Monday, July 28, 2008

ಬಿಗ್ ಬಾಸ್

ಸಂಗೀತ ಕೇಳುವುದು ಬರೀ ಹವ್ಯಾಸವಷ್ಟೆ ಎಂದರೆ ಅದು ತೀರಾ ಕಡಿಮೆಯ ವರ್ಣನೆಯಾಗಿಬಿಡುತ್ತೆ. ಸಂಗೀತವು ಒಂದು ರೀತಿ ನರನಾಡಿಯಲ್ಲೂ ತುಂಬಿಕೊಂಡುಬಿಟ್ಟಿದೆ.

ಶ್ರೀನಿವಾಸ ಮತ್ತು ನಾನು ಅನೇಕ ಸಾಮ್ಯ ಗುಣಗಳನ್ನು (At least ಬಯಕೆಗಳನ್ನು - ಯಾಕೆಂದರೆ ಅವನ ಮುಂದೆ ನಾನು ತುಂಬಾ ಕಿರಿಯ) ಹೊಂದಿದ್ದೇವೆ. ಹಿಂದೆಂದೋ ಅವನು ಪರಿಚಯವಾದ ಹೊಸತರಲ್ಲಿ chat ಮಾಡುತ್ತಿದ್ದಾಗ ತನಗೆ ಮಹಾರಾಜಪುರಂ ಸಂತಾನಂ ಇಷ್ಟವೆಂದು ಹೇಳಿದ್ದ. ನಾನು ಸಂತೋಷಗೊಂಡು ನನಗೂ ಅಷ್ಟೆಯೆಂದಿದ್ದೆ. ನಂತರ ಎಮ್.ಎಸ್.ಸುಬ್ಬುಲಕ್ಷ್ಮಿಯ ಮೇಲೆ ನಾವಿಟ್ಟಿದ್ದ ಅಭಿಮಾನದ ಬಗ್ಗೆ ಚರ್ಚಿಸಿದೆವು. ಬಾಲಮುರಳಿ ಕೃಷ್ಣ, ಯೇಸುದಾಸ್ ಇವರೆಲ್ಲರೂ ಸಂತಾನಂ ಎಮ್.ಎಸ್. ಮುಂದೆ ಏನೇನೂ ಇಲ್ಲವೆಂದು ಕೂಡ ಆಡಿಕೊಂಡೆವು. (ನಾವೇನೋ ದೊಡ್ಡ ವಿದ್ವಾಂಸರೆಂಬಂತೆ!). ಆಗ ಇನ್ನೊಂದು ಹೆಸರು ಬಂದಿತು. ನನಗೆ ಅಷ್ಟು ಪರಿಚಯವಿರಲಿಲ್ಲ. ಕೇಳಿದ್ದೆನಷ್ಟೆ. ಆತ ಎಮ್.ಎಸ್.ಗೆ ಗುರುವಾಗಿದ್ದರು ಒಂದು ಹಂತದಲ್ಲಿ ಎಂದು ಶ್ರೀನಿವಾಸ ಹೇಳಿದ.

ಎಮ್.ಎಸ್.ನ ಬಾಸ್ ಎನ್ನುತ್ತಿದ್ದೆವು. ಬಾಸ್ ಹಾಡು ಕೇಳುತ್ತಿದ್ದರೆ ಮೈಮರೆತು ತಾಳ ಹಾಕಿಕೊಂಡು ಕುಳಿತುಬಿಡುವುದಾಗಿ ಮಾತನಾಡಿಕೊಳ್ಳುತ್ತಿದ್ದೆವು. ಈಗ ಬಾಸ್‍ಗೆ ಗುರುವಾದವರ ಸಂಗೀತವನ್ನು, ಆ ಧ್ವನಿಯನ್ನು ಕೇಳಿದ್ದೇನಾದರೂ ಅದು ತಲೆಯೊಳಗೆ ನಮೂದಿಸಿಲ್ಲವಲ್ಲಾ ಎಂದು ಕೊರಗಿದೆ. ನಂತರ ಆ ಕಂಠ ಕೇಳಿದ ಮೇಲೆ ತಲೆಬಾಗಿ, ತಲೆದೂಗಿ, ತಲೆ ಏನೇನು ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡಿಬಿಟ್ಟೆ! ಆ ಹೆಸರು - ಶೆಮ್ಮಂಗುಡಿ ಶ್ರೀನಿವಾಸ ಐಯ್ಯರ್.

ಬಾಸ್‍ಗೆ ಗುರುವಾಗಿದ್ದ ಇವರನ್ನು ನಾವು ಬಿಗ್ ಬಾಸ್ ಎಂದು ಕರೆಯಲು ಆರಂಭಿಸಿದೆವು.



