Friday, December 7, 2007

ಕಾಮ??

ವಿಶ್ವಾಮಿತ್ರಪರಾಶರಪ್ರಭೃತಯೋ
ವಾತಾಂಬುಪರ್ಣಾಶನಾಃ
ತೇSಪಿ ಸ್ತ್ರೀಮುಖಪಂಕಜಂ ಸುಲಲಿತಂ
ದೃಷ್ಟ್ವಾSಪಿ ಮೋಹಂಗತಾಃ

ಬೇಲೂರಿನಲ್ಲಿ ನಮ್ಮ ಗೈಡು ವಿಶ್ವವಿಖ್ಯಾತ ಶಾಂತಲೆಯ ಶಿಲ್ಪಕಲೆಯನ್ನು ತೋರಿಸಿ, ಚೆನ್ನಕೇಶವನ ಮೂರ್ತಿಯನ್ನು ದರ್ಶನ ಮಾಡಿಸಿ ದೇವಸ್ಥಾನದ ಎಲ್ಲಾ ಶಿಲ್ಪವನ್ನೂ ಆಸ್ವಾದಿಸುವಂತೆ ಮಾಡಿ ಕೊನೆಗೆ ಹೊರಗೆ ಕರೆತಂದು,ಗೋಪುರದಲ್ಲಿ ಕೆತ್ತಲಾದ ಶಿಲ್ಪವನ್ನು ತೋರಿಸಿದ. ಬಹಳ erotic. ವಾತ್ಸ್ಯಾಯನ ಕಾಮಸೂತ್ರವೇ ಕೆತ್ತಲಾಗಿದೆ. ಜೊತೆಗೆ ವಿಭಿನ್ನ ಭಂಗಿಗಳಲ್ಲಿ ಸಂಭೋಗಿಸುವ ಶಿಲ್ಪಗಳು ಕೂಡ. 'ಅವಳು' ಶೀರಸಾಸನ, 'ಅವನು' ವೀರಭದ್ರಾಸನ - ಇಂಥಾ ಭಂಗಿಯಲ್ಲೂ ಸಂಭೋಗ. ನನ್ನ ಬಾಯಿ ಸುಮ್ಮನಿರುತ್ತದೆಯೇ? "Don't try this at home ಅಂತ ನೀವು ಇಲ್ಲಿ ಬೋರ್ಡು ಹಾಕ್ಬೇಕು ನೋಡಿ" ಎಂದುಬಿಟ್ಟೆ. ದೊಡ್ಡದೊಡ್ಡವರೆಲ್ಲಾ ಇದ್ದರು. ಗೈಡಿಗೆ ಮುಜುಗರ ಆಯಿತು. ಆದರೂ ನಕ್ಕ. ಆ ಹಿರಿಯರೆಲ್ಲಾ ನನ್ನೇ ದಿಟ್ಟಿಸಿದರು. ನಾನು ನಕ್ಕುಬಿಟ್ಟು ಸುಮ್ಮನಾದೆ. (ಆ ಫೋಟೋ ತೆಗೆಯಲಾಗಲಿಲ್ಲ. ಬೇಲೂರು/ಹಳೆಬೀಡಿಗೆ ಹೋದರೆ ಕಂಡೀತು.)ನಮ್ಮ ಅನೇಕ ಹಿಂದು ದೇವಾಲಯಗಳಲ್ಲಿ ಈ ಕಾಮರೂಪದ ಶಿಲ್ಪಕಲೆಗಳು ಇರುವುದು ಏಕೆ?

