Sunday, October 21, 2007

ಅರ್ಧದಾಯುಷ್ಯ..

ಅಕ್ಕನ ಮನೆಯ ಗೃಹಪ್ರವೇಶ - ಅವಳಿಗೆ ಮತ್ತು ಭಾವನಿಗೆ ಶುಭಾಶಯ... ಅವಳ ಮನೆಯ ಹೆಸರನ್ನೇ ಕದ್ದು ನಾನು ನನ್ನಂಕಣನಾಮವನ್ನಾಗಿಸಿಕೊಂಡಿದ್ದೇನೆ. ಅದಕ್ಕೊಂದು ವಿಶೇಷ ಕೃತಜ್ಞತೆ. ಮನೆಯು ಸ್ವರ್ಗವಾಗಲಿ.

ಕವಿಯ ಹೃದಯದಿ
ದಿವಿಯೇ ತುಂಬಿಹುದು
ಸವಿಯ ಕ್ಷಿತಿಜದಿ
ಭುವಿಯನಿಂಪನನುಭವಿಸುವ ಒಳಮನದ
ಕಿವಿಯೇ ತುಂಬಿಹುದು
ರವಿಶಶಿಯೊಡನಾಟದಂತೆ..

ನನ್ನ ಹುಟ್ಟುಹಬ್ಬ.. ಕೆಲವು ಗಳಿಗೆಗಳು ಉಳಿದಿವೆ.. ನನ್ನ ಅರ್ಧದಾಯುಷ್ಯ ಮುಗಿಯಿತೆನಿಸುತ್ತೆ - ಸಾಯುವವರೆಗೂ ಬದುಕಿದ್ದರೆ. ಹಾಗಾಗಿ, ನನಗೂ ಒಂದು ಶುಭಾಶಯ. ಒಳ್ಳೇದಾಗ್ಲಿ ನನಗೆ.. Happy Birthday to Me... ನನಗೆ ನನ್ನದೇ ಮೊದಲ ವಿಷ್!

ಹುಟ್ಟಿದ ದಿನ ಅಪ್ಪನ ನೆನಪಾಗುತ್ತೆ. ಹೆಚ್ಚಿಗೆ ಮಾತಾಡಿಲ್ಲ ಅಪ್ಪನ ಜೊತೆ, ಹೆಚ್ಚಿಗೆ ಓಡಾಡಿಲ್ಲ. ಮುದ್ದು ಮಾಡಿಸಿಕೊಂಡ ನೆನಪಿಲ್ಲ, ಬೈಸಿಕೊಂಡ ನೆನಪೂ ಇಲ್ಲ. ಹುಟ್ಟಿದ ಹಬ್ಬದ ದಿನದಂದೇ ನಡೆದ ಶವಯಾತ್ರೆ ಮಾತ್ರ ನೆನಪಿನಲ್ಲಿದೆ. ಕಣ್ಣಲ್ಲಿ ನೀರು ಬರುತ್ತೆ. ಮತ್ತೆ ಒರೆಸಿಕೊಳ್ಳುತ್ತೇನೆ. ದೀಪಾವಳಿಯನ್ನು ಶಪಿಸುತ್ತೇನೆ. ಬೆಂಗಳೂರನ್ನು ಬೈಯ್ಯುತ್ತೇನೆ. ಕಣ್ಮುಂದೆ ಬಂದು ನಿಲ್ಲುವ ಇಂದಿನ 'ನನ್ನನ್ನು' ನೋಡಿ, ಏನೂ ಪ್ರಯೋಜನವಿಲ್ಲವೆಂದು ತಲೆಯಾಡಿಸಿ ಮತ್ತೆ ಕನಸಿನ ಕುದುರೆಯ ಬೆನ್ನಟ್ಟಿ ಓಡಲೆತ್ನಿಸುತ್ತೇನೆ. ಅಕ್ಕ, ಗುರುನಾಥ ಗಿರೀಶರು ಅಪ್ಪನ ಸಾಮಿಪ್ಯದಲ್ಲಿದ್ದವರು, ಅವರನ್ನು ನೋಡಿ ಸಂತಸಪಡುತ್ತೇನೆ. ಅತ್ತೆಯು ಬದುಕಿನ ಸೌಂದರ್ಯವನ್ನು ಸವಿಯುವಂತೆ ಆದರ್ಶದ ಪುಟಗಳನ್ನು ಹರಡಿರುತ್ತಾರೆ. ಅಮ್ಮ ಮರೆವನ್ನು ಪರಿಚಯಿಸುತ್ತಿರುತ್ತಾರೆ. ಮತ್ತೊಂದು ಹುಟ್ಟುಹಬ್ಬ ಬರುತ್ತದೆ. ಮತ್ತದೇ ನೆನಪು, ಮತ್ತದೇ ಬಾಷ್ಪ!!

