Thursday, May 8, 2008

ಓಟು ಕೊಟ್ಟು ಕಾಪಾಡಿ...

ಭವ್ಯಾ ಜೊತೆ ವಿಜಯನಗರದ ಒಂದು ಸ್ಟುಡಿಯೋಗೆ ಹೋಗಿದ್ದೆ. ಹಾಡು ರೆಕಾರ್ಡಿಂಗ್ ಸಲುವಾಗಿ. "ಯಾವ ತರಹದ ರೆಕಾರ್ಡಿಂಗ್ ಆದ್ರೂ ಭಾಗವಹಿಸು, ಹಾಗೇನೇ ಬೆಳೆಯೋದು, ಯಾವುದಕ್ಕೂ ಹಿಂಜರಿಯಲೇ ಬೇಡ" ಅಂತ ನಾನೇ ಅವಳಿಗೆ ಹೇಳಿದ್ದು ತಪ್ಪಾಯಿತೆಂದು ನನಗೇ ಅನ್ನಿಸತೊಡಗಿತು. ಅಲ್ಲಿ ಇದ್ದ ರೆಕಾರ್ಡಿಂಗು ಕರ್ಮಕ್ಕೆ ಎಲೆಕ್ಷನ್ ಕ್ಯಾಂಪೇನ್ ಹಾಡುಗಳದು!! ಸರಿ, ಒಪ್ಪಿಕೊಂಡಿದ್ದ ಕರ್ಮಕ್ಕೆ ಎರಡು ಹಾಡು ಹೇಳಿ ಬಂದಳು.

ಆ ಸ್ಟುಡಿಯೋ ಒಳಗೆ ಕಾಲಿಟ್ಟ ತಕ್ಷಣ ಅಲ್ಲೊಬ್ಬ ಕೂತಿದ್ದ ವ್ಯಕ್ತಿಯನ್ನು ನೋಡಿ, ರೆಕಾರ್ಡಿಂಗ್ ಎಷ್ಟು ಹೊತ್ತಿಗೆ ಎಂದು ಕೇಳಿ ತಿಳಿದುಕೊಳ್ಳೋಣವೆಂದು ಅವನ ಹತ್ತಿರ ಹೋದೆ. ಆತ ಏನನ್ನೋ ಬರೆಯುತ್ತಿದ್ದ. ನಾನಂದುಕೊಂಡೆ ಆತ ಯಾವುದೋ ಬಿಲ್ ಸೆಟಲ್ಮೆಂಟ್‍ಗೆ ಬಂದಿದ್ದಾನೇನೋ ಅಂತ. ಅವನನ್ನು ಡಿಸ್ಟರ್ಬ್ ಮಾಡಲಿಲ್ಲ. ನಂತರ ಕೆಲವೇ ನಿಮಿಷದಲ್ಲೇ ಗೊತ್ತಾಯಿತು, ಆತನೇ ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಅಂತ. ನಾನು ಭವ್ಯಾಳ ಕಡೆ ಮುಖ ತಿರುಗಿಸಿ, "ಇನ್ನು ನೀವಿಬ್ರೂ ಹಾಡಿದ ಹಾಗೇ!!" ಅಂದೆ.

ಆತ ಏನು ಬರೆದಿದ್ದಾನೋ ಅಂತ ನೋಡೋಣ ಅಂತ ತುಂಬಾ tempt ಆಗುತ್ತಿತ್ತು. ಆದರೆ ಪುಣ್ಯಾತ್ಮ ಟ್ಯೂನ್ ಹಾಕುತ್ತಿದ್ದ ಕಾರಣ, ಆತನಿಗೆ ಡಿಸ್ಟರ್ಬ್ ಮಾಡಬಾರದೆಂದು ಸುಮ್ಮನಿದ್ದೆ. ಹಾಗೆಲ್ಲಾ ವ್ಯಕ್ತಿಗಳನ್ನು ವೇಷಭೂಷಣದಿಂದಾಗಲೀ, ಮುಖಸೌಂದರ್ಯದಿಂದಾಗಲೀ ಅಳೆಯಬಾರದೆಂದು ನಂಬಿರುವ ಕಾರಣ ಅವನೊಳಗೂ ಒಬ್ಬ ಉದಯಶಂಕರ ಇರಬಹುದೇನೋ ಎಂದುಕೊಂಡೆ. ಆಮೇಲೆ ಗೊತ್ತಾಯಿತು, ಅದು ಉದಯಶಂಕರನ ತುಂಡಲ್ಲ, ಅಸ್ತಮಶಂಕರನ ಅಪರಾವತಾರ ಅಂತ.

