Friday, February 29, 2008

ಗಾಳಿಪಟ - ಅನಿಸಿಕೆಯಷ್ಟೆ

--> 'ಮುಂಗಾರು ಮಳೆ ಭಾಗ ಎರಡು' ಅಂತ ಹೆಸರಿಡಬಹುದಿತ್ತು.

--> ಗಣೇಶ ಒಬ್ಬನೇ ಮಾತನಾಡುತ್ತಾನೆ ಇಡೀ ಚಿತ್ರದಲ್ಲಿ. ಒಂದು ಥರಾ ಏಕಪಾತ್ರಾಭಿನಯ ಇದ್ದ ಹಾಗಿದೆ.

--> ದಿಗಂತ್ ಸ್ವಲ್ಪ ಬೆಳೆದರೆ 'ಹುಡುಗ'ನ ಹಾಗೆ ಕಾಣಿಸುತ್ತಾನೆ, ಆದರೆ ಹೀರೋ ಆಗಬೇಕೆಂದರೆ ಕಷ್ಟ ಇದೆ. ಫೇರ್ ಎಂಡ್ ಲವ್ಲಿ ಜಾಹೀರಾತಿಗೆ ಸರಿ ಎನಿಸುತ್ತಷ್ಟೆ.

--> ರಾಜೇಶ್ ಬಹಳ ಎತ್ತರದ ಶೃತಿಯಲ್ಲಿ ಮಾತನಾಡುವುದರಿಂದ ಮಾತೆಲ್ಲಾ ಹಾಡಿನಂತೆ. ಆದರೆ ನೋಡಲು ತುಂಬಾ ಸ್ಮಾರ್ಟ್.

--> ಬೋಪಣ್ಣ ಮೌನವ್ರತಿ. ಶೋಲೆಯ ಜಯಬಾಧುರಿ ಒಮ್ಮೆ ನೆನಪಾದಳು.

--> ಉಳಿದಿಬ್ಬರು ನಟಿಯರು ರುದ್ರಭಯಂಕರ.

--> ಅನಂತ್ ನಾಗ್ ಅತ್ಯುನ್ನತ ನಟನೆಂಬುವುದರಲ್ಲಿ ಶಂಕೆಯೇ ಇಲ್ಲ. ಅದರಲ್ಲೂ ಕೆನೆತ್ ಆಂಡರ್‍ಸನ್ ಪುಸ್ತಕ ಓದುತ್ತಾ ಇರುತ್ತಾರೆಂದರೆ ನನ್ನಂಥವನಿಗೆ ವಿಪರೀತ ಸಂತೋಷ.

--> ರಂಗಾಯಣ ರಘು ಅನಂತ್ ನಾಗ್‍ರಂತೆಯೇ ಇನ್ನೊಬ್ಬ ಉತ್ತಮ ನಟ ಎಂಬುದನ್ನು ಪದೇ ಪದೇ ನಿರೂಪಿಸುತ್ತಲೇ ಇದ್ದಾರೆ. ಸೊಗಸಾಗಿ ನಗಿಸುತ್ತಾರೆ.

--> ಮಿಕ್ಕ ನಟರ ಡೈಲಾಗುಗಳನ್ನೆಲ್ಲಾ ಗಣೇಶನಿಗೆ ಕೊಟ್ಟುಬಿಟ್ಟಿದ್ದಾರೆ ನಿರ್ದೇಶಕರು.

--> ಹಾಡುಗಳು ಬಹಳ ಮಧುರ ಮತ್ತು ಉತ್ತಮ ಸಾಹಿತ್ಯದಿಂದ ಕೂಡಿವೆ.

--> ಚಿತ್ರೀಕರಣದ locationಗಳು ಹಸಿರಾಗಿದೆ, ಸೊಗಸಾಗಿದೆ. ಸ್ಕ್ರೀನ್‍ಪ್ಲೇ ಮಾತ್ರ ಹತ್ತಕ್ಕೆ ಒಂದು ಅಂಕ ತೆಗೆದುಕೊಂಡರೆ ಹೆಚ್ಚು.

