ ಲೈಟ್ಟಾಗಿ ಒಂದು ಸುನಾಮಿಯಲ್ಲೋ, ತೀವ್ರ ಕಾಲೆರಾದಿಂದಲೋ, ಭೂಕಂಪದಲ್ಲೋ, ವಿಮಾನಾವಘಡದಿಂದಲೋ ಢಮಾರ್ ಅಂದ್ಬಿಟ್ರೆ, ಆಹಾ!!

  ReplyDelete
 5. ahaa.. Sri Sri Sri Arunaanandachinmayi SwamigaLe.... Nim charaNa kamalagalige nanna kamalaaarpaNe!!
  hehehee.. En Meshtreee...
  Shaapanaadru strong agi haakteeraaa.. adu illa.. chikkaputta shaapagaLu.. "ಕಡೇ ಪಕ್ಷ ಒಂದು ಸಣ್ಣ ಹೃದಯ ಬೇನೆ?"
  Totally agreeing with Sridhar!!
  Revolutinaries beku nam India ge!!!
  Haithavaadha pen maatra saakagalla... Harithavaadha katthi beku!!!!!

  ReplyDelete
 6. ದಿವ್ಯಾಂಬಾ, ಅವರನ್ನು ಒಂದೇ ಬಾರಿ ಕೊಂದುಬಿಟ್ಟರೆ ನ್ಯಾಯ ಅಲ್ಲ ನೋಡಿ. ಅವರುಗಳು ದೇಶವನ್ನು, ತನ್ನ ತಾಯಿಯೆಂದು ಪರಿಗಣಿಸದೇ ಮಾರಿಕೊಳ್ಳುವ ಕೆಲ್ಸ ಮಾಡಿರೋರು. ಸೋ, ಅವರುಗಳು ನರಳಿ ನರಳಿ ಗೊಟಕ್ ಅನ್ಬೇಕು. ಈಗ್ ಹೇಳಿ, ನಿಮ್ ಶಾಪ ಹರಿತವೋ, ನನ್ ಶಾಪ ಹರಿತವೋ?

  ReplyDelete
 7. 1) Swaaamii Arunaanandaravare naanu 'Divyaamba' alla!! AagO aase nu illa!!
  2) Avaru naraLiii naraLiiiii goTak annO haage saaaysOdhu! Novina athiiii himse bharitha saavu naav kodOdhu... Nam articles inda kinch difference-u aagalla... barii naavgaLu nOdkond aaDkond nagakke, serious aagi tale kedskolakke.. ashte...
  3) Namma Katthi ne haritha, yaakandre aa katthi inda first avr kygaLna kathrusOdhu, anantara avara kaalu, aanantara chitravichitra cutting!!!!!!!
  Eeega neev heLi yaavdu better... nim mugdha shaapavO, namma cutting katthiyO...........

  ReplyDelete
 8. ಶ್ರೀಕಾಂತ:: ಹಿ ಹಿ ಹಿ... ನೀನು ಹೇಳ್ತಿರೋ logic ಪ್ರಕಾರ "ಅಧಿಕಾರ ಕಳೆದುಕೊಳ್ಳಲಿ" ಅನ್ನೋದೂ ತಪ್ಪೇ... ಯಾಕಂದ್ರೆ ಅದೂ ಪರಮಾತ್ಮನ ಕೃಪೆಯಷ್ಟೇ?... ಅಂದ ಹಾಗೆ, ಅಧಿಕಾರ ಕಳೆದುಕೊಂಡ ರಾಜಕಾರಣಿಗಳ ಹಣೆಬರಹವೂ ನಿನಗೆ ಗೊತ್ತೇ ಇದ್ಯಲ್ಲ... ಆದ್ದರಿಂದ ಅಂಥ ವ್ಯಕ್ತಿಗಳಿಗೆ ಅಧಿಕಾರ ಮಾತ್ರ ಹೋದ್ರೆ ಸಾಲದು..
  ಇದೊಂದಂಶವಾದರೆ, ಇನ್ನೊಂದು - "ಅವರು ಬದುಕುವುದು, ಸಾಯುವುದು, ಖಾಯಿಲೆ ಬೀಳುವುದು - ಇದೆಲ್ಲಾ ಪರಮಾತ್ಮಗೆ ಬಿಟ್ಟಿದ್ದು; ಒಂದು ಹಂತದಲ್ಲಿ ಅವನ/ಅವಳ/ಅದರ/? ಪ್ರತಿನಿಧಿಗಳಾಗಿರಬೇಕಾದ ವೈದ್ಯರಿಗೆ ಬಿಟ್ಟಿದ್ದು." ಅಂದ್ಯಲ್ಲ.... ಅಯ್ಯಾ! ಇದರ ಅರ್ಥ ಸರಿಯಾಗಿ ತಿಳಿಯಲಿಲ್ಲ ನಂಗೆ.. ವೈದ್ಯರು ಬದುಕಿಸೋಕ್ಕೆ ಪ್ರಯತ್ನ ಪಡ್ಬೋದು.. ಜೊತೆಗೆ ಕೊಲ್ಲಬಹುದು/ಖಾಯಿಲೆ ಕೂಡ ಬರಿಸಬಹುದು ಅಂತಲೇ?
  ;-)

