Saturday, June 28, 2008

ಆ ಒಂದು..

ನಮಸ್ಕಾರ ವೀಕ್ಷಕರೇ.. ಮಾರ್ನಿಂಗ್ ಕಾಫಿಗೆ ಸ್ವಾಗತ ಸುಸ್ವಾಗತ..

ಹಾಗೇನೇ, ಬೆಳಿಗ್ಗೆ ಎದ್ದು ಕಾಫಿ ಜೊತೆಗೆ ಒಂದು ಮಾಹಿತಿಗಳನ್ನು ತಿಳಿದುಕೊಳ್ಳುವ ಕಾರ್ಯಕ್ರಮ ನೋಡುವ ನಾವೆಲ್ಲಾ ಎಷ್ಟು ಭಾಗ್ಯವಂತರಲ್ಲವಾ? ನಾನಂತೂ ಭಾಗ್ಯವಂತ ಅಂತ ಎಲ್ಲೋ ಒಂದ್ ಕಡೆ ನನಗೆ ದಿನಾ ಅನ್ಸುತ್ತೆ.

ಮೇರಿ ಕ್ಯೂರಿ ಅವರ ಬಗ್ಗೆ ಮಾತಾಡ್ತಾ ಇದ್ದೆ. ಪಿಯರ್ ಕ್ಯೂರಿಗೂ ಮೇರಿ ಕ್ಯೂರಿಗೂ ಒಂದು ಗಾಢವಾದ ಪ್ರೇಮ ಮೂಡಿತ್ತು. ಆ ಒಂದು ಪ್ರಯೋಗಾಲಯದಲ್ಲಿ ಈ ಒಂದು ಪ್ರೇಮ ಪ್ರಸಂಗ ನಡೆದದ್ದೇ ರೇಡಿಯಮ್‍ನಂಥ ಒಂದು ಆವಿಷ್ಕಾರಕ್ಕೆ ಕಾರಣ ಅಂತ ಹೇಳ್ಬೋದು. ಮೇರಿ ಮತ್ತು ಪಿಯರ್ ಇಬ್ಬರೂ ಎಲ್ಲೋ ಒಂದ್ ಕಡೆ ಕಾಯಕವೇ ಕೈಲಾಸ ಅನ್ನೋ ಮಾತನ್ನು ಅರ್ಥ ಮಾಡ್ಕೊಂಡು ಕೆಲ್ಸ ಮಾಡ್ತಿದ್ರು. ಅವರ ಅಪ್ಪ ಮೇಷ್ಟ್ರು. ಮೇಷ್ಟ್ರಾಗಿದ್ದೂ ಆ ಒಂದು ಕಾಲದಲ್ಲಿ ಮೇರಿಗೆ ಒಳ್ಳೇ ಪ್ರೋತ್ಸಾಹ ಕೊಡೋಕೆ ಸಾಧ್ಯ ಆಗಿತ್ತು ಅಂತ ಹೇಳ್ದ್ರೆ ಅದು ತಪ್ಪಾಗಲಾರದು.

ಬನ್ನಿ ಈಗ ಒಂದು ಹಾಡು ನೋಡೋಣ.

ಬೆಳ್ಳಿ ಮೂಡಿತೋ ಕೋಳಿ ಕೂಗಿತೋ...
ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ.....


ಅಪ್ಪಾಜಿಯವರ ಒಂದು ಅಮೋಘ ಅಭಿನಯದ ಈ ಒಂದು ಹಾಡನ್ನು ನೋಡಿದೆವಲ್ಲಾ, ಬನ್ನಿ ಈಗ ಮೇರಿ ಕ್ಯೂರಿ ಬಗ್ಗೆ ಇನ್ನಷ್ಟು ತಿಳ್ಕೊಳೋಣ.

............................................................................

