Monday, March 17, 2008

ಜನ್ಮೋತ್ಸವ

ಅನ್ತಃಪುರಗೀತೆಯನ್ನು ಓದಿ ಮುಗಿಸಿ ಎರಡು ದಿನವಾಯಿತಷ್ಟೆ. ರಾಜ್‍ಕುಮಾರ್ ಅವರು ಸಿಕ್ಕು, ಗಾಯನಸಮಾಜದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದೀವಿ, ಡಿ.ವಿ.ಜಿ. ಹುಟ್ಟುಹಬ್ಬ, ಎಂದಿದ್ದರು. ಹೋಗಲಾಗಲಿಲ್ಲ ಇವತ್ತು. ಅನ್ತಃಪುರಗೀತೆಯನ್ನು ಹಾಡಿನ ರೂಪದಲ್ಲಿ ಬಿಡುಗಡೆ ಮಾಡಬೇಕೆಂದಿದ್ದೇವೆ ಎಂದೂ ಹೇಳಿದ್ದರು. ಬಹಳ ಖುಷಿಯ ವಿಷಯ ಎಂದಿದ್ದೆ.

ಡಿವಿಜಿಯ ೧೨೧ನೇ ಹುಟ್ಟುಹಬ್ಬ! ಶ್ರೀನಿವಾಸ ಏನು ಬರೆದಾನೆಂಬ ಕುತೂಹಲ, ಓದುವ ತವಕ. ಡಿವಿಜಿಯ ಕಟ್ಟಾ ಅಭಿಮಾನಿಯಲ್ಲವೇ ಅವನು? ಡಿವಿಜಿಯ ಹುಟ್ಟುಹಬ್ಬಕ್ಕೆ ನಾನು ಅವರಿಗೆ ಕೊಡುತ್ತಿರುವ ಉಡುಗೊರೆಯೆಂದರೆ, ಅವರು ಅನುವಾದಿಸಿರುವ 'ಪುರುಷ ಸೂಕ್ತ' ಪುಸ್ತಕವನ್ನು ಓದಿ ಅರ್ಥೈಸಿಕೊಳ್ಳಲು ಯತ್ನಿಸುವುದು. ನೋಟ್ಸ್ ಕೂಡ ಮಾಡಿಕೊಳ್ಳುತ್ತೇನೆ.

ಈಟಿವಿಯವರಿಗೆ ಡಿವಿಜಿ ಹುಟ್ಟುಹಬ್ಬ ನೆನಪಾಗಲಿಲ್ಲ ಅನ್ನಿಸುತ್ತೆ. ಅವರ ಕ್ಯಾಮೆರಾ ಕಣ್ಣು ಪುನೀತ್ ರಾಜ್‍ಕುಮಾರ್, ಜಗ್ಗೇಶ್ ಹುಟ್ಟುಹಬ್ಬವನ್ನು ನೋಡುವುದರಲ್ಲಿ ಬ್ಯುಸಿಯಾಗಿತ್ತು. ಆ ಇಬ್ಬರೂ ನಟರಿಗೂ ಹುಟ್ಟುಹಬ್ಬದ ಶುಭಾಶಯಗಳು.

ಜಗ್ಗೇಶ್ ನನ್ನ ಅತ್ಯಂತ ಪ್ರಿಯ ನಟರಲ್ಲಿ ಒಬ್ಬ. ಆದರೆ ಅವಕಾಶಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲವೆಂಬುದು ನಿರಾಶೆಯ ವಿಷಯ. ಪ್ರತಿಭೆಯನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರಲ್ಲಾ ಎಂಬ ಬೇಸರ. ಈಗಲೂ ಬಿಡುವಾದಾಗ ಶಿವಣ್ಣ, ಸೂಪರ್ ನನ್ ಮಗ, ತರ್ಲೆ ನನ್ ಮಗ, ಗಡಿಬಿಡಿ ಗಂಡ, ಸಿ.ಬಿ.ಐ. ಶಿವ, ನೋಡುತ್ತಾ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇನೆ. ಮೊನ್ನೆಮೊನ್ನೆ ಮಠ ನೋಡಿದೆ. ಹಿಡಿಸಿತು. ನಕ್ಕೆ. ನಗಿಸುವ ಜಗ್ಗೇಶ್‍ಗೆ ನಗುವಿನ ಶುಭಾಶಯಗಳು.

ಪುನೀತ್ ರಾಜ್‍ಕುಮಾರ್ ಚಿತ್ರಗಳನ್ನು ನೋಡುವುದು ಅವರ ನಟನಾ ಸಾಮರ್ಥ್ಯಕ್ಕೋಸ್ಕರವಲ್ಲವಾದರೂ ಅವರ ಚಿತ್ರ ತುಂಬಾ ಹಗುರವಾಗಿರುತ್ತೆ. ತಿಳಿಹಾಸ್ಯದಿಂದ ಕೂಡಿರುತ್ತೆ. ಹಾಡುಗಳು ಚೆನ್ನಾಗಿರುತ್ತವೆ, ಕಥೆ, ನಿರೂಪಣೆ ಸೊಗಸಾಗಿರುತ್ತೆ. ಎಲ್ಲೋ ಅಪರೂಪಕ್ಕೊಮ್ಮೆ ಕೆಟ್ಟ ಚಿತ್ರಗಳು ಎಲ್ಲರದೂ ಬರುವಂತೆ ಇವರದೂ ಬಂದಿದೆಯಷ್ಟೆ. ಆದರೂ ಒಳ್ಳೊಳ್ಳೇ ಚಿತ್ರಗಳನ್ನು ನಿರೀಕ್ಷಿಸುತ್ತಾ ಇವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತೇನೆ.

ಇಬ್ಬರಿಗೂ ಆಲ್ ದಿ ಬೆಸ್ಟ್.

-ಅ
17.03.2008
10PM

2 comments:

  1. birthday 'boys' ಗೆ ಹುಟ್ಟುಹಬ್ಬದ ಶುಭಾಶಯಗಳು.

    birthday 'legend'ಗೆ "ಹುಟ್ಟುಹಬ್ಬದ ನಮನ" :-)

    ReplyDelete
  2. ಡಿ ವಿ ಜಿ ತಾತನ ಚೇತನಕ್ಕೆ ಹುಟ್ಟು ಹಬ್ಬದ ಶುಭಾಶಯಗಳು.

    ಇನ್ನಿಬ್ಬರಿಗೆ many happy returns of the day.

    ReplyDelete