Sunday, November 18, 2007

ಹಾಡುಗಳು.. ಅಂದು - ಇಂದುಯಾವುದು ಚೆನ್ನಾಗಿದೆ ಯಾವುದು ಚೆನ್ನಾಗಿಲ್ಲ ಅನ್ನೋ ಪ್ರಶ್ನೆ ಅರ್ಥಹೀನ.. ಒಂದಷ್ಟು ಹಾಡುಗಳು ಇಲ್ಲಿವೆ..

ಅಂದು:
ಕನ್ನಡನಾಡಿನ ವೀರರಮಣಿಯ
ಗಂಡು ಭೂಮಿಯ ವೀರನಾಡಿನ
ಚರಿತೆಯ ನಾನು ಹಾಡುವೆ..

ಇಂದು:
ಧೂಳ್ ಮಗ ಧೂಳ್
ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ಲು ಮಗ ದಿಲ್
ದಿನಕ್ ದಿನಕ್ ದಿಲ್
ಮೀಟರ್ ಇಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ..

ಇಂದು ಇಂದಿನ ಚರಿತೆ! ಚಿತ್ರದುರ್ಗದ ಬದಲು ಕಲಾಸಿಪಾಳ್ಯ ಅಷ್ಟೇ..

ಅಂದು:
ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ.. ಮರೆವೆ ಈ ಸಂಚು..

ಕ್ಯಾಬೆರೇ ಹಾಡಲ್ಲೂ ಶೃಂಗಾರ!!

ಇಂದು:
ಕುಲುಕ ಬೇಡ ಕುಲುಕ ಬೇಡ ಸಿಲ್ಕು
ನೀನ್ ಕುಲ್ಕೋಕ್ ಮುಂಚೆ ಯಾಕಂಥ್ ಹೇಳಿ ಕುಲ್ಕು
ಬಳುಕ ಬೇಡ ಬಳುಕ ಬೇಡ ಸಿಲ್ಕು
ನೀನ್ ಎಲ್ಲಿಂದ್ ಬಂದೆ ಹೇಳ್ಬಿಟ್ ಹೋಗಿ ಬಳ್ಕು..

ಕುಲುಕೋಕೆ, ಬಳುಕೋಕೆ ಕಾರಣ ಬೇರೆ ಕೊಡಬೇಕಂತೆ..

ಅಂದು:
ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ
ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ..

ರೂಪಕಾಲಂಕಾರ ಎಟ್ ಇಟ್ಸ್ ಬೆಸ್ಟ್..

ಇಂದು:
ಹಾರ್ಟ್ ಅನ್ನೋ ಅಡ್ಡಾದಲ್ಲಿ
ಲವ್ ಅನ್ನೋ ಲಾಂಗು ಹಿಡಿದು
ನನ್ನನ್ ಅಟಾಕ್ ಮಾಡೋ ಶಿವ ಶಿವಾ..

ಉಪಮಾಲಂಕಾರ ಎಟ್ ಇಟ್ಸ್ ವರ್ಸ್ಟ್..

ಅಂದು:
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ ಕಂಡೆ ಪ್ರೇಮ ದೀಪ..
ನಿನ್ನ ತುಂಟ ಹೂ ನಗೆಯಲ್ಲಿ ಏನೋ ಏನೋ ಭಾವ
ನಗೆಯು ತಂದ ಮೋಡಿಯಲ್ಲಿ ನಲಿಯಿತೆನ್ನ ಜೀವ..

ಹೆಣ್ಣಿನ ಕಣ್ಣು ಏನೇನೆಲ್ಲಾ ಆಗಬಹುದು, ಏನೇನೆಲ್ಲಾ ಮಾಡಬಹುದು? ಪ್ರೇಮದ ದೀಪವನ್ನೇ ಬೆಳಗುತ್ತೆ!!

ಇಂದು:
ನಿನ್ನ ಕಣ್ಣು ಕುಂಬ್ಳೆ ಸ್ಪಿನ್ನು
ಕ್ಲೀನು ಬೋಲ್ಡ್ ಆದೆ ನಾ
ನಿಂಗೆ ಔಟ್ ಆದೆ ನಾ..

ಹೆಣ್ಣಿನ ಕಣ್ಣನ್ನು ಹೀಗೂ ಹೋಲಿಸಬಹುದು ಅಂತ ನಮ್ಮ ಕವಿಗಳಿಗೆ ಗೊತ್ತೇ ಇರಲಿಲ್ಲ..

ಅಂದು:
ಇವಳು ಯಾರು ಬಲ್ಲೆಯೇನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ ಬಂದು ನನ್ನ ಸೆಳೆದಳು..

ಪ್ರೇಮಕವಿ ನರಸಿಂಹಸ್ವಾಮಿ ಬರೆದ ಸಾಲುಗಳು..

ಇಂದು:
ಹೇ ಹೇ.. ಹೋ ಹೋ..
ಏನಾಯ್ತೋ ನಿಂಗೆ..
ಹೇ ಹೇ.. ಹೋ ಹೋ..
ಯಾಕಿಂಗ್ ಆಡ್ತೀಯೋ..
ಟಟ್ಟಾಡಡಾಔಡಾಔ ಟಟ್ಟಾಡಡಾಔಡಾಔ
ಟಟ್ಟಾಡಡಾಔಡಾಔ ಹಂಗದಂದ್ರೇನೋ?
ಟಟ್ಟಾಡಡಾಔಡಾಔ ಜಾರಿಬಿದ್ದೆ ನಾನು
ಪ್ರೀತಿಯಲ್ಲಿ..

