Sunday, February 3, 2008

ನೂರಾನೆ ಬಲ..

Rambling Holiday Makers ಗೆ ಜನ್ಮ ಕೊಟ್ಟಿದ್ದು ನಾನಾದರೆ ಜೀವ ಕೊಟ್ಟವರು ಡೀನ್.

ನಾಲ್ಕನೇ ತಾರೀಖಿಗೆ ಇವರಿಗೆ ಮುವ್ವತ್ತು ವರ್ಷ ತುಂಬುತ್ತೆ.

ಪರಿಚಯವಾದ ದಿನ ಇವರು ನನ್ನ ಅಡ್ವೆಂಚರ್ ಬದುಕಿನ ಅವಿಭಾಜ್ಯ ಅಂಗವಾಗುತ್ತಾರೆಂಬ ಪರಿವೆಯಿರಲಿಲ್ಲ. ಆದರೆ ಇಂದು ಯಾರು ಏನೆಂಬುದನ್ನು ಕಾಲ ನಿರ್ಣಯಿಸಿ ಆಗಿದೆ. ಡೀನ್ ಜೊತೆಗಿದ್ದರೆ ನೂರಾನೆ ಬಲದಂತೆ ಎಂದು ಎಲ್ಲಿ ಬೇಕಾದರೂ ಹೇಳಬಲ್ಲವನಾಗಿದ್ದೇನೆ. ಬರೀ ಅಡ್ವೆಂಚರ್‍ನಲ್ಲಲ್ಲ, ಬದುಕಿನ ಹಾದಿಯಲ್ಲಿ!

ಡೀನ್ ಸಾಮರ್ಥ್ಯ ಶಕ್ತಿಗಳ ಬಗ್ಗೆ ಇಲ್ಲಿ ಬರೆಯುವುದಿಲ್ಲ. ಹಾಗೆ ಕುಳಿತರೆ ಒಂದು ಬಯಾಗ್ರಫಿ ಬರೆಬೇಕಾದೀತು. ಅಥವಾ ನನ್ನ ಆತ್ಮಚರಿತ್ರೆ ಬರೆಯಲು ಹೋದಾಗ ಹಲವು ಪುಟಗಳು ಡೀನ್‍ಗೆಂದು ಮುಡಿಪಾಗಿಡುತ್ತೇನಲ್ಲಾ, ಅಲ್ಲಿ ಎಲ್ಲಾ ಬರೆದಿರುತ್ತೇನೆ.

ಹಾಸ್ಯ, ಧೈರ್ಯ, ಮೈತ್ರಿ, ಅಗಾಧ ನೆನಪಿನ ಶಕ್ತಿ - ಇವುಗಳು ಡೀನ್‍ರನ್ನು ತಕ್ಕಮಟ್ಟಿಗೆ ವಿವರಿಸಬಲ್ಲುದು. ಜೊತೆಗೆ ಇವರೊಬ್ಬ ನಡೆದಾಡುವ ಅಟ್ಲಾಸ್. ಮತ್ತೊಂದು ಹೆಮ್ಮೆಯೆಂದರೆ ನನ್ನ ಬದುಕಲ್ಲಿ ಅತಿ ಹತ್ತಿರವಾಗಿರುವ ಕೆಲವೇ ಕೆಲವು ಜನರಲ್ಲಿ ಇವರು ಬಹು ಮುಖ್ಯರು.

ನಮ್ಮ ಸ್ನೇಹದ ಚಾರಣ ಎಂದೂ ಸಮಿಟ್ ಹಂತದಲ್ಲೇ ಇರಲಿ.. ಅಲ್ಲೇ ನಿರಂತರ ಬಿಡಾರ ಹೂಡಿರೋಣ..

ಆಲ್ ದಿ ಬೆಸ್ಟ್ ಡೀನ್.. ನಿಮ್ಮ ಕನಸುಗಳೆಲ್ಲವೂ ಹಸನಾಗಿ ನನಸಾಗಲಿ..

ಡೀನ್‍ಗೆ ಏನು ಗಿಫ್ಟು ಕೊಡಬೇಕೆಂದು ಯೋಚಿಸುತ್ತಿದ್ದೆ. ಇವರು "ರೀ ಸ್ಕ್ಯಾನ್ ಮಾಡ್ಕೊಡ್ರೀ" ಅಂತ ಒಂದು ಫೋಟೋ‍ವನ್ನು ನನಗೆ ಕೊಟ್ಟು ಸುಮಾರು ಆರೇಳು ತಿಂಗಳುಗಳಾದುವೆನಿಸುತ್ತೆ. ಅಂಗಡಿಗೆ ಹೋಗಿದ್ದಿದ್ದರೆ ಆರೇಳು ನಿಮಿಷದಲ್ಲಿ ಸಿಗುತ್ತಿತ್ತು. ಆದರೂ ನನ್ನಂಥ ನನಗೆ ಕೊಟ್ಟು 'ಕರ್ಮ' ಎಂದುಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ಕೇಳಿದರೆ, ಈ ಗಿಫ್ಟಿಗೆ ಬೆಲೆಯಿರುವುದಿಲ್ಲವಲ್ಲವೇ? ಇಲ್ಲಿದೆ ಆ ಫೋಟೋ! ಜಗತ್ತೇ ನೋಡಲಿ!ಡೀನ್, ಹುಟ್ಟು ಹಬ್ಬದ ಶುಭಾಶಯಗಳು..

