Wednesday, April 16, 2008

ಬಾ ಮಳೆಯೇ ಬಾ..

ಕನ್ನಡದಲ್ಲಿ ಇದುವರೆಗೂ ಕೇಳಿರುವ ಅತ್ಯಂತ romantic ಹಾಡುಗಳಲ್ಲಿ ಇದು ಪ್ರಮುಖವಾದದ್ದು ಎಂದು ಯಾವಾಗ ಎಲ್ಲಿ ಬೇಕಾದರೂ ಹೇಳಬಲ್ಲೆ.

ಬಿ.ಆರ್.ಲಕ್ಷ್ಮಣರಾವ್ ಬರೆದಿರೋದು ಅಂದರೆ ಅದು ಎಷ್ಟರ ಮಟ್ಟಿಗೆ ಮೈ ಪುಳಕವನ್ನುಂಟು ಮಾಡಬಹುದು ಎಂದು ವಿವರಿಸಬೇಕಿಲ್ಲ.

ಬೇಸರದ ಸಂಗತಿಯೆಂದರೆ ಈಗಾಗಲೇ ಕನ್ನಡದ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಪ್ರತಿಷ್ಠಾಪಿಸಿಕೊಂಡಿರುವ ಸೋನು ನಿಗಮ್ ಅವರು ಈ 'ಬಾ ಮಳೆಯೇ ಬಾ' ಹಾಡನ್ನು ಹಾಡಿರುವ ರೀತಿ. ಕನ್ನಡದಲ್ಲಿ ಹಾಡುಗಾರರ ಕೊರತೆಯನ್ನು ಕಾಣುತ್ತಿರುವ ಸಂಗೀತ ನಿರ್ದೇಶಕರಿಗೆ ಮನದಟ್ಟಾಗುವುದು ಯಾವಾಗ ಅಂತ ಗೊತ್ತಿಲ್ಲ. ಲಕ್ಷ್ಮಣರಾಯರಿಗೆ ಸಂತೋಷವಾಯಿತೋ ಇಲ್ಲವೋ ಗೊತ್ತಿಲ್ಲ, ಈ ಹಾಡು ಕೇಳಿ; ಅವರ ಅಭಿಮಾನಿಯಾದ ನನಗಂತೂ ವಿಪರೀತ ಬೇಸರ ತರಿಸಿತು.


ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ ಹಿಂತಿರುಗಿ ಹೋಗದಂತೆ...

ಸೋನು ನಿಗಮ್ ಧ್ವನಿಯಲ್ಲಿ ಕೇಳಬೇಕೆಂದರೆ ಈ ಲಿಂಕಿನಲ್ಲಿದೆ. http://www.kannadaaudio.com/Songs/Moviewise/home/Accident.php

ಇದೇ ಹಾಡಿನ 'Club Mix' version ಕೂಡ ಇದೆ. ಮೇಲ್ಕಂಡ ಲಿಂಕಿನಲ್ಲೇ ಅದೂ ಕೂಡ ದೊರಕಲಿದೆ. ಕೇಳದಿದ್ದರೇನೇ ಒಳ್ಳೇದು.
ಇದೇ ಹಾಡನ್ನು ಕನ್ನಡದ ಹಾಡಿನಂತೆಯೇ ಕೇಳಬೇಕು ಎಂದರೆ ಈ ಲಿಂಕಿನಲ್ಲಿದೆ.
http://www.kannadaaudio.com/Songs/Bhaavageethe/home/HrudayavaNinageNeedide.php

http://www.kannadaaudio.com/Songs/Bhaavageethe/home/MadhuMaale.php

-ಅ
16.04.2008
12.20PM

9 comments:

 1. ಏನೇನೋ ಬರೀಬೇಡ್ವೋ! ಎಷ್ಟು ಸೊಗಸಾಗಿದೆ ಸೋನು ಹಾಡಿರೋದು. ಆ ರಾಗ ಅಂತೂ ಸೂಪರ್. ಎಷ್ಟು ಸೂಪರ್ ಅಂದ್ರೆ ಹಾಡಿರೋದಿಕ್ಕೆ, ರಾಗಸಂಯೋಜನೆಗೆ "accident of the year" ಪ್ರಶಸ್ತಿ ಕೊಡಬೋದು! ನನ್ನ ಬ್ಲಾಗಿನಲ್ಲೂ ಸಾಕಷ್ಟು ಹೊಗಳಿದ್ದೀನಿ ಇದರ ಬಗ್ಗೆ.

  ReplyDelete
 2. ಕ್ಲಬ್ ಮಿಕ್ಸ್ ಅಂತೆ! ಕರ್ಮ! ಬಿಟ್ರೆ ಇದನ್ನ ಅಮೆರಿಕಾದವರಿಂದ ಹೇಳಿಸಿಬಿಟ್ಟು ಪಾಪ್ ಮ್ಯೂಸಿಕ್ ಅಂದುಬಿಡ್ತಾರೆ!

