Wednesday, October 10, 2007

ಲತಾಂಗಿ..

ಲತಾಂಗಿ..
ನಿನ್ನೆ ಮನೆಮಟ್ಟದಲ್ಲೇ ಅಮ್ಮನ (ನಮ್ಮ) ಮೊದಲ ಸಿಡಿಯನ್ನು ಬಿಡುಗಡೆ ಮಾಡಿದೆವು. ಅತಿಥಿಗಳು - ಅಮ್ಮ, ಅತ್ತೆ, ನಾನು, ಅಕ್ಕ, ಭಾವ, ಅಶೋಕ, ಶಾರದಾ ಅತ್ತೆ, ಪೃಥ್ವಿ, ಪರ್ಣಿಕಾ. ಮನಸ್ಸಿನಲ್ಲಿ ಏನೋ ಆನಂದ. ಅಮ್ಮನಿಗೆ ಶುಭಾಶಯ.

ವಿದುಷಿಯಾಗಿ ಎಷ್ಟೋ ವರ್ಷಗಳಾದ ಮೇಲೆ, ಸಿ.ಡಿ. ಮಾಡುವ ಕಾಲ ಇಂದು ಬಂದಿದೆ! ಯಾವಾಗ ಏನೇನು ಆಗಬೇಕೋ ಆಗಲೇ ಬೇಕು. ಗೆಳೆಯರಿಗೆಲ್ಲಾ "ನಮ್ಮಮ್ಮಂದು ವೀಣಾವಾದನ ಸಿ.ಡಿ." ಎಂದು ಯಾವಾಗ ಕೊಡುತ್ತೇನೋ ಅಂತ ಕಾಯುತ್ತಾ ಇದ್ದೇನೆ. ಮನಸ್ಸಿನಲ್ಲಿ ಹೆಮ್ಮೆಯಿರುತ್ತೆ ಅಲ್ಲವೇ?


ಸ್ವಂತ ತಾತನ ಕೃತಿಗಳನ್ನು ಅಮ್ಮನ ವೀಣಾವಾದನದಲ್ಲಿ ಕೇಳೋಕಿಂತ ಹೆಮ್ಮೆಯ ಭಾವನೆ ಬೇರೇನಿದೆ? ಜೊತೆಗೆ ಸಾಮಜವರಗಮನ, ಮನವ್ಯಾಲಗಿಂಚರಾದಟೇ, ರಘುವಂಶಸುಧಾ, ಧನಶ್ರೀ ತಿಲ್ಲಾನ - ಇವೆಲ್ಲಾ ಬಹಳ ಚೆನ್ನಾಗಿ ಮೂಡಿ ಬಂದಿರೋದನ್ನು ಹೆಡ್ ಫೋನ್ ಹಾಕಿಕೊಂಡು ಕೇಳಿದಾಗ ಒಳಗೇ ಏನೋ ಒಂದು ತೆರನಾದ ಸಂತಸದ ಸಂಗೀತ ಉಲಿಯುತ್ತೆ. ನಮ್ಮಮ್ಮ ನುಡಿಸಿರೋದು!!

'ಲತಾಂಗಿ'ಯನ್ನು ಫೀಸ್ ಕೊಟ್ಟು ಕೊಂಡುಕೊಳ್ಳುವವರಿಗೆ ವಿಶೇಷವಾದ ಕೃತಜ್ಞತಾಪೂರ್ವಕ ವಂದನೆಗಳನ್ನರ್ಪಿಸುತ್ತೇನೆ. ಕಲಾವಿದರಿಗೆ ಪ್ರೋತ್ಸಾಹಿಸೋದೇ ಇಂಥಾ ಸಣ್ಣ ಸಣ್ಣ ಫೀಸುಗಳು ಅಲ್ಲವೇ?

ಶ್ರೀ ಶ್ರೀ ಶ್ರೀ..