ಈ ಕಾರ್ಯಕ್ರಮ ಪ್ರತಿ ಬೆಳಿಗ್ಗೆ U2 ಅನ್ನೋ ಚಾನೆಲ್ ಅಲ್ಲಿ ಬರುತ್ತೆ. ನಾನಂತೂ ಈ "ಒಂದು" ಕಾರ್ಯಕ್ರಮವನ್ನು ತಪ್ಪಿಸೋದೇ ಇಲ್ಲ. ಬೆಳಗಾಗೆದ್ದು ಲಾಫಿಂಗ್ ಕ್ಲಬ್‍ಗಳಿಗೆ ಹೋಗುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಹಲವರು. ನಾನು ನನ್ನ ಲಾಫಿಂಗ್ ಕ್ಲಬ್ಬನ್ನು ಮನೆಯಲ್ಲೇ ಇಟ್ಟುಕೊಂಡಿದ್ದೇನೆ. ಅಮ್ಮನೂ ಇದಕ್ಕೆ ಸದಸ್ಯೆ. ಏಳಾದರೆ ಸಾಕು, "ಆ ಒಂದು ನೋಡಲ್ವೇನೋ?" ಅಂತಾರೆ!

ಶ್ರೀನಿಧಿಯ ಭಾಷೆಯಲ್ಲಿ ಹೇಳಬೇಕೆಂದರೆ ಇಂಥಾ ಚಾನೆಲ್ಲುಗಳ TRP ಹೆಚ್ಚಾಗುವುದೇ ನಮ್ಮಂಥವರಿಂದ.

-ಅ
28.06.2008
6.15PM

11 comments:

 1. ಮೇರೀ ಕ್ಯೂರೀ "ಬೆಳ್ಳಿ ಮೂಡಿತೋ ಕೋಳಿ ಕೂಗಿತೋ...
  ಬಾನಾಗೆ ರಂಗು ಚೆಲ್ಲಿ ತೇರಾನೇರಿ ಸೂರ್ಯ ಬಂದ....." ಅಂತ ಹಾಡ್ತಾರಾ ಆ ಪ್ರೋಗ್ರಾಮಲ್ಲಿ?

  ReplyDelete
 2. ಆಹಾ !! ಕರ್ಮಕಾಂಡ ! ನೀವು u2 ನ ಉದ್ಧಾರ ಮಾಡ್ತೀರಾ ? ಸರಿ !!

  ReplyDelete
 3. rofl! ಈ ಒಂದು ಕಾರ್ಯಕ್ರಮ ನೋಡೋಕಾದ್ರೂ ಒಂದ್ ದ ೭ ಘಂಟೆಗೆ ಏಳ್ಬೇಕು!:))

  ReplyDelete
 4. ನನಗೆ ಆ U2 ಚಾನೆಲ್ ಗೆ ಸರಿಬರೋಲ್ಲ .ಆ ವಾಹಿನಿಯಲ್ಲಿ ಕಾರ್ಯಕ್ರಮ ನಿರೂಪಣೆ ಮಾಡೋಕೆ ಬರ್ತಾರಲ್ಲ ಅವ್ರುಗಳೇ ಕಾರಣ...:((((((((((((

  ಆದ್ರು ಕೂತೂಹಲಕ್ಕೆ ನಾನು ನೋಡ್ತಿನಿ ಬೆಳ್ಳಿಗ್ಗೆ ನೀವು ಮೆನ್ಷನ್ ಮಾಡಿರೋ ಕಾರ್ಯಕ್ರಮನಾ...

  ReplyDelete
 5. ee ondu kaaryakrama enide adu beligge ge ello ond kade utsaaha tumbutte alwa?

  btw ... marie curie mathe avala ganda maduve aad hosadralli cylce kondkondu ibroo dina cycling hogorante avra ooralli ... yeshtu super alwa ... illi nammooralli ondu cycling hogodoo kashta.

  ReplyDelete
 6. ಅರುಣ್,

  ಮೇರಿ ಮತ್ತು ಪಿಯರ್ ಹೆಸರನ್ನ ಗೂಗಲ್ ರೀಡರ್ ನಲ್ಲಿ ನೋಡಿ ಓದಕ್ಕೆ ಶುರು ಮಾಡಿದೆ. ಎಂತ ವಿಚಿತ್ರದ ಕಾರ್ಯಕ್ರಮ. ನಂಗೆ ನಗಬೇಕೋ ಅಳ್ಬೇಕೋ ಗೊತ್ತಾಗ್ತಿಲ್ಲ. ಭಾಗ್ಯವಂತರೇ ನಾವು!
  ನೇಮಿಚಂದ್ರ ಅದ್ಭುತವಾಗಿ "ಬೆಳಕಿನೊಂದು ಕಿರಣ ಮೇರಿಕ್ಯೂರಿ" ಅಂತ ಕ್ಯೂರಿ ಬಗ್ಗೆ ಬರ್ದಿದಾರೆ. ಓದಿಲ್ಲದಿದ್ದರೆ ಓದಿ.