  ReplyDelete
 3. ನಂಗ್ಯಾಕೋ ಹಳೆಯ ಟ್ಯೂನೂ ಅಷ್ಟು ಹಿಡಿಸ್ಲಿಲ್ಲ...ಅದ್ರಲ್ಲಿ atleast ಉಚ್ಛಾರಣೆ ಶುದ್ಧವಾಗಿದೆ ಅನ್ನೋದ್ ಬಿಟ್ರೆ... ಹೊಸದಂತೂ ಚಿತ್ರಾನ್ನ ಆಗಿದೆ ಬಿಡಿ!:))

  ReplyDelete
 4. nangoo hale tune ishta agilla, ucchaarane shuddhavaagide annodu sathya.
  aadre hosa tune ashtenoo kettadaagilla ansthu :)

  ReplyDelete
 5. ಮೊದ ಮೊದಲು ಮೈಸೂರು ಅನಂತಸ್ವಾಮಿಯವರ ಟ್ಯೂನ್ ನನ್ಗು ಹಿಡಿಸಲಿಲ್ಲ, ಆದರೆ ಮತ್ತೆ ಮತ್ತೆ ಕೇಳಿದಾಗ ಇಷ್ಟ ಆಯ್ತು ಕಾರಣ ಬಿ ಆರ್ ಲಕ್ಷ್ಮಣರಾಯರ ಕವನದ ಮೊಡಿ ಇರಬಹುದು... :)
  ಹೊಸ ಟ್ಯೂನ್ ಲವಲವಿಕೆಯಿಂದ ಇದೆ ಆದರೂ ಸ್ಪಷ್ಟವಾಗಿ ಹಾಡಿದ್ದರೆ ವಿಭಿನ್ನವಾರ್ತಿತ್ತೇನೊ???

  ಸಿ ಅಶ್ವತ್ ಹಾಡಿರೊ ಲಿಂಕು ಓಪನ್ ಆಗ್ತಿಲ್ಲ ಮಾರಾಯ.

  ReplyDelete
 6. @ಅಮರ: ಅಶ್ವಥ್ ಹಾಡು 'ವಾಸಂತಿ' ರಾಗದಲ್ಲಿದೆ. ಬಹಳ ಚೆನ್ನಾಗಿದೆ. ಆ ಲಿಂಕ್ ಅಲ್ಲಿ ಏನೋ ಸಮಸ್ಯೆ ಕರ್ಮಕಾಂಡ. ಸೋನು ನಿಗಮ್ ಕನ್ನಡ ಕಲಿಯಲು ಇನ್ನೂ ಟೈಮ್ ಬೇಕು, ಕನ್ನಡಿಗರ ಕೊರತೆಯನ್ನು ನೀಗಿಸಲು!!!

  @ಅನ್ನಪೂರ್ಣ: ಟ್ಯೂನು ತುಂಬಾ 'ಪಾಪ್' ಆಗಿದೆ ಅನ್ನಿಸಿತು... ಪಾಪ.. ನಾನು mostly biassed ಆಗಿದೀನಿ ಅನ್ಸುತ್ತೆ..

  @ಶ್ರೀ: ಹ ಹ್ಹ ಹ್ಹಾ.. ಚಿತ್ರಾನ್ನ ಏನ್ ಬಂತು, ವಿಚಿತ್ರಾನ್ನ!!

  @ಶ್ರೀಕಾಂತ್: ಒಳ್ಳೇ ಆಕ್ಸಿಡೆಂಟು!!

  ReplyDelete
 7. @ಶ್ರೀನಿಧಿ: ನಿಂಗೆ ಖುಷಿ ಆಗಿದ್ದು ನಂಗೂ ಖುಷಿ.. :-)

  ReplyDelete
 8. ಈ ಹಾಡು ಕೇಳಿ ಬಗ್ಗೆ ನನಗಾದ ಅನುಭವ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

  ಪುಟ್ಟಿ, ಈ ಹಾಡು ಕೇಳ್ರಿ ಅಂತ ಲಿಂಕ್ ಕಳಿಸಿದಳು. ಆ ಪಲ್ಲವಿ ಮುಗಿಯುದರೊಳಗೆ, ನಾನು ಹಾಡನ್ನು ನಿಲ್ಲಿಸಿದೆ. ಮತ್ತೆ ಅಶ್ವತ್ಥ್ ಅವರ ಧ್ವನಿಯಲ್ಲಿ ಹಾಡನ್ನು ಇನ್ನೊಮ್ಮೆ ಕೇಳಿದೆ.

  ReplyDelete