Friday, October 19, 2007

ಇವೆಲ್ಲಾ ಇರದಿದ್ದರೆ...

ಬದುಕಿನಲ್ಲಿ ಕೆಲವು ವಿಷಯಗಳನ್ನು "ಹೇಟ್" ಮಾಡಬೇಕು ಅನ್ಸುತ್ತೆ ನಂಗೆ.. ಮೈಯೆಲ್ಲಾ ಉರಿದು ಹೋಗುವಂಥಾ ಕೆಲವು ವಿಷಯಗಳು ಈ ಕೆಳಕಂಡಂತಿವೆ.

--> ಆಟೋ ಪ್ರಯಾಣ

--> ಮೊಬೈಲ್ ಫೋನ್‍ ಹರಟೆ

--> ಧೂಮಾಪಾನ ಮಾಡುವವರ ಸಾಮೀಪ್ಯ, ಸಹವಾಸ

--> ಪಾರ್ಕ್ ಅಲ್ಲಿ ಮೈ ಮೇಲೆ ದೇವರು ಬಂದವರಂತೆ ವಾಕಿಂಗ್ ಮಾಡೋದು

--> ಹಾರ್ಲಿಕ್ಸು, ಬೋರ್ನ್ವೀಟಾ

--> ಮೈಸೂರ್ ಪಾಕ್ ಅನ್ನೋ ಸ್ವೀಟು

--> ಗಾಡಿ ನಿಲ್ಲಿಸಿ ಇಪ್ಪತ್ತು ರೂಪಾಯಿಗೂ ಬರಗೆಟ್ಟ ಕೆಲ ಸಂಚಾರಿ ನಾಯಿಗಳು ಅಲಿಯಾಸ್ ಪೋಲೀಸರು

--> ಟಿ.ವಿ. ಎಲ್ಲಾ ಮೈಲಿಗೆಯಾಗುವಂತೆ ದಿನಾ ಕಾಣಿಸಿಕೊಳ್ಳುವ "ಹೊಲಸು ಚೇತನ"ದ ರಾಜಕಾರಣಿಗಳು

--> ಗಂಡು - ಹೆಣ್ಣು ಭೇದ, ಸ್ತ್ರೀವಾದ - ಪುರುಷವಾದ (ಶಾವನಿಸಂ)

--> ಜಾತೀಯತೆ, ಮತೀಯತೆ, ಧರ್ಮಾಂಧತೆ

--> ವ್ಯಕ್ತಿ ಪೂಜೆ, ಗೊಡ್ಡು ಸಂಪ್ರದಾಯ

--> ಗಾಡಿಯ ಹಾರ್ನ್, ಹೊಗೆ

--> ದೀಪಾವಳಿ ಹಬ್ಬ, ಗಣೇಶ ಹಬ್ಬ, ಹೋಳಿ ಹಬ್ಬ

--> ಮದುವೆ ಊಟ, ತಿತಿ ಊಟ, ಪೀಡ್ಜಾ ಇತ್ಯಾದಿ ಮಣ್ಣು ಮಸಿಗಳು, ಪಾರ್ಟಿಗಳು

--> ಅರಣ್ಯದಲ್ಲಿ ಮ್ಯೂಸಿಕ್ ಸಿಸ್ಟಮ್ ಬಳಸುವುದು

--> ಪುಸ್ತಕದ ಪುಟಗಳನ್ನು ಗುರುತಿಗಾಗಿ ಮೇಲಿನ ತುದಿಯನ್ನು ಮಡಚುವುದು

--> ಬೆಟ್ಟ ಹತ್ತುವಾಗಲೂ ಬಿಸೆಲೆರಿ ನೀರು ಕುಡಿಯುವುದು

--> ಅನೃತದೊಡೆತನ

--> ರಾಕ್ ಮ್ಯೂಸಿಕ್ಕು

--> ಸರ್ವಕಂಪ್ಯೂಟರೀಕರಣ

--> ಪುಸ್ತಕಗಳನ್ನು ಎರವಲು ಕೊಡುವುದು

--> ಸಂಗೀತವನ್ನು ಪೈರಸಿ ಮಾಡುವುದು (ವೀರಪ್ಪನ್ ವಾಸಿ ಅನ್ಸುತ್ತೆ ಈ ಕೆಲಸ ಮಾಡುವವರಿಗಿಂತ)

