Wednesday, June 11, 2008

ಮಿಂ** ಚಾನೆಲ್

ಆತ್ಮೀಯ ಗೆಳೆಯರ ಗುಂಪೊಂದು ಹೊಸ ಯತ್ನ ಮಾಡಿ ಈಗಾಗಲೇ ಸಾಕಷ್ಟು ಯಶಸ್ಸನ್ನೂ ಗಳಿಸಿದೆ. ವಿಡಂಬನೆಯು ಇವರ ಉದ್ದಿಶ್ಯವೆಂದು ಮೇಲ್ನೋಟಕ್ಕೇ ಅರ್ಥ ಆಗಬಹುದು. ಆದರೆ ಹಾಸ್ಯಪ್ರಜ್ಞೆಯು ತನ್ನ ಉನ್ನತ ಶಿಖರವನ್ನು ತಲುಪಿದಾಗ ಇಂಥದೊಂದು ಹೊಸ ಹಾದಿಯು ಕಾಣಬರದಿರುವುದಿಲ್ಲ. ಬಹಳ ಉತ್ತಮವಾದ ಪ್ರಯತ್ನ. ಭೇಷ್ ಎಂದು ಚಪ್ಪಾಳೆ ತಟ್ಟಿ, ಬೆನ್ನು ತಟ್ಟುವುದಷ್ಟನ್ನು ಮಾತ್ರ ನಾನು ಈ ಕ್ಷಣದಲ್ಲಿ ಮಾಡಬಲ್ಲೆ. ಆದರೆ ಇದಕ್ಕಿಂತ ಹೆಚ್ಚು ಪ್ರಶಂಸೆ ಮಾಡಲು ಮನಸ್ಸಿದೆ. ಇದಕ್ಕಿಂತ ಹೆಚ್ಚು ಉಡುಗೊರೆ ಕೊಡಬೇಕೆನ್ನಿಸುತ್ತೆ. ಆದರೆ ಈ ಕ್ಷಣದಲ್ಲಿ ನಾನು ನಿಸ್ಸಹಾಯಕ.

ಈ ಗುಂಪಿನ ಹಾಸ್ಯಪ್ರಜ್ಞೆಯು ಚಿತ್ರರಂಗದವರ ಹಾಗೆ ಅನೈತಿಕವಾಗಿಲ್ಲ, 'ಪ್ರಸಿದ್ಧ' ಪತ್ರಕರ್ತರ ಹಾಗೆ ಚೀಪ್ ಆಗಿಲ್ಲ, ಹಳೆ ಕಾಲದವರಂತೆಯೂ ಇಲ್ಲ. ಇಲ್ಲಿ ಹೊಸತನವಿದೆ. ವ್ಯಂಗ್ಯವಿದೆ. ಜನರ ಜಗದ ಬಗ್ಗೆ ಯೋಚಿಸಲು ಪ್ರಚೋದಿಸುವ ಶಕ್ತಿಯಿದೆ. ವೆರಿ ಗುಡ್.

ಈ ಗುಂಪಿನಲ್ಲಿ ನಾನಿಲ್ಲವಲ್ಲವೆಂಬ ಒಂದು ಬೇಸರ ಬಿಟ್ಟರೆ ನನಗೆ ಇವರ ಬಗ್ಗೆ ಅತ್ಯಂತ ಹೆಮ್ಮೆಯಿದೆ. ಇನ್ನೂ ಒಳ್ಳೊಳ್ಳೇ 'ಶೋ'ಗಳ ನಿರೀಕ್ಷೆಯಿದೆ. ನಿರೀಕ್ಷೆಯು ಎಂದೂ ಸುಳ್ಳಾಗಲಾರದು ಎಂಬ ಭರವಸೆಯೂ ಇದೆ. ಆಲ್ ದಿ ಬೆಸ್ಟ್ ಕಣ್ರಪ್ಪಾ. ಬೆನ್ನು ತಟ್ಟಿ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಲು ನಾನು, ನನ್ನ ಹಾಗೆ ಹಲವರು ಇದ್ದೇವೆ. ನಿಮಗೆ ಒಳ್ಳೆಯದಾಗಲಿ.

ಈ ಇಡೀ ಲೇಖನಕ್ಕೆ ಆಧಾರ ಸ್ತಂಭವು ಇದು:

http://www.youtube.com/user/mindryin

-ಅ
12.06.2008
12.05AM

6 comments:

  1. ನಾನೂ ಇವರ ಕೆಲವು ವಿಡಿಯೋಗಳನ್ನು ನೋಡಿದ್ದೀನಿ. ನಕ್ಕೂ ನಕ್ಕೂ ಸಾಕಾಗೋಯ್ತು!

    ReplyDelete
  2. Nimma ee protsaahada maatugaLige tumba tumba dhanyavaadagaLu. Namma gumpininda nimagiruva nireekshe suLLu aagadante preyatnisuttivi. Mattomme, thank you, thank you very much Sir for the kind words and for linking to our channel.

    ReplyDelete
  3. ಅರುಣ ನಿನ್ನ ಮಾತು ಸರಿ.... ನಮ್ಮ ಕನ್ನಡ ಸಿನಿಮಾಗಳ ಹಾಸ್ಯ ಅಸಹ್ಯ ಹುಟ್ಟಿಸುತ್ತೆ .....

    ಇವರ ಹಲವಾರಿ ವಿಡಿಯೋಗಳನ್ನ ನೋಡಿದ್ದೇನೆ ....:) ಅದಕ್ಕೆ ಮೊದಲು ಸುಶ್ರುತನಿಗೆ ಥ್ಯಾಂಕ್ಸ್ ಹೇಳಬೇಕು.. :)

    ReplyDelete
  4. Tumba tumba thyaanks-appa. Ondu "idu" kotthaagaaitu namge, where, idu = encouragement-u. Namma channel ge link bere maadbitidya. Dinakke 1000 hits barak shuru aagogide. Btw, ninge heLode martidde. Nam videos na mon monne churmuri.wordpress.com nallu haakidr. Sikkapatte khushi aagoitu. :)

    Neenu barohaagidre baa-ppa. Yelllllllaaru seri maadbodu. :)

    ReplyDelete
  5. nandoo ondu 'idu' nim channel ge :-)

    ReplyDelete
  6. naanu ella videogaLannu mooru mooru sala nOdiddeene. biddu biddu nakkiddini. ee team ge vijaya avara "idu" jotege nannadu ondu "idu" !

    All the best ! Great going !

    ReplyDelete