ಗೈಡು ಹೇಳಿದ, ಆ ಕಾಲದಲ್ಲಿ ದೇವಸ್ಥಾನ ಪಾಠಶಾಲೆ ಕೂಡ ಆಗಿತ್ತು. ಸೆಕ್ಸ್ ಎಜುಕೇಶನ್ ಕೂಡ ಕೊಡ್ತಿದ್ರು ಎಂದ. ನಂಗೇನೋ ಅನುಮಾನ. ಅವರುಗಳು ಆ ಕೆತ್ತನೆಗಳನ್ನು ಬಳಸುವುದಕ್ಕೆ ಎರಡು ಕಾರಣ ಇರಬಹುದು. ಒಂದು ಆ ಕಾಲದಲ್ಲಿ ನಮಗಿರುವ ಸೌಲಭ್ಯಗಳಾದ ಟಿವಿ, ರೇಡಿಯೋ, ಸಿನೆಮಾ ಇಂಥಾ ಮನರಂಜನೆಗಳಿರಲಿಲ್ಲ. ನಾಟಕ, ನೃತ್ಯ, ಸಂಗೀತ, ಕಲೆ - ಇದ್ದುವು. ಬಹುಶಃ ಅವರಿಗೆ ಕಾಮವೂ ಸಹ ಮನರಂಜನೆಗಳಲ್ಲಿ ಒಂದು. ಈ ಕಾರಣ ಅಲ್ಲದೇ ಇದ್ದರೆ, ಆ ಕಾಲದ ರಾಜರುಗಳು ಅತ್ಯಂತ ಹಿರಿಯ ವಿದ್ವಾಂಸರನ್ನು ತಮ್ಮ ಆಸ್ಥಾನದಲ್ಲಿಟ್ಟುಕೊಂಡಿದ್ದರು. ವೇದೋಪನಿಷತ್ತುಗಳಲ್ಲಿ ಅವರುಗಳು ನಿಪುಣರು. ವೇದದಲ್ಲಿ ಹೇಳಿರುವುದನ್ನೆಲ್ಲಾ ಪಾಲಿಸಬೇಕೆಂಬುದು ಅವರ ನಂಬುಗೆಯಾಗಿತ್ತೆನಿಸುತ್ತೆ.ಪ್ರಜಾಪತಿಃ ಸ್ತ್ರಿಯಾಂ ಯಶಃ ....
ಕಾಮಸ್ಯ ತೃಪ್ತಿರಾನಂದಮ್
ಪುರಂಧಿರ್ಯೋಷೇತ್ಯಾಹ ಯೋಷಿತ್ಯೇವ ರೂಪಂ
ದಧಾತಿ ತಸ್ಮಾತ್ ಸ್ತ್ರೀ ಯುವತಿಃ ಪ್ರಿಯಾ ಭಾವುಕಾ

ನಂದಾಮ ಶರದಶ್ಯತಮ್
ಮೋದಾಮ ಶರದಶ್ಯತಮ್ .....
ಅಜೀತಾಸ್ಸ್ಯಾಮ ಶರದಶ್ಯತಮ್


ಹೀಗೆ ವೇದದಲ್ಲೇ ಹೇಳಿರುವಾಗ ನಾವು ಅದನ್ನು ಕೇಳದಿರಲಾದೀತೇ ಎಂಬುದು ಕಾಮಪರರ ವಾದ. ಕಾಮವಿಲ್ಲದವನು ಯಶಸ್ಸು ಪಡೆಯಲು ಸಾಧ್ಯವೇ ಇಲ್ಲವಂತೆ!

ಆದರೂ ನನ್ನ ಪ್ರಶ್ನೆಗೆ ಉತ್ತರ ಸರಿಯಾಗಿ ಸಿಕ್ಕಿಲ್ಲ. ಕಾಮವನ್ನು ಹೇಗೇ ಹೇಳಿರಲಿ, ಒಳ್ಳೇದು ಅಂತಲಾಗಲಿ, ಕೆಟ್ಟದ್ದು ಅಂತಾದರೂ ಆಗಲಿ, ಆದರೆ ಅವುಗಳು ದೇವಸ್ಥಾನದ ಗೋಡೆಗಳ ಮೇಲೆ, ಗೋಪುರಗಳ ಮೇಲೆ ಹೇಗೆ ಬಂದವು? ಯಾಕೆ ಬಂದವು??

