Wednesday, December 5, 2007

ತಿಂಗಳು

ಅಬ್ಧಿಯಾಳಕಿಳಿವ ಸಂಧ್ಯೆಯ ಕಂಡ ಎನ್ನೆದೆ-
ಯಾಗಸವು ಹಣತೆಯ ಜ್ಯೋತಿಯಂತೆ
ಅಚಲದಂಚಿನಿಂದ ಉದಿಸುವರುಣನ ಕಂಡ ಎನ್ನೆದೆ-
ಪೃಥಿವಿಯು ಶಶಿಯಂಬುಧಿಯ ಪ್ರೀತಿಯಂತೆ
ಒಂದಾಗುವ ಮನಗಳೊಂದಾಗುವುದು ಜಗದ ನೀತಿಯಂತೆ!

ನದಿ ಕಡಲೆಡೆಗೆ ಹರಿವಲ್ಲಿ ಪಯಣಿಸಿ
ಮಳೆಯಾಗುವ ಮುಗಿಲಿನ ನೆಳಲಲಿ ಪ್ರಣಯಿಸಿ
ಮಾಮರದ ಹಂಬಲದಿ ಪಿಕವೊಮ್ಮೊಮ್ಮೆ
ಸಲಿಲದ ಹಂಬಲದಿ ಮಂಡೂಕವೊಮ್ಮೊಮ್ಮೆ
ಎನ್ನ ಹಂಬಲದಿ ಬರುವ ಸವಿಸಂಗತಿಯ ಹೊತ್ತ ಸಖನೊಮ್ಮೊಮ್ಮೆ!

ಕರವು ಹರಸಿಹುದು
ಕರವು ಅರಸಿಹುದು
ಹರಸಿದ ಕರಗಳೇ ಕ್ಷಣ ಮಾತ್ರದ ಮುನ್ನ ಮರೆಸಿಹುದು
ಭರಿಸಿದ್ದೆದೆಯೊಲವು ತಂದ ನೋವಿನ ಹನಿಯನು
ಸರಿಯದೆನ್ನಡಿಗಡಿಗೆ ದಂಡಿಸುತಿಹ ಶನಿಯನು!

ಹೊಸಶಶಿಯು ಹೊಸಬೆಳಕ ಚೆಲ್ಲುವುದನೀಕ್ಷಿಸಲು
ಹೊಸ ದಿಟ್ಟಿಯ ಹೊತ್ತ ಹಳೆ ಕಂಗಳು
ಬೆಳಕಿನೂಟವ ಬಡಿಸುತಿಹುದೊಂದೆಡೆ ನವ ತಿಂಗಳು
ಎನ್ನಳಿವುಳಿವನ್ನೇ ಎದೆಯೊಡ್ಡಿ ಪರೀಕ್ಷಿಸಲು
ಬಡಿಸುತಿಹುದೆನಗೆ ಮಾತ್ರ ಬದಿಯಲ್ಲಿ ತಂಗಳು!!

-ಅ
06.12.2007
12.30AM

12 comments:

 1. suuuuuuuperaagide man.. ninna bhaavanegaLna kavanavaagi iLsirodu :) :) adbhuta prayatna..

  aadre onde ondu doubt-u..
  ಎನ್ನ ಹಂಬಲದಿ ಬರುವ ಸವಿಸಂಗತಿಯ ಹೊತ್ತ ಸಖನೊಮ್ಮೊಮ್ಮೆ!
  anta bardidyalla.. "sakhiyommomme" anta yaake barililla anta... ;) alla, reason gottaytu biDu.. nangeno strong feeling-u.. naanankonDidde reason-u anta.. correct-a?

  btw,
  ಅಬ್ಧಿಯಾಳಕಿಳಿವ ಸಂಧ್ಯೆಯ ಕಂಡ ಎನ್ನೆದೆ-
  ಯಾಗಸವು ಹಣತೆಯ ಜ್ಯೋತಿಯಂತೆ
  ಅಚಲದಂಚಿನಿಂದ ಉದಿಸುವರುಣನ ಕಂಡ ಎನ್ನೆದೆ-
  ಪೃಥಿವಿಯು ಶಶಿಯಂಬುಧಿಯ ಪ್ರೀತಿಯಂತೆ
  ಒಂದಾಗುವ ಮನಗಳೊಂದಾಗುವುದು ಜಗದ ನೀತಿಯಂತೆ!
  ee part nange siksikkapatte ishta aaghoytu man... suuuuperaagide kalpane.. chitraNa.. ella.. :) :) very nice..

