Friday, May 16, 2008

ನಮಸ್ಕಾರ

ಲ್ಲಿ ನಲಿವಿಲ್ಲ, ಗೆಲುವಿಲ್ಲ.
ಅಂದಿನಿಂದ ಇಂದಿನವರೆಗೂ ಕಂಡ ಕನಸುಗಳ ಮುಗಿಸಿ ಎಚ್ಚರ;
ಉಸುರು, ಹೃದಯ, ಕೈಕಾಲುಗಳೆಲ್ಲಾ ಅಚರ.
ಯಾರುಯಾರೋ ಬಂಧುಗಳು ಕೂಗುತ ಅಳುತಿಹರು, ಹೋದವರು ಮೌನ.
ಅತ್ತವರು ಆಗರು ಎಂದೆಂದಿಗೂ ಸಹಚರ.
ಇಲ್ಲಿ ನಲಿವಿಲ್ಲ, ಸ್ಮಶಾನವಿದು, ಗೆಲುವೂ ಇಲ್ಲ.
ನಿರ್ಜೀವ ನಿರ್ಭಾವ ದೇಹಕ್ಕೆ ಸಂಸ್ಕಾರ
ದುಡಿದ ತಣಿದ ಚೇತನಕ್ಕೆ ನಮಸ್ಕಾರ.

-ಅ
16.05.2008
1PM

22 comments:

 1. "Rest in Peace, will join after I am done with my bit"

  ನಿಜ, ಇವತ್ತು ಅವರು, ನಾಳೆ ನಾವು!

  ReplyDelete
 2. ಇಲ್ಲಿ ನಲಿವಿಲ್ಲ, ಸ್ಮಶಾನವಿದು, ಗೆಲುವೂ ಇಲ್ಲ...innond word serstheeni..."ಸೋಲೂ ಇಲ್ಲ ...."

  ReplyDelete
 3. ಆದರೆ ಅಲ್ಲಿ ಸೋತ ಮೇಲೇನೇ ಹೋಗೋದು ಅಲ್ವಾ?

  ReplyDelete
 4. ನನ್ನ ಪ್ರಕಾರ "ಸಾವು" ಸೋಲಲ್ಲ..... :-|

  ReplyDelete
 5. @ಶ್ರೀಧರ - ನಿನ್ನ ಪ್ರಕಾರ "ಸಾವು" ಸೋಲಲ್ಲ ಎಂದಿ. ಹಾಗಾದರೆ ನಿನ್ನ ಪ್ರಕಾರ "ಸಾವು" ಎಂದರೆ ಏನು?

  "ಸೋಲೇ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ... ಈ ಸುಖ-ದುಃಖವೂ, ಅಳುವೂ, ನಗುವೂ; ಎಲ್ಲ ಆ ದೇವನ ಕೊಡುಗೆ..."

  ಸೋಲೇ ಗೆಲುವು, ಗೆಲುವೇ ಸೋಲು... ಇದನ್ನು ಅರಿತವನಿಗೆ ಸೋಲೂ ಇಲ್ಲ, ಗೆಲುವೂ ಇಲ್ಲ.

  ReplyDelete
 6. ond reeti nalli noddre, saavige naavu sotare taane saayodu? adakke innenu saaytidaare annorge, saavu badukina madhye horaadtidaare annodu.

  illi confusion, solu geluvina artha dallide ansutte nange ... geluvu as an achievement is not the same as geluvu as an emotion ... alli vetyasa alwa?

  ReplyDelete
 7. @ವಿಜಯಾ -

  saavige naavu sotare taane saayodu?

  ನಿಮ್ಮ ಪ್ರಶ್ನೆಯಲ್ಲೇ ಉತ್ತರವಿದೆ. "ಸೋತರೆ ತಾನೆ ಸಾಯೋದು" ಅಂತ ಹೇಳಿದ್ರಿ. ಎಂದರೆ ಸಾಯುವುದು ಸೋಲಾದಮೇಲೆ. ಸಾಯುವುದನ್ನೇ ಸಾವು ಎನ್ನುವುದು.

