Thursday, March 27, 2008

ದಿ ಬಕೆಟ್ ಲಿಸ್ಟ್"ಆತ ಸತ್ತಾಗ ಅವನ ಕಣ್ಣು ಮುಚ್ಚಿತ್ತು.. ಆದರೆ ಹೃದಯ ತೆರೆದಿತ್ತು..." ಈ ಡೈಲಾಗಿನಿಂದ ಆರಂಭವಾಗುತ್ತೆ ಚಿತ್ರ.

ಒಂದು ಕಾಲನ್ನು ಸಾವಿನ ಹೊಸಿಲನ ಆಚೆ ಇಟ್ಟುಕೊಂಡಿರುವವರ ಕಥೆ ಇದು. ತಮ್ಮದೆಂದು ಉಳಿದ ಕಾಲದಲ್ಲಿ, 'ಬಾಕಿ' ಉಳಿಸಿಕೊಂಡ ಕೆಲಸಗಳನ್ನು ಮಾಡಬೇಕೆಂಬ ಪಟ್ಟಿಯನ್ನು ಮಾಡಿಕೊಂಡು ಅದರಂತೆ ಕೊನೆಗಾಲದಲ್ಲಿ ಅವರಿಬ್ಬರೂ 'ಬದುಕುತ್ತಾರೆ'.

ಡೈಲಾಗುಗಳು ಹಾಸ್ಯಮಯವೆನಿಸಿದರೂ ಆ ತಿಳಿಹಾಸ್ಯದಲ್ಲಿ ಗಂಭೀರತೆಯು ಅಡಗಿರುವುದು ಕಂಡುಬರುತ್ತೆ. ಡೈಲಾಗುಗಳಿಗೆ ಪೂರ್ಣ ಅಂಕಗಳು.

ಸ್ಕೈ ಡೈವಿಂಗು, ಪರ್ವತಾರೋಹಣ, ಕಾಫಿ ಹೀರುವಿಕೆ - ಚಿತ್ರದಲ್ಲಿ ನನಗೆ ಇನ್ನಷ್ಟು ಹೆಚ್ಚು ಮನಸೆಳೆದಿದ್ದು ವಯಕ್ತಿಕವಾಗಿ.

ಚಿತ್ರದ ಮುಖ್ಯ ತಾರಾಗಣದ ಜ್ಯಾಕ್ ನಿಕೋಲ್ಸನ್ ಮತ್ತು ಮೋರ್ಗನ್ ಫ್ರೀಮನ್ ಇಬ್ಬರೂ ಬಹಳ ಪಳಗಿದ ನಟರಾಗಿರೋದರಿಂದಲೂ, ಮತ್ತು ಅನುಭವಿಗಳಾಗಿರುವುದರಿಂದಲೂ, ಆಸ್ಕರ್ ಪ್ರಶಸ್ತಿಯು ಇಬ್ಬರಿಗೂ ಅಭ್ಯಾಸವಾಗಿರುವುದರಿಂದಲೂ, ತಮ್ಮ ತಮ್ಮ ಪಾತ್ರಗಳನ್ನು ಅತ್ಯಂತ ಸೊಗಸಾಗಿ ನಿರ್ವಹಿಸಿ ಪ್ರೇಕ್ಷಕರ ಮನಸೆಳೆದಿರುವುದಂತೂ ಸತ್ಯ.ಬದುಕು ಮತ್ತು ಸಾವಿನ ಬಗ್ಗೆ ಹಸನಾದ ವಿನೋದದಿಂದ ನಗಿಸುತ್ತ ಬಾಷ್ಪ ತುಂಬಿಸುವ ಚಿತ್ರ ದಿ ಬಕೆಟ್ ಲಿಸ್ಟ್.

"ಅವನ ಕೊನೆಯ ದಿನಗಳು.... ನನ್ನ ಅತ್ಯುತ್ತಮ ದಿನಗಳಾಗಿದ್ದುವು...." ಹೀಗೆ ಮುಕ್ತಾಯವಾಗುತ್ತೆ. ಬಹುಶಃ ಚಿತ್ರವನ್ನು ವೀಕ್ಷಿಸಿದ ಸ್ನೇಹಜೀವಿಗಳಿಗೆಲ್ಲಾ ಕಣ್ಣಲ್ಲಿ ಒಂದು ಹನಿ ತುಂಬಿಕೊಂಡಿರುತ್ತೆ..

ಅಂದಹಾಗೆ ಚಿತ್ರದಲ್ಲಿ ತಾಜಮಹಲ್‍ನೂ ಸಹ ನೋಡಬಹುದು!!

-ಅ
28.03.2008
10PM

10 comments:

 1. dialogues - full marks- very true :)

  ReplyDelete
 2. obrige thaanu saaithidhaane antha gothaadaaga hege irbahudhalla avra feelings-u...

  may be avru thamma mikkiro responsibilities bega maadbeku annodhe first barathe ansathe avra thaleli.

