Monday, July 7, 2008

ಅಲ್ಲಿಗೆ ಬಂದ ಪೆದ್ದ....

ಒಂದು ದಿನ ಪೆದ್ದನ ಹೆಂಡ್ತಿ ಲಾಡು ಮಾಡಿದ್ಲು
ಯಾರೂ ನೋಡಬಾರ್ದು ಅಂತ ಡಬ್ಬೀಲಿ ಮುಚ್ಚಿಟ್ಲು
ಅಲ್ಲಿಗೆ ಬಂದ ಪೆದ್ದ... ಬಗ್ಗಿ ನೋಡಿದ..
ಚೆಂಡು ಚೆಂಡು ಚೆಂಡು ಎಂದು ಆಟ ಆಡಿದ.

ಇವತ್ತು ನರ್ಸರಿ ಮಕ್ಕಳಿಗೆ ನಮ್ಮ 'ಇಂಗ್ಲೀಷ್' ಶಾಲೆಯಲ್ಲಿ ಹೇಳಿಕೊಡುತ್ತಿದ್ದರು. ಕೇಳಿಕೊಂಡು ಅರ್ಧ ಗಂಟೆ ಅವರ ಕ್ಲಾಸಿನಲ್ಲಿ ಕೂತಿದ್ದೆ.

ನರ್ಸರಿ, ಪ್ರೈಮರಿ ಶಾಲೆಯ ಟೀಚರುಗಳ ಕೆಲಸ ಬಹುಶಃ ಪ್ರಪಂಚದ ಎಲ್ಲಾ ಕೆಲಸಕ್ಕಿಂತಲೂ ಕಷ್ಟ ಮತ್ತು ಮುಖ್ಯ ಎಂದು ನನ್ನ ಅನಿಸಿಕೆ. ಮಕ್ಕಳು ಪ್ರತಿ ಹೆಜ್ಜೆಯನ್ನೂ, ಪ್ರತಿ ಚಲನವಲನವನ್ನೂ, ಪ್ರತಿ ಮಾತನ್ನೂ ಗಮನಿಸುತ್ತಲೇ ಇರುತ್ತಾರೆ. ಮನೆಗೆ ಹೋಗಿ ತಾವೂ ಟೀಚರಿನಂತೆ ನಟಿಸಿ, ಖಾಲಿ ಜಾಗದಲ್ಲೇ ಪಾಠ ಹೇಳುತ್ತಾರೆ, ಪನಿಷ್ಮೆಂಟೂ ಕೊಡತ್ತಾರೆ. ಗಂಡು ಮಕ್ಕಳಿಗೆ ಸಾಮಾನ್ಯವಾಗಿ ಡ್ರೈವರುಗಳಾಗಬೇಕೆನಿಸುತ್ತೆ. ಹೆಣ್ಣು ಮಕ್ಕಳಿಗೆ ಟೀಚರು! ನಮ್ಮ ಶಾಲೆಯಲ್ಲಿ ನಾನು ನಡೆಸಿದ ಸರ್ವೆ ಇದು! ಆದರೂ ಮಕ್ಕಳಿಗೆ ತಮ್ಮ ಟೀಚರು ಹೇಳಿದ್ದು ವೇದವಾಕ್ಯ.

ಇವತ್ತಿಗೂ ನನ್ನ ಪ್ರೈಮರಿ ಶಾಲೆಯ ಟೀಚರುಗಳು ಹೇಳಿಕೊಟ್ಟ ಪಾಠವೇ ನನಗೆ ಸರಿ. ಅವರು ತಪ್ಪು ಹೇಳಲು ಸಾಧ್ಯವೇ ಇಲ್ಲವೆಂಬ ನಂಬಿಕೆ.

ನಮ್ಮ ದೇಶದಲ್ಲಿ ಪ್ರೈಮರಿ ಶಾಲೆಯ ಟೀಚರಿಗೆ ಸಮಾಜದಲ್ಲಿ ಎಷ್ಟು ಬೆಲೆಯಿದೆಯೆಂದು ನೆನೆಸಿಕೊಂಡು ಬೇಸರವಾಯಿತು. ಲ್ಯಾಬಿಗೆ ಹೋದೆ. ಒಂದನೇ ಕ್ಲಾಸಿನ ಮಕ್ಕಳು ಸಿದ್ಧವಾಗಿದ್ದರು.

