Friday, August 8, 2008

ಕಪ್ಪು ಕವಿವುದು

ಭುವಿಯ ಜ್ಯೋತಿಯೆಲ್ಲವ ನುಂಗುವ ತವಕದಿ
ಹೊಂಚು ಹಾಕುತಿಹ ಕರಿ ಮುಗಿಲೇ,
ಅವಳು ಮುನಿದಿಹಳು,
ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!
ಅವಳಿಗಿಂತ ನನಗೆ ಜಗವು ಮಿಗಿಲೇ?
ಕಪ್ಪು ಕವಿದಿದೆ ಇಲ್ಲಿ, ನನ್ನೆದೆಯೊಳಗೂ,
ಹಾಡು ಹಗಲೇ!

ಪಾಪ ಪುಣ್ಯಗಳೆಂಬ ನನ್ನೆರಡು ಕೈ ಹಿಡಿದವಳು
ಭೀತಿ ನೀತಿಗಳ ಮೀರಿ ಪ್ರೀತಿಯೆದೆ ಮಿಡಿದವಳು
ಅವಳು,
ನಗು ತೊರೆದರೆ
ಹಗೆ ಮೆರೆದರೆ
ಮಿಗೆ ನೊಂದರೆ
ನನಗೆ,
ಕಪ್ಪು ಕವಿವುದು ಹಾಡು ಹಗಲು
ಬೆಪ್ಪು ನಿಲುವುದು ಬಾಳ ಹೆಗಲು.

-ಅ
08.08.2008
12.30AM

11 comments:

  1. "ಅವಳು ಮುನಿದಿಹಳು,
    ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!"

    -ಆಹಾ! ಅವಳು ಇಷ್ಟರೊಳಗೆ ಮಳೇಲಿ ನೆಂದು ತೊಪ್ಪೆಯಾಗಿ ಗಡಗಡ ನಡುಗ್ತಾ 'ಅಪ್ಪಿಕೋ ಬಾ ಅರುಣಾ..' ಅಂತ ಅಂಗಲಾಚ್ತಾ ಇರಬಹುದು..!

    ReplyDelete
  2. ಸುಂದರವಾದ ಕವನ.
    ಪಲ್ಲವಿ ತುಂಬಾ ಇಷ್ಟವಾಯಿತು

    ReplyDelete
  3. ಅವಳು,
    ನಗು ತೊರೆದರೆ
    ಹಗೆ ಮೆರೆದರೆ
    ಮಿಗೆ ನೊಂದರೆ
    ನನಗೆ,
    ಕಪ್ಪು ಕವಿವುದು ಹಾಡು ಹಗಲು
    ಬೆಪ್ಪು ನಿಲುವುದು ಬಾಳ ಹೆಗಲು.


    ee saalugaLu ishta aaythu...hmmmm

    ReplyDelete
  4. ಅವಳಿಗಿಂತ ನನಗೆ ಜಗವು ಮಿಗಿಲೇ?
    ಕಪ್ಪು ಕವಿದಿದೆ ಇಲ್ಲಿ, ನನ್ನೆದೆಯೊಳಗೂ,
    ಹಾಡು ಹಗಲೇ!

    sakhath lines gaLu gurugaLe... kavana tumbaa tumbaa tumbaa tumbaa ...(haage continue maadkolli ) Ishta !!

    ReplyDelete
  5. ಕಾವ್ಯದ ಸೊಗಸಿಗೆ ತಲೆದೂಗಬೇಕೋ ಇಲ್ಲ ನಿನ್ನ ವ್ಯಥೆಯ ಕಥೆ ಓದಿ ತಲೆಯಲ್ಲಾಡಿಸಬೇಕೋ ಗೊತ್ತಾಗ್ತಿಲ್ಲ.

    ReplyDelete
  6. ಅವಳು ಮುನಿದಿಹಳು,
    ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!
    ಅವಳಿಗಿಂತ ನನಗೆ ಜಗವು ಮಿಗಿಲೇ?


    abba I sAlugaLu soooooper aagive IsAlugaLige adEshtu bhAvArthagaLive!thumbA dinagaLananthara nimma kavana Odhi saNthOsha aaithu!

    ReplyDelete
  7. [ಪುಷ್ಪಲತಾ] ಸಂತೋಷ ಆಯಿತಾ? ಅಯ್ಯೋ ಛೆ!!

    [ಶ್ರೀಕಾಂತ್] ಒಳ್ಳೇ ಕೋಲೆ ಬಸವ!! ;-)

    [ಲಕುಮಿ] ಕಪ್ಪು ಕವಿದರೆ ಇಷ್ಟ ಆಗುತ್ತೆ ಜನಕ್ಕೆ.. ಹ್ಮ್ಮ್...

    [ಶ್ರೀಧರ] ಲೋ.

    [ಅಂತರ್ವಾಣಿ] ಧನ್ಯವಾದಗಳು ಸರ್. ಮುಂದಿನ ಕವನಗಳಲ್ಲಿ ಅನುಪಲ್ಲವಿ ಮತ್ತು ಚರಣವನ್ನೂ ಸುಂದರವಾಗಿಸಲು ಪ್ರಯತ್ನಿಸುತ್ತೇನೆ. :-)

    [ಸುಶ್ರುತ] ನಿಜ ಕಣಪ್ಪಾ. ನನಗೇ ಆಶ್ಚರ್ಯ. ನೆನ್ನೆ ಫೋನ್ ಮಾಡಿ ಹೇಳಿದಳು, ನಾಲ್ಕು ದಿನದಿಂದ ಮಳೆ ನಿಂತೇ ಇಲ್ಲವಂತೆ. ಮನೆಯ ಕೊಟ್ಟಿಗೆ ಕುಸಿದು ಬಿದ್ದಿದೆಯಂತೆ. ಈಗ ಮಳೆ ನಿಲ್ಲೋಕೊಂದು ಕವನ ಬರೀಬೇಕಿದೆ ನೋಡು.

    ReplyDelete
  8. "ನನ್ನ ಕಂಬನಿಯ ಹೊತ್ತು ಅವಳು ನೆನೆವೆಡೆ ಮಳೆಯಾಗಿಸು, ಓ ಮುಗಿಲೇ!"
    - ಸಖತ್ ಫೀಲಿಂಗ್...! ನೀವು ಹಿಂಗೂ ಬರೀತೀರಾ ಅಂತ ಗೊತ್ತಿರ್ಲಿಲ್ಲಾರೀ! :)

    ReplyDelete
  9. [ಶ್ರೀ] ಹ ಹ್ಹ ಹ್ಹಾ.. you too Brutus.... ಅಂದ್‍ಬಿಡಿ...

    ReplyDelete
  10. heege kavithe bardre ... 'avala' bagge nangE swalpa J feel aagtide :-)

    ReplyDelete