ನಾಳೆ ಆಪ್ತ ಗೆಳತಿ ಶ್ರೀ ಹುಟ್ಟು ಹಬ್ಬ. ಅವಳ ಪರಿಚಯ ಆದಮೇಲೆ ಇದು ಮೂರನೇ ಹುಟ್ಟು ಹಬ್ಬ. ಸಕಲ ಶ್ರೀ ಅವಳಿಗೆ ಸಿಗಲಿ. ಮುದ್ದಿನ ಮೊಮ್ಮಗು ಅದು, ಚೆನ್ನಾಗಿ ಮುಂದೆ ಬರಲಿ - ದೊಡ್ಡ ದೊಡ್ಡ ಪ್ರಾಜೆಕ್ಟುಗಳನ್ನು ಹಾಕಿಕೊಂಡಿದೆ. ಎಲ್ಲದರಲ್ಲೂ ಯಶಸ್ಸು ಸಿಗಲಿ ಎಂದು ಮನದಾಂತರಾಳದಿಂದ ಹರಸುತ್ತೇನೆ. All the best, ಶ್ರೀ!


ಇದು ನಿನಗೊಂದು ಸಣ್ಣ ಉಡುಗೊರೆ..

ನದಿಚೆಲುವಿನಂತೆ ಎದೆಯೊಳಡಗಿ
ಹುದುಗಿ ಉಳಿದಿದ್ದ ಚೈತನ್ಯವನಗೆದು
ಬದುಕ ಹಂತದಿ ನಗುವ ತಂದ
ಚದುರಂಗದರಸಿ ಬಾಳಲಿ
ಮುದವಿರಲಿ ಚಿರವಾಗಿ..

-ಅ

ಶ್ರೇಯಸ್ ಹುಟ್ಟುಹಬ್ಬ
ಗೆಳೆಯ ಶ್ರೇಯಸ್ ಹುಟ್ಟುಹಬ್ಬ ಹದಿನಾಲ್ಕನೇ ತಾರೀಖು. ಅವನ ಮನೆಯಲ್ಲೇ ಇರ್ತೀನಿ. ತೀರ್ಥಹಳ್ಳಿಯಲ್ಲಿ. ಈ ಪ್ರವಾಸದ ಯೋಜನೆಗೂ ಹುಟ್ಟುಹಬ್ಬ - ಒಂದು ವರ್ಷದ್ದು. ಸೋ, ಶ್ರೇಯಸ್ ಹಾಗೂ ಅವನ ಮನೆಯ ಪ್ರವಾಸ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯಗಳು. ಶ್ರೇಯಸ್ ದೆಸೆಯಿಂದ ಅನೇಕ ಸಾಧನೆಯ ಪ್ರಯತ್ನಕ್ಕೆ ಕೈ ಹಾಕಿದ್ದೀನಿ ನಾನು. ಕೃತಾರ್ಥ ನಾನು! ತೀರ್ಥಹಳ್ಳಿಯಲ್ಲಿ ಮಿಕ್ಕಿದ್ ಭಾಷಣ!

-ಅ

10.10.2007

11PM8 comments:

 1. thumbaa tumbaaa thanks!!:))
  ninna harakeinda nan project galella yashasvi aagli:))

  ReplyDelete
 2. Ammanige nanna manadaaLadha CONGRATS.. Tummmmmmmbaa jaaaasti yasshassu santosha sigli!!
  "aap jiyO hazaaron saal aur saal ka har din ho pachaas hazaar"
  Proud son gu congrats and God bless!
  CD konDkoLLOdakke yaavag barli :)

  Happy birthday and All the best Sree..
  Tumba khushi aythu nim mugdha beautiful relationship nOdi! Wishing it an evergreen lasting!!

  Happy birthday also to Shreyas!
  Enjoy maadi!!!

  ReplyDelete
 3. wow.. cd aagle release aita? ok.. naanondu copy togotini guruve.. :)

  veda ge many more happy returns wishing-u- blogalli... mattomme...

  shreyas-ge advanced wishes-u.. avna manele mikkida aacharaNegaLu... :)

  ReplyDelete
 4. and heLod marte.. shreyas b'day 13th kano.. 14th alla :)

  ReplyDelete
 5. [Shree] aagutte aagutte... praamaaNika prayatna ide, so khandita aagutte...