"Sir, my pencil is not choop. Can i choop it?" ಎಂದು ಮುದ್ದು ಮುದ್ದಾಗಿ ಕೇಳಿದ. ನಾನು ಅವನನ್ನು ಕಳಿಸದೆ ಇರಲು ಆಗಲೇ ಇಲ್ಲ. ತನಗಿರುವ ಅತಿಸಣ್ಣ vocabularyಯನ್ನು ಎಷ್ಟು ಸೊಗಸಾಗಿ ಬಳಸುತ್ತಿದ್ದಾನಲ್ಲಾ ಎಂಬ ಅಚ್ಚರಿ ಸಂತಸವೊಂದೆಡೆಯಾದರೆ, ಅವರ ಕನ್ನಡ ಪದಭಂಡಾರವನ್ನು ನೆನೆಸಿಕೊಂಡರೆ ವಿಪರ್ಯಾಸ ಭಾವನೆಯಿನ್ನೊಂದೆಡೆ.

ಹೈಸ್ಕೂಲಿಗೆ, ಕಾಲೇಜಿನ ಹುಡುಗರಿಗೆ ಪಾಠ ಮಾಡಲು ವಿಷಯ ತಿಳಿದುಕೊಂಡರೆ ಸಾಕು. ಪ್ರೈಮರಿ, ನರ್ಸರಿ ಮಕ್ಕಳಿಗೆ ಪಾಠ ಮಾಡುವವರು ಒಂದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನೂ ನಿರ್ಮಿಸುವ ಕಲೆಯನ್ನು ಅರಿತಿರಬೇಕು. ಅಂಥವರು ಟೀಚರುಗಳಾಗಲಿ. ನಮ್ಮ ದೇಶದಲ್ಲಿ ಅಂಥವರು ಮನ್ನಣೆಯಾಗಲೀ, ಹಣವಾಗಲೀ ಬಯಸುವುದೂ ಅಪರಾಧ. ಬಹುಶಃ ಅದರ ಅವಶ್ಯವೂ ಅವರಿಗಿರುವುದಿಲ್ಲ. ಶ್ರೀ ಗುರುಭ್ಯೋ ನಮಃ.

-ಅ
07.07.2008
6.45PM

9 comments:

 1. correct ...
  Shyamala miss nenpaagtidaare ... ee saturday hog baronva ond hejje?

  ReplyDelete
 2. ಕನ್ನಡ ಪದ್ಯ ನನ್ನ ಬಾಲ್ಯದಿನಗಳನ್ನು ನೆನಪಿಸಿತು :)

  ReplyDelete
 3. vijaya madam,

  ee saturday trek hogthidivi; nenpirli. :)

  ಅರುಣ್,
  ಒಂದು ದಿನ ಪೆದ್ದನ ಹೆಂಡ್ತಿ ಚಕ್ಕುಲಿ ಮಾಡಿದ್ಲು,
  ಯಾರೂ ನೋಡಬಾರದೆಂದು ಮುಚ್ಚಿ ಇಟ್ಟಿದ್ಲು,.
  ಅಲ್ಲಿಗೆ ಬಂದ ಪೆದ್ದ, ಬಗ್ಗಿ ನೋಡಿದ
  ಬಳೆ ಬಳೆ ಬಳೆ ಎಂದು ಕೈಗೆ ಹಾಕಿದ..

  ನಮ್ ಯಶೋಧಮ್ಮ ಟೀಚರ್ actions ಸಮೇತ ಈ ಪದ್ಯವನ್ನ ರಾಗವಾಗಿ ಹಾಡಿ ಹೇಳಿಕೊಟ್ಟದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ.. ಥ್ಯಾಂಕ್ಸ್ ಅರುಣ್.. ಥ್ಯಾಂಕ್ಸ್ ಯಶೋಧಮ್ಮ ಟೀಚರ್..

