Saturday, February 23, 2008

ಉತ್ತರವಿಲ್ಲ

ಉತ್ತರವಿಲ್ಲ ನಿನ್ನ ಪ್ರಶ್ನೆಗಳಿಗೆ,
ಉಸಿರಿದೆಯಷ್ಟೇ -
ನಿನ್ನ ಹೆಸರ ಹೇಳುವ
ಉಛ್ವಾಸ ನಿಶ್ವಾಸ
ಬದುಕುಳಿದಿರಲದೊಂದೇ ವಿಶ್ವಾಸ.

ಕನಲುಗಳು ನಿನಗೂ ನನಗೂ
ಇಹುದೆಂಬುದಂತೂ ದಿಟ.
ಕನಲು ನಿನಗೆ ನಾನು
ನನಗೆ ನೀನು, ಆದರೂ ಕೊಲ್ಲುವ ಹಟ.
ಎತ್ತರಕೆ ದುಡಿದು
ಹತ್ತಿರವ ತೊರೆವೆನೇ?

ತಪ್ಪು ನಾ ಮಾಡೆನೆಂಬ ಹಮ್ಮು
ಒಪ್ಪಿ ನೀ ನಡೆಯೆನೆಂಬ ಸಂದೆಯ
ತುಂಬಿರಲು ಪ್ರಶ್ನೆಯಲ್ಲದಿನ್ನೇನು ಬಾಳಲಿ?
ಉತ್ತರವು ಎಲ್ಲಿಹುದು?
ನಾಕವು ನರಕವಾಗಲು ಸಾಲದೆ
ಪ್ರಶ್ನೆಯು?

-ಅ
23.02.2008
12.30AM

6 comments:

  1. munisinuttaradAMtaryadariva paDeyalenna manasareGaLigeyaDDADi baMtu!!!

    sooper gurugaLe! :)

    ReplyDelete
  2. [ಸುಶೀಲ್] ಅರೆಘಳಿಗೆಯಡ್ಡ ಬಂದ ಮನಸು ಮುರಿಯಿತು ಎಲ್ಲ ಮುನಿಸು.. :-)

    [ಶ್ರೀನಿಧಿ] ಅರ್ಥವಾಯಿತು ಬಿಡಿ... ;-)

    [ವಿಜಯಾ] :-(

    ReplyDelete
  3. en comment haakli idakke...ee "uttaravilla" kavithe nange artha aaglilla pa.... :-|

    ReplyDelete
  4. dynamic inda kavithe artha aaythu...... :-) :-) :-)

    ReplyDelete