ಪ್ರೇಮದ ಬಗ್ಗೆಯೇ ಚಿತ್ರ ಮಾಡುವ ರವಿ ಅಂಕಲ್ ಬರೆದ ಹಾಡು..ಅಂದು:
ಕಾಪಾಡು ಶ್ರೀ ಸತ್ಯನಾರಾಯಣ
ಪನ್ನಗಶಯನ ಪಾವನಚರಣ
ನಂಬಿಹೆ ನಿನ್ನ..

ನಮಗೆ ಯಾರ ರಕ್ಷೆ ಬೇಕು ಅಂತ ಜನಕ್ಕೆ ಗೊತ್ತಿತ್ತು..

ಇಂದು:
ಬಿನ್ ಲ್ಯಾಡೆನ್ನು ನನ್ ಮಾವ..
ಬಿಲ್ ಕ್ಲಿಂಟನ್ನು ನನ್ ಭಾವ..
ನಮ್ಮಪ್ಪ ಲಾಲೂ ಮುಟ್ಟಿದ್ರೆ ಡೀಲು
ಕೈಕಾಲ್ ಕಟ್ಟಿ ಮೂಟೆ ಕಟ್‍ತಾರೋ..

ಇವರಿಗೂ ಗೊತ್ತು ಯಾರ ರಕ್ಷೆ ಬೇಕು ಅಂತ..

ಅಂದು:
ಬಾನಲ್ಲೂ ನೀನೇ ಬುವಿಯಲ್ಲೂ ನೀನೇ
ಎಲ್ಲೆಲ್ಲೂ ನೀನೇ ನನ್ನಲ್ಲೂ ನೀನೇ...

ನಲ್ಲನನ್ನು ಕಾಣದೆಡೆಯೇ ಇಲ್ಲ ನಲ್ಲೆ..

ಇಂದು:
ಬಾರೋ ಬಾರೋ
ಹೀರೋ ಹೀರೋ..
ಕಾಫಿಲೂ ಟೀವಿಲೂ ಕಾದಂಬ್ರಿ ಸ್ಟೋರೀಲೂ ನೀನೇ
ವಾಕಲ್ಲೂ ಟಾಕಲ್ಲೂ ಸ್ಮೋಕಿಂಗು ಸ್ಮೋಕಲ್ಲೂ ನೀನೇ..

ಆಗ ನಲ್ಲೆ ಸಿಗರೇಟು ಸೇದುತ್ತಿರಲಿಲ್ಲ.. ಈಗ ಸೇದ್ತಾಳೆ ಅನ್ಸುತ್ತೆ..

ಅಂದು:
ಸೋಲನೆಂದು ಕಾಣದಂಥ ವೀರಪಾರ್ಥನು
ನಿನ್ನ ಕಣ್ಣ ಬಾಣದಿಂದ ಸೋತುಹೋದನು..

ನಾನು ವೀರನೆಂಬ ಭಾವನೆ ಪ್ರಣಯದೊಂದಿಗೆ ಬೆರೆಸೋದು ಹೇಗೆ? ನಾಯಕ ಹೀಗೆ ಹೇಳುತ್ತಿರಲು ನಾಯಕಿ ನಾಚುತ್ತಾಳೆ.. ಹುಣಸೂರರಿಗಿಂತ ಚೆನ್ನಾಗಿ ಬರೆಯಲು ಸಾಧ್ಯವೇ?

ಇಂದು:
ಅವನು: ಅಡ್ಡದಲ್ಲಿ ಕಿಂಗು ನಾನು ಟಪೋರಿ
ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ
ಅವಳು: ಬಾಯಿ ಬಿಟ್ಟು ಯಾಕೆ ಹಿಂಗೆ ಹೇಳ್ತೀರಿ
ಡೌವ್ವು ಮಾಡ್ದೆ ಲವ್ವು ಮಾಡ್ರೀ ಡೌಟ್ ಯಾಕ್ರೀ..

ವೀರಕನ್ನಡಿಗ "ಮುಚ್ಕೊಂಡ್ ಲವ್ ಮಾಡ್ರೀ.." ಅಂತ ಅವಳ ಕೈಲಿ ಬೈಸ್ಕೊಂಡ ಇಲ್ಲಿ.

ಅಂದು:
ಚಂದ್ರ ಮಂಚಕೆ ಬಾ ಚಕೋರಿ
ಚಂದ್ರ ಮಂಚಕೆ ಬಾ
ಜೊನ್ನ ಜೇನಿಗೆ ಬಾಯಾರಿದೆ
ಚಕೋರ ಚುಂಬನ ಚಕೋರಿ..

ಕುವೆಂಪು ಸಾಹಿತ್ಯ. ಚುಂಬಿಸುವ ಹಂಬಲ, ಪ್ರಣಯದ ಕಾತುರತೆ, ಪ್ರೇಮವು ಕಾಮವೂ ಚಿಲುಮೆಯಂತೆ ಉಕ್ಕಿಬರುತ್ತಿರಲು ಸೊಗಸಾದ ರೋಮಾಂಚಕಾರಿ ಸಾಹಿತ್ಯವೂ ಹೊರಬಂದಿತು ಅವರ ಲೇಖನಿಯಿಂದ..