  ReplyDelete
 4. ನರ್ಸರಿ, ಪ್ರೈಮರಿ ಶಾಲೆಯ ಟೀಚರುಗಳ ಕೆಲಸ ಬಹುಶಃ ಪ್ರಪಂಚದ ಎಲ್ಲಾ ಕೆಲಸಕ್ಕಿಂತಲೂ ಕಷ್ಟ ಮತ್ತು ಮುಖ್ಯ ಎಂದು ನನ್ನ ಅನಿಸಿಕೆ...
  diTam diTam nin maathu 101% diTam..

  "Sir, my pencil is not choop. Can i choop it?" ಎಂದು ಮುದ್ದು ಮುದ್ದಾಗಿ ಕೇಳಿದ..
  cho chweeeeeeeeeet :-) BSA??

  ಹೈಸ್ಕೂಲಿಗೆ, ಕಾಲೇಜಿನ ಹುಡುಗರಿಗೆ ಪಾಠ ಮಾಡಲು ವಿಷಯ ತಿಳಿದುಕೊಂಡರೆ ಸಾಕು. ಪ್ರೈಮರಿ, ನರ್ಸರಿ ಮಕ್ಕಳಿಗೆ ಪಾಠ ಮಾಡುವವರು ಒಂದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನೂ ನಿರ್ಮಿಸುವ ಕಲೆಯನ್ನು ಅರಿತಿರಬೇಕು..
  mattomme diTam diTam...

  ninnayee article thumba ista aaythu... :-)

  ReplyDelete
 5. gurugaLE aavattu naavidara bagge charche maaDidvi alva ? idanna illi Odi tumbaa santOSha aaytu ! namma badukanna roopisida ella teachergaLigU[nimmannu sErisi ! ] tumbaa tumbaa thanks !

  ReplyDelete
 6. [ಲಕುಮಿ] ಹೌದು, ಇದನ್ನೇ ಚರ್ಚೆ ಮಾಡಿದ್ದು. ಬದುಕು ಇನ್ನೂ ರೂಪಿತವಾಗುತ್ತಿದೆ ಅನ್ನು.

  [ಶ್ರೀಧರ] ಇದೇನು ಆ ಹೋಪ್‍ಲೆಸ್ ಫೆಲೋ ಹೇಳ್ಕೊಟ್ಲಾ ಹೀಗೆ ಕಮೆಂಟ್ ಮಾಡೋಕೆ!! ;-)

  [ಸುಶ್ರುತ] ಒಳ್ಳೇ ನೆನಪು!

  [ಅಂತರ್ವಾಣಿ] ಹೌದು, ನನಗೂ.

  [ವಿಜಯಾ] ಒಂದು ಹೆಜ್ಜೆ ಏನು, ಎರಡೂ ಹೆಜ್ಜೆ ಹೋಗ್ಬೋದು. ಆದ್ರೆ, ಟ್ರೆಕ್ಕು!!

