Thursday, March 6, 2008

ಬಿಂದಾಸ್

ನಾಯಕ ಸೂಪರ್ ಮ್ಯಾನ್, ನಾಯಕಿ ಕಿತ್ತೂರು ರಾಣಿ ಚೆನ್ನಮ್ಮ. ಒಟ್ಟಿನಲ್ಲಿ ಕನ್ನಡದಲ್ಲೊಂದು ಕ್ರಾಂತಿಯ ಚಿತ್ರ.

ನಾಯಕಿಯು ನಾಯಕನನ್ನು ಪ್ರೀತಿಸುವುದಿಲ್ಲ. ನಂತರ ಒಂದು ಫೈಟು. ನಾಯಕಿಯನ್ನು ಕೆಡಿಸೋಕೆ ಬಂದವನ ವಿರುದ್ಧ. ಆಮೇಲೆ ನಾಯಕಿ ಪ್ರೀತಿಸುತ್ತಾಳೆ. ನಾಯಕಿಯ ಅಪ್ಪನಿಗೆ ಒಪ್ಪಿಗೆ ಇರೋದಿಲ್ಲ. ಇದರ ಮಧ್ಯೆ ಭಯೋತ್ಪಾದಕ ಖಳನಾಯಕರು. ದೊಡ್ಡ ದೊಡ್ಡ ಫೈಟುಗಳು. ಕೊನೆಗೆ ಕೆಟ್ಟವರೆಲ್ಲಾ ಸಾಯುತ್ತಾರೆ, ಒಳ್ಳೆಯವರೆಲ್ಲಾ ಸಂತೋಷವಾಗಿರುತ್ತಾರೆ. ಇದೇ 'ಹೊಸ' ಕಥೆಯನ್ನು ಸಿನಿಮಾ ಮಾಡಿ ಬಿಂದಾಸ್ ಎಂದು ಹೆಸರಿಟ್ಟಿದ್ದಾರಾದ್ದರಿಂದ ಉಮಾ ಥಿಯೇಟರಿನಲ್ಲಿ ಮೂರನೇ ವಾರದಲ್ಲೇ ಮೂರು ಮತ್ತೊಂದು ಜನ ಇದ್ದರಷ್ಟೆ.

ಒಂದು ಹಾಡು ಹೀಗೆ: 'ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ.. ಆಡೋಣ ನಾನು ನೀನು ಕುಚ್ಚಿ ಕುಚ್ಚಿ..' ಧನ್ಯ ಕನ್ನಡಾಂಬೆ!

ನಾನು ಅರ್ಜೆಂಟಾಗಿ ಒಂದು ಒಳ್ಳೇ ಚಿತ್ರ ನೋಡಬೇಕು. ಏಳನೇ ಸಲ 'ಆ ದಿನಗಳು' ನೋಡುವುದೋ, 'ಬಕೆಟ್ ಲಿಸ್ಟ್' ನೋಡುವುದೋ, ಗೊತ್ತಿಲ್ಲ. ಶಿವಪ್ರೇರಣೆ ಏನಾಗುತ್ತೋ ನೋಡೋಣ!

-ಅ
06.03.2008
12.20AM

8 comments:

 1. ಕೊನೆಗೆ ಕೆಟ್ಟವರೆಲ್ಲಾ ಸಾಯುತ್ತಾರೆ, ಒಳ್ಳೆಯವರೆಲ್ಲಾ ಸಂತೋಷವಾಗಿರುತ್ತಾರೆ. ...uhahhahahhahaha....
  baa "inthi ninna preetiya" picchar ge hogoNa....

  ReplyDelete
 2. yappa... naanantu noDalla bindaas na.. bindaas aagi manelirode melu ansatte

  aa dinagaLu naan ond sarti nu noDilla... noDbeku man :-(

  ReplyDelete
 3. ಯಾಕೋ ನಿನ್ ಗ್ರಾಚಾರ ಸರೀಗಿಲ್ಲ! ಪಾಪ:)

  ReplyDelete
 4. Watched it twice, full paisa vasool, maybe not a classic movie, but the so called classic movies are only for the so called intellectuals. Be Happy. No BP. Full Bindass. Nothing like some 'Bucket' movie.

  ReplyDelete
 5. ಬಿಂದಾಸ್ ಚಿತ್ರದ ಅತ್ಯುತ್ತಮ ವಿಮರ್ಶೆಗೆ ನಿಮ್ಮ ಬರಹ ಆಯ್ಕೆಯಾಗುವುದರಲ್ಲಿ ಸಂದೇಹವೇ ಇಲ್ಲ. ಬಿಂದಾಸ್ ವಿಮರ್ಶೆ! I can feel the frustration

  ಕೇಶವ

  ReplyDelete
 6. [ಕೇಶವ್] ಹ ಹ್ಹ ಹ್ಹಾ.. ಆ ಚಿತ್ರ ನೋಡಿ, ನೀವೂ ಒಂದು ಉತ್ತಮ ವಿಮರ್ಶೆ ಬರೆಯುತ್ತೀರ!

  [ಆಲ್ಫ] ನೀವು ಪುಣ್ಯವಂತರು ರೀ.. ನಿರ್ಮಾಪಕರ ರಕ್ಷಕರೂ ಸಹ!

  [ಶ್ರೀನಿಧಿ] ಹೌದಪ್ಪ, ಕೆಟ್ ಕುಲಗೆಟ್ ಹೋಗಿದೆ.

  [ಶ್ರೀಕಾಂತ್] ಮಿಸ್ ಮಾಡ್ಕೊಬೇಡ್ವೋ 'ಆ ದಿನಗಳು'ನ.

  [ಶ್ರೀಧರ] ಲೋ, ಆ ಪಿಚ್ಚರ್‍ಗೆ ಹೋಗಿ, ತಲೆ ಕೆಟ್ ಕೆರ ಆದ್ರೆ ಮಗನೆ, ನಿನ್ ಬಗ್ಗೆ ಆರ್ಟಿಕಲ್ ಬರೀಬೇಕಾಗುತ್ತೆ!

  ReplyDelete
 7. ಆಲ್ಫ] ನೀವು ಪುಣ್ಯವಂತರು ರೀ.. ನಿರ್ಮಾಪಕರ ರಕ್ಷಕರೂ ಸಹ!


  Unfortunately the same cannot be said about u. UR sending wrong msgs about kfi to the world.

  ReplyDelete