Saturday, November 17, 2007

ಸುಸ್ವಾಗತ..

ಕನ್ನಡ ಭಾಷೆಯಲ್ಲಿ ಎಷ್ಟು ಸ್ವಾತಂತ್ರ್ಯ ಇದೆ ಎಂದರೆ ಅನ್ಯಭಾಷೆಯ ಪದಗಳನ್ನು ಬಹಳ ಸಲೀಸಾಗಿ ಸ್ವೀಕರಿಸುತ್ತೆ. ಒಂದೇ ಒಂದು ಅಕ್ಷರವನ್ನು ಬದಲಿಸಿದರೆ ಸಾಕು ಇಂಗ್ಲೀಷು ಕನ್ನಡ ಆಗಿಬಿಡುತ್ತೆ.

ಟೇಬಲ್ಲು, ಚೇರು, ಸೀಟು, ಬಸ್ಸು.. ಹೀಗೆ.. ಸಕ್ಕತ್ ಅಲ್ವಾ? ಭಾಷೆ ಬೆಳೆಯೋದೇ ಹೀಗೆ. ಬೇರೆ ಭಾಷೆಗಳ ಜೊತೆ ಬೆರೆತು, ಅರ್ಥ ವ್ಯತ್ಯಾಸ ಆಗದ ಹಾಗೆ ಸ್ವಲ್ಪ ಅಕ್ಷರಗಳಲ್ಲಿ ಬದಲಿಸಿಕೊಂಡರೆ ಸ್ವಭಾಷೆಯಾದಾಗ ಮಾತ್ರ.

ಮೇಜು, ಸಾಬೂನು.. ಇಂಥಾ ಪದಗಳು ಪಾರ್ಸಿಯಿಂದ ಬಂದಿದ್ದು ಅಂತ ಎಲ್ಲರಿಗೂ ಗೊತ್ತಿರೋದೇ. ಒಂದು "ಉ" ಸಾಕು ಅದು ಕನ್ನಡ ಆಗೋಕೆ.

ಕೈಲಾಸಂ ನಾಟಕಗಳನ್ನು ಓದ್ತಾ ಇದ್ರೆ, ಅಥವಾ ಅವರ ಬರಹಗಳನ್ನು ಓದ್ತಾ ಇದ್ರೆ ಈ "ಉ" ಬಳಕೆ ಬಹಳ ಸೊಗಸಾಗಿ ಮನಮುಟ್ಟುತ್ತೆ.

--> "beer and bread-ಉ keeps the man healthy and good-ಉ.."

--> "shadow of my son-ಉ, on this earth-ಉ.. is called the eclipse of the earth-ಉ!"

ಈ ಥರದ ಲಕ್ಷ ಉದಾಹರಣೆ ಸಿಗುತ್ತೆ.

ಸಂಸ್ಕೃತ ಭಾಷೆ ಇದರಲ್ಲಿ ಅನುತ್ತೀರಣ ಆಗೋಯ್ತು. ಅದನ್ನು ಸಾಹಿತ್ಯ ಲೋಕದಲ್ಲಿ "ಮೃತಭಾಷೆ" ಎಂದು ಕರೆಯುತ್ತಾರೆ, ಕಾರಣವಿಷ್ಟೇ, ಬೇರೆ ಭಾಷೆಯೊಡನೆ ಅದು ಬೆರೆಯಲು ಒಪ್ಪದು. ಭಾರತೀಯ ಭಾಷೆಗಳ ತಾಯಿಯೆನಿಸಿಕೊಂಡ ಸಂಸ್ಕೃತವನ್ನು ಮಾತನಾಡುವವರಿಲ್ಲ. ಯಾಕೆಂದರೆ ಅದು ತನ್ನದೇ ಪರಿಧಿಯೊಳಗೆ ಅಡಗಿಕೊಂಡುಬಿಟ್ಟಿದೆ. ಬೇರೆ ಭಾಷೆಯೊಡನೆ ಬೆರೆಯಲು ಅದರ ರೂಲ್ಸು ರೆಗ್ಯುಲೇಷನ್ಸು ಒಪ್ಪೋದಿಲ್ಲ.

