Sunday, January 6, 2008

ಕಾಣೆಯಾದವರ ಬಗ್ಗೆ ಪ್ರಕಟಣೆ..

ಈ ಚಿತ್ರದಲ್ಲಿ ಕಾಣಿಸುತ್ತಿರುವವಳ ಹೆಸರು ದೀಪ್ತಿ.. ಎರಡು ತಿಂಗಳಿಂದ 'ಸಂಘ'ದಿಂದ ಕಾಣೆಯಾಗಿದ್ದಾಳೆ. ತಕ್ಕಮಟ್ಟಿಗೆ ಕೋಲು ಮುಖ, ಸಾಯಿ ಬಾಬಾ ಕೇಶವಿನ್ಯಾಸ, ಕುಳ್ಳು ಶರೀರ, ನೇರ ಶಾರೀರ! ಈಗ್ಗೆ ಕೆಲ ತಿಂಗಳ ಕೆಳಗೆ ಅಮೆರಿಕೆಗೆ ಅಂತ ಹೋದವಳು ಈಮೈಲ್‍ನಲ್ಲಿ ಆಗಲೀ, ಫೋನ್‍ನಲ್ಲಿ ಆಗಲೀ, ಮೆಸೆಂಜರಿನಲ್ಲಾಗಲೀ ಪತ್ತೆ ಇಲ್ಲ. ಈಕೆ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲಳು. ಇವಳ ಸುಳಿವು ಸಿಕ್ಕಲ್ಲಿ ತಕ್ಷಣ ತಿಳಿಸುವುದು.



ಸುನಿಲ ಎಂಬ ಯುವಕ ಬೆಂಗಳೂರಿನ 'ಶ್ರೀನಗರ'ದಿಂದ ಕಾಣೆಯಾಗಿದ್ದಾನೆ. ಗುಂಡು ಮುಖ, ಗೋದಿ ಮೈಬಣ್ಣ, ಗಡುಸು ಧ್ವನಿ, ಮಾನಸಿಕವಾಗಿ ಸಂಪೂರ್ಣ ಸ್ವಸ್ಥ. ಈತ ಕನ್ನಡ, ಕೊಂಕಣಿ ಹಾಗೂ ಹಿಂದಿ ಭಾಷೆಯನ್ನು ಮಾತನಾಡಬಲ್ಲ. ಶ್ರೀನಗರದ ತಂಡದಲ್ಲಿ ಗೂಢಾಚಾರರಿಗೆ, ಚಾಡಿಕೋರರಿಗೆ, ಅಸೂಯಾರಸರಿಗೆ, ಪರರ ವಯಕ್ತಿಕ ಸಂಗತಿಗೆ ನುಗ್ಗುವವರಿಗೆ ಏನೂ ಕಡಿಮೆಯಿರದಿದ್ದರೂ ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲದ ಸುನಿಲ ಎಲ್ಲರಿಗೂ ಆತಂಕ ಮೂಡಿಸಿದ್ದಾನೆ. ಇವನ ಸುಳಿವು ಸಿಕ್ಕಲ್ಲಿ ನಮ್ಮದೊಂದು ಹಲೋ ಹೇಳುವುದು.



ಶಿಲ್ಪಾ ಎಂಬ ಹುಡುಗಿಯು 'ಹರಟೆ ಕಟ್ಟೆ'ಯಿಂದ ಸುಮಾರು ಒಂದು ವರ್ಷದಿಂದ ಕಾಣೆಯಾಗಿದ್ದಾಳೆ. ಶ್ವೇತವರ್ಣ, ಗುಂಡು ಮುಖವಿದ್ದು, ಕೊಂಕಣಿ, ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯನ್ನು ಮಾತನಾಡಬಲ್ಲಳು. ಕನ್ನಡ ಭಾಷೆಯಲ್ಲಿ ಪ್ರವೀಣತೆಯನ್ನು ಹೊಂದಿರುವುದರಿಂದ ಕನ್ನಡ ಮಾತನಾಡುವುದು ವಿರಳ. ಈಕೆ ಪ್ಯಾಂಟ್-ಶರ್ಟ್ ಧರಿಸುತ್ತಾಳೆ. ದ್ವಿಚಕ್ರವಾಹನವನ್ನು ಚಲಿಸಬಲ್ಲಳು. ಸುಳಿವು ಸಿಕ್ಕಲ್ಲಿ ಕೂಡಲೇ 'ಹರಟೆ ಕಟ್ಟೆ'ಗೆ ತಿಳಿಸುವುದು.