  ಸೋಲಾದಮೇಲೆ ಸಾಯುವುದಾದರೆ ಸೋಲುವಾಗ ಸಾವು ಬಂದಿರುವುದೇ ಇಲ್ಲ. "ಸಾವಿಗೆ ನಾವು ಸೋತರೆ" ಎಂದು ಹೇಗೆ ಹೇಳುತ್ತೀರಿ?

  adakke innenu saaytidaare annorge, saavu badukina madhye horaadtidaare annodu.

  ಸಾವು ಎಂದರೆ ಬದುಕಿನಂತ್ಯ. ಇಷ್ಟಲ್ಲದೇ ಸಾವಿಗೆ ಬೇರೆ ರೀತಿಯ definition ಇಲ್ಲ. ಬದುಕು ಮುಗಿದ ಕ್ಷಣವನ್ನೇ ಸಾವು ಎನ್ನುವುದು. "ಸಾವು-ಬದುಕಿನ ಮಧ್ಯೆ" ಏನೂ ಇಲ್ಲ. ಕಂಪ್ಯೂಟರ್ ಭಾಷೆಯಲ್ಲಿ ಹೇಳಬೇಕಾದರೆ ಬದುಕು-ಸಾವಿನ ಮಧ್ಯೆ ಇರುವುದು void ಎನ್ನಬಹುದು. "ಸಾವು-ಬದುಕಿನ ಮಧ್ಯೆ" ಎನ್ನುವ ಬಳಕೆಯೇ technically wrong!

  illi confusion, solu geluvina artha dallide ansutte nange ... geluvu as an achievement is not the same as geluvu as an emotion ... alli vetyasa alwa?

  ಈ ಸಾಲುಗಳು ನನಗೆ ಸರಿಯಾಗಿ ಅರ್ಥವಾಗಿಲ್ಲ. ಆದರೆ ಸೋಲು, ಗೆಲುವು ಎಂಬ ಪದವನ್ನು ಬದುಕು-ಸಾವುಗಳ ವಿಷಯದಲ್ಲಿ ಬಳಸುವುದೇ ಸರಿಯಲ್ಲ ಎಂದು ನನ್ನ ಅಭಿಪ್ರಾಯ.

  ನಾವು ಹುಟ್ಟಿದಾಗಲೇ ನಮ್ಮ ಜೀವನದಲ್ಲಿ ಏನೇನು ಆಗುತ್ತದೆ ಎಂದು ನಿರ್ಧಾರವಾಗಿರುತ್ತೆ. ಅದನ್ನೇ 'ವಿಧಿಬರಹ' ಅಥವಾ 'ದೇವರಿಚ್ಛೆ' ಅನ್ನೋದು. ಮತ್ತೊಂದು ವಿಷಯವೆಂದರೆ ಬದುಕಲು ಬೇಕಾದ ನಮ್ಮ ಪ್ರತಿಯೊಂದು ಅಂಗಗಳಿಗೂ pre-defined capacity ಇರುತ್ತೆ. [ಉದಾಹರಣೆಗೆ, ನಮ್ಮ ಶ್ವಾಸಕೋಶಕ್ಕೆ ದಿನಕ್ಕೆ ೨೧,೬೦೦ ಬಾರಿಯಂತೆ ೧೦೦ ವರ್ಷಗಳ ಕಾಲ ಉಸಿರಾಡುವ capacity ಇರುತ್ತೆ. ಬೇರೆ ಯಾವ ಅಂಗಗಳೂ, ಅಂಶಗಳೂ ಕೈಕೊಡದಿದ್ದರೆ, ನಾವು ದಿನಕ್ಕೆ ೨೧,೬೦೦ ಬಾರಿಗಿಂತ ವೇಗವಾಗಿ ಉಸಿರಾಡಿದರೆ ಕಡಿಮೆ ಕಾಲ ಬದುಕುತ್ತೀವಿ, ನಿಧಾನವಾಗಿ ಉಸಿರಾಡಿದರೆ ಹೆಚ್ಚು ಕಾಲ ಬದುಕುತ್ತೀವಿ.] ಈ pre-defined capacity ಮೀರಿ ನಾವೇನೂ ಮಾಡುವುದಕ್ಕಾಗುವುದಿಲ್ಲ. We are slaves of god and fate.