  ಅರುಣ:: ಸರಿ.. ಕಗ್ಗ ಇಲ್ಲಿದೆ.. :-)

  ತೊಟ್ಟಿಲುಗಳೆಷ್ಟೊ ಮಸಣಗಳಷ್ಟು ಧರೆಯೊಳಗೆ,
  ತೊಟ್ಟಿಲಿಗೆ ಹಬ್ಬ ಮಸಣವು ತೇಗುತಿರಲು...
  ಹುಟ್ಟಿದವರೆಲ್ಲ ಸಾಯದೆ ನಿಲ್ಲೆ, ಹೊಸತಾಗಿ
  ಹುಟ್ಟುವರ್ಗೆಡೆಯೆಲ್ಲಿ? - ಮಂಕುತಿಮ್ಮ....

  ReplyDelete
 9. ಅಧಿಕಾರ ಮಾತ್ರ ಅಲ್ಲ. ಎಲ್ಲವೂ ಪರಮಾತ್ಮನ ಕೃಪೆಯೇ. ಇದಕ್ಕೆ ಸಂಶಯವಿಲ್ಲ. ಆದರೆ ಪರಮಾತ್ಮ ಅವರಿಗೆ ಅಧಿಕಾರದ ಕೃಪೆ ತೋರಿಸುವುದು ನಮ್ಮ ಮೂಲಕ... ಅಂದರೆ ಜನರ ಮೂಲಕ. ಆದರೆ ಅವರಿಗೆ ಹುಟ್ಟು, ಸಾವು, ಖಾಯಿಲೆ ಇದಾವುದೂ ನಮ್ಮ ಮೂಲಕ ಬರುವುದಿಲ್ಲ. ಹುಟ್ಟೊಂದು ಮಾತ್ರ ಪರಮಾತ್ಮ ತಾಯಿ-ತಂದೆಯರ ಮೂಲಕ ಕೊಡುತ್ತಾನೆ. ಬದುಕು, ಸಾವು ತಾನೇ ಸರ್ವಕಾಲದಲ್ಲೂ ನಿಯಂತ್ರಿಸುತ್ತಾನೆ. ಖಾಯಿಲೆ ಅನೇಕ ರೀತಿಗಳಲ್ಲಿ ಬರುತ್ತದೆ. ಆದರೆ ಖಾಯಿಲೆಯನ್ನು ಗುಣಪಡಿಸಿಕೊಳ್ಳುವ ಅವಕಾಶ ಕೊಟ್ಟಿದ್ದಾನೆ; ಅಲ್ಲಿ ವೈದ್ಯನ ಪಾತ್ರ ಬರುತ್ತದೆ. ಆದ್ದರಿಂದ ಜನಪ್ರತಿನಿಧಿಗಳಾದ ಅವರು ಅಧಿಕಾರದಲ್ಲಿರುವುದು ಬೇಕೋ ಬೇಡವೋ ಎಂದು ನಿರ್ಧರಿಸುವುದು ಮಾತ್ರ ನಾವು - ಅದರ ಹಕ್ಕು ನಮಗಿದೆ ಎಂದು ಹೇಳಬಹುದು.

