Monday, September 22, 2008

ಪ್ರಿಸಾರಿಯೋ ಸರ್ಕಸ್

ವಾಷಿಂಗ್ ಮೆಷೀನ್ ಖರೀದಿಸುವಾಗ ಅಂಗಡಿಗೆ ಹೋಗಿ "ಒಂದ್ ವಾಷಿಂಗ್ ಮೆಷೀನ್ ಕೊಡಿ" ಅಂತ ಗಣೇಶ ಫ್ರೂಟ್ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ತೆಗೆದುಕೊಂಡ ಹಾಗೆ ಖರೀದಿಸಿದ್ದನ್ನು ಮೊಮ್ಮಗಳು ಶ್ರೀ ಇನ್ನೂ ನೆನೆಸಿಕೊಂಡು ನಗುತ್ತಾಳೆ. ಲ್ಯಾಪ್‍ಟಾಪ್ ಖರೀದಿಸುವಾಗ ಇಂಥಾ ಪರಿಸ್ಥಿತಿ ಒದಗಲಿಲ್ಲ. ಬದಿಯಲ್ಲಿ ಶ್ರೀಕಾಂತನಿದ್ದ. ನಾನೊಬ್ಬನೇ ಇದ್ದಿದ್ದರೆ ಬಹುಶಃ ಕಂಪ್ಯೂಟರ್ ವೇರ್ ಹೌಸ್‍ನವನು ದಂಗಾಗುವಂತೆ, "ಒಂದ್ ಲ್ಯಾಪ್ ಟಾಪ್ ಕೊಡಿ" ಅಂತ ಕೇಳುತ್ತಿದ್ದೆ. ಶ್ರೀಕಾಂತ ಹಾಗಲ್ಲ, ಏನಾದರೂ ಕೆಲಸ ಮಾಡಬೇಕಿದ್ದರೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ಎಲ್ಲವನ್ನೂ ಪರಿಶೋಧಿಸಿದ ನಂತರವೇ ಮುಂದಿನ ಹೆಜ್ಜೆಯಿಡುವುದು. ನನ್ನ ಹಾಗೆ ಕೇರ್‍ಲೆಸ್‍ ಫೆಲೋ ಅಲ್ಲ.

ಶ್ರೀಕಾಂತನ ದೆಸೆಯಿಂದ ಒಂದು ಘಂಟೆಗಳ ಕಾಲ ಪರೀಕ್ಷೆಯ ನಂತರ ಪ್ರಿಸಾರಿಯೋ ಖರೀದಿಸಿದ್ದಾಯಿತು - ಒಂದು ತಿಂಗಳ ಕೆಳಗೆ. ಆದರೆ, ದರಿದ್ರ ವಿಸ್ಟಾ ಹಾಕ್ಕೋಬೇಕು ಎಂದು ಅಂಗಡಿಯವನು ಹೇಳಿದ್ದಾಗ, ಬೇಡವೆಂದು ಹೇಳಿ ನನಗೆ ಡಾಸ್ ಕೊಡಿ ಸಾಕು, ನಾನು XP ಹಾಕ್ಕೋತೀನಿ ಎಂಬ ಧೋರಣೆಯನ್ನು ತೋರಿದ್ದೆ. ಅವನು ಡ್ರೈವರುಗಳನ್ನು ಒಂದು ಸಿ.ಡಿ.ಯಲ್ಲಿ ಹಾಕಿಕೊಟ್ಟ. ಆದರೆ ಮನೆಗೆ ಬಂದು ಹರಸಾಹಸ ಮಾಡಿದರೂ ಈ ಲ್ಯಾಪ್‍ಟಾಪಿನೊಳಗೆ XP ಹೋಗಲೊಲ್ಲದು ಎಂದು ಹಠ ಹಿಡಿದು ಕುಳಿತುಬಿಟ್ಟಿತು. ನಾನು ಇದನ್ನು ತಂದ ಮೊದಲ ದಿನ ಎಲ್ಲರಿಗೂ "ನಾನು ಲ್ಯಾಪ್‍ಟಾಪ್ ತೊಗೊಂಡೆ" ಅಂತ ಬರೀ ಕಪ್ಪು ಪರದೆಯ ಮೇಲಿನ DOS PROMPT ತೋರಿಸಿಕೊಂಡೇ ಬಂದೆ. ಸತ್ಯಪ್ರಕಾಶ್ ಚೆನ್ನಾಗಿದೆ ಎಂದೇನೋ ಅಂದರು, ಆದರೆ ಅವರ ಮುಖ ಈ ಬರೀ ಕಪ್ಪು ಬಣ್ಣ ಏನು ಆಕರ್ಶಣೀಯವಾಗಿಲ್ಲ ಎಂದು ಹೇಳುತ್ತಿತ್ತು.