-ಅ
21.10.2007
3.20AM

5 comments:

 1. wishes ge tumba thanks.
  Ninge huttuhabbada wishes :-) ... ninne raathre naavu hotte tumba nakka haage jeevana poorti nagta iru. Appa na jaagadalli ondu void permanent aagi irutte ... aadre life goes on ... avru 'taayi' aagidda appa nange. Oct tingaLe bhaya huttisutte ... taatandoo 22-e alwa ... aadroo ... positive side na nodbeku ... nin huttu habbakke mattomme shubhashayagaLu.

  ReplyDelete
 2. ಅರುಣ್,

  ಹುಟ್ಟಿದ ದಿನದ ಶುಭಾಶಯಗಳು.

  ನೀವು ನಿಮ್ಮಕ್ಕನ ಸಂತಸದ ಸಮಯಕ್ಕೆ ಮಾಡಿದ ವಿಷ್ ತುಂಬ ಇಷ್ಟವಾಯಿತು. ಅದಕ್ಕಿಂತ ಜಾಸ್ತಿ ನಿಮ್ಗೆ ನೀವೇ ವಿಶ್ ಮಾಡಿಕೊಂಡಿದ್ದು.. :) its cute.

  ನೆನಪಾಗಿ ಉಳಿದ ಅಪ್ಪ ನಿಮ್ಮ ಬಾಳಿನ ತಂಪು ಗಳಿಗೆಯಲ್ಲಿ ತಂಗಾಳಿಯಾಗಿ, ಬಿರುಬಿಸಿಲಿನಲ್ಲಿ ನೆಳಲಾಗಿ ಜೊತೆಗಿರುತ್ತಾರೆ. ನೀವು ಪ್ರೀತಿಸಿ ಸುತ್ತುವ ಕಾಡು-ನದಿಗಳ ಎಲ್ಲ ಹೊರಳಿನಲ್ಲಿ ಕಾಣುವ ಮುಗುಳ್ನಗು ಅವರದ್ದೇ.

  ಒಳ್ಳೆಯದಾಗಲಿ.
  ನೋವಿನ ಕ್ಷಣಗಳನ್ನು ಅಣಕಿಸುವಷ್ಟು ನಗುವಿರಲಿ.

  ಪ್ರೀತಿಯಿಂದ
  ಸಿಂಧು

  ReplyDelete
 3. ಅರ್ಧದಾಯುಷ್ಯ ಮುಗಿಯಿತು ಅಂತ ಯಾಕೆ ಹೇಳ್ತೀ? ಯಾರು ಎಷ್ಟು ಆಯುಷ್ಯ ತಮ್ಮೊಡನೆ ಕಟ್ಟಿಕೊಂಡು ಬಂದಿರುತ್ತರೆ ಎಂದು ಯಾರು ಬಲ್ಲರು? ಅನಿಸಿಕೆಯೆಲ್ಲಾ ನಿಜವಲ್ಲ.