"ಸರ್, ಎರಡು ಸಿನಿಮಾ ಹಾಡಿನ ಟ್ಯೂನ್‍ನೇ ನೇರವಾಗಿ ಕಂಪೋಸ್ ಮಾಡಿದ್ದೀನಿ ಈ ಹಾಡುಗಳಿಗೆ.. ಮಿಕ್ಕಿದ್ದ್ ಆರು ಹಾಡುಗಳಿಗೆ ನಂದು ಓನ್ ಟ್ಯೂನ್ - ತಮಿಳು, ತೆಲುಗು, ಮಲೆಯಾಳಿ ಚಿತ್ರಗಳಿಂದ ತೊಗೊಂಡಿರೋದು.." ಎಂದು ವಿವರಿಸಿದ.

ಅರ್ರೇ, ಇನ್ನು ಇವನ ಸ್ವಂತಿಕೆಯೇನಿದೆ ಕರ್ಮ?

ಸಿತಾರ್ ಕಲಾವಿದೆಯು ರೆಕಾರ್ಡಿಂಗ್ ಹಾಲ್‍ನಿಂದ ಹಠಾತ್ತೆನೆ ಹೊರಗೆ ಧಾವಿಸಿದರು. ಹೊರಗೆ ಕುಳಿತಿದ್ದ ನನಗೆ ಗಾಬರಿಯಾಯ್ತು. ಏನಾಯಿತಪ್ಪಾ ಇವರಿಗೆ, ಆ ರಾಜಕಾರಣಿಯ ದೂತನೊಡನೆ ಜಗಳ ಆಡಿಕೊಂಡುಬಿಟ್ಟರೇನೋ ಎಂದುಕೊಂಡೆ. ಹೊರಗೆ ಬಂದೊಡನೆ ಜ್ವಾಲಾಮುಖಿಯಂತೆ ನಗುವನ್ನು ಸಿಡಿಸಿಬಿಟ್ಟರು. "ನನಗೆ ಆಗಲ್ಲಾ ರೀ ನುಡಿಸೋಕೆ.." ಎಂದು ಹೇಳಿ ಕಣ್ಣಲ್ಲಿ ಗಳಗಳ ನೀರು ಸುರಿಸಿದರು. ಆ ನೀರು ನಗುವು ಅಧಿಕವಾಗಿರುವುದಕ್ಕೆ ಕಾರಣ ಎಂದು ಆಮೇಲೆ ಅರ್ಥವಾಯಿತು. ಅವರ ನಗುವಿಗೆ ಕಾರಣ ಈ ಸಾಹಿತ್ಯ:

ನಮಗಾಗಿ ಮುರುಗೇಶಣ್ಣ BJPಗೆ ನಿಂತಾರ
ಕಮಲಕ್ಕ ಓಟ ಹಾಕಿ ಆರಿಸಿ ತರ್ರಿ ಅಂದಾರ
ರೈತನ ಮಗನಾಗ ಹುಟ್ಯಾರ ಇವರು
ಇಂಜಿನಿಯssರ ಪದವಿ ಪಡೆದವರು
ನಿಂತಾರ ಇವರು ಕಮಲಕ್ಕ
ಮುರುಗೇಶ ಮಂತ್ರಿ ಆಗಾಕ
ಒಮ್ಮೆ BJPಗೆ ಬಹುಮತ ಕೊಟ್ಟ ನಾವು ನೋಡಬೇಕ...

ಇದು ಪಲ್ಲವಿ ಅಂತೆ.

ಇಂಥಾ ಹಾಡನ್ನೆಲ್ಲಾ ಹಾಡಲು ಶಾಸ್ತ್ರೀಯ ಸಂಗೀತ ಕಲಿಯಬೇಕೇ? ಭವ್ಯಾ ಅಲ್ಲಿಂದ ಯಾವಾಗ ಎದ್ದು ಬರುತ್ತಾಳೋ ಎಂದು ಕಾಯುತ್ತಿದ್ದೆ. ಯಾವನೋ ಎಲ್ಲೋ ಓಟಿನ ಭಿಕ್ಷೆ ಕೇಳಲು ಕಲಾವಿದರ ಕಂಠವಾಗಬೇಕಾ? ಅವನ ಕರ್ಕಶ ಕಂಠದಲ್ಲೇ ಕೇಳಿಕೊಳ್ಳಲಿ. ಎಂದು ಆ ದೂರದ ರಾಜಕಾರಣಿಗೆ ಹಿಡಿಶಾಪವನ್ನು ನಗುತ್ತಲೇ ಹಾಕಿದೆ. ಭವ್ಯಾ ಎದ್ದು ಬಂದ ತಕ್ಷಣ ನಿರಾಳವಾಯಿತು.

...........................................................................