  ReplyDelete
 7. ಅರುಣ್ ಅವರೆ...
  ಒಳ್ಳೆಯ ಲೇಖನ.
  ಒಂದು ದಿನ ಶಾಲೆಯಲ್ಲಿ ನಾಲ್ವರು ಟೀಚರುಗಳು ಒಟ್ಟಿಗೇ ರಜದಲ್ಲಿ ನಡೆದಿದ್ದರಾದ್ದರಿಂದ ಬಿಡುವಿನ ಸಮಯದಲ್ಲಿ ನರ್ಸರಿ ಕ್ಲಾಸಿನಲ್ಲಿ ಕುಳಿತು ಕರೆಕ್ಷನ್ ಕೆಲಸ ಮಾಡಿಕೊಳ್ಳುವ ಭಾಗ್ಯ ಸಿಕ್ಕಿತು. ಎರಡುವರೆ ಮೂರುವರ್ಷದ ಮಕ್ಕಳು, ಇಪ್ಪತ್ತು ಮಕ್ಕಳು ಆ ಕ್ಲಾಸಲ್ಲಿ! ನಲವತ್ತೈದು ನಿಮಿಷ ನನ್ನ ಕೆಲಸವನ್ನ ಒತ್ತಟ್ಟಿಗಿಟ್ಟು ಅವುಗಳ ಜತೆ ಕಳೆದೆ. ಹೈ ಸ್ಕೂಲ್ ಮಕ್ಕಳನ್ನೇ ತುಂಬ ನೆಚ್ಚಿಕೊಂಡು ಅವುಗಳ ಜತೆಯೇ ಇದ್ದ ನನಗೆ ಇದೊಂದು ಸುವರ್ಣಾವಕಾಶ! ಬೆಲ್ ಆದರೆ ಆ ಕ್ಲಾಸಿಂದ ಹೊರಹೋಗುವ ಮನಸೇ ಆಗಲಿಲ್ಲ. ಅವುಗಳ ಮುದ್ದು ಮುದ್ದು ಮಾತುಗಳು, ಅಪ್ಪ ಅಮ್ಮನ್ನನ್ನೇ ನೆನೆಯುತ್ತ ನಮ್ಮನ್ನ ಅಂಟಿಕೊಳ್ಳುವ ಅವರನ್ನೊಮ್ಮೆ ನೋಡಿದಾಗ ಹೀಗೆಯೇ ಬೇರೆ ಸ್ಕೂಲಲ್ಲಿ ಯಾವುದೋ ಕ್ಲಾಸಲ್ಲಿ ಯಾವುದೋ ಟೀಚರ್ ಕಾಲನ್ನ ನಮ್ಮ ಮಕ್ಕಳು ಸುತ್ತುವುದ ನೆನೆಸಿಕೊಂಡಾಗ ಈ ಮಕ್ಕಳನ್ನ ಇನ್ನಷ್ಟು ಬೆಚ್ಚಗಿಡು ಅಂತ ಸ್ವಾರ್ಥಿಮನಸ್ಸು ತೊದಲುತ್ತದೆ.
  ಈ ಟೀಚರ್ ಕೆಲಸವಿದೆಯಲ್ಲ ಅದ್ಭುತವಾದದ್ದು ಅನ್ನುವುದು ಅನುಭವ, ಅನಿಸಿಕೆ.
  "ಪ್ರೈಮರಿ, ನರ್ಸರಿ ಮಕ್ಕಳಿಗೆ ಪಾಠ ಮಾಡುವವರು ಒಂದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನೂ ನಿರ್ಮಿಸುವ ಕಲೆಯನ್ನು ಅರಿತಿರಬೇಕು. ಅಂಥವರು ಟೀಚರುಗಳಾಗಲಿ. ನಮ್ಮ ದೇಶದಲ್ಲಿ ಅಂಥವರು ಮನ್ನಣೆಯಾಗಲೀ, ಹಣವಾಗಲೀ ಬಯಸುವುದೂ ಅಪರಾಧ." ನಿಜ, ವೃತ್ತಿಪ್ರೀತಿಯಿರಲೇಬೇಕು ಈ ಕೆಲಸ ಮಾಡುವವರಿಗೆ. ಇಲ್ಲವಾದಲ್ಲಿ ಈ ವೃತ್ತಿ ಬರಿಯ ಹೊಟ್ಟೆಪಾಡಾಗಿ ನಾಡಿನ ನಾಳೆಯ ನಾಗರೀಕನಿಗೆ ಸಮೃದ್ದ ಸಂಸ್ಕೃತಿಯ ಬುನಾದಿಯೇ ಇಲ್ಲದೇ ಹೋದೀತು.
  ಲೇಖನ ಇಷ್ಟವಾಯ್ತು.

  ReplyDelete
 8. 100% sari. makkalige paata helo kelsa thumba kasta mattu thumba javabdariyuthavadaddu.
  nange nanna baalya nenapayitu.. nam mane mundidana kempu kallu katte ge nanu estu hodedidino - home work madilla anta, galate madide anta .. :)

  ReplyDelete