--> ಭಿಕ್ಷೆ ನೀಡುವುದು

--> ಪಯಣ ಮುಗಿಸಿ ಬೆಂಗಳೂರಿಗೆ ಮರಳುವುದು

--> ಹೊರಗಿನವನು ಬೆಂಗಳೂರನ್ನು ಬೈಯ್ಯುವುದು

--> ಕನ್ನಡ/ಸಂಸ್ಕೃತ ಪದಗಳನ್ನು ಕೆಟ್ಟದಾಗಿ ಉಚ್ಚಾರಣೆ ಮಾಡುವವರ ಜೊತೆ ಮಾತನಾಡುವುದು

--> ದುಡ್ಡಿಗೋಸ್ಕರ ಯಾವ ದೇಶಕ್ಕೂ ಹೋಗಲು ಸಿದ್ಧವಾಗುವ ಮನೋಭಾವನೆ

--> "ಇಲ್ಲೇನಿದೆ?" ಅನ್ನುವ ಅವಹೇಳನದ ಮಾತುಗಳು

--> "ನೀನೊಬ್ಬ ಹೀಗಿದ್ರೆ ದೇಶ ಉದ್ಧಾರ ಆಗುತ್ತಾ?" ಅನ್ನೋ ನಾಲಿಗೆಗಳು

--> ನಾಯಿಗಳನ್ನು ಕಟ್ಟಿ ಹಾಕುವುದು

--> ಪ್ರಾಣಿಗಳನ್ನು ಕೀಳಾಗಿ ನೋಡುವುದು

--> ಮರ ಕಡಿಯುವ ಕೈ

--> ಹಾವು ಹೊಡೆಯುವ ಕೈ

--> ಹೂವು ಕೀಳುವ ಕೈ

--> ಪ್ಲಾಸ್ಟಿಕ್ ಬಿಸಾಡುವ ಕೈ

--> ಪರ್ಸನಾಲಿಟಿ ಡೆವೆಲೆಪ್ಮೆಂಟ್ ಪುಸ್ತಕಗಳು

--> ಹೈ ಹೀಲ್ಡ್ಸ್ ಚಪ್ಪಲಿ ಹಾಕ್ಕೊಂಡು ಟ್ರೆಕ್ಕಿಂಗ್‍ಗೆ ಬರುವ ಹೆಂಗಸರು

--> ಬಾಯಲ್ಲಿ ಬೀಡಾ ಹಾಕ್ಕೊಂಡು ಬಸ್ಸಲ್ಲಿ ಪಕ್ಕದ ಸೀಟಿನಲ್ಲಿ ಬಂದು ಕೂರುವವರು

--> ಗಾಡಿ ಓಡಿಸಲು ಹೆಲ್ಮೆಟ್

--> ಬೀಟ್‍ರೂಟ್ ಪಲ್ಯ/ಸಾರು/ ಇತ್ಯಾದಿ ಬೀಟ್‍ರೂಟ್ ಇಂದ ಮಾಡಿದ ತ್ಯಾಜ್ಯ (ತಿನಿಸು ಅಂತಾರೆ ಜನ)..

- ಅ
20.10.2007
12.30AM

13 comments:

 1. ನಂಗೆ ಯಾವ್ದು ಹಿಡಿಸಿತೋ ಅದೆಲ್ಲಾ ಬರೆಯಬೇಕೆಂದಿದ್ದೆ. ಆದರೆ ಹೆಚ್ಚು ಕಡಿಮೆ 85% ಬರೀಬೇಕಾಗತ್ತೆ ಅಂತ ಬರೀತಿಲ್ಲ

  ReplyDelete
 2. ಲಿಸ್ಟು ಚೆನ್ನಾಗಿದೆ!

  ReplyDelete
 3. neenu idanna baryovaaga "nanna" badukinalli antha shuru maadbekittu ;-).. nange ondast nin list nalli ista aagde irodhu "nan" badukinalli heegide...


  --> ಆಟೋ ಪ್ರಯಾಣ
  --> ಮೈಸೂರ್ ಪಾಕ್ ಅನ್ನೋ ಸ್ವೀಟು
  --> ಪುಸ್ತಕದ ಪುಟಗಳನ್ನು ಗುರುತಿಗಾಗಿ ಮೇಲಿನ ತುದಿಯನ್ನು ಮಡಚುವುದು
  --> ಪುಸ್ತಕಗಳನ್ನು ಎರವಲು ಕೊಡುವುದು
  --> ಸಂಗೀತವನ್ನು ಪೈರಸಿ ಮಾಡುವುದು(idu nange maatra...spread maadalla) ;-)
  Yesss naanu veerappan ginta (ku)khyaatha :-) :-)

  --> ಪಯಣ ಮುಗಿಸಿ ಬೆಂಗಳೂರಿಗೆ ಮರಳುವುದು(nammoore nanage vaashi.....)

  inn mikkid ella points gu naanu nin jotey JAI antheeni....uGhe..uGhe...