ಗೌರವ ಪ್ರೀತಿಗಳೊಡನೆ ನಿಮ್ಮ ಗೆಳೆಯ
- ಅ
04.02.2008
12AM

4 comments:

 1. Happy Birthday Dean. ee blogspot ge eno aagide ... aagle ond comment haakde ... publish-e aaglilla...

  What i wanted to say was ... Dean is indeed very lovable. As i always tell him, 'comfort' is the first word that comes to my mind when i think of him.

  Dean, May you conquer all the heights that you want. Happy Birthday again!!

  ReplyDelete
 2. oh ... btw ... ond correction ... 30 alla ... 31 tumbutte ansutte ... alwa?

  ReplyDelete
 3. ನನ್ನ ಹುಟ್ಟುಹಬ್ಬದ ದಿನ ನಾನು "ಹುಟ್ಟುಹಬ್ಬದಲ್ಲೇನಿದೆ? ಎಲ್ಲಾರ್ಗೂ ಹುಟ್ಟುಹಬ್ಬ ಬರತ್ತೆ" ಎಂದು ಡೀನ್ ಗೆ ಹೇಳಿದಾಗ ಅವರ ವಿಭಿನ್ನ ಶೈಲಿಯಲ್ಲಿ "ವಾ... ಇದೇನ್ರೀ ಇಂಗನ್ಬಿಟ್ರೆ? ಇವತ್ತು ನೀವು ಭೂಮಿ ಮೇಲೆ ಅವತಾರ ಮಾಡಿದ ದಿನ... ಅವತಾರಪುರುಷರು ನೀವು... ನೀವೇನ್ ದಿನಾ ಹುಟ್ತೀರೇನ್ರೀ? ಹುಟ್ಟಿದ್ ದಿನ ಅಂತ ಬರೋದು ವರ್ಷಕ್ಕೆ ಒಂದೇ ಸಲ... ಮಜ ಮಾಡ್ಬೇಕ್ರೀ" ಎಂದು ಡೈಲಾಗ್ ಹೊಡೆದಿದ್ದರು.

  ಇಂದು ಅದೇ ಡೈಲಾಗ್ ಡೀನ್ ಗೆ ಹೊಡೆಯಬೇಕು. ಅವತಾರಪುರುಷ ನಾನಲ್ಲದಿರಬಹುದು. ಆದರೆ ಅವರು ಅವರ ಫೀಲ್ಡಿನಲ್ಲಿ ಅವತಾರಪುರುಷರೇ. ನಡೆದಾಡುವ ವಿಶ್ವಕೋಶಕ್ಕೆ ಪರ್ಯಾಯಪದವೇ ಡೀನ್, ಭೂಗೋಳವನ್ನು, ಅದರಲ್ಲೂ ಭಾರತದ ಭೂಗೋಳ ಶಾಸ್ತ್ರವನ್ನು ಅವರಂತೆ ತಿಳಿದವರನ್ನು ನಾನಿಂದಿನ ತನಕ ಕಂಡಿಲ್ಲ. ವ್ಯಾಯಾಮ ಶಾಲೆಗೆ ಹೋಗಿ ಅವರ ಮೈಕೈ ಎಷ್ಟು ಕಠಿಣವಾಗಿದಿಯೋ ಅವರ ಸ್ವಭಾವ ಅಷ್ಟೇ ಕೋಮಲ. ಅವರೊಡನೆ ಕಾಡುಗಳಲ್ಲಿ ತಿರುಗಿ ಎತ್ತರದ ಶಿಖರಗಳನ್ನು ಮಾತ್ರ ಕಂಡು ಬರುವುದಿಲ್ಲ ನಾನು, ನಮ್ಮ ಎತ್ತರದ ಸ್ನೇಹವನ್ನೂ ನೋಡಿ ಆನಂದಪಡುತ್ತೇನೆ,

  ಬರೆಯುತ್ತಾ ಹೋದರೆ ಬರೆಯಲು ಬೇಕಾದಷ್ಟಿದೆ. ಇಷ್ಟಕ್ಕೆ ನಿಲ್ಲಿಸುತ್ತೇನೆ. ಡೀನ್ ಗೆ ಅವರ ಹುಟ್ಟುಹಬ್ಬದ ಶುಭಾಶಯಗಳು. ಅವರ ಮನಸ್ಸಿನಲ್ಲಿ ಅನೇಕ ಕನಸುಗಳಿದೆ ಎಂದು ಗೊತ್ತು, ಆ ಕನಸುಗಳೆಲ್ಲ ನನಸಾಗಲೆಂದು ಆಶಿಸುತ್ತೇನೆ.

  ಕೊನೆಗೆ - ಆ ಫೋಟೋ ಬೊಂಬಾಟ್!

  ReplyDelete
 4. Dean saahebirge belated birthday wishes.... :-)

  ReplyDelete