ನನಗೆ ರಾತ್ರಿ ನಿದ್ದೆಯಿಲ್ಲ. ಹೊಸ ಕಂಪ್ಯೂಟರಿನಲ್ಲಿ ಶೆಮ್ಮಂಗುಡಿ ಸಂಗೀತ ಕೇಳಿಬಿಡಬೇಕು ನಾನು ಎಂಬುದು ನನ್ನ ಹಠ. ಸರಿ, ಹಳೆಯ Linux ಇತ್ತು. ಒಂದೂವರೆಗಂಟೆ ಸತತವಾಗಿ install ಆಗತೊಡಗಿತು. ಶಬ್ದವೂ ಬಂದಿತು. Restart ಮಾಡು ಅಂದಿತು. ಮಾಡಿದರೆ, Display ಬಾರದೆ ಹೋಯಿತು. ನನ್ನ ಮುಖ ಮತ್ತೆ ಸೂರ್ಯನು ಮುಳುಗಿ ಹೋದಾಗ ಬಾಡುವ ಸೂರ್ಯಕಾಂತಿಯಂತಾಯಿತು.

ಕೆಟ್ಟ BIOS Settings ಅನ್ನು ಬದಲಿಸಿದ ನಂತರ XP ಪ್ರತಿಷ್ಠಾಪನೆ ಆಗಿಬಿಟ್ಟಿತು. SATA disable ಮಾಡಿದರೆ work ಆಗೋಯ್ತು!! "ಯಾವ್ ತಲೆಕೆಟ್ ಬೋಳಿಮಗ ಇದಕ್ಕೆ program ಮಾಡಿದಾನೋ" ಎಂದು ಶಪಿಸಿದೆ. ಆದರೂ Windows ಪ್ರತಿಷ್ಠಾಪನೆ ಕಾರ್ಯವು ನೆರವೇರಿದ್ದರಿಂದ ಬೈಗುಳವನ್ನು ಹಿಂತೆಗೆದುಕೊಂಡೆ. ಶ್ರೀಕಾಂತನಿಗೆ ಈ ವಿಷಯ ಹೇಳಿದಾಗ ಅವನೂ ನನ್ನೊಡನೆ ಸೇರಿಕೊಂಡು HP ಕಂಪೆನಿಯವರಿಗೆ ಉಗಿದ. ಮೈಕ್ರೋಸಾಫ್ಟಿಗಂತೂ ವಾಚಾಮಗೋಚರವಾಗಿ ಶಪಿಸಿದೆ ನಾನು. ಯಾಕೆಂದರೆ, XP install ಏನೋ ಆಯಿತು, ಶಬ್ದವೇ ಬರುತ್ತಿಲ್ಲ!! ನನ್ನ ಶೆಮ್ಮಂಗುಡಿ ಹಾಡು ಕೇಳುವ ಕೆಲಸ ಹಾಗೇ ಬಾಕಿಯಾಗಿತ್ತು.

