Sunday, May 4, 2008

ಬದುಕು ಗಂಗೆ

ಬದುಕು ಗಂಗಾನದಿ ಥರ ಇದೆ.

ಪವಿತ್ರ ಆದರೂ ಕೊಳಕುಮಯ. ಭೂತ ಪ್ರೇತಗಳನ್ನು ಹೊತ್ತಿವೆ. ಎಲ್ಲಾ ಕಶ್ಮಲಗಳನ್ನೂ ನುಂಗಿ ಅಜೀರ್ಣಿಸಿಕೊಳ್ಳುತ್ತಿದ್ದರೂ ಭಕ್ತರಿಗೇನೂ ಕಡಿಮೆಯಿಲ್ಲ. ಯಾವುದೋ ಶಿಖರದಲ್ಲಿ ಹುಟ್ಟಿ ಇನ್ಯಾವುದೋ ಸಾಗರ ಸೇರುವ ನಿಟ್ಟಿನಲ್ಲಿ ನಿರಂತರವಾಗಿ ಹರಿಯುತ್ತಲಿದೆ.

ಬತ್ತಿ ಹೋಗಲಿ ಗಂಗೆಯೊಂದು ಸಲ ತಳ ಬಿರಿದು......

-ಅ
04.05.2008
5.50AM

6 comments:

 1. ಗಂಗೆ ಬತ್ತಿಹೋಗಬೇಕಿಲ್ಲ ಗುರುಗಳೇ.... ಕೊಳಕನ್ನೆಲ್ಲ ಕೊಚ್ಚಿಹಾಕಿ,ಭೂತ ಪ್ರೇತಗಳನ್ನು ಧೂಳಿಪಟ ಮಾಡಿ, ಕಲ್ಮಶಗಳ ಅಜೀರ್ಣಕ್ಕೆ ಶಾಂತಚಿತ್ತತೆ ಎಂಬ ಭಾವನಾ ಶುಂಠಿಯ ಸಮವಾಗುವ ವರುಣನ ಒಂದು ಮುಗುಳ್ನಗೆ ರೂಪದ ಸೋನೆ ಸಾಕು. ಹಳೇ ನೀರಿನ ಜಾಡು ಹುಡುಕಿದರೂ ಸಿಗದು !!

  ಬದುಕು ಹಾಗೆಯೇ ಗುರುಗಳೇ...ನಿರಂತರ. ಒಂದೆಡೆಯ ಅನುಭವ ಮತ್ತು ನೆನಪುಗಳನ್ನು ಹೊತ್ತು ಮತ್ತೊಂದೆಡೆಗೆ ಹೋಗುವ ರೋಚಕ ಪಯಣ. ಬದುಕು ಬತ್ತಿಹೋಗಬೇಕೆಂದು ನೀವಿಚ್ಛಿಸಿದರೆ, ಅದರ ಒಡಲಲ್ಲಿರುವ ನೆನಪೆಂಬ ಕೋಟ್ಯಂತರ ಮುತ್ತುಗಳ ಬೆಲೆ ತೆತ್ತಬೇಕಾದೀತು !! ನೆನಪು ನೆನಪಿಸಿಕೊಳ್ಳಲು ಅನರ್ಹವೇ ? ಹಾಗಿದ್ದರೆ ಹೊಸ ಮಧುರ ನೆನಪಿನ ಸೋನೆಯ ಅಗಮನಕ್ಕೆ ಶಾಂತ ಚಿತ್ತರಾಗಿ ಕಾಯಿರಿ. ಆ ಅನರ್ಹ ನೆನಪುಗಳು ಹಾಗೆಯೇ ಕೊಚ್ಚಿಕೊಂಡು ಹೋಗತ್ವೆ.

  ಪವಿತ್ರ ಆದರೂ ಕೊಳಕುಮಯ. ಅಜೀರ್ಣ ಆದರೂ ಭಕ್ತರ ಮಹಾಪೂರ...ಬದುಕಿನ definition-ಏ oxymoronic ಗುರುಗಳೇ !!

  oops !! ನಿಮ್ಮ post ಗಿಂತ ನನ್ನ comment ದೊಡ್ಡದಾಗೋಯ್ತು !!!

  ReplyDelete
 2. ganges river ;-) ge batti hogli anno baththi idbeda neeenu.... ;-) the bottom line is "No battis please......." :-D :-D :-D

  ReplyDelete
 3. [ಲಕುಮಿ] ಆಶಯ, ಪ್ರಾರ್ಥನೆ ಬಹಳ ಸುಲಭದ ಸಂಗತಿ. ಇದುವರೆಗೂ ಗಂಗೆಯ ಮೇಲೆ ಎಷ್ಟು ಮಳೆ ಸುರಿದಿದೆಯೋ ಗೊತ್ತಿಲ್ಲ. ಅದು ಮಳೆಗೆಲ್ಲಾ ಬಗ್ಗಲ್ಲ. ಒಮ್ಮೆ ಸಂಪೂರ್ಣ ಬತ್ತಿ ಹೋಗಿ ನಂತರ ಹೊಸತಾಗಿ ಹುಟ್ಟಬೇಕು.