ಅವೆಲ್ಲಾ ಹಾಗಿರಲಿ. ಬೇರೆ ಭಾಷೆಯ ಪದಕ್ಕೆ "ಉ" ಸೇರಿಸಿದರೆ ಕನ್ನಡವಾಯಿತೆಂದು ನಾನು ಯೋಚಿಸುತ್ತಾ, ಇರೋ ಬರೋ ಇಂಗ್ಲೀಷು, ಪಾರ್ಸಿ, ಹಿಂದಿ, ಎಲ್ಲಕ್ಕೂ "ಉ" ಸೇರಿಸಿ ಪ್ರಯೋಗ ಮಾಡ್ತಾ ಇದ್ದೆ. ಬಸ್ ಅಲ್ಲಿ ಸ್ಕೂಲಿನಿಂದ ಮೆಜೆಸ್ಟಿಕ್ ವರೆಗೂ ಬರಬೇಕಲ್ಲಾ, ಬೋರು. ಏನ್ ಮಾಡೋದು! ಈ ಥರ ಸರ್ಕಸ್ ಮಾಡ್ತಾ ಇದ್ದೆ. ಪಕ್ಕದಲ್ಲಿ ಹೊಸದಾಗಿ ಶಾಲೆಗೆ ಬಂದಿದ್ದ ಕನ್ನಡ ಮೇಷ್ಟ್ರು ಕುಳಿತಿದ್ದರು.

ಶಾಲೆಯಲ್ಲಿ ಒಂದು ಪದ್ಧತಿ. ಎಲ್ಲಾ ಟೀಚರುಗಳು ಒಂದೊಂದು ದಿನ ಒಬ್ಬೊಬ್ಬರಂತೆ "assembly duty" ಅಂತ ಮಾಡಬೇಕು. ಅಂದರೆ, ಮಕ್ಕಳ ಕೈಲಿ ವಾರ್ತೆ ಓದಿಸೋದು, thought for the day ಓದಿಸೋದು, pledge ಹೇಳಿಸೋದು, ಐದೈದು quiz ಪ್ರಶ್ನೆಗಳನ್ನು ಕೇಳುವುದು ಹೀಗೆ. ಹೊಸತಾಗಿ ಬಂದ ಮೇಷ್ಟ್ರಿಗೆ ಇದನ್ನೆಲ್ಲಾ ವಿವರಿಸಿದೆ. ಅವರು ನನ್ನ ಹತ್ತಿರ confirm ಮಾಡಿಕೊಳ್ಳಲು, "ಸರ ಅಸೆಂಬ್ಲಿ ಡ್ಯೂಟಿ ಅಂದ್ರ, ಕ್ವಿಜ್ಜ, ಪ್ಲೆಜ್ಜ, ನ್ಯೂಸ ಇದೇನಾ?" ಅಂದ್ರು. ಆಗ ನನಗನ್ನಿಸಿದ್ದು, "ಓಹ್.. ಬರೀ "ಉ" ಸೇರಿಸಿದರೆ ಬೇರೆ ಭಾಷೆಯ ಪದ ತೊಗೋಬೋದು ಕನ್ನಡಕ್ಕೆ ಅನ್ನೋದು ಸುಳ್ಳು, ಈ ರೀತಿಯೂ ಸಾಧ್ಯ.." ಎಂದು ಬಿಜಾಪುರದ ಮೇಷ್ಟ್ರ ಕಡೆ ತಿರುಗಿ ನಕ್ಕು, "ಹೌದು, ಕ್ವಿಜ್ಜ - ಪ್ಲೆಜ್ಜ ನೇ!!" ಎಂದೆ.

- ಅ
17.11.2007
11.40PM

12 comments:

 1. modlella ksrtc bus alli 'ಬೆಂಗಳೂರ' anta bareetiddaga 'ivrigella spelling kooda sariyaagi baralvalla.. thu' ankotidde.. aamele ondu dina gottaitu.. adu north karntaka dialect anta.. :)

  hmmm.. hey! samskruta maataaDtaarante man.. shimoga hatra.. "mattur".. nam school alli teachers ibru samskrutadalle maataaDtidru... yavaglu...