ಗೆಳೆಯ ಶರತ್ ಸಹಾಯ ಮಾಡಿದ. "ದರಿದ್ರ ವಿಂಡೋಸ್ ಯಾಕೆ ಹಾಕ್ಕೋತೀಯ, ಉಬುಂಟು ಹಾಕ್ಕೊ, ಲೈಫು ಆರಾಮ್ ಆಗುತ್ತೆ" ಎಂದು ಒಂದೇ ಮಾತಿನಲ್ಲಿ ಹೇಳಿದ. ಸರಿ, ನಾನು "ನಿನ್ನ ಹತ್ತಿರ ಇದೆಯಾ?" ಎಂದು ಕೇಳಿದಾಗ ಅವನು, ನನ್ನ ದಿಗ್ದರ್ಶಕನಂತೆ ನನ್ನ ಕಣ್ತೆರೆದ. Ubuntu Operating System ನನ್ನು ಮನೇಗೇ ತಂದು ಕೊಡುತ್ತಾರೆ. ಅದೂ ಉಚಿತವಾಗಿ. ಆದರೆ ಸ್ವಲ್ಪ ಸಮಯ ಹಿಡಿಯುತ್ತೆ. ಚಿಂತೆಯಿಲ್ಲ. ವೈರಸ್ ಬರುವುದಿಲ್ಲ. Hang ಆಗುವುದಿಲ್ಲ. ಇತ್ಯಾದಿ. ಸರಿ, ಆರ್ಡರ್ ಮಾಡೇಬಿಟ್ಟೆ! ಅದು ಬರುವುದರೊಳಗಾಗಿ ನನ್ನ ಮೂರನೇ ಮೊಮ್ಮಗಳ ಕೃಪೆಯಿಂದ Ubuntu DVD ದೊರಕಿದ್ದು ನನ್ನ ಭಾಗ್ಯವೆಂದೇ ಬಗೆದೆ. ಸುರಿಯುವ ಮಳೆಯಲ್ಲಿಯೇ ಹೋಗಿ, ಅವಳಿಂದ ಪಡೆದುಕೊಂಡು ಬಂದು ಅಂದು ರಾತ್ರಿಯೇ ಇದರ ಪ್ರತಿಷ್ಠಾಪನೆ ಕೂಡ ಮಾಡಿಬಿಟ್ಟೆ. ಸರಾಗವಾಗಿ ಪ್ರಿಸಾರಿಯೋ ಒಳಹೊಕ್ಕಿತು. ಎಲ್ಲೂ ಯಾವ ಸಮಸ್ಯೆಯಾಗಲೀ ಸಂದೇಹವಾಗಲೀ ಬರಲೇ ಇಲ್ಲ. Ubuntu ವನ್ನು ಕೊಂಡಾಡಿದೆ, Windows ಅನ್ನು ಅವಾಚ್ಯ ಶಬ್ದಗಳಿಂದ ಉಗಿದೆ. ಶೆಮ್ಮಂಗುಡಿ ಹಾಡನ್ನು ಕೇಳಿಯಾದ ನಂತರವಂತೂ ನನ್ನನ್ನು ಹಿಡಿಯುವವರೇ ಇಲ್ಲ!!

ಎಲ್ಲಾ ಮುಗಿದ ಮೇಲೆ, Ubuntu ನಲ್ಲಿ ಕನ್ನಡ ಬರುತ್ತಲೇ ಇರಲಿಲ್ಲ!! ಮದುವೆ ಗಂಡಿಗೆ 'ಅದೇ' ಇಲ್ಲ ಅನ್ನುವ ಹಾಗಾಯಿತು!! ಇಲ್ಲಿ ಕನ್ನಡದಲ್ಲಿ ಬರೆಯುವ ಹಾಗೆ Ubuntu ಉಪಯೋಗಿಸಿಕೊಂಡು ಮಾಡಲಾಗುವುದಿಲ್ಲ. ಆದರ್ ಕನ್ನಡ ಓದಬಹುದು. ಒತ್ತಕ್ಷರಗಳು ಪಕ್ಕದ ಅಕ್ಷರಕ್ಕೆ shift ಆಗಿಬಿಟ್ಟಿರುತ್ತೆ. ಆದರೂ ತೊಂದರೆಯಿಲ್ಲ. ಓದಬಹುದು. ಬರೆಯಲಾಗುವುದಿಲ್ಲವಲ್ಲಾ.. Ubuntu ಗೆ ಬೈಯ್ಯಲು ಮನಸ್ಸಾಗಲಿಲ್ಲ.