ಇಂದು:
ನಖ್‍ರಾ ಗಿಖ್‍ರಾ ಬ್ಯಾಡ
ಡವ್ವು ಗಿವ್ವು ಬ್ಯಾಡ
ಕೊಡಲೇ ಬ್ಯಾಡ ನೀನು ಪೋಸು..
ಕೊಡೇ ಕಿಸ್ಸು.. ಲೇ.. ಕೊಡೇ ಕಿಸ್ಸು..

ಕಿಸ್ ಮಾಡೋದ್ರಲ್ಲೂ ದಬ್ಬಾಳಿಕೆಯೇ?

ಅಂದು:
ಜೇನಿನ ಹೊಳೆಯೋ ಹಾಲಿನ ಮಳೆಯೋ
ಸುಧೆಯೋ ಕನ್ನಡ ಸವಿನುಡಿಯೋ..

ಜೈ ಕರ್ನಾಟಕ ಮಾತೆ! ಕನ್ನಡದ ಬಾವುಟ ಮೇಲಕ್ಕೆ ಹಾರುತ್ತಿದೆ..

ಇಂದು:
ಸಿಂಪಲ್ಲಾಗ್ ಹೇಳ್ತೀನ್ ಕೇಳೇ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ ಭಾಷೆ..

ಕನ್ನಡದ ಕಂಬಕ್ಕೆ ಇಂಗ್ಲೀಷ್ ಬಾವುಟ ಹಾರಿಸಿದ್ದಾರಲ್ಲಾ..

ಅಂದು:
ಮಿಂಚಂತೆ ಸುಳಿದು ನೀನು ಮರೆಯಾಗಿ ಹೋದರೇನು
ಸುಳಿವನ್ನು ತಿಳಿಯಬಲ್ಲ ಹೊಸಮೋಡಿ ಬಲ್ಲೆ ನಾನು
ಬಾಳಲ್ಲಿ ಬಿಡಿಸದಂಥ ಎಂದೆಂದೂ ಮುರಿಯದಂಥ
ಬಂಧನದಿ ಹಿಡಿವೆ ನಿನ್ನ..

ನಲ್ಲೆಯನ್ನು ಬಂಧನದಲ್ಲಿರಿಸಿಕೊಳುವೆನೆಂದು ಹೇಳಲು ಏನೆಲ್ಲಾ ಸರ್ಕಸ್ಸು...

ಇಂದು:
ರಾತ್ರಿಯೆಲ್ಲಾ ಸ್ವರ್ಗದಲಿ ತಿನಿಸಿದೆ ವೀಳ್ಯ
ನಾ ಬೆಳಗೆದ್ದು ಕಣ್ಬಿಟ್ರೆ ಕಲಾಸಿಪಾಳ್ಯ..

ರಾತ್ರಿಗೂ, ವೀಳ್ಯಕ್ಕೂ ಕಲಾಸಿಪಾಳ್ಯಕ್ಕೂ ಏನು ಸಂಬಂಧ??

ಅಂದು:
ಸಿಗಿವೆಂ ಕ್ಷಣದಲಿ ನಿನ್ನ ನಾಂ
ಎಲ್ಲಿ ಹೋದರೇನು ನಿನ್ನ ಉಳಿಸೆನು
ದಾನವೇಂದ್ರನಾದ ನನ್ನ ಕೆಣಕಿದ
ಮದೋನ್ಮತ್ತ ದುರುಳ ದುಷ್ಟ ಧೂರ್ತನೇ..

ಗತ್ತು ಗಮ್ಮತ್ತು ಬರೀ ಸಾಹಿತ್ಯದಲ್ಲಿಲ್ಲ, ಹಾಡನ್ನು ನೋಡಬೇಕು, ಕೇಳಬೇಕು.. ಮೈ ಜುಂ ಅನ್ನೋದಂತೂ ಸತ್ಯ..

ಇಂದು:
ಹೊಡಿ ಮಗ ಹೊಡಿ ಮಗ ಬಿಡಬೇಡ ಅವ್‍ನ್ನಾ..

ಮೈ ಜುಂ ಅನ್ನಲ್ಲ, ತಲೆ ದಿಂ ಅನ್ನುತ್ತೆ..ಅಂದು:
ನೀನ್ ಯಾರೋ ತಿಳಿಯದಿದ್ದರೂ
ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರೂ
ಕರಗಿ ನೀರಾದೆ..

ಇಡೀ ಕನ್ನಡ ಚಿತ್ರರಂಗದಲ್ಲಿ ಬಹುಶಃ ಹಂಸಲೇಖರಷ್ಟು ರೊಮ್ಯಾಂಟಿಕ್ ಲಿರಿಸಿಸ್ಟ್ ಇನ್ನೊಬ್ಬರಿಲ್ಲ ಅನ್ನಿಸುತ್ತೆ..

ಇಂದು:
ಪ್ರೀತಿಯೇಕೆ ಭೂಮಿ ಮೇಲಿದೆ?
ಬೇರೆ ಎಲ್ಲೂ ಜಾಗವಿಲ್ಲದೆ!!
ನನ್ನೇ ಏಕೆ ಪ್ರೀತಿ ಮಾಡಿದೆ?
ನಿನ್ನ ಹಾಗೆ ಯಾರೂ ಇಲ್ಲದೆ!!

