Saturday, September 13, 2008

ಕಪ್ಪೆ ತಕ್ಕಡಿ

ಶಾಲೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಕಪ್ಪೆ ತಕ್ಕಡಿಯ ಸಹವಾಸವನ್ನು ಅತಿ ಸುಲಭವಾಗಿ ಹತೋಟೆಗೆ ತರುವ ಎಲ್ಲಾ ಪ್ರೈಮರಿ ಸ್ಕೂಲು ಟೀಚರುಗಳಿಗೂ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ಅದರಲ್ಲೂ ಒಂದನೇ ಹಾಗೂ ಎರಡನೇ ತರಗತಿಯ ಮಕ್ಕಳಂತೂ ನರಭಕ್ಷಕರೇ ಸರಿ.

ಪಾಠ ಮಾಡುವಾಗ ಬೋರ್ಡಿನ ಕಡೆ ತಿರುಗುವ ಹೊತ್ತಿಗೆ ಇಬ್ಬರು ಮಕ್ಕಳು ಮುಂದೆ ಓಡಿ ಬಂದು, "ಸರ್ ವಾಟ್ ಇಸ್ ದಿಸ್?" ಅಂತ ಪ್ರಶ್ನೆ ಕೇಳ್ತಾರೆ. ನಾನು, ನಿಮ್ ಜಾಗದಲ್ಲಿ ಕೂತ್ಕೊಳ್ರೋ ಹೋಪ್‍ಲೆಸ್‍ ಫೆಲೋಗಳಾ ಅಂತ ಬಯ್ಯೋ ಹಾಗೂ ಇಲ್ಲ. ಈ ಕಾಲದಲ್ಲಿ ಏನಾದರೂ ಮಕ್ಕಳನ್ನು ಶಿಕ್ಷಕರು ಬೈದರೋ ಮುಗಿಯಿತು ಶಿಕ್ಷಕನ ಕಥೆ. ಬೈಯ್ಯದಿದ್ದರೂ ಮುಗಿದ ಹಾಗೆಯೇ. ಆದರೇನು ಮಾಡುವುದು! ನಾನು ಬರೆಯೋ "g" ಮಕ್ಕಳಿಗೆ ಅರ್ಥವಾಗದೆ ಬೋರ್ಡಿನ ಕಡೆ ಓಡಿ ಬಂದು ಅದು ಏನೆಂದು ಕೇಳುತ್ತಾರೆ. ಒಬ್ಬನಿಗೆ ಅದು g ಅಂತ ಹೇಳಿದರೆ ಆಗಲ್ಲ, ಅಲ್ಲಿಗೆ ಓಡಿ ಬರುವ ಎಲ್ಲರಿಗೂ ಅದನ್ನು g - g - g ಅಂತ ಹೇಳಿಕೊಡುವ ಹೊತ್ತಿಗೆ ನನ್ನ G-ವ ಹೊರಟು ಹೋಗಿರುತ್ತೆ!

ಹೇಗೆ ಇವರ ಗಲಾಟೆಯನ್ನು ಹೋಗಲಾಡಿಸುವುದು?

"ಮುಂದಿನ ಪುಟದಲ್ಲಿ ಬರೆದುಕೊಳ್ಳಿ" ಅಂದರೆ ಮುಂದಿನ ಪುಟ ತಿರುಗಿಸಿಕೊಂಡು, "ಸರ್, ಹೀಗಾ?" ಎಂದು ಇಡೀ ಕ್ಲಾಸಿನ ನಲವತ್ತು ಮಕ್ಕಳು ಬೋರ್ಡಿನ ಕಡೆ ಬಂದುಬಿಟ್ಟರೆ ನಾನು ಎಲ್ಲಿ ಹೋಗಲಿ?

ಆ ವಯಸ್ಸಿನ ಮಕ್ಕಳನ್ನು ನೋಡಿಕೊಳ್ಳಲು ತಾಯಂದಿರೇ ಸರಿ! ಅದಕ್ಕೇ ಬಹುಶಃ ಶಿಕ್ಷಕಿಯರು ಈ ವಿಷಯದಲ್ಲಿ ಗೆಲ್ಲುವುದು. ನಾವು ಹೇಳೋದನ್ನೇ ಅವರೂ ಹೇಳಿರುತ್ತಾರೆ. ಆದರೆ ಮಕ್ಕಳು ಅವರ ಮಾತಿಗೆ ಹೆಚ್ಚು ಬೆಲೆ ಕೊಡುತ್ತಾರೆ. ನಮ್ಮ ಕಂಡರೆ, "ಸರ್ ಏನೂ ಮಾಡಲ್ಲ" ಅನ್ನುವ ಉದಾಸೀನ. ಇದು ಕೇವಲ ನನ್ನದೊಬ್ಬನದೇ ಪಾಡಲ್ಲ. ನನ್ನ ಹಾಗೆ ಬೇರೆ ಯಾರಾದರೂ ಪ್ರೈಮರಿ ಶಾಲೆ ಮೇಷ್ಟ್ರಾಗಿದ್ದರೆ ಅವರ ಪಾಡೂ ಇದೇ!

