Saturday, November 24, 2007

ಆಕಾಶವಾಣಿ - ಐವತ್ತು ವರ್ಷಗಳಿಂದ...

Ajeeb Daastaan Hain Ye
Kahaan Shuru Kahaan Khatam
Ye Manzilen Hai Kaun Si
Na Wo Samajh Sake Na Hum


ಈ ಹಾಡು ಮಧ್ಯಾಹ್ನ ರೇಡಿಯೋಲಿ ಉಲಿಯುತ್ತಿತ್ತು. ಅದು ಬೇರಾವ ಸ್ಟೇಷನ್ ಆಗಿರೋಕೆ ಸಾಧ್ಯವೇ ಇಲ್ಲ. ಅದು 'ಬಾನುಲಿ'ಯೇ ಆಗಿರಬೇಕು ಎಂದು ಖಾತ್ರಿಯಾಗಲು ಹೆಚ್ಚು ಸಮಯ ಬೇಕಿಲ್ಲ. ಒಳ್ಳೇ ಸಂಗೀತವನ್ನು ಆಕಾಶವಾಣಿಯಲ್ಲಲ್ಲದೇ ಇನ್ನೆಲ್ಲಿ ಪ್ರಸಾರ ಮಾಡುತ್ತಾರೆ!!

ಇಂದಿಗೆ ಆಕಾಶವಾಣಿಯು ಹುಟ್ಟಿ ಐವತ್ತು ವರ್ಷ ಆಯಿತು. ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

1927ನಲ್ಲೇ ಹುಟ್ಟಿದ್ದರೂ ಆಗ ಅದಕ್ಕೆ ಆಗ 'ಇಂಡಿಯನ್ ಬ್ರಾಡ್‍ಕಾಸ್ಟಿಂಗ್ ಸರ್ವೀಸ್' ಎನ್ನುತ್ತಿದ್ದರು. ನಂತರ ಐವತ್ತೇಳರಲ್ಲಿ "ಆಕಾಶವಾಣಿ" ಅನ್ನುವ ನಾಮಕರಣ ಆಯಿತು. ಅಂದಿನಿಂದ ಇಂದಿನವರೆಗೂ ಒಳ್ಳೆಯ ಹೆಸರನ್ನು ಸಂಪಾದಿಸಿದಲ್ಲದೇ, ಅದನ್ನು ಉಳಿಸಿಕೊಂಡು ಬಂದಿದ್ದಾರೆ ಆಕಾಶವಾಣಿಯವರು. ಅಬ್ಬರವಿಲ್ಲ, ಹೊಲಸಿಲ್ಲ, ಭಾಷೆಯ ಅಪಭ್ರಂಶಗಳಿಲ್ಲ! ಈಗಲೂ ಆಕಾಶವಾಣಿಯಲ್ಲಿ ಮಾತನಾಡುವವರು ಸ್ಪಷ್ಟ ಭಾಷೆಯನ್ನು ಬಳಸುವುದು ಹೆಮ್ಮೆಯ ವಿಷಯ. ರೋಡಿಯೋ ಸಿಟಿ, ಮಿರ್ಚಿ, ಎಸ್ಸೆಫ್ಫೆಮ್, ರೇಡಿಯೋ ಒನ್ - ಈ ರೀತಿ ಹೆಸರುಗಳೆಲ್ಲಿ, "ಆಕಾಶವಾಣಿ" ಎಂಬ ಚೆಂದದ ಹೆಸರೆಲ್ಲಿ? ಹೆಸರಿನಲ್ಲೇ ಸೌಮ್ಯತೆ, ಶುದ್ಧತೆ ಅಡಗಿಲ್ಲವೇ?