  ಇಷ್ಟು ಅರ್ಥ ಮಾಡಿಕೊಂಡರೆ ನಮಗೆ ಇಲ್ಲಿ ಗೆಲ್ಲುವುದಕ್ಕೆ ಏನೂ ಇಲ್ಲ ಎಂದೂ ಅರ್ಥವಾಗುತ್ತದೆ. ಗೆಲುವಿಗೆ ಅವಕಾಶ ಇದ್ದೂ ನಾವು ಗೆಲ್ಲದಿದ್ದರೆ ಅದನ್ನೇ ತಾನೆ ಸೋಲು ಎನ್ನುವುದು? ಗೆಲುವಿಗೆ ಅವಕಾಶವೇ ಇಲ್ಲದಿದ್ದರೆ ಸೋಲುವುದು ಹೇಗೆ ಸಾಧ್ಯ?

  ReplyDelete
 8. @ಶ್ರೀಧರ - ನಿನ್ನ ಪ್ರಕಾರ "ಸಾವು" ಎಂದರೆ ಏನು?

  ನಿನ್ನ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

  ReplyDelete
 9. ಶ್ರೀಕಾಂತ್ ಬಹುಶಃ ನೀನು ಎಲ್ಲವನ್ನೂ ಶಬ್ದಕೋಶದ 'ಒಂದು' ಅರ್ಥವನ್ನು ಮಾತ್ರ ಅಳವಡಿಸಿಕೊಳ್ಳುತ್ತಿದ್ದೀಯ. ಅದಕ್ಕೇ ಈ ವ್ಯಾಖ್ಯಾನ. ಇಲ್ಲಿ 'ಗೆಲುವು' ಅಂದರೆ ವಿಜಯ ಎಂದರ್ಥವಲ್ಲ. ಮುಖದಲ್ಲಿ ಗೆಲುವಿದೆ ಎಂದರೆ ಕಳೆಕಳೆಯಿದೆ ಎಂದರ್ಥ. ಸೋಲಿದೆ ಎಂದರೆ ಸಪ್ಪಗಿದೆ ಎಂದರ್ಥ.

  ಒಂದು ಪದಕ್ಕೆ ಸಂದರ್ಭಕ್ಕೆ ತಕ್ಕ ಹಾಗೆ ಅರ್ಥ ವ್ಯತ್ಯಾಸಗಳು ಮತ್ತು ಅದರ ಬಳಕೆಗಳು ಬದಲಾಗುತ್ತಾ ಹೋಗುತ್ತೆ. ಕವಿತೆಗಳಲ್ಲಂತೂ ಈ ರೀತಿಯ ಬಳಕೆ ಸಾಮಾನ್ಯ. ಹಾಗಾಗಿ ಗೆಲುವು ಸೋಲನ್ನು ಸಾವಿಗೆ ಹೋಲಿಸುವುದು ತಪ್ಪೆನ್ನುವ ವಾದಕ್ಕೆ ಹುರುಳಿಲ್ಲ.

  ReplyDelete
 10. @ಅರುಣ್ - ಎರಡು ಸಾಧ್ಯತೆಗಳು

  ೧) 'ಸೋಲು' ಮತ್ತು 'ಗೆಲುವ' ಎಂಬ ಪದಗಳಿಗೆ ನೀನು ಶಬ್ದಕೋಶದ ಎಲ್ಲಾ ಅರ್ಥವನ್ನು ಓದಿ ನಿನ್ನ ತಲೆ ಕೆಟ್ಟೋಗಿದೆ!

  ೨) ನಿನಗೆ ಸಂದರ್ಭವೇ ಸರಿಯಾಗಿ ಅರ್ಥವಾಗಿಲ್ಲ.

  ಸಂದರ್ಭಕ್ಕೆ ತಕ್ಕಂತೆಯೇ ಅರ್ಥ ಮಾಡಿಕೊಂಡು ಕಮೆಂಟಿಸಿದ್ದೇನೆ. ನಿನ್ನ "ಹಾಗಾಗಿ ಗೆಲುವು ಸೋಲನ್ನು ಸಾವಿಗೆ ಹೋಲಿಸುವುದು ತಪ್ಪೆನ್ನುವ ವಾದಕ್ಕೆ ಹುರುಳಿಲ್ಲ" ಎಂಬ ಮಾತಲ್ಲಿ ಹುರುಳಿಲ್ಲ. ಕವಿತೆಗಳ ವಿಷಯ ಇಲ್ಲಿ ಯಾಕೆ ಪ್ರಸ್ತಾಪ ಮಾಡಿದ್ದೀಯೋ ಅರ್ಥವಾಗಲಿಲ್ಲ.

