Friday, April 25, 2008

ಸ್ವೀಕರಿಸು ಓ ಗುರುವೆ

ಪ್ರಾರ್ಥನೆ ೧: ದೇವ್ರೇ, ನಂಗೆ ಒಳ್ಳೇದ್ ಮಾಡಪ್ಪಾ.. ವಿದ್ಯಾ ಬುದ್ಧಿ ಕೊಡಪ್ಪಾ ನಂಗೆ...

'ನಾನು' ಅನ್ನೋ ಹಮ್ಮಿನ ಕಡೆ ದೇವರು ಇರುತ್ತಾನೆಯೇ?

ಪ್ರಾರ್ಥನೆ ೨: ದೇವ್ರೇ, 'ಅವಳಿಗೆ' ಒಳ್ಳೇದ್ ಮಾಡಪ್ಪಾ, ಅವಳ ಕಷ್ಟ ಎಲ್ಲಾ ನೀಗಲಿ

ಇದೇನು ದೊಡ್ಡ ನಿಸ್ವಾರ್ಥದ ಪ್ರಾರ್ಥನೆಯೇ? 'ಅವಳು' ನನ್ನವಳು ಆಗಿರೋದರಿಂದಲೇ ಪ್ರಾರ್ಥಿಸುತ್ತಿರೋದು. ದೇವರಿಗೆ ಸ್ವಾರ್ಥ ಇಷ್ಟ ಆಗುತ್ತಾ?

ಪ್ರಾರ್ಥನೆ ೩: ದೇವರೇ (ನೀನಿದ್ದರೆ), ನನ್ನ ಆತ್ಮವನ್ನು (ಅದಿದ್ದರೆ) ರಕ್ಷಿಸು (ಬಲವಿದ್ದರೆ)

ತನ್ನ ಬಗ್ಗೆಯೇ ಸಂದೇಹ ಇರೋನಿಗೆ ಪಾಪ ದೇವರು ತಾನೇ ಏನು ಸಹಾಯ ಮಾಡಿಯಾನು.

ಪ್ರಾರ್ಥನೆ ೪: ದೇವ್ರೇ, ಎಲ್ಲರಿಗೂ ಒಳ್ಳೇದ್ ಮಾಡಪ್ಪಾ..

ದೇವರ ಕರ್ತವ್ಯವನ್ನು ದೇವರಿಗೇ ನೆನಪಿಸೋದು ಯಾವ ನ್ಯಾಯ? ಅವನು ತನ್ನ ಕೆಲಸ ಸರಿಯಾಗಿ ಮಾಡ್ತಿಲ್ಲ, ಕರ್ತವ್ಯಭ್ರಷ್ಟ ಅಂತಾದರೆ ಈ ಪ್ರಾರ್ಥನೆ ಅಗತ್ಯ.

ಪ್ರಾರ್ಥನೆ ೫: ನಾಕವಿದೆ ನರಕವಿದೆ, ಪಾಪವಿದೆ ಪುಣ್ಯವಿದೆ, ಸ್ವೀಕರಿಸು ಓ ಗುರುವೆ ಅಂತರಾತ್ಮ..

ಮಿಕ್ಕಿದ್ದು ದೇವರಿಗೆ ಬಿಟ್ಟಿದ್ದು!!!

[ವಿಶೇಷ ಧನ್ಯವಾದಗಳು: ರಾಷ್ಟ್ರಕವಿ ಕುವೆಂಪುರವರಿಗೆ, ಅವರ ಸಾಲುಗಳನ್ನು ಬಳಸಿಕೊಂಡಿದ್ದಕ್ಕೆ]

-ಅ
25.04.2008
7PM

7 comments:

  1. ಅರುಣ್,

    ಈ ಬರಹಕ್ಕೆ ಎಷ್ಟು relate ಆಗುತ್ತೋ ಗೊತ್ತಿಲ್ಲ, ಆದ್ರೆ ಇದನ್ನ ಒದಿದಾಗ ಒ೦ದು ಗಾದೆ ನೆನಪಾಯ್ತು. ಅದು "ಅಳದೆ ಹೋದ್ರೆ ಹೆತ್ತತಾಯಿನೂ ಹಾಲು ಕೊಡಲ್ಲಾ" ಅ೦ತ. ಇದೂ ಹಾ೦ಗೇನೆ ಇರಬಹುದಾ?

    ReplyDelete
  2. taLLanisadiru kanDya manave..... :-)

    ReplyDelete
  3. ಅರುಣ್,
    ನೀವು ಹೇಳುತ್ತಿರುವ ಮಾತು ಸತ್ಯ!