  ನೀನು ಪಿತೃವಾತ್ಸಲ್ಯ ಹೆಚ್ಚು ಅನುಭವಿಸಿಲ್ಲದರ ಬೇಸರವನ್ನು ನಿನ್ನೊಡನೆ ನಾನೂ ಹಂಚಿಕೊಳ್ಳುವೆ. ಅಪ್ಪನ ಸ್ಥಾನ ತುಂಬುವುದು ಅಪ್ಪನಿಂದಲೇ ಸಾಧ್ಯ. ಆದರೆ ಕೆಟ್ಟ ಘಳಿಗೆಗಳನ್ನು ಮರೆತು ಒಳ್ಳೆಯ ಘಳಿಗೆಗಳಿಂದ ಸ್ಫೂರ್ತಿ ಪಡೆದು ಮುನ್ನಡೆಯುವುದು ಜೀವನ. ಪ್ರತಿಯೊಂದು ಘಟನೆಯಿಂದಲೂ ಒಳ್ಳೆಯ ವಿಷಯಗಳನ್ನು ನೋಡು. ಮನೆಯ ವಿಷಯದಲ್ಲಿ ಅಪ್ಪನ ಹಲವು ಜವಾಬ್ದಾರಿಗಳನ್ನು ನೀನು ನಿರ್ವಹಿಸಲು ಚಿಕ್ಕ ವಯಸ್ಸಿನಲ್ಲಿಯೇ ಕಲೆತಿದ್ದೀಯ. ಕಷ್ಟಕಾಲ ಎದುರಾರದೂ ಎದೆಗುಂದದೇ ನಿನ್ನ ಕಾಲುಗಳ ಮೇಲೆ ನೀನು ನಿಲ್ಲುವುದು ಕಲೆತಿದ್ದೀಯ. ಅದರಿಂದ ನಿನ್ನ ಜೀವನದಲ್ಲಿ ಎಷ್ಟೋ ಉಪಯೋಗವಾಗಿರುತ್ತದೆ. ಇದನ್ನೆಲ್ಲಾ ನೆನಪಿಸಿಕೊ. ದೀರ್ಘಾಯುಷ್ಯ ನಿನ್ನದಾಗಲಿ. ಸತ್ಕಾರ್ಯಗಳನ್ನು ಮಾಡುತ್ತಾ ಸುಖವಾಗಿ ಬಾಳು.

  ಹುಟ್ಟು ಹಬ್ಬದ ಶುಭಾಶಯಗಳು ಫೋನಿನಲ್ಲೇ ಹೇಳಿದೆ. ನಿನ್ನ ಹುಟ್ಟು ಹಬ್ಬ ನಾನು ನಿನ್ನ ಜೊತೆ ಕಳೆದ ಹಲವು ಸಂತಸದ ಕ್ಷಣಗಳನ್ನು ನೆನಪಿಸುತ್ತದೆ. ಹೀಗೇ ಇನ್ನಷ್ಟು ಸಂತಸವನ್ನು ಅನುಭವಿಸುತ್ತಲೇ ಇರೋಣ...

  ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀಯ. ಹಾಗೇ ಮುಂದುವರೆಸು. ನೀನು ಎಲ್ಲೇ ಇರು, ಹೇಗೇ ಇರು - ನನ್ನ ಶುಭ ಹಾರೈಕೆ ನಿನ್ನೊಂದಿಗಿರುವುದು.

  ನಿನ್ನ ಅಕ್ಕ ಮತ್ತು ಭಾವನಿಗೆ ನನ್ನ ಹೊಸ ಮನೆಯ 'ಗೃಹಪ್ರವೇಶ' ಮಾಡಿದ್ದಕ್ಕೆ ನನ್ನ ಶುಭಾಷಯ ತಿಳಿಸು. ಹೊಸ ಮನೆಯಲ್ಲಿ ಅವರು ಬಾಳಿನ ಹಲವು ಸಿಹಿ ಘಳಿಗೆಗಳನ್ನನುಭವಿಸುವಂತಾಗಲಿ.

  ReplyDelete
 4. [Vijaya] hu, elrdu 22nd-E... oLLe date-u..

  [Sindhu] namge naavu wish maadkoLo maja ne bere alva?

  [Srikanth] yes.

  ReplyDelete
 5. ಅರುಣ್ ಚೆನ್ನೈ ಬನ್ನಿ... ಹೋಗುವಾ ಟ್ರೆಕ್ಕಿಂಗ್‌ಗೆ

  ಮಲ್ಲಿಕಾರ್ಜುನ್
  www.nannahaadu.blogspot.com

  ReplyDelete