ಸನ್ನಿವೇಶ ೧
ಶ್ರೀನಿವಾಸ ಕೇಳುತ್ತಾನೆ: "ಬಿರಾನ ಬ್ರೋವ ಇದೇ..." ಕೇಳಿದೆಯಾ?
ನಾನು ಹೇಳುತ್ತೇನೆ, "ಬಾಸ್‍ದು ಬಿಗ್ ಬಾಸ್‍ದು ಇಬ್ಬರದೂ ಕೇಳಿದ್ದೇನೆ. ಇಬ್ಬರೂ ಒಬ್ಬರಿಗಿಂತ ಒಬ್ಬರು ಸೂಪರ್!"
ಶ್ರೀ: ಛೆ, ನಾನು ಕೇಳ್ಬೇಕು.

ಸನ್ನಿವೇಶ ೨
ಶ್ರೀನಿವಾಸ: ನೀನು ಚಕ್ಕನಿ ರಾಜ ಕೇಳ್ಬೇಕು ನೀನು - ಅದ್ಭುತ!! ಬಿಗ್ ಬಾಸ್ ಎಟ್ ಹಿಸ್ ಬೆಸ್ಟ್!!
ನಾನು: ಅದನ್ನ ನಾನು ಸಂತಾನಂ ಬಾಸ್ ಹಾಡಿರೋದು ಮಾತ್ರ ಕೇಳಿರೋದು.

ಸನ್ನಿವೇಶ ೩
ಶ್ರೀನಿವಾಸ: ಡಿವೈನ್ ಯೂನಿಸನ್ ಆಲ್ಬಂ ಸೂಪರ್ ಅಲ್ವಾ, ಬಿಗ್ ಬಾಸ್ ಮತ್ತೆ ಬಾಸ್ ಇಬ್ಬರದೂ!
ನಾನು: ಹೌದು, ನಮ್ಮದೂ ಒಂದು ಆಲ್ಬಮ್ ಬರಲಿ ಹಾಗೆ.. ;-)

ಮೊನ್ನೆ ಇಪ್ಪತ್ತೈದನೆಯ ತಾರೀಖಿಗೆ ಶೆಮ್ಮಂಗುಡಿ ಅರ್ಥಾತ್ ಬಿಗ್ ಬಾಸ್ ಹುಟ್ಟಿ ನೂರು ವರ್ಷವಾಗುತ್ತೆ. ಆತ ಇದ್ದಾಗ ನಾನು ಇಷ್ಟು ದೊಡ್ಡವನಾಗಿದ್ದರೆ, ಅವರ ಕಚೇರಿಗಳಿಗೆ ತಪ್ಪಿಸದೇ ಹೋಗುತ್ತಿದ್ದೆ. ಈಗ ನನಗೆ ಸಿ.ಡಿಗಳೇ ಗತಿ!

ನೆನಪಿಗೊಂದು ವಿಡಿಯೋ ಇಲ್ಲಿ.


ಇಡೀ ಶಾಸ್ತ್ರೀಯ ಸಂಗೀತ ಪ್ರಪಂಚವೇ ಈ legendಗೆ ನಮನ ಸಲ್ಲಿಸುತ್ತಿದೆ. ಸಂಗೀತ ರಸಿಕರೂ ಸಹ. ನಾನೂ ಸಹ!!

ಶೆಮ್ಮಂಗುಡಿಯವರ ಆತ್ಮಚರಿತ್ರೆ ಇಲ್ಲಿದೆ. http://www.carnaticcorner.com/articles/semmangudi.html

-ಅ
27.07.2008
5.15PM

2 comments:

  1. ಅವ್ರೂ ನಂಗೂ ಬಿಗ್ ಬಾಸ್! ನಮ್ಮ ಬಾಸ್(ಟಿ ಎಂ ಕೃಷ್ಣ)ಗೂ ಅವ್ರೇ ಗುರುಗಳು. ಗಾಯನ ಸಮಾಜದಲ್ಲಿ ಅವರ ನೆನಪಿಗೆ ಮ್ಯೂಸಿಕ್ ಫೆಸ್ಟಿವಲ್ ನಡೆಸ್ತಿದಾರೆ - ಗೊತ್ತಿರಬೇಕಲ್ಲ...ಈ ವಾರ ಪೂರ್ತಿ ಬೆಳಿಗ್ಗೆ ಸೆಮ್ಮಂಗುಡಿಯವರ ಸಂಗೀತ-ಸಾಧನೆಗಳ ಬಗ್ಗೆ lec-dems ಇವೆ, ಸಾಯಂಕಾಲ ಕಚೇರಿಗಳು. ಬಿಗ್ ಬಾಸ್’ದು ಶುಭಪಂತುವರಾಳಿ(ಶ್ರೀ ಸತ್ಯನಾರಾಯಣಂ), ವಸಂತ(ಹರಿಹರಪುತ್ರಂ) ನನ್ನ ಫೇವರಿಟ್‌ಗಳು...

    ReplyDelete
  2. nange ee sangeetha ella artha aagollla.....article odid mele gottaythu..great thaatha antha... :-) big thaatha.. :-) finally he's a goodh thaatha.. :-)

    ReplyDelete