    ReplyDelete
  4. "ಎಲ್ಲರಿಗೂ ಒಳ್ಳೆಯದಾಗಲಿ,ಎಲ್ಲರೂ ಚೆನ್ನಾಗಿರಲಿ" ಎಂಬ ಪ್ರಾರ್ಥನೆ ಸೂಕ್ತ ಎನ್ನಿಸುತ್ತದೆ. ಎಲ್ಲರೂ ಎಂದರೆ ನೀನು, 'ಅವಳು', ಇನ್ನೆಲ್ಲರೂ ಎಂದರ್ಥ ಅಲ್ಲವೇ?

    ಇನ್ನು "ಒಳ್ಳೆಯದಾಗಲಿ, ಚೆನ್ನಾಗಿರಲಿ" ಎಂದರೆ ದೇವರ ಶಕ್ತಿ, ಆತ್ಮ ಇತ್ಯಾದಿಗಳೆಲ್ಲಾ ಯೋಚಿಸಬೇಕಾಗಿಲ್ಲ. ಒಳ್ಳೆಯದು ಮಾಡುವುದು, ಚೆನ್ನಾಗಿಡುವುದು ದೇವರು ಎಂದು ಆಸ್ತಿಕರು ಅರ್ಥ ಮಾಡಿಕೊಳ್ಳುತ್ತಾರೆ. ನಾಸ್ತಿಕರು ಅದೇನು ಅರ್ಥ ಮಾಡಿಕೊಳ್ಳುತ್ತಾರೋ ಅವರಿಗೆ ಬಿಟ್ಟಿದ್ದು. "ಹೇಗೋ ಎಲ್ಲರಿಗೂ ಒಳ್ಳೇದಾಗ್ಲಿ, ಹೇಗೋ ಎಲ್ಲರೂ ಚೆನ್ನಾಗಿರ್ಲಿ" ಎಂದು "ಹೇಗೆ?" ಎನ್ನುವ ಪ್ರಶ್ನೆಯ ಬಗ್ಗೆ ತಲೆಕೆಡಿಸಿಕೊಳ್ಳದೇ ಬಿಡುತ್ತಾರೆ ಎನ್ನಿಸುತ್ತದೆ.

    ReplyDelete
  5. @ಹರ್ಷ: ಹೆತ್ತ ತಾಯಿಗೆ ಮಗು ಅತ್ತರೆ ಅದಕ್ಕೆ ಹಸಿವೆಂದು ಅರ್ಥ ಆಗುತ್ತೆ. ಇದು ಪ್ರಕೃತಿನಿಯಮ. ಆದರೆ ದೇವರಿಗೆ ಗೊತ್ತಾಗ ಬೇಕಾದರೆ ಅಳಬೇಕೆ? ಹಾಗೇ ಗೊತ್ತಾಗೋದಿಲ್ಲವೇ?

    @ಶ್ರೀಧರ: ತಲ್ಲಣವಲ್ತು, ಚಿಂತನೆಯಂಗೈಯ್ಯುತಿಹೆನಲ್ಪಸ್ವಲ್ಪವಂ ಕಲ್ತು!

    @ಲಕುಮಿ: sorry.

    @ಅಂತರ್ವಾಣಿ: ನಾನು ಇನ್ನೂ ಏನೂ ಹೇಳೇ ಇಲ್ವಲ್ಲಾ??

    @ಶ್ರೀಕಾಂತ್: "ಎಲ್ಲರಿಗೂ ಒಳ್ಳೇದಾಗ್ಲಿ" ಎನ್ನುವುದು ಆಶಯ. ಪ್ರಾರ್ಥನೆಯಲ್ಲ. ಮನುಷ್ಯನು ತಾನು ಮನುಷ್ಯತ್ವವನ್ನುಳಿಸಿಕೊಂಡಿದ್ದೇನೆಂಬುದನ್ನು ತೋರಿಸಿಕೊಳ್ಳಲು ಮಾಡುವ ಆಶಯಗಳು. ಆಶಯವಾಗಿ ಉಳಿಯುವುದಷ್ಟೆ. ಕರ್ಮದ ಫಲಗಳನ್ನನುಭವಿಸಲು ಸಂಕಷ್ಟಗಳನ್ನನುಭವಿಸುವವರು ಅನುಭವಿಸುತ್ತಲೇ ಇರುತ್ತಾರೆ. "ಎಲ್ಲರಿಗೂ ಒಳ್ಳೇದ್ ಮಾಡಪ್ಪಾ..." ಅಂತ ದೇವರನ್ನು ಕೇಳಿಕೊಳ್ಳುವ ಅವಶ್ಯಕತೆಯೇನೂ ಇಲ್ಲವಲ್ಲವೇ? ದೇವರಿಗೆ ತನ್ನ ಕರ್ತವ್ಯ ಗೊತ್ತಿರೋದಿಲ್ಲವೇ?

    ReplyDelete
  6. ಯಾವುದೋ ಸ್ತೋತ್ರದಲ್ಲಿ ಬರುವಂತೆ ನೆನಪು...

    यथा योग्यं तथा कुरु |

    ReplyDelete