ಎಂಥಾ ಪ್ರಶ್ನೆಗೆ ಎಂಥಾ ಉತ್ತರ!!

ಅಂದು:
ದಿನಕೊಂದು ಬಣ್ಣ ಕ್ಷಣಕೊಂದು ಬಣ್ಣ
ಏನೇನೋ ವೇಷ ಮಾತಲ್ಲಿ ಮೋಸ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇ ಮಣ್ಣಾಯಿತೇ..
ಮನನೆಮ್ಮದಿ ದೂರಾಯಿತೇ..

ನಂಬಿದ ನಲ್ಲೆ ಮೋಸ ಮಾಡಿ ಹೋದಾಗ ಆಗುವ ದುಃಖ ಹೀಗೇ ಇರುತ್ತೆ ಅನ್ನೋದು ಮೋಸಕ್ಕೊಳಗಾದ ಹುಡುಗರಿಗೆ ಮಾತ್ರ ಅರ್ಥ ಆಗುತ್ತೆ.

ಇಂದು:
ಪ್ರೇಮ ಕನಸಾಯ್ತಲ್ಲಾ.. ಬಣ್ಣ ಮಾಸಿ ಹೋಯ್ತಲ್ಲಾ
ಮೋಸ ಮಾಡೋಕೆ ನಿಂಗೆ ಬೇರೆ ಯಾರೂ ಸಿಗ್ಲಿಲ್ವಾ?
ಏಕಾಂಗಿ ನಾನಮ್ಮ..

ಬೇರೆ ಯಾರಿಗಾದರೂ ಮೋಸ ಮಾಡಿದ್ದಿದ್ದರೆ ಪರವಾಗಿಲ್ಲ, ತನಗೆ ಮೋಸ ಆಗಬಾರದು ಅಷ್ಟೇ..

ಅಂದು:
ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ..

ಒಲವಿಗೆ ಕೊಟ್ಟ ಅತ್ಯಂತ ಉನ್ನತ ಮಟ್ಟದ ದೆಫನಿಷನ್ನು ಇದು..

ಇಂದು:
ಒಲವೇ ವಿಸ್ಮಯ.. ಒಲವೇ ವಿಸ್ಮಯ..

ತನಗೆ ಸಿಗಲು ಅರ್ಹತೆಯಿರದಿದ್ದರೂ ಹೇಗೋ ಸಿಕ್ಬಿಟಿದೆ ಅನ್ಸುತ್ತೆ.. ಅದಕ್ಕೆ ವಿಸ್ಮಯ ಆಗೋಗಿದೆ.. ಓಹ್ ಒಲವು ಸಿಕ್ಕಿದೆ ಅಂತ!!

ಅಂದು:
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೇ ದೇವರು ಒಲವೇ ದೀವಿಗೆ..

ಒಂದೊಂದೂ ಒಂದೊಂದನ್ನು ಸೂಚಿಸುತ್ತಲ್ಲವೇ??

ಇಂದು:
ಮನಸೇ ಓ ಮನಸೇ.. ಎಂಥಾ ಮನಸೇ..
ಒಳ ಮನಸೇ.. ಹೊರ ಮನಸೇ..
ಮನಸಿನಿಂದ ಮನಸಿನೊಳಗೆ ಮನಸಿನಾಚೆ....

ಈ ಕವಿ 'ಮನಸು' ಅನ್ನೋ ಪದ ಬಿಟ್ಟು ಆಚೆ ಬಂದೇ ಇಲ್ಲ, ಮನಸ್ಸಿನಲ್ಲೇ ಕಳೆದು ಹೋಗಿದ್ದಾರೆ.. ಎಲ್ಲರಿಗೂ ಕನ್ಫ್ಯೂಸು..

ಅಂದು:
ವಿರಹಾಗ್ನಿ ನಿನ್ನೆದೆ ಸುಡಲು
ಬೆಳದಿಂಗಳಾಯಿತು ಬಿಸಿಲು..

ಪ್ರಣಯದಲ್ಲಿ ಒಡಲಿನ ಮಧುವನ್ನು ಸವಿದ ರಸಿಕ ಹಾಡುವ ಬಗೆಯನ್ನು ಸೂಚಿಸುವುದಿಲ್ಲವೇ?

ಇಂದು:
ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
ನೋಡ್ಬಾರ್ದನ್ನ ನಾನ್ ನೋಡ್ದೆ..
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರ್ದನ್ನ ನಾನ್ ಮಾಡ್ದೆ!!

ನೋಡಿದ್ದೇ ಉಂಟಂತೆ, ಮಾಡಿದ್ದೇ ಉಂಟಂತೆ.. ನೋಡ್ಬಾರ್ದು ಮಾಡ್ಬಾರ್ದು ಅಂದ್ರೆ ಅದರಲ್ಲಿ ರಸಿಕತೆ ಏನ್ ಬಂತು? ನಾಯಕ ನಾಯಕಿಯರು ಏನ್ ಏನ್ ನೋಡಿದಾರೋ ಏನ್ ಏನ್ ಮಾಡಿದಾರೋ ಅದು ಅವರಿಗೇನೇ ಅಸಹ್ಯ ಆಗೋಗಿ ನೋಡ್ಬಾರ್ದು ಮಾಡ್ಬಾರ್ದು ಅಂತಿದ್ದಾರಲ್ಲಾ??