  ReplyDelete
 11. errata:

  'ಸೋಲು' ಮತ್ತು 'ಗೆಲುವು'

  ReplyDelete
 12. @srikanth : ನನ್ನ ಪ್ರಕಾರ ಸಾವು ಒಂದು "event" ಅಷ್ಟೆ .....it just happens... :-|

  ReplyDelete
 13. [ಶ್ರೀಧರ] ಹೌದು. ಆ event ಇದೆಯಲ್ಲಾ, ಅದನ್ನು ಸ್ವೀಕರಿಸೋದು (ನಮ್ಮದಲ್ಲ, ಬೇರೆಯವರದು - ನಮ್ಮ ಸಾವನ್ನು ನಾವು ಸ್ವೀಕರಿಸೋಕಿಂತ ಬೇರೆಯವರು ಸ್ವಿಕರಿಸೋದು ಕಷ್ಟ)ಶ್ರೀಕಾಂತನ ಕಮೆಂಟಿನಷ್ಟು ಸುಲಭವಲ್ಲ. ಒಂದು ತಿಂಗಳಲ್ಲಿ ಎರಡು ಸಂಸ್ಕಾರ, ನಾಲ್ಕು ಸಾವು ನೋಡುವವರ ಕಣ್ಣಿಗೆ ಕಾಣುವ 'ಸೋಲು-ಗೆಲುವು'ಗಳ ಭಾವನೆಯೇ ಬೇರೆ. ಹೊರಗಡೆ ನಿಂತು ವಿಶ್ಲೇಷಿಸಿ, ಸಮಾಧಾನ ಮಾಡುವ ಸಲುವಾಗಿ ಫಿಲಾಸಫಿ ಹೇಳುವವರ ಭಾವನೆಗಳೇ ಬೇರೆ.

  ಬಹುಶಃ ಶ್ರೀಕಾಂತ ಹೇಳಿದ ಹಾಗೆ ತಲೆ ಕೆಟ್ಟಿರಬೇಕು ನನಗೆ. ಶಬ್ದಕೋಶಗಳನ್ನೋದಿಯಲ್ಲ, ಮಸಣಕ್ಕೆ ವಿಸಿಟ್ ಕೊಟ್ಟು ಕೊಟ್ಟೂ!! ಹ ಹ್ಹ ಹ್ಹಾ... :-)

  ReplyDelete
 14. srikantana comment full nan thale mele horthoytu :-) ...

  Arun helodu nija ... probably Vijay mallya relate maadkotaane ... ondaadmenlondu wicket beelta idre ... manassige solu geluvu artha aago reeti ne bere ...

  ReplyDelete
 15. [ವಿಜಯಾ] ಒಳ್ಳೇ ಮಲ್ಯ. ಒಂದು ವಿಕೆಟ್ಟಿಗೂ ಇನ್ನೊಂದು ವಿಕೆಟ್ಟಿಗೂ ಅಂತರವಿಲ್ಲದಿದ್ದರೆ ಹಾಗೇ.

  ReplyDelete
 16. ಅರುಣ್ - ನಾನು ಬರೆದಿರೋದು ಸೋಲು-ಗೆಲುವಿನ ಬಗ್ಗೆ ಮಾತ್ರ. ಸಾವನ್ನು ಸೋಲು ಎನ್ನಬಾರದು ಎಂದೂ ಹೇಳಿದೆ ಎಂದು ಒಪ್ಪುತ್ತೇನೆ.

