Wednesday, November 21, 2007

ಪ್ರೀತಿಯ ಬಾಳು

ಜನಿಸಿದಂದು ನೀತಿ ಮೀರಿ
ಮಾತು ಕಣ್ಣಲಿ ಮೌನ ತುಟಿಯಲಿ
ಬನಕೆ ಹೊರಟ ಹಕ್ಕಿಯಂತೆ ಎದೆಗೆ ಹೊರಟ ಪ್ರೀತಿಯು
ಗುರಿಯು ಗರಿಯ ತೆರೆಯಲೆಂದು
ಮೀರಿ ಸಕಲ ನೀತಿ-ಭೀತಿಯು!

ಮಾತು ಮಾತು
ಅದಕೆ ಸೋತು
ಒಲುಮೆಯೊಸಗೆಯೆಮ್ಮ ಧಾತು
ತುಟಿಯು ಬಿಗಿಯದು ಕಣ್ಣು ಬಾಡದು
ಸುಳಿಯದೆಂದೂ ವಿರಸದ ಕೇತು.

ಬಾಳ್ವೆ ಪ್ರೀತಿಯದೆದೆಯಲಿ ಮೌನದಂಬುಗಳ
ಕಣ್ಚಿತ್ರಚಾಪದಿಂದ ಕಣ್ಣೆದೆಗಪ್ಪಳಿಸುತಿರೆ
ಮೌನದೊಸಗೆಯಿಂದ ಬದುಕು ನಲವು, ಕನಸು ಹಲವು
ಥಳಿಸುವ ಚಕ್ಷುಗಳಲಿ ಪ್ರಣಯದೊಲವು
ಪ್ರಣಯದಲೆಂದಿಗೂ ಮೌನವೇ ಚೆಲುವು!

ಪ್ರೀತಿ ಮಸಣದ ಪಯಣಕೆ ಹೊರಟಾಗ
ಮಾತೂ ಸಾಯ್ವುದು ಮೌನವೂ ಸಾಯ್ವುದು
ಮಸಣದ ಶವಗಳ ಮೇಲೆ ಮತ್ತೆ ಮೌನ ಮಾತುಗಳೆಂಬ
ಹಸುರು ಗಿಡವೊಂದುಸುರುವುದೋ?
ಸಂಶಯದ ವಿರಹದೊಲವಿನ ನೆಲವು ಕಾಯ್ವುದು.

-ಅ
21.11.2007
10.40PM

2 comments:

  1. suuuuuper ಆಗಿದೆ man ನಿನ್ನ ಚಿತ್ರಣ.. ತುಂಬ ದಿನದ ಮೇಲೆ ಬರೆದಿದ್ಯ.. ಹೀಗೇ ಮುಂದುವರೆಸು... :)

    ReplyDelete
  2. sincere and honest aagi heLtheeni....nange next time sikkaaga explain maadu... :-|

    ReplyDelete