  ReplyDelete
 2. [ಗಂಡಭೇರುಂಡ] ಮತ್ತೂರಿಗೆ ನಾನು ಹೋಗಿದ್ದೀನಿ. ಅಲ್ಲಿ ಸಂಸ್ಕೃತ ಮಾತಾಡ್ತಾರೆ ಅನ್ನೋದು ಉತ್ಪ್ರೇಕ್ಷೆ. ಮತ್ತೂರಿನಲ್ಲಿ ಸಂಸ್ಕೃತ ಓದಿರೋರು ತುಂಬಾ ಜನ ಇದ್ದಾರೆ. ಪಂಡಿತರು. ಮತ್ತೂರಿನವರಲ್ಲಿ ಬಹುತೇಕ ಮಂದಿ ಸಂಪ್ರದಾಯಸ್ತ ಬ್ರಾಹ್ಮಣರು. ಸಂಸ್ಕೃತವನ್ನು ಮಾತೃಭಾಷೆಯ ಹಾಗೆ ಮಾತನಾಡುವುದಿಲ್ಲ. ಸಂಸ್ಕೃತ ಅಧ್ಯಾಪಕರುಗಳು ಸಂಸ್ಕೃತದಲ್ಲೇ ಮಾತನಾಡುವುದು ವಾಡಿಕೆಯಷ್ಟೆ.

  ReplyDelete
 3. hmmm... oTTalli maataDtaaralla.. saaku biDu ;)

  ReplyDelete
 4. ಒಟ್ಟಿನಲ್ಲಿ ಮಾತನಾಡುವುದು ಬೇರೆ. ಪುರೋಹಿತರು ಸಂಸ್ಕೃತದಲ್ಲಿ ಮಂತ್ರ ಹೇಳಿದರೆ ಅಥವಾ ... ಕರಿಷ್ಯೇ ಅಂತ ಹೇಳಿಕೊಟ್ಟರೆ ಅದನ್ನು ಆಡಳಿತ ಭಾಷೆಯಾಗಿ ತೆಗೆದುಕೊಳ್ಳೋದಿಲ್ಲವಲ್ಲಾ..

  ಸಂಸ್ಕೃತ ಯಾವ ರಾಜ್ಯದಲ್ಲೂ ಆಡಳಿತ ಭಾಷೆಯಲ್ಲ. ಅದನ್ನು ಹೇಳಹೊರಟಿದ್ದೆ ಅಷ್ಟೇ..

  ReplyDelete
 5. ya ya.. u're right.. ondaaaaaanondu kaaladalli adu aaDubhaashe aagittante... eega nam kannaDa iro haage.. innu saaviraaaaaaru varshagaLa nantara kannaDa kooDa ade thara.. bari saahityadallirbodeno :-/ who knows...

  ReplyDelete
 6. ಸಂಸ್ಕೃತ ಎಲ್ಲಾ ಭಾಷೆಗಳಿಗಿಂತ ಪ್ರಾಚೀನ ಎಂದು ಕೇಳಿದೀನಿ. ಎಲ್ಲಾ ಭಾರತೀಯ ಭಾಷೆಗಳಿಗಿಂತಂತೂ ಪ್ರಾಚೀನ. ಸಂಸ್ಕೃತದಿಂದಲೇ ಸುಮಾರು ಭಾರತೀಯ ಭಾಷೆಗಳು ಹುಟ್ಟಿಕೊಂಡಿವೆ. ಸಂಸ್ಕೃತ ಹುಟ್ಟಿದಾಗ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ - ಇದ್ಯಾವ ಭಾಷೆಗಳೂ ಇರಲಿಲ್ಲ? ಭಾಷೆಗಳೇ ಇರದಿದ್ದಮೇಲೆ ಬೆರೆಯುವ ಪ್ರಶ್ನೆ ಎಲ್ಲಿ?

  ಉಳಿದೆಲ್ಲಾ ಭಾಷೆಗಳನ್ನೂ ಸೇರಿಸಿದ ಶಬ್ದಕೋಶದಲ್ಲಿ ಎಷ್ಟು ಪದ ಸಿಗುವುದೋ, ಅದಕ್ಕಿಂತ ಹೆಚ್ಚು ಪದಗಳು ಸಂಸ್ಕೃತದಲ್ಲಿವೆ. ಪುರಾಣಗಳು, ವೇದಗಳು ಇತ್ಯಾದಿ ಓದಿದರೆ ನಿನಗೇ ಗೊತ್ತಾಗುತ್ತದೆ. ಇಷ್ಟೆಲ್ಲಾ ಇದ್ದಮೇಲೆ ಬೇರೆ ಭಾಷೆಯೊಂದಿಗೆ ಬೆರೆಯುವ ಅಗತ್ಯ ಸಂಸ್ಕೃತಕ್ಕೇಕೆ?