  "ಶ್ರೀಕಾಂತನ ಕಮೆಂಟಿನಷ್ಟು ಸುಲಭವಲ್ಲ" ಎಂದು ಓದಿ ಆಶ್ಚರ್ಯವಾಗುತ್ತಿದೆ. ನಾನು ಸೋಲನ್ನು ಸ್ವೀಕರಿಸುವ ಬಗ್ಗೆ ಪ್ರಸ್ತಾಪಿಸಿಯೇ ಇಲ್ಲ. [ಸಾವನ್ನು ಸ್ವೀಕರಿಸುವುದು ಕಷ್ಟ ಎನ್ನುವುದು ಎಲ್ಲರಿಗೂ ಗೊತ್ತಿದೆ. It is an undebatable fact. ಇದರ ಬಗ್ಗೆ ಚರ್ಚಿಸಲು ಏನೂ ಉಳಿದಿಲ್ಲ.] ಸಾವನ್ನು ಸೋಲಿಗೆ ಹೋಲಿಸಬಾರದು ಎಂದು ಹೇಳುವಾಗ ಒಂದೆರಡು facts ಹೇಳಿದೆ. ಇಲ್ಲಿ philosophy ಬಗ್ಗೆ ಚರ್ಚೆಯೇ ನಡೆದಿಲ್ಲ. "ಹೊರಗಡೆ ನಿಂತು ವಿಶ್ಲೇಷಿಸಿ, ಸಮಾಧಾನ ಮಾಡುವ ಸಲುವಾಗಿ ಫಿಲಾಸಫಿ ಹೇಳುವವರ ಭಾವನೆಗಳೇ ಬೇರೆ" ಎಂದು ಯಾಕೆ ಹೇಳಿದ್ದೀಯೋ ಗೊತ್ತಾಗುತ್ತಿಲ್ಲ.

  ಶ್ಮಶಾನಕ್ಕೆ ಪದೇ ಪದೇ ಹೋಗಬೇಕಾಗಿ ಬಂದು, ಅದರಿಂದ ಬೇಸರವಾಗಿರುತ್ತದೆ ನಿಜ. ಆದರೇನು ಮಾಡುವುದು? ಈಗ ಹೇಗೋ ಸಹಿಸಿಕೊಂಡು ಮುನ್ನಡೆಯಬೇಕು. ಮುಂದೆ ಎಷ್ಟೋ ಹುಟ್ಟುಹಬ್ಬಗಳನ್ನೂ ನೋಡುತ್ತೀವಲ್ಲ, ಆಗ ನಗಬೇಕು. :-)

  ವಿಜಯಾ - ಹೋಲಿಕೆ ಚೆನ್ನಾಗಿದೆ. ಒಂದಾದಮೇಲೊಂದು ವಿಕೆಟ್ ಬೀಳ್ತಾ ಇದ್ರೆ ಮನಸ್ಸಿಗೆ ಕಷ್ಟವೇ. ಮುಂದೆ ಎಷ್ಟು ಫೋರು, ಸಿಕ್ಸುಗಳು ಕಾದಿವೆಯೋ - ಅದನ್ನೆಲ್ಲಾ ನೋಡಬೇಕಲ್ಲ. ಅದಕ್ಕಾದರೂ ಧೈರ್ಯ ತಂದುಕೊಂಡು ಮುನ್ನಡೆಯಬೇಕು.

  BTW, ನಿಮಗೆ ಆಸಕ್ತಿ ಇದ್ದರೆ ಒಂದು ಸರ್ತಿ ಸಿಕ್ಕಾಗ ನನ್ನ ಕಮೆಂಟಿನ ಬಗ್ಗೆ ನಿಮಗರ್ಥವಾಗುವಂತೆ ವಿವರಣೆ ಕೊಡುತ್ತೀನಿ. ನಿಮಗೆ ಆಸಕ್ತಿ ಇದ್ದರೆ ಮಾತ್ರ!

  ReplyDelete
 17. he he, sari pa. thanks for the "facts". :-)

  ReplyDelete
 18. dEhinOsmin yathaa dEhE
  kaumaaram yauvanam jaraa
  tathaa dEhaantara praaptir
  tatra dheera na muhyati..
  ---
  jaatasya hi dhruvO mrityuH
  dhruvam janma mritasya cha
  tasmaat aparihaaryErthE
  na tvam shOchitum arhasi....
  ---

  ReplyDelete
 19. ಹೌದು, ಫಿಲಾಸಫಿ ಚೆನ್ನಾಗಿದೆ.

  ReplyDelete