ಕನ್ನಡದಲ್ಲಿ ಬರೆಯಬೇಕಾದರೆ XP, ಉಳಿದ ಸಮಯದಲ್ಲಿ Ubuntu - ಹೀಗೆ ಬಳಸುವಂತಾಗಿತ್ತು. XP ಯಲ್ಲಿ ಶಬ್ದ ಬರುತ್ತಿಲ್ಲ, Ubuntu ನಲ್ಲಿ ಕನ್ನಡ ಬರುತ್ತಿಲ್ಲ!! ಒಳ್ಳೇ ಎಡಬಿಡಂಗಿ ಸಹವಾಸ!!! ಹಾಡು ಕೇಳದೆ ಬರೆಯಲು ಆಗದು, ಹಾಡು ಕೇಳುತ್ತಿದ್ದರೆ ಬರೆಯದೆ ಇರಲು ಆಗದು - ಇದು ನನ್ನ ಸ್ಥಿತಿ!!

ನೆನೆಸಿಕೊಂಡರೆ ನನಗೇ ನಗು ಬರುತ್ತೆ. ಕನ್ನಡ ಬರೆಯಲು ಎಷ್ಟು ಹೆಣಗಾಡಿದೆನೆಂದರೆ, Orkut ಅಲ್ಲಿ "Type in Kannada" ಗೆ ಹೋಗಿ, ಅಲ್ಲಿ type ಮಾಡಿ ನಂತರ ಅದನ್ನು Copy - Paste ಮಾಡಿದ್ದೇನೆ.

ಶ್ರೀಕಾಂತನ ದೆಸೆಯಿಂದ XPಗೆ ಕಂಠ ದೊರಕಿತು! ಒಂದು ತಿಂಗಳಿಂದ ಎಲ್ಲೆಲ್ಲೋ ಹುಡುಕುತ್ತಿದ್ದೆ, ದರಿದ್ರ XPಗೆ audio drivers ಅನ್ನು. ಇಂದು ಅವನ ಕೈಗೆ ಸಿಕ್ಕಿಬಿತ್ತು. ನನ್ನಂತೆ ಪ್ರಿಸಾರಿಯೋ ಬಳಸುವವರು XP ಇಂದ ಪೀಡಿತರಾಗಿದ್ದರೆ, ಈ ಕೊಂಡಿಯನ್ನು ಉಪಯೋಗಿಸಬಹುದು. ಇಲ್ಲಿ XP ಗೆ ಬೇಕಾದ ಎಲ್ಲಾ ಡ್ರೈವರುಗಳ ಮಾಹಿತಿಯಿದೆ. ಈ ಬ್ಲಾಗನ್ನು ನಡೆಸುತ್ತಿರುವ ಪ್ರಸಾದ್ ಅವರಿಗೆ ನಾನು ಋಣಿ.

ಆ ಮಾಹಿತಿಗಳೆಲ್ಲವೂ ಅಲ್ಲೇ ಇರುತ್ತೋ ಇಲ್ಲವೋ ಎಂಬ ಅನುಮಾನವೂ ಸಹ ಇದೆ. ನಾಳೆ ಏನಾಗುವುದೋ ಬಲ್ಲೋರು ಯಾರು!! ಅದಕ್ಕೇ ಅಲ್ಲಿರುವುದನ್ನೆಲ್ಲವನ್ನೂ ಇನ್ನೊಂದು documentಗೆ copy ಮಾಡಿಟ್ಟಿದ್ದೇನೆ.

XP ಯಲ್ಲಿ ಶಬ್ದ ಬರುತ್ತಿದೆ. ಹಾಡು ಕೇಳಿಸುತ್ತಿದೆ. ಅಂತೆಯೇ ಆದಷ್ಟು ಬೇಗ Ubuntu ನಲ್ಲಿ ಕನ್ನಡ ಬರೆಯುವಂತಾಗಲಿ. ಆಗ ಈ Windows ಹಂಗು ಎಲ್ಲರಿಂದ ದೂರವಾಗಲಿ. ಸರ್ವೇ ಭವಂತು ಸುಖಿನಃ.

-ಅ
21.09.2008
1.30AM

19 comments:

 1. ಪರಿಸರಪ್ರೇಮಿಗಳೆ, ನೀವು ಕೆಳಕಂಡ ಕೊಂಡಿಗಳನ್ನ ನೊಡಿದಿರ?