ಅಂದು:
ನಿನ್ನದೇ ನೆನಪು ದಿನವೂ ಮನದಲ್ಲಿ
ನೋಡುವ ಆಸೆಯು ತುಂಬಿದೆ ನನ್ನಲಿ.. ನನ್ನಲಿ...

ನಲ್ಲೆಯನ್ನು ನೋಡುವ ತವಕ.. ಕಾತುರತೆ..


ಇಂದು:
ಆಕಳಿಕೆ ಬಂದಾಗ ಜಸ್ಟ್ ಸೇ ಹೈ
ತೂಕಡಿಕೆ ಬಂದಾಗ ಜಸ್ಟ್ ಸೇ ಹೈ
ಬಿಕ್ಕಳಿಕೆ ಬಂದಾಗ ಜಸ್ಟ್ ಸೇ ಹೈ..

ಇದಕ್ಕಿಂತ ಕಳಪೆ ಸಾಹಿತ್ಯ (ಸಾಹಿತ್ಯ ಅನ್ನೋ ಪದ ತುಂಬಾ ದೊಡ್ಡದು ಈ ಸಾಲುಗಳಿಗೆ) ನಾನು ನೋಡೇ ಇಲ್ಲ. ಆಕಳಿಕೆ ತೂಕಡಿಕೆ ಬಿಕ್ಕಳಿಕೆ ಬಂದಾಗ ಹೈ ಅನ್ಬೇಕಂತೆ! ನಿಜ ಹೇಳ್ಬೇಕು ಅಂದ್ರೆ "ಹಾಯ್" ಅನ್ನುವ ಹಾಗೆ ಆಗುತ್ತೆ - ಹೊಟ್ಟೆ ಕೆಟ್ಟು ತಡೆದಿಟ್ಟುಕೊಂಡು ತುಂಬಾ ಹೊತ್ತಾದ ಮೇಲೆ ಅಪಾನವಾಯು ಬಂದರೆ!! ಅದನ್ನು ಸೇರಿಸಿಲ್ಲ ಈ ಹಾಡಿನಲ್ಲಿ ಪುಣ್ಯ!!ಹಳೆಯ ಹಾಡೆಲ್ಲಾ ಚೆನ್ನಾಗಿತ್ತು ಈಗ ಬರುವ ಹಾಡೆಲ್ಲಾ ಗಬ್ಬು ಅಂತ ನಾನು ಹೇಳುತ್ತಿಲ್ಲ. ಈಗಲೂ ಅದ್ಭುತ ಸಾಹಿತ್ಯ ಸಂಗೀತ ರಚನೆ ನಡೆಯುತ್ತಿದೆ. ಇತ್ತೀಚೆಗೆ ಕನ್ನಡ ಚಿತ್ರಗಳು ಸಂಗೀತ-ಸಾಹಿತ್ಯದ ಸಲುವಾಗೇ ಓಡುತ್ತಿವೆ ಕಥೆ ಸುಮಾರಾಗಿ ಇದ್ದರೂ! ಅವರೆಲ್ಲರಿಗೂ ಶುಭವಾಗಲಿ. ಕಳಪೆ ಸಾಹಿತ್ಯ ದೂರವಾಗಲಿ ಚಿತ್ರರಂಗದಿಂದ.. ಯಾರಿಗೂ ಇಷ್ಟ ಆಗಲ್ಲ ಕೆಟ್ಟ ಕೆಟ್ಟ ಸಾಹಿತ್ಯ ಇದ್ದರೆ!! ಚಿತ್ರಸಾಹಿತಿಗಳೇ, ನಿಮಗೂ ಇಷ್ಟ ಆಗಿರಲ್ಲ, ಆದರೂ ಯಾಕೆ ಬರೀತೀರ ಹೀಗೆಲ್ಲಾ?

-ಅ
18.11.2007
6AM

9 comments:

 1. Super collection and combination of songs arun.... "mastu nee mastu nee mastoooooo..." idooo kooda ondh haade..."aa dingaLu" dalli ondu professionalism antha irtittu...kett kettdaagi bardre jana en anthaaro anno digilittu. tupak antha ugeetidru....eeginavakke aathara irodilla..janakke en kotru tagothaare annob bhaavane.. aaga chitra maadbekaadre adakkende koothu haadu bareetidru... eega "santhe hottige mooru moLa neydranthe" anno haagagidhe..haad baryodrallu record -u anthella idhe for ex: puneet rajkumar "appu" chitrada "taliban alla...alla...bin laden alla alla" ee haad na nam uppi ;-) kevala 3 nimshadalli bardiddanthe.... heege kshaNagaLalli bardre innentha saahitya huttoke saadya.....aaga haad baryorge condition gaLidvu..kannada oodkondirbeku, swapa mattige saahitya gottirbeku, kavigaLaagirbeku heegella...ondu maanadaMda thara...eega kaige bandange bareethaare baige bandange haadgaLu haadthaare.....kelvu sala inthaa haadgaLu hit kooda aagbidtave..illi "mass" songs anno pada baratte....hmmmm...
  "badalaavaNe jagada niyama".. eeglu oLLe saahitya baritha haadgaLu bartive aadre adara sankhye maatra kammi...nam hamsalekha tara versatile aagi baryoru kammi..... ;-) nange ista aada eradu class haadgaLu haaki comment mugstheeni... "bayasuvudannu tappu andare manasige avamaana..kshaNika sukhakko soladiddaru mohake apamaane...snehake endu preetiye geLeya ...preetige endu satyave hrudayaaaaa...."...

  itteechege bidugaDeyaada milana chitrada haadu..."maLe nintu hoda mele haniyondu moodide....maatella mugidaa mele daniyondu kaadide..."