ಬೆಳಗಾಗೆದ್ದರೆ ಆಕಾಶವಾಣಿಯ ಶಿವರಂಜಿನಿ ರಾಗವು ಮನೆಯಲ್ಲಿ ಅಲಾರಂ ಆಗಿತ್ತು. ಅದಾದ ನಂತರ "ವಂದೇ ಮಾತರಂ". ತದನಂತರ ಸಂಸ್ಕೃತದಲ್ಲಿ ವಾರ್ತೆ! ಮಧ್ಯೇ ಮಧ್ಯೇ ಜಾಹೀರಾತುಗಳು.. ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ... ಆಹ್!! ಎಂಥಾ ಮಧುರ ನೆನಪುಗಳನ್ನು ಕೊಟ್ಟಿವೆ ಆಕಾಶವಾಣಿಯು! ಮಧುರ ಸಂಗೀತವನ್ನು ಬಿತ್ತರಿಸುತ್ತಾ ಬಂದಿದೆ. ರೇಡಿಯೋ ಕೆಳುತ್ತಲೇ ಬೆಳೆದವನು ನಾನು. ನನ್ನಿಂದ ಒಂದು ಶುಭಾಶಯ ಆಕಾಶವಾಣಿಗೆ!! ಇನ್ನೈವತ್ತು ವರ್ಷ ಆದಮೇಲೆ, ಬದುಕಿದ್ದರೆ ಮತ್ತೆ ಶುಭಾಶಯ ಬರೀತೀನಿ.

-ಅ
24.11.2007
9PM

10 comments:

  1. ನನಗೆ ಹಿಡಿಸಿದ ಒಂದು ವಿಷಯ... ರೇಡಿಯೋದಲ್ಲಿ ನಮಗಿಷ್ಟವಾದ ಹಾಡು ಬಂದಾಗ ಅದೇನೋ ಆನಂದ... ಕಂಪ್ಯೂಟರ್ನಲ್ಲಿ ಅದೇ ಹಾಡನ್ನು ಸಾವಿರ ಸರ್ತಿ ಕೇಳಿದರೂ ಅಷ್ಟು ಸಂತೋಷವಾಗುವುದಿಲ್ಲ. ಅದೇಕೋ ಗೊತ್ತಿಲ್ಲ.

    ಆಕಾಶವಾಣಿಗೆ ೫೦ ವರ್ಷ ಪೂರೈಸಿದ್ದಕ್ಕೆ ನನ್ನ ಶುಭಾಶಯ ಕೂಡ.

    ReplyDelete
  2. NANNA COMPUTERNALLI KANNADA BAREYALU SADHYAVILLA. MODALU ADAKKE KSHAME KORUTHENE.

    AKASHAVANIGE 50 VARUSHA THUMBIDDARA LEKHANA NODI KHUSHIYAYITHU. HAAGU, LEKHAKARANTHE AKASHAVANIYA ABHIMANIGALALLI NAANU OBBA.

    AVARU BAREDIRUVUDAKKE MATHONDU MUKHYAVADA VISHAYA ILLI HANCIKOLLALLU ISHTA PADUTHENE - AVARU THILISIRUVANTHE INDIAN BROADCASTING SERVICE ENNUVA HESARIGE AKASHAVANI ANTHA NAMAKARANA MADIDDE AGINA MYSOORU AKASHAVANIYALLI KELASAKKE IDDA OBBA KANNADIGARU EMBUDU KANNADIGARELLARIGU HEMMEYA VISHAYA. AA HESARANNU SUCHISIDA KANNADIGARA HESWARANNU NANU MARETHIDDENE. ADARU, EE SANDHARBHADALLI AVARANNU NENESIKOLLUVUDU UCHITHA ENDU NANNA BHAVANE.

    RAVI CHANDAR.

    ReplyDelete
  3. ಉಘೇ ಉಘೇ ಆಕಾಶವಾಣಿ...

    ReplyDelete
  4. [ಗಂಡಭೇರುಂಡ] ಉಘೇ!!

    [ರವಿ] ಆಕಾಶವಾಣಿಯ ನಾಮಕರಣಕ್ಕೆ ಕಾರಣರಾದ ಕನ್ನಡಿಗರ ಹೆಸರು ನನಗೂ ಗೊತ್ತಿಲ್ಲ.. :-( ಆದರೂ ಅದನ್ನು ಈ ಸಂದರ್ಭದಲ್ಲಿ ನೀವು ಹೇಳಿರೋದು ಬಹಳ ಮೆಚ್ಚಬೇಕಾದ ಸಂಗತಿ. ತುಂಬಾ ಧನ್ಯವಾದಗಳು ಕಮೆಂಟಿಸಿದ್ದಕ್ಕೆ.