ಮನೆಗೆ ಕೆಜಿಗಟ್ಟಲೆ "ನಾವು ಬಸವನಗುಡಿಯಲ್ಲಿ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ, ಪರಿಸರ ಉಳಿಸುತ್ತಿದ್ದೇವೆ" ಎಂದು laminated paperನ brochureಗಳು ಬಂದು ಬೀಳುತ್ತಿವೆ. ಇವರು "ಪರಿಸರ ಹಬ್ಬ" ಎಂಬ ಬಸವನಗುಡಿಯ ಕಾರ್ಯಕ್ರಮ ಮಾಡಿ, ಪಟಾಕಿ ಸಿಡಿಸಿದ್ದ ಹೊಗೆ ಇನ್ನೂ ಆರಿಲ್ಲ. ಇನ್ನೇನು ಪರಿಸರ ಕಾಪಾಡ್ತಾರೋ.. ಓಟು ಕೊಟ್ಬಿಡಿ ಪಾಪ..

ಯಾವುದೋ ಚಾನೆಲ್ಲಿನಲ್ಲಿ ಶ್ರೀಮತಿ ಸುಶ್ಮಾ ಸ್ವರಾಜ್ ಅವರು ಓಟಿಗಾಗಿ ಕೆಟ್ಟ ಕನ್ನಡದಲ್ಲಿ ಮಾತನಾಡುತ್ತಿದ್ದುದು ಕೇಳಿ ಅಸಹ್ಯವಾಯಿತು. ಕೆಟ್ಟದಾಗಿದೆ ಆ ಜಾಹೀರಾತು. ಓಟು ಕೊಟ್ಟು ಇವರಿಂದ ಜನರನ್ನು ಕಾಪಾಡಿಪ್ಪಾ..

ಎಸ್ಸೆಮ್ಮೆಸ್ಸಲ್ಲಿ ಕೂಡ ಕ್ಯಾಂಪೇನ್ ಮಾಡೋಕೆ ಶುರು ಮಾಡ್ಬಿಟಿದ್ದಾರೆ. ವೋಡಾಫೋನ್‍ ಮೇಲೆ ಕೇಸು ಹಾಕೋ ಅಷ್ಟು ತಾಳ್ಮೆ ಇಲ್ಲ ನನ್ನ ಹತ್ತಿರ. ನನ್ನ ದಡ್ಡತನ, ಆ ಎಸ್ಸೆಮ್ಮೆಸ್ಸಿಗೆ "ನಿಮ್ಮಜ್ಜಿ ತಲೆ" ಅಂತ ಮರುಸಂದೇಶ ಕಳಿಸಿ ಮೂರು ರೂಪಾಯಿ ಕಳೆದುಕೊಂಡೆ.

ಹಿರಿಯ ಮಿತ್ರ ಗೋವಿಂದ್ ರಾಜ್ ಒಂದು ಟ್ರೆಕ್ಕಿನಲ್ಲಿ ಹೇಳಿದ್ದರು. ಈ ರಾಜಕಾರಣಿಗಳೆಂದರೆ ಹೇಲನ್ನು ಮೂರು ತುಂಡು ಮಾಡಿದ ಹಾಗೆ. They are all parts of same shit!!

ನನ್ನ ಕೈಗೆ ಇನ್ನೂ ಮತದಾರನ ಚೀಟಿ ಬಂದೇ ಇಲ್ಲ. ಈ ಸಲ ಬರುವ ರಾವಣನೋ ರಾಘವನೋ ಅವನಿಗೆ ನನ್ನ ಮತ ಇರುವುದಿಲ್ಲ.

-ಅ
08.05.2008
11.15PM

9 comments:

 1. SMS campaign-aa? ಕರ್ಮಕಾಂಡದ ಪರಮಾವಧಿ! ರಾಜಕಾರಣಿಗಳನ್ನು ನೆನಪಿಸಿದೊಡನೆ ಕೆಲವು ಸಂಸ್ಕೃತ ಶ್ಲೋಕಗಳು ನೆನಪಿಗೆ ಬಂದವು. ಸಾಧ್ಯವಾದರೆ ಅದನ್ನು ಬ್ಲಾಗಲ್ಲಿ ಬರೀತೀನಿ. ನೀನೂ ಒಂದು ಸರ್ತಿ ನೆನಪಿಸು.

  ReplyDelete
 2. voters id li nan hesre illa...kaadu kaadu saakadhe.... :-| i want to vote..