  ReplyDelete
 2. ಅತಿ ವಿಚಿತ್ರ ಅಂದ್ರೆ ಯಾಕೋ ಈ ಪೋಸ್ಟ್ ನೋಡಿ ಈ ಕೆಳಗಿನ ಸಾಲುಗಳು ನೆನಪಾದ್ವು.. ಹ್ಹಿ ಹ್ಹಿ ಹ್ಹಿ ಹ್ಹಿ...

  ರಸಜೀವ ಭಾವವೊಡಲರ್ಥವವಯವ ಶಬ್ದ
  ವಿಸರವೇ ನುಡಿಯಲಂಕಾರವೇ ತೊಡಿಗೆಯು ಅ
  ವೆಸುಲಕ್ಷಣವೇ ಲಕ್ಷಣ ವಿಮಳ ಪದನ್ಯಾಸ ನಡೆ ರೀತಿ ಸುಕುಮಾರತೆ|
  ರಸಿಕತನ ಸುಳಿ ಸುಖಂ ನಿಳಯವಂತಪ್ಪ ಯೀ
  ಪೊಸಕಾವ್ಯ ಕನ್ಯಕೆಯ ಪಡೆದು ಪಂಪಾಂಬಿಕೆಯ
  ರಸ ವಿರೂಪಾಕ್ಷಂಗೆ ಕೊಟ್ಟ ಹಂಪೆಯ ರಾಘವಾಂಕನೇಂ ಕೃತಕೃತ್ಯನೋ||


  hmmmm.... ಇದು ಹಾಗಿರಲಿ.. ನೀನು ಹೇಳಿದಹಾಗೆ ಈವತ್ತಿನ ಬಹುತೇಕ (ಎಲ್ಲ ಅಲ್ಲ) ಚಿತ್ರಗೀತೆಗಳು ಬರೀ ದೊಂಬರಾಟ ಆಗಿಹೋಗಿರೋದು ವಿಪರ್ಯಾಸ..

  'ಸಾಹಿತ್ಯ ಅನ್ನೋ ಪದ ತುಂಬಾ ದೊಡ್ಡದು ಈ ಸಾಲುಗಳಿಗೆ' ಅಂದಿರೋದು ೧೦೦ ಪ್ರತಿಶತ ಸತ್ಯ, ಇಂಥ 3rd class writing-ಗೆ...
  and ಶ್ರೀಧರ ಹೇಳೋದೂ ನಿಜ.. ಈಗಿನ ಬಹುತೇಕ ಗೀತರಚನೆಕಾರರಿಗೆ ಶಿಸ್ತೇ ಇಲ್ಲ.. ಇನ್ನು ಸಾಹಿತ್ಯ ಹೇಗೆ ಹುಟ್ಟು ಹಾಕ್ತಾರೆ!!!.. ಮಣ್ಣು....

  ಆದ್ರೂ "ಅರಳುತಿರು ಜೀವದ ಗೆಳೆಯ ಸ್ನೇಹದ ಸಿಂಚನದಲ್ಲಿ" ಅಂತಹ ರಚನೆಗಳು ಇನ್ನೂ ಬರ್ತಿರೋದು ಸಂತೋಷದ ಸಂಗತಿ... :)

  ReplyDelete
 3. Errata::
  'ವಿಸರವೇ ನುಡಿಯಲಂಕಾರವೇ ತೊಡಿಗೆಯು ಅ' ಅಂತ ಇರುವಲ್ಲಿ ಕಡೆಯ ಅಕ್ಷರ 'ತ'... ಇಲ್ಲಿರುವಂತೆ 'ಅ' ಅಲ್ಲ... really sorry for the typo error.. :D

  it shd be
  'ವಿಸರವೇ ನುಡಿಯಲಂಕಾರವೇ ತೊಡಿಗೆಯು ತ
  ವೆಸುಲಕ್ಷಣವೇ ಲಕ್ಷಣ ವಿಮಳ ಪದನ್ಯಾಸ ನಡೆ ರೀತಿ ಸುಕುಮಾರತೆ|'

  ReplyDelete
 4. ಎಂಥಾ ದಿನಗಳವು, ಮರೆಯಾಗಿ ಹೋದವು!

  ನಿನ್ನ ಮುಂಚಿನ ಲೇಖನದಲ್ಲಿ ಕನ್ನಡ ಭಾಷೆ ಎಲ್ಲಾ ಭಾಷೆಗಳ ಜೊತೆ ಬೆರೆತು ಅನ್ಯ ಭಾಷೆಯ ಪದಗಳನ್ನು ಸುಲಭವಾಗಿ ಸೇರಿಸಿಕೊಂಡುಬಿಡತ್ತೆ ಅಂದ್ಯಲ್ಲ - ಕನ್ನಡದ ಈ ಉದಾರತನವೇ ಇಂಥಾ ದುರಂತಗಳಿಗೆ ಕಾರಣ.