  ಆಧಿಕಾರ ಮಾತ್ರ ಹೋದರೆ ಸಾಲದು. ಒಪ್ಪಿದೆ. ಆದರೆ ನಮ್ಮ ಕೈಲಿರುವುದು ಅವರ ಅಧಿಕಾರವಷ್ಟೇ. ಮಿಕ್ಕಿದ್ದೇನೂ ನಮ್ಮ ಕೈಲಿಲ್ಲ. ಆದ್ದರಿಂದ ಮಿಕ್ಕಿದ್ದರ ಬಗ್ಗೆ ನಾನೇನು ಹೇಳಲಿ?

  ನಾನು ತಿಳಿದ ಮಟ್ಟಿಗೆ ರೋಗಿಯನ್ನು ಬದುಕಿಸುವುದು, ಅವನ ರೋಗವನ್ನು ಗುಣಪಡಿಸುವುದು ಒಬ್ಬ ವೈದ್ಯನ ಕರ್ತವ್ಯ. ಕೆಲವು ಕರ್ತವ್ಯಭ್ರಷ್ಟರು ಅನ್ಯಥಾ ಮಾಡಿದರೆ ಅದು ಅವರ ಕರ್ಮ (ಜೊತೆಗೆ ನಮ್ಮ ಕರ್ಮ ಕೂಡ!)

  ಇನ್ನು "ಅವನ/ಅವಳ/ಅದರ/? ಪ್ರತಿನಿಧಿಗಳಾಗಿರಬೇಕಾದ" - ಈ ವಿಷಯದ ಚರ್ಚೆಗಾಗಲಿ ವಿವರಣೆಗಾಗಲಿ ಈ ಬ್ಲಾಗು ಸಾಲದು. ಭೇಟಿ ಮಾಡಿದಾಗ ಖಂಡಿತ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನಾದರೂ ಸಂಶಯವಿದ್ದರೆ ಈ ಬ್ಲಾಗಿನಲ್ಲಿ ಚರ್ಚಿಸಬಹುದು.

  ReplyDelete
 10. ಒಪ್ಪಿದೆ... ಅಧಿಕಾರ ಮಾತ್ರ ನಮ್ಮ ಮೂಲಕ ಪರಮಾತ್ಮ ಅವರಿಗೆ ಕರುಣಿಸ್ತಾನೆ... ಆದರೆ ನಾವು ಪ್ರಜೆಗಳಾಗಿ ಕೊಡೋ ಅಧಿಕಾರ ಕೇವಲ ಹೆಸರುಮಾತ್ರಕ್ಕೆ... ಆ ಅಧಿಕಾರದಲ್ಲಿರೋರನ್ನ rule ಮಾಡೋರೇ ಬೇರೆ... ವಾಸ್ತವದಲ್ಲಿ ಅನಧಿಕಾರಿಗಳು... ಉದಾ: ಗೌಡ-ಕುಮಾರಸ್ವಾಮಿ, ಸೋನಿಯಾ-ಧರಂ etc...
  sooo.... ಹಾಗೆ ಹೇಳ್ದೆ... ಅಂಥವರಿಗೆ ನಾವು ಅಧಿಕಾರವನ್ನೂ ಕೊಟ್ಟಿರಲ್ಲ.. ಅದನ್ನ ಬೇಡ ಅನ್ನೋಕ್ಕೂ ಹಕ್ಕಿಲ್ಲ ಅಂತಿಯ?

  "ಮಿಕ್ಕಿದ್ದೇನೂ ನಮ್ಮ ಕೈಲಿಲ್ಲ. ಆದ್ದರಿಂದ ಮಿಕ್ಕಿದ್ದರ ಬಗ್ಗೆ ನಾನೇನು ಹೇಳಲಿ?"
  'ಹಾಗಾಗ್ಲಿ, ಹೀಗಾಗ್ಲಿ ಅಂತ ಹೇಳಿದಾಗ ನಾವೇ ಹಾಗೆ ಮಾಡ್ತೀವಿ ಅಂತಲ್ಲ..ಅದು ನಮ್ಮ ಮನಸ್ಸಿಗೆ ತೋಚಿರುತ್ತೆ ಅಷ್ಟೇ.. ಋಷಿಗಳು ಶಾಪ ಕೊಡ್ತಿದ್ರು... ಅಂದ ಮಾತ್ರಕ್ಕೆ ಎಲ್ಲವೂ ಅವರಿಂದಲೇ ಆಗಿದ್ದು ಅಂತ ಅಲ್ಲ... ಹಾಗೇ ಇದೂ ಕೂಡ... (ನಾನು ಋಷಿಯಲ್ಲ... ಅದು ಬೇರೆ ವಿಷಯ ;))