  ReplyDelete
 3. ಇದ್ದದ್ದರಲ್ಲೆ ಈ ಸಲ ವಾಸಿ ........ ಮೈಕಾಸುರ ಭಾದೆ ಇಲ್ಲ ....... ಊರೆಲ್ಲ ಗಬ್ಬು ಹಿಡಿಸುತ್ತಿದ್ದ ಬಟ್ಟಿಂಗೂ .... ಯಮ ಗಾತ್ರದ ಕಟೌಟ್ ಇಲ್ಲ.... ಜನ ನೆಮ್ಮದಿಯಾಗಿದ್ದಾರೆ. :)

  ReplyDelete
 4. ಶ್ರೀಧರ್, ವೋಟರ್ ಐಡಿ ಇಲ್ಲದಿದ್ದರೂ ಮತ ಹಾಕಬಹುದು, ಇತರ ೨೦ ದಾಖಲೆ ಪತ್ರಗಳ ಲಿಸ್ಟ್ ಕೊಟ್ಟಿದ್ದಾರೆ ಚುನಾವಣಾ ಆಯೋಗದವರು. ಇವತ್ತಿನ ಕನ್ನಡಪ್ರಭ ಅಥವಾ ವಿಜಯಕರ್ನಾಟಕ ಚೆಕ್ ಮಾಡಿ, ಅಥ್ವಾ www.ceokarnataka.kar.nic.in ಚೆಕ್ ಮಾಡಿ, ಲಿಸ್ಟ್ ಸಿಗುತ್ತದೆ...
  ರಾವಣ-ರಾಘವ ಎಲ್ಲರನ್ನೂ ಸೃಷ್ಟಿ ಮಾಡುವವರು ನಾವೇ.:) ನನಗನಿಸುತ್ತದೆ, ಅವರಿಗೆ ಮತ ಹಾಕಿ ತೆಪ್ಪಗಿದ್ದು ಬಿಡುವುದು ನಮಗೆಲ್ಲ ಅಭ್ಯಾಸವಾಗಿದೆ, ಆಮೇಲೆ ಅವರನ್ನು ನಾವು ಬಯ್ಯುತ್ತಾ ಕೂರುತ್ತೇವೆಯೇ ಹೊರತು ಬೇಕಾದದ್ದು ಕೇಳಿ ಕೆಲಸ ಮಾಡಿಸಿಕೊಳುವುದಿಲ್ಲ... ನಮ್ಮ ಅಭಿಪ್ರಾಯ ಅವರಿಗೆ ತಿಳಿಸಲು ಬೇಕಾದ ವೇದಿಕೆ ಸೃಷ್ಟಿಸುವುದಿಲ್ಲ, ನಮ್ಮ ಕಣ್ಣೆದುರಿಗೇ ಅನ್ಯಾಯ ನಡೆದರೂ ಸಂಬಂಧವಿಲ್ಲದ ಹಾಗೆ ತೆಪ್ಪಗಿರುತ್ತೇವೆ...
  ಹೇಳುವವರು ಕೇಳುವವರು ಇಲ್ಲದಿದ್ದರೆ ರಾಘವ ಕೂಡ ರಾವಣನಾಗಬಹುದು:P ಏನಂತೀರಾ ಅರುಣ್..?

  ReplyDelete
 5. ಒಪ್ಪಿದೆ. ನಾವೇ ಸೃಷ್ಟಿಸಿದವರು ಅವರು. ಅವರು ಕೆಲಸ ಮಾಡಿಲ್ಲ ಅಂತ ಟೀಕಿಸೋಕಿಂತ ಅವರ ಕೈಯಲ್ಲಿ ಕೆಲಸ ಮಾಡಿಸಬೇಕು ಅನ್ನುವ ಮಾತನ್ನು ಒಪ್ಪುತ್ತೇನೆ.

  ಮತ್ತು ಒಳ್ಳೆ ಲಿಂಕನ್ನು ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅದರ ಬಗ್ಗೆ ನನಗೆ ಅರಿವಿರಲಿಲ್ಲ.

  ವಿ.ಸೂ. ನಾನು ಇಲ್ಲಿ ಅವರುಗಳು ಕ್ಯಾಂಪೇನ್‍ಗೆ ಬಳಸಿರುವ ಚೀಪ್ ಮೆಥಡ್ಡುಗಳ ಬಗ್ಗೆ ಮಾತ್ರ ಹೇಳಿದ್ದು.. :-)

  ReplyDelete
 6. ee sala naanu vote maadbeku antha ideeni. 'All are part of same Shit' aagidrinda, alli hogi ... kamalakka, vimalakka yaarge haakteeno gothilla ... nan vote nalli proxy haakokke avakaasha kodbaardu annodu mukhya uddesha ...

  ReplyDelete
 7. paapa aa sitar artist recording complete maadkotra konege ... i pity the artists ... atleast maja siguttalla ... parvagilla ansutte :-). Nammaneli pamphlets olle upayoga bartide ... toilet training aagde iro naayi mari ide ... atleast cleaning kelsakke aagtide!!

  ReplyDelete
 8. gurugaLe....sakhathaagide.paapa neevaSHT keLkonDideera. vote haakbiDtini.

  nanagU ondu sms bandittu...vote for BJP anta. naanu nodi summanaade ashte. namma manege banda KG gaTTale phamplets na ole urige haaki haayaagi eLLeNNeya abhyanjana maaDide nenne !!

  ReplyDelete