  ReplyDelete
 4. [ಶ್ರೀಕಾಂತ್] ಹಿಡಿಸದೇ ಇದ್ದಿದ್ದು ಇಲ್ಲಿ ಬರ್ದಿರೋದು.

  [ರಾಜೇಶ್ ನಾಯ್ಕ] ಥ್ಯಾಂಕ್ಸ್.

  [ಶ್ರೀಧರ] "ಏನೋ" ಕಳ್ಳ ಅಂದ್ರೆ "ಎಲ್ಲೋ" ಮುಟ್ ನೋಡ್ಕೊಂಡ್‍ನಂತೆ... ಹಾಗಾಯ್ತು!!

  ReplyDelete
 5. "ಏನೋ" and "ಎಲ್ಲೋ"...are global variables.... nimmma (a)gnaana chakshugaLige kelasa kottu sooktha vaada padagaLannu serisi....

  sakala oodhuga vrundakku nanna aahvaana ;-)... he he he

  ReplyDelete
 6. ಲೋ.. ಶ್ರೀಧರ, ಇಲ್ಲಿ ಸೆನ್ಸಾರ್ ಮಂಡಳಿ ಇಲ್ಲ ಅಂತ ಏನೇನೋ ಸ್ಪರ್ಧೆ ಏರ್ಪಡಿಸಬೇಡಪ್ಪಾ...

  ReplyDelete
 7. idhu spardaathmaka jagattu..... :-)

  ReplyDelete
 8. :) Johnson baby soap ad tara "kaNNu same2same.. moogu same2same.... twache NO SAME"
  Haaaage ne nimma "hate list" alli same2same naanu hate maadOdh idhe! aadre kelvu NO SAME! :)
  NO SAME : : 1) ಹಾರ್ಲಿಕ್ಸು, ಬೋರ್ನ್ವೀಟಾ (kuDsii kuDsii abhyaasa maadsidaare!)
  2) ಪರ್ಸನಾಲಿಟಿ ಡೆವೆಲೆಪ್ಮೆಂಟ್ ಪುಸ್ತಕಗಳು :) :)

  Mikkavu SAME2SAME!!
  "ಪಯಣ ಮುಗಿಸಿ ಬೆಂಗಳೂರಿಗೆ ಮರಳುವುದು.. ಹೊರಗಿನವನು ಬೆಂಗಳೂರನ್ನು ಬೈಯ್ಯುವುದು" Haahaa... masssst idu!! kelvu jaagagaLinda vaapas BengaLurige bardhu NONO ansuthe! adre yaaavanaadru bengLur na bydre avn graachara bidsana ansuthe!!
  :) :)
  amele "ಅನೃತದೊಡೆತನ" andreeeee???

  ReplyDelete
 9. @Sridhara : nanna gnaana chakshu fill in the blanks...
  "kidney" kaLLa andre "tale" muTTkond nodkondaaa!!
  Adre original gaade is "kumbaLkaay kaLLa andre hegal muTTkond nodkonda" taaane???
  Y Sridharaaa, kumbaLkaay kaddya???

  ReplyDelete
 10. nindu tumba doddadu .... list-u

  ReplyDelete
 11. yappa yappa... ishtu doDDa list-eno? idu 'complete'-a? illa sersakke innu enadru idyo? he he he

  nange nin listallirodralli "mysore pak, maduve ooTa, tithi ooTadalli kelavu items-u :D... matte helmet-u, beetroot bhojyagaLu (tyajya andre ODsbiDtini..)"- ishtu biTTu bere ella ishta illa.. so, aa uLiduvakke maatra 'same pinch'... :)

  @all: ಅನೃತ=suLLu.. therefore, ಅನೃತದೊಡೆತನ=suLLu heLOdralli nisseemaru...

  ReplyDelete
 12. @dynamic divya : Correct aagi heLidya neenu.... kadbitte...amele aaykonde...ChaaNaakshe chature neenu... ;-) keep it up(melidu)

  ReplyDelete