  * ಇದು ಉಬುಂತು ನಲ್ಲಿ ಕನ್ನಡ ಬರಲು ಸಹಾಯ ಮಾಡುತ್ತೆ, (ನಾನು 'slackware' ಉಪಯೋಗಿಸುತ್ತಿದ್ದೆನೆ, ಅದ್ದರಿಂದ ಉಬುಂತು ಸದ್ಯದ ಸ್ಥಿತಿ ಗೊತ್ತಿಲ್ಲ)

  http://sampada.net/forum/3891

  * ಇದು, 'blogger' ನಲ್ಲೆ ಕನ್ನಡದಲ್ಲಿ ಬರೆಯಲು ಇರುವ ವಿದಾನ. (ನೀವು orkut ಮೋರೆ ಹೋಗುವುದು ತಪ್ಪುತ್ತದೆ)

  http://help.blogger.com/bin/answer.py?answer=58226

  ReplyDelete
 2. ನಿನ್ನ ಲ್ಯಾಪ್ಟಾಪಿಗೆ ಭಗವಂತ ಆಯ್ಸಸ್ಸು ಮತ್ತು ಆರೋಗ್ಯ ಕೊಡಲಿ.

  ReplyDelete
 3. Presario sarkassuu mattu system admin gaLa gooLuu................. :) majavagide nimma anubhava

  ReplyDelete
 4. http://dev.sampada.net/Baraha_like_Input_on_Linux

  follow that as is. run scim and choose kannada -> kn-itrans

  runs fine.

  ReplyDelete
 5. [ಭೀಮ್ ಬಾಯ್] ಬಹಳ ಧನ್ಯವಾದಗಳು ಸರ್. ಇವತ್ತೇ ಪ್ರಯತ್ನ ಮಾಡುತ್ತೇನೆ. ನಂತರ ಇನ್ನೊಂದು ಕಮೆಂಟು ಬರೆಯುತ್ತೇನೆ ಅಲ್ಲಿಂದ!! :-)

  [ಲಕುಮಿ] ಏನ್ ಸಾಹಸಾನೋ ಏನೋ, ಹಗ್ಗ ಇಲ್ಲ, ಹಾರ್ನೆಸ್ಸಿಲ್ಲ.

  [ಹರ್ಷ] ಮೊಸಲೆಗೆ ಪ್ರಾಣ್‍ಸಂಕ್‍ಟ ಅಂದ್ರೆ, ಹಲ್ಲೀಗ್ ಚೆಲ್ಲಾಟ. - ಅಲ್ಲಾ, ಸುಮ್ನೆ ಹೇಳ್ದೆ, ಇದಕ್ಕೆ ಅರ್ಥ ಇರ್ಬೇಕು ಅಂತ ಏನಿಲ್ಲ.

  [ಶ್ರೀಕಾಂತ್] ಧನ್ಯೋಸ್ಮಿ.

  [ಪಾಪಣ್ಣ] ಆದಷ್ಟು ಬೇಗ ನಿಮ್ಮ ಬಾಯ್ ಹರಕೆಯಿಂದ ನಾನು ಋಣಮುಕ್ತನಾಗುವಂತಾಗಲಿ. ಧನ್ಯವಾದಗಳು.

  ReplyDelete
 6. ha ha ha ... idena. .. 'SATA' problem-u neenu heltiddiddu :D :D ...

  ReplyDelete
 7. idnena heLtini sikkaga andiddu...
  ha ha..

  ReplyDelete
 8. [ಭವ್ಯಾ] ಹ್ಞೂ, ಇದನ್ನೇ. ಸಿಗು, ಹೇಳ್ತೀನಿ.

  [ವಿಜಯಾ] ಹಾಗೆಲ್ಲಾ ಅವಾಚ್ಯಗಳನ್ನು ಬಳಸಬಾರದು ಇಲ್ಲಿ.

  [ಶ್ರೀನಿಧಿ] "ಚೆನ್ನಾಗಿದೆ" ಅನ್ಬೇಕು.