  [ಶ್ರೀಧರ] ಬತ್ತಿ ಹೋಗಲಿ ಗಂಗೆಯೊಂದು ಸಲ ತಳಬಿರಿದು,
  ಕುರುಕ್ಷೇತ್ರ ಜಪಮಾಲೆ ನುಚ್ಚುನೂರು;
  ಕತ್ತು ಕತ್ತರಿಸಲಿಕ್ಕಲ್ಲ ಆ ಇನ್ನೊಬ್ಬನಿರುವುದು, ಎರಡು
  ನದಿಗಳೊಂದಾಗಿ ಮುಂದಕೆ ಸಾಗಲು.

  ಗಂಗೆಯಿಲ್ಲದ ಕಾಲದಲ್ಲಿ ತಡೆದುಡುಕಿದ ಭಗೀರಥನ
  ಸಂಕಲ್ಪಬಲದ ಅಸಂಖ್ಯಾತರಿಲ್ಲಿ
  ಬಂದೆ ಬರುವರು; ದೇವಗಂಗೆಯ ನೇರ
  ಹೃದಯದಂತರ್ಗಂಗೆ ತುಂಬಿ ಚೆಲ್ಲಿ,
  ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ
  ಚಿಗುರುವುವು ಚಿಗಿಯುವುವು ಮುಗಿಲ ಕಡೆಗೆ;
  ಕನಸೆ? ಕಲ್ಪನೆಯೆ? ಇಲ್ಲವಾದರೇನಿದೆ ಇಲ್ಲಿ;
  ಕಣ್ಣು ಕೀಳುವ ಸೂಜಿ, ಕೊಲುವ ಬಡಿಗೆ.

  ReplyDelete
 4. [ಲಕುಮಿ] ಮೇಲ್ಕಂಡ ಕಮೆಂಟು ನಿನ್ನ ಕಮೆಂಟಿಗೂ ಸಮಂಜಸವಾದ ಉತ್ತರವೆಂದು ಭಾವಿಸುತ್ತೇನೆ.

  ReplyDelete
 5. ನೀರನ್ನು ಶುದ್ಧೀಕರಿಸುವುದು ಕೇಳಿದ್ದೇವೆ, ಹಾಗೇ ಬದುಕನ್ನು ಶುದ್ಧೀಕರಿಸುವವರ್ಯಾರಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

  ಗಂಗೆ ಬತ್ತಿಹೋಗುವುದರಲ್ಲಲ್ಲ ಒಳಿತಿರುವುದು. ಹೊಸ ಗಂಗೆ ಮತ್ತೆ ಹುಟ್ಟಿಬಂದರೆ ಹಳೆಯ ಕೊಳಕು ಅದನ್ನೂ ಸೇರಿಕೊಳ್ಳುತ್ತದೆ. ಪ್ರತಿದಿನ ಅದೇ ತಾನೆ ಆಗುತ್ತಿರುವುದು! ಹಿಮಾಲಯದ ಕಡೆಯಿಂದ ಶುದ್ಧವಾಗಿ ಹೊಸದಾಗಿ ಹುಟ್ಟಿಬರುತ್ತಿದೆ ಗಂಗೆ; ತನ್ನ ಪಯಣದುದ್ದಕ್ಕೂ ನಾವೆಲ್ಲರೂ ನೀಡುವ ಕೊಳಕು ಬಟ್ಟೆ ತೊಟ್ಟು, ಕೊಳಕು ಉಂಡು, ಕಲ್ಕತ್ತದ ಬಳಿ ಅದೇ ಗಂಗೆ ಕೊಳಕು ಹೂಗ್ಲಿ ಆಗಿ ಸಮುದ್ರಕ್ಕೆ ಸೇರಿಕೊಳ್ಳುತ್ತದೆ. ಎಷ್ಟೋ ವರ್ಷಗಳಿಂದ ನಡೆಯುತ್ತಿದೆ ಇದು.

  ಬತ್ತಿ ಹೋಗಬೇಕಾದ್ದು ನಮ್ಮ ಮನಸ್ಸಿನಲ್ಲಿರುವ ಕೊಳಕೇ ಹೊರತು ಗಂಗೆಯಲ್ಲ! ಕೊಳಕು ಗಂಗೆಗೆ ಸೇರದಂತೆ ಉಪಾಯ ಹುಡುಕುವುದೇ ಸರಿಯಾದ ಉಪಾಯ ಅಂತ ನನ್ನ ಅನಿಸಿಕೆ.

  ಇನ್ನು ಬದುಕನ್ನು ಗಂಗೆಗೆ ಹೋಲಿಸುವುದೇ ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಗಂಗೆಯಂತೆ ಬದುಕಿಗೆ ಪ್ರತಿಕ್ಷಣವೂ ಆದಿ-ಅಂತ್ಯಗಳಿರುವುದಿಲ್ಲ. ಬದುಕಿಗೆ ಗಂಗೆಯಷ್ಟು ವ್ಯಾಪ್ತಿಯೂ ಇಲ್ಲ, ಉಪಕಾರಿತನವೂ ಇಲ್ಲ.

  ReplyDelete
 6. ಅಡಿಗರ ಕವನಕ್ಕೆ ನಿನ್ನ ವಿಮರ್ಶೆ ಚೆನ್ನಾಗಿದೆ..

  ReplyDelete