  ReplyDelete
 11. ಬೇಡ ಅನ್ನಕ್ಕೆ ಹಕ್ಕಿಲ್ಲ ಎಂದು ಹೇಳಲಿಲ್ಲ. ಆದರೆ ಹೇಗೆ ಬೇಡ ಅನ್ತೀಯಾ? ನಮ್ಮ 'ಪ್ರಜಾಪ್ರಭುತ್ವ'ದ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲವಲ್ಲ. ಯಾವನೋ ಭ್ರಷ್ಟ ರಾಜಕಾರಣಿಗೆ ಹೃದಯ ಬೇನೆ ಆದರೆ ಅವನ ಕೊಳಕು ರಾಜಕಾರಣವನ್ನು ಮುಂದುವರಿಸಲು ನೂರಾರು ಕೊಳಕು ರಾಜಕಾರಣಿಗಳು ಕಾದಿದ್ದಾರೆ. ಎಲ್ಲವನ್ನೂ ಸರಿಪಡಿಸಲು ಇಡಿಯ ವ್ಯವಸ್ಥೆಯೇ ಬದಲಾಗಬೇಕು.

  ಋಷಿಗಳು ಏನು ಶಾಪ ಕೊಟ್ಟರೂ ನಡಿಯುತ್ತಿತ್ತು (ಪುರಾಣಗಳನ್ನು ನಂಬುವುದಾದರೆ). ನನ್ನ, ನಿನ್ನ ಶಾಪ ಯಾರಿಗೆ ತಟ್ಟುತ್ತದೆ ಹೇಳು... ಈ ಥರ ಶಾಪ-ಗೀಪ ಅಂತೆಲ್ಲಾ ಯೋಚನೆ ಮಾಡಿದರೆ ನಮ್ಮ ತಲೆ ಕೆಡುತ್ತದೆಯೇ ಹೊರತು ಇನ್ನೇನೂ ಆಗುವುದಿಲ್ಲ. ಒಳ್ಳೆಯವರು, ಕೆಟ್ಟವರು ಇಬ್ಬರೂ ಇರುವ ಈ ಸೃಷ್ಟಿಯೇ ಇಷ್ಟು ವಿಚಿತ್ರವಾಗಿರುವಾಗ ನಾವೇನು ಮಾಡಲಾಗುತ್ತದೆ?

  ReplyDelete
 12. [Dynamic Divya] nimmadu tumba barbaric aaytalla....

  [gandabherunda] kaggakke thanks.. ivattinda namma kagga blog na mundvarsoNa....

  [srikanth] ok

  ReplyDelete
 13. @parisarapremi: "ಹೊಲಸು ಚೇತನ"...ee pada prayoga bhale idhe...UHONA!!.... sikkapatte damaging statement nindu..."holasinalli chetana"??? ;-)

  yaarig gottu....yaav huttadlli yaav haav idhyo??? ha ha ha

  @dynamic divya: neenu rambo raaNi...

  ReplyDelete
 14. [Sridhara]avara chetanada kaNa kaNadallu, nara naaDigaLallu, dhamni dhamanigaLallu,sakala kOshagaLallu holase tumbirOdrinda aa pada prayOga maadbekaaytu nOdi..

  [Dynamic Divya] Rambo Rani chennaagide ninge!!

  ReplyDelete
 15. [parisarapremi && Sridhara]
  "hoo hoo ohhh oooo oo oo
  Socha kahan tha, yeh jo yeh jo ho gayaaa..
  Maana kahan tha, yeh lo yeh lo ho gayaa...
  Baadal pe paaoon he
  yaaa ChooTa gaaon he
  Ab toh bhai chal padi, apni yeh naav heeee"

  Chak deee phaTTTeeee!!
  Rambo Rani is nice!! Thanku!!!!!

  ReplyDelete
 16. [Dyanamic Divya] Howdowdu. Sridhara heLd mele adu chennaag irle beku nODi... ;-)

  ReplyDelete
 17. "ಹುಟ್ಟು ಸಾವು ಅನಿವಾರ್ಯ" ಇಷ್ಟು ಅರ್ಥಮಾಡಿಕೊಂಡರೆ ಸಾಕು.

  ReplyDelete