  [Dynamic Divya] Congrats na talpsde ammange.. cd keLbittu hegide antha heLu.. Shree vishyavaagi neenu bardirOdu avaLige talupuvantaagli.. aake namma nimma haage frequent blogger alla.. same with Shreyas..

  [Gandabherunda] Copy ninge kodade irtina? 13 aadarenu shiva... 14 aadarenu shiva... huttu habba aacharskobeku shiva... treatu kodsbeku shiva...

  ReplyDelete
 6. ಕಾಮೆಂಟ್ ಹಾಕ್ಬೇಕು ಎಂದು ಪ್ರಯತ್ನಿಸಿದ ಎರಡು ಬಾರಿ ವರ-ಶಾಪ ತಟ್ಟಿ ಪೆಚ್ಚು ಮೋರೆ ಹಾಕಿಕೊಳ್ಳಬೇಕಾಯಿತು. ಮೂರನೇ ಬಾರಿ ವರ/ಶಾಪ ಸಿಗ್ದಿದ್ರೆ ಸಾಕು...

  ನಿಮ್ಮಮ್ಮನಿಗೆ ನನ್ನ ಶುಭಾಷಯ ತಿಳಿಸು. ಸಿ.ಡಿ. ನನಗೊಂದು ಕಾಪಿ ದಯಪಾಲಿಸಬೇಕು... ದುಡ್ಡು ತಲುಪಿದಮೇಲೇ ಕೊಡು :-)

  ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಇಬ್ಬರಿಗೂ ಹುಟ್ಟುಹಬ್ಬದ ಶುಭಾಷಯಗಳು ತಿಳಿಸು. ನೂರ್ಕಾಲ ಅವರ ಬಾಳು ಹಸುರಾಗಿರಲಿ!

  'ಲತಾಂಗಿ'ಯನ್ನು ಫೀಸ್ ಕೊಟ್ಟು ಕೊಂಡುಕೊಳ್ಳುವವರಿಗೆ ವಿಶೇಷವಾದ ಕೃತಜ್ಞತಾಪೂರ್ವಕ ವಂದನೆಗಳನ್ನರ್ಪಿಸುತ್ತೇನೆ. ಕಲಾವಿದರಿಗೆ ಪ್ರೋತ್ಸಾಹಿಸೋದೇ ಇಂಥಾ ಸಣ್ಣ ಸಣ್ಣ ಫೀಸುಗಳು ಅಲ್ಲವೇ? - ನೀನು ಹೇಳುತ್ತಿರುವುದು ನೂರಕ್ಕೆ ನೂರು ನಿಜ. ಈ ಸಾಲುಗಳು ನೋಡಿ ತುಂಬ ಸಂತೋಷವಾಯಿತು.

  ReplyDelete
 7. ಮೊದಲು ಮೇಡಂ ಗೆ ನನ್ನ ಹೃದಯಪೂರ್ವಕವಾದ ಅಭಿನಂದನೆಗಳು!
  ನಿಮ್ಮ ಯಶಸ್ಸಿನ ಹಾದಿ ಹೀಗೆ ಮುಂದುವರಿಯಲಿಯೆಂಬುದು ನನ್ನ ಪುಟ್ಟ ಹರಸುವಿಕೆ.


  ಇನ್ನೂ ಶ್ರೇಯಸ್ ಮತ್ತು ಶ್ರೀ ಅವರಿಗೆ ನನ್ನ ತಡವಾಗ ಹುಟ್ಟಿದ ಹಬ್ಬದ ಶುಭಾಶಯಗಳು!ಆದೇವರು ನಿಮ್ಮಿಬ್ಬರಿಗು ಸಕಲ ಇಷ್ಟಾರ್ಥಗಳನ್ನು ಸಿದ್ದಿಸುವಂತೆ ಕರುಣಿಸಲಿ.

  ReplyDelete
 8. Theertha haLLi trip chennagittu....
  Latangi hesru chennagidhe..... :-)
  heeege cd's bartirli... :-)

  All the besht Aunty....

  ReplyDelete