-ಅ
08.12.2007
1AM

6 comments:

 1. nan questions na seeda iLsideera.....
  ade naanu keLodu..

  ಆದರೆ ಅವುಗಳು ದೇವಸ್ಥಾನದ ಗೋಡೆಗಳ ಮೇಲೆ, ಗೋಪುರಗಳ ಮೇಲೆ ಹೇಗೆ ಬಂದವು? ಯಾಕೆ ಬಂದವು??
  Union of body and soul is divinity!! idanna saaralu kettirbeku...

  hehee innu funny yaag aaDkobeku andre.. avrhatraa time-u ittu, kalluu ittu.. talent-uu ittu... summmmne kettkond hodruuu...!! :-D

  ReplyDelete
 2. "kaama" nu life nalli important -u antha torsakke devasthaana gaLalli kettidaare.... devasthaana imp place u see... eegin thara sex books -u scandals -u, CD's -u ;-) irlilla vishya tiLkoLakke.... aShTe :-|

  ReplyDelete
 3. hee hee ... sridharana comment odhdhaaga motugode nalli bardid ond blog nenpaaytu... "sebu" , "neecha" bagge.
  nam vedagalu maathra alla, tumba sects galalli idanna nambtaare ... naanu recent aagi 2 book nalli odidde ... eradoo india ge sambandhididdalla (eleven minutes, da vinci code) ... aadroo, i think this is universal. sex unites a man and a woman ... and makes u 'complete' ... idu onthara daivatva alwa? nam ardhanaareeshwarara thara.

  ReplyDelete
 4. neenu baidroo parvaagilvo.. nangantu ee article noDi ee keLagina saalugaLantu nenpaadvu:

  ಕಡಲ ತಡಿಯಿಂದ ನೋಳ್ಪರ ಬೆಪ್ಪು ಬೆರಗು ಮಾತೇಂ|
  ಮುಳುಗಿ ತಳಸೋಂಕಿ ಮೇಲ್ಬಂದಾತನಾಳವರಿತನ್||
  ಮನ್ಮಥಾಬ್ಧಿಯ ಮಹಾವರ್ತನವ ಹಾಯ್ದ ಧೀರಂ|
  ಗೆಲುವನಜನೊಡ್ಡಿರುವ ಕಾಂತಿಯಾ ವೀರಪಣಮಂ||

  :D he he he he.... sari... eega baiko..

  ReplyDelete
 5. [ಡೈನಮಿಕ್] ಡಿವೈನಿಟಿಗೋಸ್ಕರ ಕೆತಿದ್ದಾರೆ ಅಂತೀಯ.. ಇರ್ಲಿ.

  [ಶ್ರೀಧರ] ನೀನು ಹೇಳಿದ್ದೆಲ್ಲಾ ಬಹುಶಃ ದೇವಸ್ಥಾನಗಳಲ್ಲಿ ಲಭ್ಯ ಇರೋದರ ಬದಲು ಗೋಡೆಗಳ ಮೇಲೆ ಇದ್ದುವು ಅನ್ನು!!

  [ವಿಜಯಾ] ದೈವತ್ವ!!!

  [ಗಂಡಭೇರುಂಡ] ನಾನೇನ್ ಬೈಕೊಳೋದು ನನ್ ತಲೆ! ನೀನೇ ಬೈದಿದೀಯಲ್ಲಾ ನಾಲ್ಕು ಸಾಲುಗಳಲ್ಲಿ. ಯಾವನ್ಗ್ ಅರ್ಥ ಆಗುತ್ತ್ತೆ ಹಾಗ್ ಬೈದ್ರೆ!!

  ReplyDelete
 6. Bahushaha, Baagilolu kai mugidu olage baa yaatrikane antha idyalla haage, adellavannu manasininda horage ittu daivada(paramaartha darshanaarthiyaagi) gudiyolage baa antha irbahudu.

  ReplyDelete