Sunday, September 28, 2008

ಕೋಗಿಲೆ ಹಾಡಿತ್ತು ಕೇಳಿದ್ದೆಯಾ?

ಇಂದಿನ ಬಹಳ ಜನಕ್ಕೆ ಗೊತ್ತಿಲ್ಲ, ಮಹೇಂದ್ರ ಕಪೂರ್ ಯಾರು ಅಂತ.



ಮೊಹಮ್ಮದ್ ರಫಿಯಿಂದ ಪ್ರೇರಿತರಾಗಿ ಹಿಂದಿ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದ ಮಹೇಂದ್ರ ಕಪೂರ್ ಧ್ವನಿ ನಟ ಮನೋಜ್ ಕುಮಾರ್‍ಗೆ ಹೇಳಿ ಮಾಡಿಸಿದ ಹಾಗಿತ್ತು. ಮನೋಜ್ ಕುಮಾರ್ ಹಾಡುಗಳು ಅಂದರೆ ಅದರಲ್ಲಿ ದೇಶಭಕ್ತಿಗೀತೆಗಳೇ ಹೆಚ್ಚು ಎಂಬುದು ಎಲ್ಲರಿಗೂ ಗೊತ್ತಿರುವುದೇ. ಇವರಿಬ್ಬರ ಜೋಡಿಯಲ್ಲಿ ಬಂದ Mere desh ki dharti, hain preet jahaan ki reet sadaa - ಇಂಥಾ ಹತ್ತಾರು ಹಾಡುಗಳು ಬಹಳ ಪ್ರಸಿದ್ಧಿಯನ್ನು ಪಡೆದಿತ್ತು.

ನನಗೆ ಹಮ್‍ರಾಜ್ ಚಿತ್ರದ ಮಹೇಂದ್ರ ಕಪೂರರ ನೀಲೇ ಗಗನ್ ಕೇ ತಲೇ.... ಹಾಡು ವಿಪರೀತ ಇಷ್ಟ.



ಹಾಡಿ, ರಂಜಿಸಿ, ಚಿತ್ರ ರಸಿಕರ ಮನಸನ್ನು ಗೆದ್ದ ಮಹೇಂದ್ರ ಕಪೂರ್ ಅಸುನೀಗಿದ್ದಾರೆ. ಈ ಲೇಖನವನ್ನು ಆ ಮಹಾನ್ ಗಾಯಕನಿಗೆ ಅರ್ಪಿಸಲಿಚ್ಛಿಸುತ್ತೇನೆ.

ತಮ್ಮ ತೀಕ್ಷ್ಣ ಕಣ್ಣುಗಳಿಂದ ಎಲ್ಲರನ್ನೂ ಸೆಳೆದ ಇಂಗ್ಲೀಷ್ ಚಿತ್ರರಂಗದ ಒಬ್ಬ ದೊರೆ ಕೂಡ ಹೋಗಿಬಿಟ್ಟರು. ಪಾಲ್ ನ್ಯೂಮನ್ ಅಂತ. ಸತತ ಐದು ದಶಕಗಳ ಕಾಲ ಹಾಲಿವುಡ್‍ನನ್ನು ಆಳಿದ ಖ್ಯಾತಿ ಇವರದಾಗಿತ್ತು!!






ಮಹೇಂದ್ರ ಕಪೂರ್ ವಿಷಯವನ್ನು ವಿಜಯಾ ಕಳಿಸುತ್ತಿದ್ದಂತೆಯೇ, ಅದೇ ಸಂದೇಶವನ್ನು ನನ್ನಂತೆ ಆಸಕ್ತರಾದ ನಾಗೇಶ್ ಅವರಿಗೂ ಅರ್ಜುನನಿಗೂ, ಹರೀಶನಿಗೂ ಕಳಿಸಿದೆ.

ನಿಮಿಷ ಮಾತ್ರದಲ್ಲೇ ನನಗೆ ಮರುಸಂದೇಶಗಳು ಬಂದವು. ಪಾಲ್ ನ್ಯೂಮನ್ ಬಗ್ಗೆ ಅರ್ಜುನ್ ತಿಳಿಸಿದ. ನಾಗೇಶ್ ಬಹಳ ಚಂದದ ಸಂದೇಶ ಕಳಿಸಿದರು.

Ye kaisa ramzaan ka itafaaq hai
GURU aasmaan pe hai aur
SHAGRID bhi saath hai
(a tribute to MK)

ನಾನೇ ಹುಚ್ಚು ಚಿತ್ರಪ್ರೇಮಿಯೆಂದರೆ ನನ್ನ ಮೀರಿಸಿದವರು ಲಕ್ಷಾಂತರ ಜನರಿದ್ದಾರೆ!!

-ಅ
28.09.2008
9PM

4 comments:

  1. This comment has been removed by the author.

    ReplyDelete
  2. ನಾನು ಮಹೇಂದ್ರಕಪೂರ್ ಬಗ್ಗೆ ಬರೆಯಬೇಕೆಂದುಕೊಳ್ಳುವಷ್ಟರಲ್ಲಿ ನೀವು ಬರೆದುಬಿಟ್ಟಿರಿ... ಚಿಕ್ಕಂದಿನಲ್ಲೇ ಹುಚ್ಚುಕಟ್ಟಿ ಕೇಳಿಕೇಳಿ ಇಷ್ಟಪಟ್ಟಿದ್ದ ಹಾಡು ತುಮ್ ಅಗರ್ ಸಾಥ್ ದೇನೇ ಕಾ ವಾದಾ ಕರೋ, ಮೈ ಯೂಹೀಂ ಮಸ್ತ್ ನಗ್ಮೇಂ ಚುರಾತಾ ರಹೂಂ... ನನ್ನ ಹಲೋಟ್ಯೂನ್ ಆಗಿ ಮೊನ್ನೆಮೊನ್ನೆಯಷ್ಟೆ ಹಾಕಿಕೊಂಡೆ. ಮಹಾನ್ ಗಾಯಕರು... ಎಂದಿಗೂ ನಮ್ಮ ಜತೆಗೇ ಹಾಡಾಗಿ ಇರ್ತಾರೆ...

    ReplyDelete
  3. Paul newman bagge naanu nimage hELoNa anta idde...aadhegO, hELakke aaglilla. aadre mahendra kapoor sattiddakke nange sakhath bejaar aaytu guugaLE...neele gagan ke tale nan faourite haaDu kooda....

    :(
    :(
    :(

    ReplyDelete
  4. [ಶ್ರೀ] ಬರೆಯಿರಿಪ್ಪಾ.. ನಾನು ಸುಮ್ಮನೆ ನೆನೆಸಿಕೊಂಡಿದ್ದೇನಷ್ಟೆ. ನೀವು ಬರೆದರೆ ವಿಷಯವಾದರೂ ತಿಳಿದೀತು ಆ ಮಹಾನ್ ಗಾಯಕರ ಬಗ್ಗೆ!!

    [ಲಕುಮಿ] ಹೋಗ್ಲಿ ಬಿಡು, ಆಗಿದ್ ಆಗೋಯ್ತು. ಒಂದ್ ಸಲ ಹಾಡು ಕೇಳ್ಬಿಡು ನೆನಪಾದಾಗೆಲ್ಲ.

    ReplyDelete