    ಮತ್ತೆ ಇನ್ನೊಂದು. ಕಂಪ್ಯೂಟರಿನಲ್ಲಿ ಕನ್ನಡ ಬರದಿದ್ದರೇನು, ಹೃದಯದಲ್ಲಿ ಕನ್ನಡ ಇದೆಯಲ್ಲ.. ಅಷ್ಟು ಸಾಕು. ಕಂಪ್ಯೂಟರಲ್ಲಿ ತಾನಾಗಿ ತಾನೇ ಬರುವುದು ಬಿಡಿ.. :-)

    [ಶ್ರೀಕಾಂತ್] ನೂರಕ್ಕೆ ನೂರು ಸತ್ಯ. ರೇಡಿಯೋದಲ್ಲಿ ಹಳೆಯ ಹಾಡುಗಳನ್ನು ಕೇಳೋ ಮಜಾನೇ ಬೇರೆ!!

    ReplyDelete
  5. dhanyavaadagalu. olle comments bittidira. teachers, auto drivers jotege police avarannu serisbeku... olle oggattu avaradu

    ReplyDelete
  6. :-) :-)
    nanondu shubhaashaya AkaashavaaNi ge!! :-)
    nammaneli innu beLigge aakaashavaaNi haakilla andre beLigge apoorNa...
    Enonduuu badlaagilla..
    adE shubhrate... adE kOmalate... adE aananda... shanmugaananda!!!!

    Idu aakaashavaaNI bengaLooru kEndraa... ting tong.. samaya sariyaagi 8 GhanTe 38 nimisha 27 secondugaLu!!
    golden silks and sarees.. aaaa aaaaa aaaaa.. sundara reshime seeregaLu.. aaaaa.. mOhaka baNNada bedagina seere..... :-)

    amele "shaalege hoguvevuuuu... oooohoooo hooooo" annodu soooper!!

    innu shatamaana kaLdruu heege irutte namma aakaashavaaNi!!
    :-)

    ReplyDelete
  7. aakaashavaaNi ashareeravaaNi tara aagdidre saaku...adara ondu dani sada hommuttale irali.... Lifebuoy ad ondh chennag gnapaka idhe....adralli haad keLiddu tumba kadime naanu....
    "aakashavaaNi" ge ondu JAI...

    ReplyDelete
  8. World of Warcraft power leveling wow power leveling,wow power levelingisan online role-playing experience set in the award-winninguniverse.wow gold,wow power leveling Players assume the roles of wow power leveling heroes as they explore, wow gold,wow gold,WoW Goldadventure,and quest across a vast world. is a
    "Massively Multiplayer Online Role Playing Game" WoW Gold,wow gold,wow power leveling.wow power levelingwhich allows thousands of players to
    interact within the same world. Whether adventuring together or fighting against each
    other in epic battlesplayers will form friendships, wow power leveling,wow power leveling,wow power levelingwow powerlevelingforge alliances,and compete with enemies for power leveling and glory.wow gold,wow gold,wow gold,wow gold,wow gold,wow gold,wow gold,buy wow gold As a wow power leveling online game, enables thousands of players to come together online and battle against theand each other. Cheap WoW Gold,Cheap WoW Gold,cheap wow gold,cheap wow gold,World Of Warcraft gold,Players from across the globe can leave the real world behind and undertake grand quests and heroic exploits in a land of fantastic adventure. world of warcraft gold,world of warcraft gold,world of warcraft gold,Unlike other cheap opponents. cheap wow gold,buy wow gold,Below are some features found in wow powerleveling

    ReplyDelete
  9. Other wow gold changes are wow goldalmost as easy. buy wow goldA designer buy wow goldfeels like cheap wow gold nobody will cheap wow gold really object to wow power levelinga change and wow power levelingthat it's pretty power levelinglow risk. At power leveling e as a santiy check.

    ReplyDelete