--> ಡೈಲಾಗುಗಳು ಮನಮುಟ್ಟುವಂತೇನೂ ಇಲ್ಲ. ಕೆಲವು ಸಲ ನಗು ಬರುತ್ತೆ, ಮತ್ತೆ ಕೆಲವು ಸಲ ಅಸಹ್ಯ ಆಗುತ್ತೆ, ಮತ್ತೆ ಕೆಲವು ಸಲ ಈ ಡೈಲಾಗು ಯಾಕಿದೆ ಎಂದು ಯೋಚಿಸುವಂತಾಗುತ್ತೆ.

--> ಈ ಚಿತ್ರಕ್ಕೆ "ವರಾಹ ಮಹಾತ್ಮೆ" ಎಂಬ ಹೆಸರನ್ನು ಕೂಡ ಇಡಬಹುದಿತ್ತು. ಆಗಾಗ್ಗೆ ಬಂದು ಹೋಗಿ ಕೊನೆಗೆ ಹೀರೋ ಥರ ಮೆರೆಯುವ ಕಾರ್ಟೂನ್ ಹಂದಿಯು ಲಯನ್ ಕಿಂಗ್ ಚಿತ್ರದ ಪೂಂಬಾ-ದ ನೆನಪು ಮಾಡುತ್ತೆ. ಆದರೆ ಹಂದಿಯು ಸಿಂಹ ಗರ್ಜನೆ ಮಾಡುವುದನ್ನು ಕಂಡು ವರಾಹಾವತಾರದ ಕಾರ್ಟೂನಿರಬೇಕೆಂದು ಅನ್ನಿಸದೇ ಇರುವುದಿಲ್ಲ.

--> ಗಾಳಿಪಟ - ಯೋಗರಾಜ 'ಭಟ' - ಬಹಳ ಆರ್ಭಟ - ಸಿನಿಮಾ ನೋಡುವ ಚಟ ಇದ್ದರೆ ನೋಡಬಹುದು. ದುಡ್ಡು ಸಮಯ ಪೋಲು ಮಾಡಲು ಸಿದ್ಧವಿದ್ದರೆ!! ನಾನು ಮಾಡಿದೆ!!

-ಅ
29.02.2008
8.40PM

5 comments:

  1. ಕನ್ನಡ ಸಿನಿಮಾಗಳಲ್ಲಿ ಇರುವುದು ಎರಡೇ ಫರ್ಮುಲಾ ಅಂತ ಯಾರೋ ಎಲ್ಲೋ ಬರೆದಿದ್ದರು

    ರಕ್ತಪಾತ ಮತ್ತು ಜಲಪಾತ!:D

    ReplyDelete
  2. ಅರುಣ್,
    ಸಕತ್ ಆಗಿದೆ ನಿಮ್ಮ ವಿಮರ್ಶೆ ಸಾಲುಗಳು
    >>ನಟಿಯರು ರುಧ್ರಭಯಂಕರ
    :)

    ReplyDelete
  3. ಆ ಇಬ್ಬರು ಹುಡುಗಿಯರ ಭಾಷಾ ಶೈಲಿ ಬಿಟ್ಟು, ಮಿಕ್ಕಿದ್ದೆಲ್ಲಾ ಒಕೆ ಅನ್ನಿಸಿತು..

    ReplyDelete
  4. [ಆದಿ] ಹಂದಿಯ 'ಭಾಷಾ' ಶೈಲಿ ಕೂಡ??

    [ಶಿವ್] ಹ್ಞೂಂ, ಅತಿ ಭಯಂಕರ ಸರ್...

    [ಶ್ರೀನಿಧಿ] ಇಲ್ಲಿ ಶಿವನಸಮುದ್ರ್ ಜಲಪಾತ, ಚಿತ್ರ ಮುಗಿದ ಮೇಲೆ ಪ್ರೇಕ್ಷಕನ ರಕ್ತಪಾತ!

    ReplyDelete
  5. gaaLipaTa chitraana ond sala nodbodu....sahaneeya...

    ReplyDelete