ಈ ಮೇಲ್ಕಂಡವರ ಸುಳಿವು ಸಿಕ್ಕಲ್ಲಿ ಕೂಡಲೇ ತಿಳಿಸಬೇಕಾದ ವಿಳಾಸ
ಪೋಲಿಸ್ ಇನ್ಸ್ಪೆಕ್ಟರ್
ಪೋಲಿಸ್ ಕಂಟ್ರೋಲ್ ರೂಮ್
ಬೆಂಗಳೂರು - ೦೧

ಅಥವಾ

ಖ್ಯಾತ ಅಬ್ಸ್ಕಾಂಡಿಂಗ್ ತಜ್ಞ ಡಾ||ಪರಿಸರಪ್ರೇಮಿಯವರನ್ನು ಭೇಟಿಯಾಗಬಹುದು.

ಮುಂದಿನ ಕಾರ್ಯಕ್ರಮ - ಕನ್ನಡ ಚಿತ್ರಮಂಜರಿ, ಪ್ರಾಯೋಜಕರು ಡಾಬರ್!!

-ಅ
06.01.2008
11.05PM

7 comments:

  1. ha ha ha super aagidhe...very different..... :-) huduki kottorge bahumaana illvo ;-)

    ReplyDelete
  2. He he he... Nannanna Americakke kaLisi kodu. Huduji bartini.

    Kone chitradalli kaaNuvavarannu Vidyapeetha circle hatra 8AM-10AM veLeyalli hidiyabahudu.

    ReplyDelete
  3. Sunila 6th sanje 6.30 ashtothige nammanele idha..
    kaaNe aagiroodu neenu aruNa...
    naavella bheti aadaga neenu iralla!!
    sigbekaagiroodu neenu kaNo..

    ReplyDelete
  4. [ಸುಶ್ಮಾ] ಒಂಥರಾ ಚೆನ್ನಾಗಿದೆ.. ನಿನ್ನ ಮಾತು ನನಗೆ ನಗು ತರಿಸುತ್ತಿದೆ..

    [ಪಿಟೀಲ್ ಸುಬ್ಬಣ್ಣ] ವಿದ್ಯಾಪೀಠ ಸರ್ಕಲ್ ಅಲ್ಲಿ ನಮ್ಮವರು ಮಫ್ತಿನಲ್ಲಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಆದರೆ ಕಾಣೆಯಾದವರು ಇನ್ನೂ ಸಿಕ್ಕಿಲ್ಲ.

    [ಶ್ರೀಧರ] ಹುಡುಕಿ ಕೊಡು, ಆಮೇಲೆ ಬಹುಮಾನ..

    ReplyDelete
  5. ನಾನು ಹೊರಗಡೆ ಅಕಸ್ಮಾತ್ ಕಾಲಿಟ್ಟರೆ ಹುಡುಕ್ತೀನಿ, But commision ಬೇಕು ಅಷ್ಟೇ !!! [:)]

    ReplyDelete
  6. heehe gAndibazar,srinivasnagar aakade elladaru sikre kanditha nimge heLthini modalu PP .

    ReplyDelete
  7. ಸ್ನೇಹಿತರನ್ನು miss ಮಾಡಿಕೊಂಡು ಬರೆದದ್ದು ಅನ್ಸುತ್ತೆ..ಚೆನ್ನಾಗಿದೆ. ಯಾರದ್ರು ಸಿಕ್ಕಿದ್ರಾ ನಿಮಗೆ?

    ReplyDelete