  ಬರೆಯುವಂತೇ ಮಾತನಾಡಬೇಕು ಎಂಬ ನಿಯಮ ಜನರು ಸಂಸ್ಕೃತವನ್ನು ಆಡುಭಾಷೆಯನ್ನಾಗಿ ಮಾಡಿಕೊಳ್ಳದಿರಲು ಕಾರಣ ಎಂದು ನಾನು ಒಪ್ಪುತ್ತೇನೆ. ಆದರೆ ಸಂಸ್ಕೃತ ಬೇರೆ ಭಾಷೆಗಳ ಜೊತೆ ಬೆರೆಯಕೂಡದೆಂದು ನನ್ನ ಅಭಿಪ್ರಾಯ. ಸಂಸ್ಕೃತ ಹಲವಾರು ಭಾಷೆಗಳ ಬೇರು. ಇತರ ಭಾಷೆಗಳ ಜೊತೆ ಬೆರೆತು ಮೂಲಭಾಷೆಯಾದ ಸಂಸ್ಕೃತವೇ ಬದಲಾದರೆ ಅದರಿಂದ ಹುಟ್ಟಿರುವ, ಮುಂದೆ ಹುಟ್ಟಬಹುದಾದ ಭಾಷೆಗಳ ಗತಿಯೇನು?

  ReplyDelete
 7. [ಶ್ರೀಕಾಂತ್] :-)

  ReplyDelete
 8. kannada super kaNappa.....ella bhaase nu serskoLatte...ella janrannu serskoLatte... :-)
  "kannadave nammamma avaLige kaimugiyamma...." :-) :-)

  ReplyDelete
 9. sooooperruuu... nice-uuuuu nimma writing-uuu!!! uu uu uu!! :D
  Kannada nammamma, Samskrutha namma ammammmaa!! ibbaruuu namma maateyaru!! :-)
  Ammamma salpa strict-u.. bere bhaashe strictly restricteddu!
  Amma ella bhaasheguu avL maDilalli salpa jaaga givingu....!!! :-) :-)

  Bhaashe communication ge maatra.. Bhaashe idre sundara.. bhaashe ildidre atiiiiiisundara!! artha aadre aaythu!
  Universe ge yaav bhaashe nu gottilvante! :-)
  maragiDa moDa hakki iruve ivelladara jotey maataaDakke no bhaashe!

  ReplyDelete
 10. air bed mattressSaturday, June 21, 2008

  black mold exposureblack mold symptoms of exposurewrought iron garden gatesiron garden gates find them herefine thin hair hairstylessearch hair styles for fine thin hairnight vision binocularsbuy night vision binocularslipitor reactionslipitor allergic reactionsluxury beach resort in the philippines

  afordable beach resorts in the philippineshomeopathy for eczema.baby eczema.save big with great mineral makeup bargainsmineral makeup wholesalersprodam iphone Apple prodam iphone prahacect iphone manualmanual for P 168 iphonefero 52 binocularsnight vision Fero 52 binocularsThe best night vision binoculars here

  night vision binoculars bargainsfree photo albums computer programsfree software to make photo albumsfree tax formsprintable tax forms for free craftmatic air bedcraftmatic air bed adjustable info hereboyd air bedboyd night air bed lowest pricefind air beds in wisconsinbest air beds in wisconsincloud air beds

  best cloud inflatable air bedssealy air beds portableportables air bedsrv luggage racksaluminum made rv luggage racksair bed raisedbest form raised air bedsaircraft support equipmentsbest support equipments for aircraftsbed air informercialsbest informercials bed airmattress sized air beds

  bestair bed mattress antique doorknobsantique doorknob identification tipsdvd player troubleshootingtroubleshooting with the dvd playerflat panel television lcd vs plasmaflat panel lcd television versus plasma pic the bestThe causes of economic recessionwhat are the causes of economic recessionadjustable bed air foam The best bed air foam

  hoof prints antique equestrian printsantique hoof prints equestrian printsBuy air bedadjustablebuy the best adjustable air bedsair beds canadian storesCanadian stores for air beds

  migraine causemigraine treatments floridaflorida headache clinicdrying dessicantair drying dessicantdessicant air dryerpediatric asthmaasthma specialistasthma children specialistcarpet cleaning dallas txcarpet cleaners dallascarpet cleaning dallas

  vero beach vacationvero beach vacationsbeach vacation homes veroms beach vacationsms beach vacationms beach condosmaui beach vacationmaui beach vacationsmaui beach clubbeach vacationsyour beach vacationscheap beach vacations

  ReplyDelete
 11. enidu aruna..ninge chinese comment ella biddide.....???

  ReplyDelete