  ನಿನ್ನ ಬ್ಲಾಗ್ ಓದಿದಮೇಲೆ ನನಗನ್ನಿಸಿದ್ದನ್ನು ಕಮೆಂಟ್ ಮಾಡಲು ಹೋದೆ. ಆ ಕಮೆಂಟ್ ಬ್ಲಾಗ್ ಆರ್ಟಿಕಲ್ ಅಷ್ಟು ಉದ್ದವಿತ್ತು. ಅದಕ್ಕೆ ಇನ್ನಷ್ಟು ಅನಿಸಿಕೆಗಳನ್ನು ಸೇರಿಸಿ ಅದನ್ನು ನನ್ನ ಬ್ಲಾಗಿನಲ್ಲಿ ಪ್ರತ್ಯೇಕವಾಗಿ ಬರೆದಿದ್ದೇನೆ. ಓದು...

  ReplyDelete
 5. [ಶ್ರೀಧರ]

  --> ಪ್ರೊಫೆಷನಲಿಸಂ ಈಗಲೂ ಇದೆ. ಒಂದಷ್ಟು ಎಥಿಕ್ಸ್ ಮಿಸ್ಸಿಂಗು! ಒಂದಷ್ಟು ಕಮರ್ಷಿಯಲಿಸಂ ಜಾಸ್ತಿ!!

  --> 'ಮಾಸ್' ಹಾಡುಗಳು ಆಗಲೂ ಇದ್ದುವು.. ಆದರೆ, ನಿಜಕ್ಕೂ ಈಗ ಬರುತ್ತಿರುವ 'ಮಾಸ್' ಹಾಡುಗಳನ್ನು 'ಮಾಸ್' ಇಷ್ಟ ಪಡುತ್ತಿದ್ದಾರಾ? ನಂಗೇನೋ ಡೌಟು!

  --> ನಿಂ ಉಪ್ಪಿ ಬರೆದ ತಾಲಿಬಾನ್ ಹಾಡು.. ಆಹಾ.. ಅದನ್ನು ನೀನು "ಹಾಡು" ಅಂತ ಹೇಳಿದ ಮೇಲೇನೇ, "ಓಹ್.. ಅದು ಹಾಡಾ?" ಅಂತ ಬಾಯ್ ಬಿಟ್ಟು ನೋಡೋ ಥರ ಇದೆ. ಬಾಯಿಗೆ ಬಂದ ಹಾಗೆ ಬರೆಯೋರೆಲ್ಲಾ ಯಾಕ್ ಬರೆದು ಸಕಲವನ್ನೂ ಕೊಲೆ ಮಾಡ್ತಾರೋ!! ಅಪ್ರಯೋಜಕರು!!!

  --> 'ಬಯಸುವುದನ್ನೇ ತಪ್ಪು ಎಂದರೆ ಮೋಹಕೆ ಅಪಮಾನ.." ಆಹ್.. ಸಕ್ಕತ್ ಹಂಸ್!!

  --> ನಿನ್ನ ಸುದೀರ್ಘ ಕಮೆಂಟನ್ನು ಓದಲು ಇಪ್ಪತ್ತು ನಿಮಿಷ ಆಯ್ತು. ಮೇಷ್ಟ್ರಾಗಿ ನನ್ನ ಕಮೆಂಟು ನಿನಗೆ - write legibly..

  [ಗಂಡಭೇರುಂಡ]

  --> ಲೋ, ಇದೇ ಕೊನೇ ಸಲ ಹೇಳ್ತಾ ಇರೋದು ನಿಂಗೆ, ಇನ್ನೊಂದ್ ಸಲ ಹೀಗ್ ಮಾಡ್ದ್ರೆ ಡೀಲ್ ಆಗೋಗ್ತೀಯ. ಇಲ್ಲಿ ನಾವುಗಳು ಪಾಮರರು. ನೀವು ಕಾವ್ಯಭಾಷೆಯಲ್ಲಿ ಬರೆದರೆ ನಮಗೆಲ್ಲಾ ಬೈದ ಹಾಗಿರುತ್ತೆ. ಅದೇನ್ ಬೈದಿದೀಯ ಅಂತ ವಿವರಿಸು.

  --> 'ಅರಳುತಿರು' ಎಂದು ಚಿತ್ರಸಾಹಿತ್ಯವನ್ನು ಅರಳಿಸಿದ ಜಯಂತ್‍ಗೆ ವಂದನೆಗಳು.

  --> 'ಬೈಗುಳ'ಕ್ಕೆ ಎರಾಟ ಬೇರೆ!