  ReplyDelete
 2. [ಗೆಳೆಯ] ನಿನ್ನ ಅನಿಸಿಕೆ ಏನೋ ನನಗೆ ಗೊತ್ತಿಲ್ಲ. ಆದರೆ, ಇಲ್ಲಿ ಬರಹಗಾರನು 'ಸಖ' ಎಂದು ಕರೆದಿರುವುದು ಕೇವಲ ಕೆಲವು ನೆನಪಿಗಷ್ಟೆ. ವಿವರಿಸುವ ವಿಧಿಯಿರಲಿಲ್ಲ. ಆದರೂ ಹೇಳಬೇಕೆನಿಸಿತಷ್ಟೆ. :-)

  ನೀನು ಮೆಚ್ಚಿಕೊಂಡ ಸಾಲುಗಳು ನನಗೆ ಅಷ್ಟೇನೂ ಮೆಚ್ಚುಗೆಯಾಗಲಿಲ್ಲ. ಅದಕ್ಕೂ ಕಾರಣವಿದೆ. ಮನೆ ಕಟ್ಟುವಾಗ ಮನಸ್ಸು ಹಿಗ್ಗಿರುತ್ತೆ. ಮನೆ ಕಟ್ಟಿ ಮನೆಯೊಳಗೆ ಹೊಕ್ಕಾಗಲೂ ಅಷ್ಟೆ. ಅದೆ, ಮನೆ ಕೆಡವಿದಾಗ ಮನಸ್ಸು ಕುಗ್ಗುತ್ತೆ. ಈ ಕವಿತೆಯೂ ಹಾಗೆಯೇ. ನೀ ಮೆಚ್ಚಿಕೊಂಡ ಸಾಲುಗಳಲ್ಲಿ ಕಟ್ಟಿದ್ದು, ನಾ ಮೆಚ್ಚಿಕೊಂಡ ಸಾಲುಗಳಲ್ಲಿ ಬರಹಗಾರನು ಇದನ್ನು ಕೆಡವಿಬಿಟ್ಟಿದ್ದಾನೆ.

  ReplyDelete
 3. ankonde man... ಹೀಗೇ ಏನೋ ಹೇಳ್ತೀಯ ಅಂತ.. hmmm... ಸರಿ..

  ReplyDelete
 4. [ಶ್ರೀಧರ] ನೋ ರಿಕಮೆಂಟ್ಸ್..

  [ಗಂಡಭೇರುಂಡ] ಹ್ಞುಂ, ನಿನಗೆ ಗೊತ್ತಲ್ಲಾ, ಈ ಕಥೆ ಕವಿತೆ ಬರೆಯೋರೆಲ್ಲಾ ಒಂದು ತೆರನಾದ ಚಿತ್ತತೆತ್ತವರು ಎಂದು!!

  ReplyDelete
 5. :-D :-D
  saaraamsha heLbit, ondondE line heLkodi plzzz :-D
  enO sikkkkaaapatte arthapoorNa kavite anta gottu, namge school alli irtidvalaa haage.. namge gottu enO antaraaLada meaningu ide anta :-D aadre, teachers heLkodO vargu artha aagalla... esp poems...
  :-D
  ಹೊಸ ದಿಟ್ಟಿಯ ಹೊತ್ತ ಹಳೆ ಕಂಗಳು
  ಬೆಳಕಿನೂಟವ ಬಡಿಸುತಿಹುದೊಂದೆಡೆ ನವ ತಿಂಗಳು
  idu nange nava tingaLu = taayi-to-be ya 9 months anta gOchara aaythu!! :-D


  @Sridhara :: "No comments...." anta comments alli haakirodu muTTaLtana na etti etti haaraaDi torstaa ide!!!
  ellaaa muTTaLuppi ya prabhaava!

  ReplyDelete
 6. dynamic divya : asambhadda vishyagaLna asangatha vyaktigaLa hesrugaLna illi tandirodanna naanu khandistheeni....naanu muTTaaLa alla eneega..silent aagi sidenalliru...illandre moole sound -u..hushaar!!!!!!! Gap chup...

  ReplyDelete
 7. tumba chennagide ... ishta aaytu :-)

  ReplyDelete
 8. @Sridhara :: ninge yaavdu asambhaddha yaavdu asangatha antaane gottilla!!! summmne kannada padagaLu baruthve anta kuydiddE kuytyaaa!! this is one more gamanaarha muTTaaLtana!!
  naanilli yaav asambhaddha vichaaraanu prasthaapisilla! yaake prasthaapslaaa????
  khandisteeni ante.. khanDisko!!! yaaruuuu moosi kooda nodalla ninna khanDane naaa...
  naa silent aagi side allirallaaa.. NO NO!!
  eeega OK andhu sumnaagu ashTe!!!

  ReplyDelete
 9. [dynamic] nava = hosa; tingaLu = chandira..

  [sridhara] neenenO ee magu jothe jagaLa aadkondu... bidO...

  [vijaya] thank you.. :-) bahaLa dina aadmele ee thara kavana baryOke kootiddu naanu...

  [dynamic again] vivaraNe illade kavite aadru artha aagutte.. aadre ee ninna last commentu sutaraam artha aagalla..

  ReplyDelete
 10. @Parisarapremi ::
  :-D gottaytu.. tale li record aagoytu! niddEli eLsi keLidruu 'nava tingaLu' andre enu anta, paT anta heLteeni .... ...
  "hosa chandira" anta... :-D :-D

  amele X( X( X( X( --> idu idakke [sridhara] neenenO ee magu jothe jagaLa aadkondu... bidO...
  naan magu alla!! X(

  @Sridhara ::
  yaavaaaglu khanDisteeni anta dammmdammm antyallaaa, eega khanDisu ivr nanna magu andirOdanna.. byyi ivrna....

  @Parisarapremi again ::
  naan heLod ashT sulabhavaagi yaargooo artha aagalla.. adikke special tale beku!! sakala kalaaa vidyaapariNitarigooo kashTa aagO anta vishyagaL heLteeni naanu!!
  :-D :-D

  ReplyDelete