  ReplyDelete
 9. eshtond links, document ella blog nalli haakidya neenu...neenu lOkapayogi kalyaaNa sachiva aagoke arhanaagiddeeya :-P
  vijayee bhava... :-)

  ReplyDelete
 10. "ಲೋಕೋಪಯೋಗಿ ಕಲ್ಯಾಣ ಸಚಿವ"! ಇದು ಯಾವ ಖಾತೆನೋ ಶ್ರೀಧರ?

  ReplyDelete
 11. @srikanth: lOkakke upayogavaaguvantha kalyaaNagaLannu :-P maaduva sachiva mahaaprabhu... :-)

  ReplyDelete
 12. @sridhar:

  nange yaako doubt mele anumaana...kalyaaNagaLinda lOkakke enthaa upayOga aagatte karmakaanDa prabhugaLE ? :O

  ReplyDelete
 13. ಶ್ರೀಧರ - ಅದ್ಭುತ ವಿವರಣೆ ಕಣಪ್ಪ! ಆದರೆ ಕಲ್ಯಾಣ ಎಂದರೆ 'ಒಳ್ಳೆಯದು' ಮತ್ತು 'ಮದುವೆ' ಎಂಬ ಪ್ರಸಿದ್ಧವಾದ ಎರಡು ಅರ್ಥಗಳಿವೆ. ನೀನು ಹೇಳಿದ್ದು ಯಾವ ಅರ್ಥದಲ್ಲಿ?

  ReplyDelete
 14. [ಶ್ರೀಕಾಂತ್, ಶ್ರೀಧರ, ಲಕುಮಿ] ಗೂಗಲ್‍ನವರು ಎರಡು ಅವಕಾಶ ಕೊಟ್ಟಿದ್ದಾರೆ chat ಮಾಡೋಕೆ, ತಾವುಗಳು ದಯವಿಟ್ಟು ಅದನ್ನು ಬಳಸಿಕೊಳ್ಳಬೇಕಾಗಿ ವಿನಂತಿ.

  ಒಂದು google talk, ಇನ್ನೊಂದು http://karmakaanda.blogspot.com

  ReplyDelete
 15. @lakshmi : brahma swaroopigaLe jaasti kosne maadbedi sumne opkoLi..

  @srikanth : neenu jaasthi yochne maadbedvo....silent aagidbidu..

  @arun : nammanna naavu hosa prayogaLige oddikobeku kano...adara phalashruthi ne nin blog nalli nadeethiro chat -u..

  ReplyDelete
 16. ಅರುಣ,
  HP ಬಗ್ಗೆ ವಾರ್ನ್ ಮಾಡಿದ್ದಕ್ಕೆ ಧನ್ಯವಾದಗಳು.
  ಇನ್ನು " ಏನೇ ಬರಲಿ, XP ದಯೆಯಿರಲಿ" ಅಂತ ಹಾಡ್ಕೋಬಹುದು.
  ಇಷ್ಟೆಲ್ಲ confusionಗಳ ನಡುವೆ, ಅತಿ ಹೆಚ್ಚು confusion ಮಾಡೋದು ನಿಮ್ಮ ಮೊಮ್ಮಗಳ ಬಗೆಗೆ.
  Howz that?

  ReplyDelete
 17. [ಶ್ರೀಧರ] ಓಕೆ.

  [ಸುನಾಥ್] XP ಹಂಗಿದೆಯಲ್ಲಾ ಅಂತ ಬೇಸರ ನನಗೆ!

  ಅಂದ ಹಾಗೆ, ನನಗೆ ಮೂರು ಮೊಮ್ಮಕ್ಕಳು ಇದ್ದಾರೆ. ಅವರ ಬಗ್ಗೆ ಇಲ್ಲೇ ಕ್ಷಿತಿಜಾನಿಸಿಕೆಯಲ್ಲೇ ಮುಂದೆಂದಾದರೂ ತಿಳಿಸುತ್ತೇನೆ. ಸಧ್ಯಕ್ಕೆ ಕನ್ಫ್ಯೂಷನ್ ಹಾಗೇ ಇರಲಿ. ;-)

  ReplyDelete