Friday, April 4, 2008

ಪ್ರಾರ್ಥನೆ

* ಬಿ.ಎಂ.ಟಿ.ಸಿ., ಅದರಲ್ಲೂ 45G ಬಸ್ಸಿಗೆ ವಿಶೇಷವಾದ ಥ್ಯಾಂಕ್ಸ್ ಹೇಳಬೇಕು. ಎರಡು ವರ್ಷಗಳ ಕಾಲ ನನ್ನನ್ನು ಕೈ ಹಿಡಿದಿದ್ದಕ್ಕೆ. ಬಸ್ ಪಾಸು ಗೋಳಿಡುತ್ತಿದೆ. ಬೆಂಗಳೂರಿನ ಟ್ರಾಫಿಕ್ಕು ಕಡಿಮೆಯಾಗಲಿ..

* ಬೈಕು ತೊಗೊಂಡು ಹದಿನೈದು ದಿನವೂ ಆಗಿಲ್ಲ, ಆರುನೂರು ಕಿಲೋಮೀಟರು ಎಲ್ಲಿಗೆ ಸುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.

* ಕೊನೆಗೂ ಅಶೋಕನ ಕೃಪೆಯಿಂದ ನನ್ನ ಹಳೆಯ 7250i ಮೊಬೈಲಿಗೆ ಪ್ಯಾನೆಲ್ ಬಂದಿತು. ಬ್ಯಾಟೆರಿ ಕೆಳಗೆ ಬಿದ್ದು ಬಿದ್ದು ಹೋಗುವುದು ತಪ್ಪಿತು.

* ಟ್ರೆಕ್ಕಿಂಗ್ ಇಲ್ಲದೆ ಬದುಕು ಶೂನ್ಯವಾಗುವಂತೆ ಭಾಸವಾಗುತ್ತಿದೆ.

* ನಾಡಿದ್ದು, ಆರನೇ ತಾರೀಖು, ಗೆಳೆಯ ಜಯರಾಮ್ ಹುಟ್ಟುಹಬ್ಬ.. ಅವನಿಗೆ ಗೆಲುವು ಸಿಗಲಿ. ಆಲ್ ದಿ ಬೆಸ್ಟ್ ಜಯಣ್ಣ.

* 'ಪ್ರಣತಿ'ಯ ಮುಂದಿನ ಹೆಜ್ಜೆ ಇನ್ನಷ್ಟು ಎತ್ತರಕ್ಕಿರಲಿ. ಸಂಗೀತ ಸಾಹಿತ್ಯ ಸಂಸ್ಕೃತಿ ಬಿಂಬಿಸಲಿ.

* ಬಾಲ್ಯಾವಸ್ಥೆಯಿಂದ ತರುಣಿ - ಅವಸ್ಥೆ (?)ಗೆ ಬೆಳೆದ ಸ್ವೀಟಿಯು ತನ್ನ ಪ್ರೇಮ ಜೀವನವನ್ನು ಸುಖಮಯವಾಗಿ ಕಳೆದು ನಾಲ್ಕೈದು ಮರಿಗಳ ತಾಯಾದರೆ ತಾನು ಧನ್ಯ.

* ನಾನು ಬೆಂಗಳೂರಲ್ಲಿ, ಅವಳು ದೂರದ ಹಳ್ಳಿಯಲ್ಲಿ - ಬದುಕು ಹೇಗೋ ಸಾಗುತ್ತಿದೆ. ಇಬ್ಬರೂ ಒಂದೇ ಕಡೆಯಿರುವ ಕಾಲವೆಂದು ಕೂಡಿ ಬರುತ್ತೋ!

* ನನ್ನನ್ನು ಸಾಕಿ, ಬೆಳೆಸಿ, ಸಲಹಿ 'ಅರುಣ'ನನ್ನಾಗಿಸಿದ ಚೇತನ, ನನ್ನ ಅಪ್ಪ - ಅಮ್ಮ ಎರಡೂ ಆದ ನನ್ನ ಅತ್ತೆಯು ಆಸ್ಪತ್ರೆಯ ICUನಲ್ಲಿ ಮಲಗಿರುವಾಗ, ಇರುಳಲ್ಲಿ ನನಗೆ ನಿದ್ದೆ ಮಾಯವಾಗಿಬಿಟ್ಟಿದೆ. ಅತ್ತೆಯ ಪರವಾಗಿ ವಿಶೇಷ ಪ್ರಾರ್ಥನೆ. ವೈದ್ಯೋ ನಾರಾಯಣೋ ಹರಿಃ..

-ಅ
04.04.2008
3AM

6 comments:

  1. ಸರ್ವೇಪಿ ಸುಖಿನಃ ಸಂತು
    ಸರ್ವೇ ಸಂತು ನಿರಾಮಯಾಃ
    ಸರ್ವೇ ಭದ್ರಾಣಿ ಪಶ್ಯಂತು
    ಮಾ ಕಸ್ಚಿತ್ ದುಃಖಭಾಗ್ ಭವೇತ್

    ಭಗವಂತ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

    ReplyDelete
  2. ಕಶ್ಚಿತ್ ಆಗಬೇಕಾಗಿತ್ತು. ಕಸ್ಚಿತ್ ಆಂತ ಬರೆದುಬಿಟ್ಟೆ.. ಕ್ಷಮೆಯಿರಲಿ!

    ReplyDelete
  3. ಸದ್ಯೋಜಾತನಲ್ಲಿ ನನ್ನ ಪ್ರಾರ್ಥನೆ ಇಷ್ಟೆ: ಗುರುಸ್ವರೂಪರ ಪ್ರಾರ್ಥನೆಯು ಅವನಿಗೆ ಅತಿಶೀಘ್ರದಲ್ಲಿ ತಲುಪಿ ಆಸೆಗಳು ನೆರವೇರಲಿ.

    ReplyDelete
  4. [ವಿಜಯಾ] ಅವಾಚ್ಯ ಶಬ್ದಗಳಿಂದ ಬೈಯ್ಯುವುದು ಇಲ್ಲಿ ನಿಷೇಧಿಸಲಾಗಿದೆ.

    [ಶ್ರೀಕಾಂತ್] ಆಮೆನ್!

    [ಶ್ರೀಕಾಂತ್] ಎರಾಟಾ!! ;-) ಕ್ಷಮಿಸಿದೆ!!

    [ಲಕುಮಿ] ಕಾರಂತರ 'ಮೂಕಜ್ಜಿಯ ಕನಸುಗಳು' ಕಾದಂಬರಿಯ ಪ್ರಸಂಗವೊಂದು ನೆನಪಾಯಿತು. ಗಾಳಿ, ಬೆಳಕು, ನೀರು, ಗಿಡ, ಮರ, ಸೂರ್ಯ, ಚಂದ್ರ, ಬೆಂಕಿ, ಮಣ್ಣು ಎಲ್ಲಾ ಕೊಟ್ಟ ದೇವ್ರನ್ನ ಮತ್ತೆ ಅದ್ ಕೊಡು ಇದ್ ಕೊಡು ಅಂತ ಯಾಕ್ ಕೇಳ್ಕೋತೀವಿ???

    ReplyDelete