ಒಂದು ದಿನವಂತೂ ಒಂದನೇ ತರಗತಿಯನ್ನು ಕಂಪ್ಯೂಟರ್ ಲ್ಯಾಬಿಗೆ ಕರೆದುಕೊಂಡು ಹೋದಾಗ, ಕರೆಂಟು ಹೋಗಿಬಿಟ್ಟು, UPS ಬೇರೆ ಕೈಕೊಟ್ಟಾಗ ನಾನು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳದೆ ಬೇರೆ ಏನೂ ದಾರೀನೇ ಇರಲಿಲ್ಲ.

ಒಳ್ಳೇ ಮಕ್ಳು!

ಮಾತಾಡದೆ ಸುಮ್ನೆ ಕೂತ್ಕೊಳಿ ಅಂದ್ರೆ, "ಸರ್ ನಾನು ಸುಮ್ಮನೆ ಕೂತಿದೀನಿ..." ಅಂತ ಬೇರೆ ಹೇಳಿ ಗಲಾಟೆ ಮಾಡುತ್ತವೆ. ಬೈದರೆ ಬೈಸಿಕೊಳ್ಳುತ್ತವೆ, ಆಚೆ ಕಳಿಸಿದರೆ ಹೋಗುತ್ತವೆ, ಹೊಡೆದರೆ ಹೊಡೆಸಿಕೊಳ್ಳುತ್ತವೆ.. ಮತ್ತೆ ನಮ್ಮ ಹತ್ತಿರಾನೇ "ಸರ್ ಸರ್..." ಅಂತ ಬರುತ್ತವೆ.. ಆ ಮಕ್ಕಳಿಗೆ ಕಪಟ ಒಂದು ಕೊಂಚವೂ ಅರಿಯದು.

Memorable time with children-ಉ, Miserable time with adults-ಉ.... ಇದು ಒಬ್ಬ ಟೀಚರಿನ ಆತ್ಮಾವಲೋಕನ!

-ಅ
13.09.2008
12.30AM

7 comments:

 1. :-).... ninn experience, baravaNige erDoo OdOke sakkattagide,,,,:-) bega 'g' baryoke kaltko aaga makLu board hatra Od barod tappatte.. avrge Od baro kashta tappate...ninn G-ವnoo uLiyatte...aadru
  esht chanagirate makL jote irake.....

  ReplyDelete
 2. he he he... :) oLLe experience-u.. majjaa maaDu

  ReplyDelete
 3. [ಗಂಡಭೇರುಂಡ] ಮಾಡ್ತಾ ಇದ್ದೀನಿ ದಿನಾಗ್ಲೂ.. :-)

  [ಭವ್ಯಾ] ಅಯ್ಯೋ, ಒಂದು g ಬರೆಯೋಕೆ ಬರಲ್ಲ ನಂಗೆ ಅಂತ ಖೇದ ಆಗ್ತಿದೆ ನಂಗೆ!!

  ReplyDelete
 4. ಇಲ್ಲಿ ನಿನ್ನ ಶಿಕ್ಷಕ ಜೀವನದ ಅನುಭವವನ್ನೆಲ್ಲಾ ಬರೀತಿರ್ತೀಯಾ. ಆದರೆ ನನಗೆ ಒಂದೊಂದು ಸರ್ತಿ ಸುಲಭಸಂಗತಿಗಳನ್ನೆಲ್ಲಾ ಕಠಿಣ ಎನ್ನುವಂತೆ ಚಿತ್ರಿಸಿರುತ್ತೀಯ ಎನ್ನಿಸಿದ್ದುಂಟು. ಬಹುಶಃ ಒಬ್ಬ ಮೇಷ್ಟ್ರ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋದು ಮತ್ತೊಬ್ಬ ಮೇಷ್ಟ್ರಿಗೆ ಮಾತ್ರ ಸಾಧ್ಯ ಎನ್ನಿಸುತ್ತದೆ.

  ReplyDelete
 5. ಮಕ್ಕಳಿಗೆ ಕಪಟ ಒಂದು ಕೊಂಚವೂ ಅರಿಯದು...
  correct correct..

  "g" baryakke barallveno ninge...karma karma....

  ReplyDelete
 6. ಮತ್ತೆ ನಮ್ಮ ಹತ್ತಿರಾನೇ "ಸರ್ ಸರ್..." ಅಂತ ಬರುತ್ತವೆ.. ಆ ಮಕ್ಕಳಿಗೆ ಕಪಟ ಒಂದು ಕೊಂಚವೂ ಅರಿಯದು.

  Sathyavaada maathu.

  Chennagide :)

  ReplyDelete
 7. [Annapoorna Daithota] howdu ree.. makLu.. :-)

  [Sridhar] naanu baryO 'g' ne bere thara kaNO....

  [Srikanth] he he he... howdu nOdu...

  ReplyDelete