  [ಶ್ರೀಕಾಂತ್] ಎಲ್ಲೆಯನ್ನು ಮೀರಿದ ಬೆರಕೆ ಆಗಿ ಕಲಬೆರಕೆ ಅಗಿಹೋಗಿದೆ. ಬೇರೆ ಭಾಷೆಯನ್ನು ಕೈಲಾಸಂ, ಅಡಿಗರು, ಡುಂಡಿರಾಜ್, ಹಂಸಲೇಖ, ಜಯಂತ್, ನಿಸಾರ್ ಅಹ್ಮದ್ - ಇವರೆಲ್ಲಾ ಬಳಸಿಲ್ಲವಾ ಅದ್ಭುತವಾಗಿ!! ಆ ತಾಕತ್ತು ಎಲ್ಲರಿಗೂ ಬರಲ್ಲ ಬಿಡು. ಭಾಷೆಯನ್ನು ಯಕ್ಕುಡಿಸಲೇ ಇರ್ತಾರೆ ತಾಲಿಬಾನ್ ಅಲ್ಲ ಅಲ್ಲ ಅಂದ್ಕೊಂಡು!!

  ನಿನ್ನ ಬ್ಲಾಗ್ ಓದಿದೆ.. ಅಲ್ಲೇ ಕಮೆಂಟೊಂದನ್ನು ಹಾಕಿದ್ದೀನಿ. ನನಗನ್ನಿಸಿದ್ದು, ಬಹುಶಃ ನಿನ್ನ ಆರ್ಟಿಕಲ್ಲುಗಳಲ್ಲಿ ಅದು ಬಹಳ ಶ್ರೇಷ್ಠವಾದುದು.. one of the best articles-ಉ!! ಗುಡ್ ಗೋಇಂಗು!!

  ReplyDelete
 6. Dr.Satyaaaaaa.......
  uuuuuuuahahahahahaha :-D :-D
  yaakamma ergraadtiyaa, kirchaaDtiyaa antella haaDugaLu!!

  (ee haaDu & satyabhaama eraDu naanu loose aadmele isTa aadvO, ishTa aadmele loose aadnO.... figure out! :-D adikke en mania antaarO neeve kanDu hiDeeri.. precisely, irritating vastugaLu/haaDugaLu ishTadalli end aagtaa ive!!!!)

  Sumne rhyming barsOke enEnO haakOdu... for example -- "satyabhaamaa (pronounced as satyabaama) baarammaa, neeDu ondu ummmaa"......
  Aa satyabhaamE iddidre aatmaahuti maaDkoLtidluu....!! aakege beyond imaginationnu heege heLoke -- "hogO hogO gopaalaaa, praaNa tintiyaaa...
  rock ur body baba sayya sayya..."
  :)) :))
  aake ildE irOde oLLedaaythu!!


  Innu tapOri type songsu -- hamsalEkha avr heLo style alli .. "intaavanna sari andare 'geetege' apamaana"... "taalibaan alla alla.." ---> innenuuu....
  "nannaliii naanillaaaa.." ---> innel irodu, mardallaaa....
  "preeti yeke bhoomi melide..."---> intaaa questions ge answers bere koDodu!

  ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ
  ನೋಡ್ಬಾರ್ದನ್ನ ನಾನ್ ನೋಡ್ದೆ..
  ಆಕಳಿಕೆ ಬಂದಾಗ ಜಸ್ಟ್ ಸೇ ಹೈ
  ತೂಕಡಿಕೆ ಬಂದಾಗ ಜಸ್ಟ್ ಸೇ ಹೈ..
  ಅಡ್ಡದಲ್ಲಿ ಕಿಂಗು ನಾನು ಟಪೋರಿ
  ನನ್ನ ಲವ್ವು ನಿಂಗೆ ಬೇಕೆ ವಯ್ಯಾರಿ........
  ivugaLannu keLO bhaagya innu bandilla nange.......!!!

  keLod ahitakaravaadre haaaguheeguu sahiskobOdu... avudara picturization noDbittre......ee.. karma.. appi tappi nu naan tune maaDalla inta so-called songs na..
  mujugara aagi ayyyyaaaaa ansbeku haag iruthve - ofcourse heege annsOdu sabhyarige!!!

  monne ond haaD noDde.. hindi le Othla hoDkondiro raakhi saawant du.. songu heege-- ninna lukkkkkkkkkku berenE, ninna style-u berenE, ninna haaaaageyyaaru illa nannna hero neenE nE.....
  en bere lukkkkkkkO.. karma......

  "ಅಪ್ರಯೋಜಕರು!!!" ---> nandondu heenaaamaanaaa byguLa avukke... uppu khaara annO hesrugaLguu masi!!!! innu avr 'haadgaLu' 'saahitya ahahahaaaaa... 'saahitya' annO pada na redefine maaDbeku!!


  arthagarbhita haaDugaLannu bariyo elllaa kavi saahitigaLige nanna hruthpoorvaka abhinandanegaLu!!
  ^:)^ ^:)^ :-) :-)

  Soooooooooooooooooper ide nimma collectionnu! first time odi chakitaLaagi kootidde...
  second third fourth time odi khushi pattu ee nanna "chikka" commentanna mugisutta iruve :-D
  :-D :-D

  ReplyDelete
 7. @arun:nan uppi bagge maatadaveda..saavra sala heLiddeeeni
  "uppi gintha ruchi bere illa...oppikondoru daddaralla"
  idu saavrada ondane sala.... avanu "aprayojaka" alla...ee maatna spasta padsak istha padtheeni...naanu...

  ReplyDelete
 8. mai jum annalla ... thale dim annuththe .... super :-)

  ReplyDelete
 9. super super super!!!!!!!!!!!!!!!!!!!!!!!
  tooooooooo goooooooooooood

  ReplyDelete