  ReplyDelete
 3. most certainly one of the best movies i have seen ...
  "you want me to make a fool of myself ... ?? ... its never too late" :-)

  ReplyDelete
 4. ಈ ಚಿತ್ರ ನೋಡೋ ಭಾಗ್ಯ ನನಗಿಲ್ಲ ಅನ್ಸತ್ತೆ. ಇದ್ರೆ ನೋಡ್ತೀನಿ.

  ReplyDelete
 5. [ಶ್ರೀಕಾಂತ್] ಯಾಗೆ ಭಾಗ್ಯ ಇಲ್ಲ? ಭಾಗ್ಯ ಬರುತ್ತೆ!

  [ವಿಜಯಾ] ಸೂಪರ್ ಡೈಲಾಗು! ಒಂದೇ ಎರಡೇ..

  [ಸ್ಮಿತೆ] ಬಹುಶಃ ಹೌದು. ನೀನು ಸಾಯ್ತಿದೀಯ ಅಂತ ಗೊತ್ತಾದಾಗ ಮರೀದೇ ಹೇಳಿಕಳಿಸು, ನಾನೇ ಇಂಟರ್ವ್ಯೂ ಮಾಡ್ತೀನಿ. ಗೊತ್ತಾಗುತ್ತೆ, ಏನಂತೀಯ?

  [ಶುಭಾ] ಹೌದು. ಡೈಲಾಗುಗಳ ತಳಹದಿಯ ಮೇಲೆ ನಿಂತಿದೆ ಈ ಚಿತ್ರ ಎನ್ನುವುದು ನನ್ನ ಅನಿಸಿಕೆ. ಆದರೆ ಕಥೆಯನ್ನು ಹೆಣದಿರುವ ರೀತಿಯಂತೂ ಅದ್ಭುತ.

  ReplyDelete
 6. "ಅವನ ಕೊನೆಯ ದಿನಗಳು.... ನನ್ನ ಅತ್ಯುತ್ತಮ ದಿನಗಳಾಗಿದ್ದುವು...." --- nice...

  howduuu ee picchar ge "the bucket list" anta yaak hesru koTruu????
  :-D adunna heLalla picchar nodu anbedii....

  naan saaytini anta gottaaadre.... heheeee....... nimge heLkaLsallaaaaa... interview anta bandu iro chooru paaru praaNaanuu tegd haakteera...
  hopelesfellow..... :-D

  ReplyDelete
 7. ಆತ ಸತ್ತಾಗ ಅವನ ಕಣ್ಣು ಮುಚ್ಚಿತ್ತು.. ಆದರೆ ಹೃದಯ ತೆರೆದಿತ್ತು..."...
  he he he ..open heart surgery maadidru antha kaaNsatte :P :P

  ಕಾಫಿ ಹೀರುವಿಕೆ ........naanu nodlebeku ee movie na haagadre....

  ಅವನ ಕೊನೆಯ ದಿನಗಳು.... ನನ್ನ ಅತ್ಯುತ್ತಮ ದಿನಗಳಾಗಿದ್ದುವು....... super quote -u

  ReplyDelete
 8. [ಶ್ರೀಧರ] ನೋಡಪ್ಪ... ಕಾಫಿಗೆ ಒಂದು ಸುಂದರವಾದ ವ್ಯಾಖ್ಯಾನ ಬೇರೆ ಕೊಡ್ತಾನೆ ಚಿತ್ರದಲ್ಲಿ!!

  [ಡೈನಮಿಕ್] ನೀನು ಸ್ಮಿತೆಯ ರಿಕಮೆಂಟಿನೊಳಕ್ಕೆ ಅತಿಕ್ರಮಪ್ರವೇಶ ಮಾಡಿದ್ದೀಯವಾದ್ದರಿಂದ ನಿನ್ನ ಮೇಲೆ ಮೊಕದ್ದಮೆ ಹೂಡಬೇಕಾಗಿದೆ.

  ReplyDelete
 9. @PP ::
  uuuuuuuhahahaaa neevu maaDo atikramapraveshad mundhe idu chiLLaaapiLLi... naan nim mel mokkaddamme hooDidreeeeeee..... ellaaaaa court alluuu nim mel irO 'case'gaLeee...

  nimdu atikramapravesha soosi hardu nanguu aa buddhi bandide.... "yathaah guru tataah shishyah||"
  idukke sumne "OK" andhu sumnaagbiDi...


  @Sridhara ::
  heheheeeeee open heart surgery maaDi, adunna open aagE biTbiTruuu, adikke kaNNu close aagOytu.. :-D


  @Smithe ::
  Smithaaaaa neenu nange support maaDu, neen ashT serious aagi yochistiddre, ivru interview ge bartaarante.... ibroo seri ivrge Tappa koDoNa......

  hehee aadrooo interview time alli ivr keLo prashNegaL hegirbOdu...
  ;-)
  "heLamma, heg anstide ninge ninna last moments...."
  :-D :-D

  ReplyDelete
 10. [ಡೈನಮಿಕ್] ಓಕೆ ಅಂದು ಸುಮ್ಮನಾಗೋದಿಲ್ಲ. ಸ್ಮಿತೆ ಈ ಚರ್ಚೆಗೆ ಬರೋದಿಲ್ಲ ಅಂತ ಹೇಳ್ತೀನಿ.

  ReplyDelete