Wednesday, February 20, 2008

ನಿನ್ನ ಮುನಿಸು

ಹಗೆ ಸಾಧಿಸುವರಿಹರು ಸಹಸ್ರರು
ಬಗೆಯಿವರದೇನೆಂದೇ ಅರ್ಥೈಸಲು ಆಗುತ್ತಿಲ್ಲ
ಧಗೆಯೇಕಿವರ ಶಸ್ತ್ರ? ನನ್ನ ಮೇಲೆ?
ಭಗತಾಪದಿಂದ ಕೊಲ್ಲಲೇ?
ನಗುವೊಂದೇ ನನ್ನಸ್ತ್ರ ಇವರೆಡೆಗೆ.

ಅಜಯವಿಲ್ಲ ನನಗೆಂದೂ ಹಗೆಯೆದುರು.
ಆದರೆ,
ನಿನ್ನ ಮುನಿಸೊಂದು ನನ್ನ ಕುಗ್ಗಿಸಿ
ಯಶದ ಅರಿಯೆದುರು ಬಗ್ಗಿಸಿ
ಮೌನದ ಗವಿಯೊಳು ನುಗ್ಗಿಸಿ
ಕೊಲದೇ ಉಳಿಸದೇ ಉಸುರಿಸುತಿದೆ.

-ಅ
20.02.2008
11.50PM

14 comments:

  1. ee ninna kavithe oodhi..."hmmm" ansthu... Who is that hage saadsing on you...??

    ReplyDelete
  2. ninna mele hage saadhisore alva ninna beLavanige indirectly protsaaha kodou!!!
    so its good..
    jayisi mundhe baaa

    ReplyDelete
  3. [ಸುಶ್ಮಾ] ಹ ಹ್ಹ ಹ್ಹಾ.. ನನ್ನ ಸೋಲನ್ನು ಬಯಸುತ್ತಾ ನನ್ನ ಸುತ್ತಲೇ ಇರಲು ಯತ್ನಿಸುತ್ತಿರೋರ ಪ್ರೋತ್ಸಾಹ ನನಗೆ ಅವಶ್ಯಕತೆಯೇ ಇಲ್ಲ. ಅವರ ಮೈತ್ರಿ ಕೂಡ. ಸುಮ್ಮಸುಮ್ಮನೆ ನನ್ನ ವಿಷಯದಲ್ಲಿ ತಲೆ ಹಾಕುವವರ ಬಗ್ಗೆ ಹಳೆಗನ್ನಡ ಪದ್ಯಸಂಕಲನ ಪ್ರಕಟಿಸಬೇಕಾದೀತು!! ;-)

    ಹೀಗೆ ಪ್ರೋತ್ಸಾಹ ಕೊಡಲು ಬಂದರೆ ಅವರ ಹಣೆಬರಹ.

    [ಶ್ರೀಧರ] ಆಹಾ, ಹಗೆ ಬಗ್ಗೆ ಕೇಳ್ತೀರೇ ಹೊರೆತು, ಮುನಿಸಿನ ಬಗ್ಗೆ ಕೇಳೋದಿಲ್ಲ. ಏನ್ ಜನಾನೋಪ್ಪಾ...

    ReplyDelete
  4. aruNa wait a minute,
    haLegannada poems??
    :O nanna orkut profile nalli neene haLegannada padhya bardidiya
    yenu hagadre??

    ReplyDelete
  5. [ಸುಶ್ಮಾ] ಯಾಕೆ 'ಹಗೆ' ನೀನು ಎಂದು ನಿನಗನ್ನಿಸುತ್ತಿದೆಯಾ? ;-) ಕುಂಬಳಕಾಯಿ ಕಥೆ ನೆನಪಾಗ್ತಾ ಇದೆ ನನಗೆ...

    ReplyDelete
  6. houdappa, heLodella heLi kumbLakaayi kaLLa andre!!!
    bhal idiya neenu!!!

    ReplyDelete
  7. ಇನ್ನೊಂದ್ ಸ್ವಲ್ಪ ದಿನ ಗುರು.. ಆಮೇಲೆ ನೀವೂ ಕುವೆಂಪು ಆಗೋದ್ರಲ್ಲಿ ಡೌಟೇ ಇಲ್ಲ. :D

    ReplyDelete
  8. [ಸುಶ್ರುತ] ತಾವು ಬೈತಾ ಇದ್ದೀರೋ ಹೊಗ್ಳ್ತಾ ಇದ್ದೀರೋ ಗೊತ್ತಾಗ್ತಿಲ್ಲ. ;-)

    ReplyDelete
  9. hmmm...nin mele hageya hoge yaar bidthaa iddaare antha nange gottaythu antha ankondideeeni. ;-)
    ok fine...sari munisina bagge heLu..keLuvavananthaaguve... :-)

    ReplyDelete
  10. ಹೋಗಲಿ ಬಿಡು. ಬಾಯಿಗೆ ಸಿಹಿ ಕಹಿ ಎರಡೂ ಹೋಗತ್ತೆ. ಕಹಿಯನ್ನುಗಿದು ಸಿಹಿಯನ್ನು ಮಾತ್ರ ನುಂಗು.

    ReplyDelete
  11. [ಶ್ರೀಕಾಂತ್] ಬಿಟ್ಟೆ. ನುಂಗಿದೆ.

    [ಶ್ರೀಧರ] ಉತ್ತರಕ್ಕೆ ಮುಂದಿನ ಕವನ ಓದಿಕೊಳ್ಳಬೇಕಾಗಿ ವಿನಂತಿ.

    ReplyDelete
  12. [ಶ್ರೀನಿಧಿ] ಕ್ರೋಧನುಂ ತಾ ವ್ಯಾಧನಂತೆ
    ಕೊಲ್ವುದುಮದು ತಾ ಪುಟ್ಟಿದ ಕಾಯವನ್!!! ;-)

    ಇಲ್ವೋ, ಇನ್ಮೇಲೆ ನಿಂಗೆ ಹೀಗೆ ಕೋಪ ಬರ್ಸಲ್ಲ!! ಚಿಂತಿಸಬೇಡ.

    ReplyDelete