  ಪ್ರೀತಿಯಿಂದ
  ಸಿಂಧು

  ReplyDelete
 7. [ಶ್ರೀಕಾಂತ್] ಹೆ ಹ್ಹೆ ಹ್ಹೆ... ಇನ್ನೂ ಹಾಡಿಲ್ಲ.

  [ಲಕುಮಿ] ಹೌದು ಮತ್ತೆ! ಇನ್ನೇನು ಬೆಳಗಾಗೆದ್ದು ಯಾರೋ ಕಾವಿ ಬಟ್ಟೆಯವರ ಭಾಷಣ ಕೇಳೋಕಂತೂ mood ಇರಲ್ಲ.

  [ಶ್ರೀ ಭಾಗ ೧] ಹೌದು, ಆ ಒಂದು ಕಾರ್ಯಕ್ರಮ, ಹಾಗೇನೇ, ಎಲ್ಲೋ ಒಂದ್ ಕಡೆ ಏಳ್ ಗಂಟೆಗೆ ಎದ್ರೇನೇ ಸಾಧ್ಯ ಆಗೋದು ನೋಡೋಕೆ.

  [ಶ್ರೀ ಭಾಗ ೨] ನೀವು ಈ ಕಾರ್ಯಕ್ರಮ ನೋಡಿ, ಇನ್ನೂ ಜೋರಾಗಿ ನಗ್ತೀರ.

  [ಪುಷ್ಪಲತಾ] U2 ಚಾನೆಲ್ ಅಲ್ಲಿ ಕೆಲವು ಸಲ ಅತ್ಯದ್ಭುತವಾದ ಹಾಡುಗಳನ್ನು ಹಾಕ್ತಾರೆ. ಅದಕ್ಕೋಸ್ಕರ ಆ ವಾಹಿನಿಗೆ ನಾನು ಋಣಿ. ಅಂತೆಯೇ ಇಂಥಾ ನಿರ್ವಹಕರನ್ನೂ ಹೊಂದಿರುವುದರಿಂದ ನಮ್ಮನ್ನು ನಗಿಸಿದ ಪುಣ್ಯ ಆ ಚಾನೆಲ್ಲಿಗೆ ಸಿಗುವುದರಿಂದ ಡಬಲ್ ಋಣಿ.

  [ವಿಜಯಾ] ಹೌದು ಕೆರೆ ದಂಡೆ ಮೇಲೇನೇ ಹೋಗೋರಂತೆ. ಹೊಲದ ಪಕ್ಕದಲ್ಲಿ.

  [ಸಿಂಧು] ಅಂಕಿತದವರು ಆ ಪುಸ್ತಕ ಬಿಡುಗಡೆಯಾದ ದಿನವೇ ನನ್ನ ಲೈಬ್ರರಿಗೆ 'ದಾನ' ಮಾಡ್ಬಿಟ್ರು! ದುಡ್ ಇಸ್ಕೊಂಡು. ಆವತ್ತೇ ಓದಿಯೂ ಆಗೋಯ್ತು. ಬಹುಶಃ ಈ U2 ಚಾನೆಲ್‍ನವರು ಎಲ್ಲೋ ಒಂದ್ ಕಡೆ ಮಾತ್ರ ಓದ್ಬಿಟಿದಾರೆ. ಅಷ್ಟನ್ನೇ ಒಂದ್ ವಾರ ಪೂರ್ತಿ ಪ್ರಸಾರ ಮಾಡ್ಬಿಟ್ರು. ಈಗ ಸದ್ಯದಲ್ಲಿ ರಾಜ್‍ಕುಮಾರ್ ಬಗ್ಗೆ ಹೇಳ್ತಾ ಇದ್ದಾರೆ.

  ReplyDelete
 8. ivat odtaa ideeni idna! hengo miss aagogide!

  super! antha daridra karyakramana kootu nodu tammagaLige vande!:)

  ReplyDelete
 9. he he, neenooo ond sala nodu... aamele heLu.

  ReplyDelete
 10. neenu ee article ninda en pratipaadsakke horrtidya?? aa anchors ge bytidya???

  ReplyDelete